Saturday, 21st September 2024

ಬಾಂಗ್ಲಾ ಹಿಂದೂಗಳ ಐತಿಹಾಸಿಕ ಸಾಮ್ರಾಜ್ಯ, ನೆನಪಿಡಿ

ಅಭಿಪ್ರಾಯ

ಮಹಾಂತೇಶ ವಕ್ಕುಂದಿ

ಗಾಂಧಿ ಹಾಗು ಜಿನ್ನಾ ಎಂಬಿಬ್ಬರು ಮಹಾಶಯರು ಮಾಡಿದ ಹಲವು ತಪ್ಪುಗಳಿಂದ ಸ್ವಾತಂತ್ರ್ಯದನಂತರ ಪೂರ್ವ ಹಾಗೂ ಪಶ್ಚಿಮ ಪಾಕಿಸ್ತಾನವಾಗಿ ಭಾರತದ ಎಡ ಬಲ ತೋಳುಗಳು ಕತ್ತರಿಸಲ್ಪಟ್ಟು ಆಗಿನ ಪಾಕಿಸ್ತಾನ ನಿರ್ಮಾಣ ವಾದದ್ದು ನಮಗೆ ಇಂದು ಇತಿಹಾಸ.

1971 ರ ವರೆಗೆ ನಾವೂ ಜಿನ್ನಾ ಸಂಪ್ರದಾಯವಾದಿಗಳು, ಮುಸಲ್ಮಾನರು. ಪಾಕಿಸ್ತಾನವಾಗಿಯೇ ಇರುತ್ತೇವೆ ಎಂದು ಪೂರ್ವ ಪಾಕಿಸ್ತಾನ ಕಟ್ಟಿಕೊಂಡು ಹೋಗಿದ್ದ ಪಾಕಿಸ್ತಾನಿ ಪ್ರೀಯ ಬಾಂಗ್ಲಾಗಳು ಪಶ್ಚಿಮ ಪಾಕಿಸ್ತಾನದ ಅಧಿಕಾರಶಾಹಿ ಆಡಳಿತ, ಭ್ರಷ್ಟಾಚಾರ, ತಾರತಮ್ಯ, ದಬ್ಬಾಳಿಕೆ ತಾಳದೆ ತಮಗೊಂದು ಸ್ವಂತಂತ್ರ ರಾಷ್ಟ್ರ ಬೇಕೆಂದು ಹೋರಾಡಿ, ಪಶ್ಚಿಮ ಪಾಕಿಸ್ತಾನದವರಿಂದ ತಿವಿಸಿಕೊಂಡು ಕೈ ಕಟ್ಟಿ ಕುಳಿತಾಗ ದುರ್ಗೆಯ ಅವತಾರದಲ್ಲಿ ದಶಪ್ರಹರದಾರಿಣಿಯಾಗಿ ಭಾರತೀಯ ಸೈನ್ಯವನ್ನು ನುಗ್ಗಿಸಿ, ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿ, ಯುದ್ದದಲ್ಲಿ ಸೋಲಿಸಿ, ಸಾವಿರಾರು ಪಾಕಿಸ್ತಾನಿ ಸೈನಿಕರನ್ನು ಬಂಽಸಿ, ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿದಾಕೆ ನಮ್ಮ ಮಾಜಿ ಪ್ರಧಾನಿ ಇಂದಿರಾ.

ಈಗಿನ ಬಾಂಗ್ಲಾದೇಶ ಅಲ್ಲಿರುವ ಇಂದಿನ ಎಲ್ಲ ಬಾಂಗ್ಲಾದೇಶಿಗಳಿಗೆ 1971 ರಲ್ಲಿ ನಾವು ನೀಡಿದ ಭಿಕ್ಷೆ, ಅದೂ ನಮಗೆ ಇತಿಹಾಸ. ಆ ಭಿಕ್ಷೆ ನೀಡುವ ಬದಲು ಇಂದಿರಮ್ಮ ಅಂದು ಭಾರತದೊಳಗೆ ಬಾಂಗ್ಲಾವನ್ನು ವಿಲೀನ ಗೊಳಿಸಿದ್ದರೆ ಇಂದು ಈ ಲೇಖನ ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲವೇನೋ, ಇರಲಿ …. ಪ್ರಾಚೀನ ಭಾರತದಲ್ಲಿ ವಂಗ ಸಾಮ್ರಾಜ್ಯವೊಂದಿತ್ತಂತೆ. ರಾಷ್ಟ್ರಗೀತೆಯಲ್ಲಿ ಬರುವ ದ್ರಾವಿಡ ಉತ್ಕಲ ವಂಗ. ಅದೇ ವಂಗ ಸಾಮ್ರಾಜ್ಯ. ರಾಮಾಯಣ ಮಹಾಭಾರತ ಕಾಲದಲ್ಲಿ ಹಾಗೂ ಅದಕ್ಕೂ ಪೂರ್ವ ಗಂಗೆಯ ದಡದಲ್ಲಿ ನಮ್ಮ ಬೃಹತ್ ಭಾರತದ ಅತಿ ದೊಡ್ಡ ನೌಕಾ ನೆಲೆಯಾಗಿ, ಸೂರ್ಯ ಸೇನ, ಚಂದ್ರಸೇನ, ಜರಾಸಂಧರಂತಹ ಇತಿಹಾಸ ಪುರುಷರ ಕರ್ಮ ಭೂಮಿಯಾಗಿ.

ಕಾಳಿಂಗ, ಗುಪ್ತ, ಮಗಧ ಸಾಮ್ರಾಜ್ಯಗಳಂತಹ ದೊಡ್ಡ ಸಾಮ್ರಾಜ್ಯಗಳ ನೆಲೆಯಾಗಿ ಇದ್ದದ್ದೂ ಇದೇ ವಂಗ ಸಾಮ್ರಾಜ್ಯ. ಮಹಾಭಾರತದ ಕುರುಕ್ಷೇತ್ರ ಯುದ್ಧದದಲ್ಲಿ ದುರ್ಯೋಧನನ ಪರವಾಗಿ ಗಜ ದಳವನ್ನು ನಿಯೋಜಿಸಿ ಕೌರವರಿಗೆ ಬೆಂಬಲ ನೀಡಿದ್ದು ಇದೆ ವಂಗ ನಾಡಿನ ದೊರೆಗಳು. ಆ ವಂಗ ಸಾಮ್ರಾಜ್ಯದ ನೆಲವೇ ಇಂದಿನ ಬಾಂಗ್ಲಾದೇಶ. ಭೂಮಿಯ ಮೇಲಿನ ಅತೀ ಪುರಾತನ ಧರ್ಮ ಹಿಂದುತ್ವ ಎನ್ನುವುದು ಮನದಟ್ಟಾಗಿಲ್ಲದ ಕೆಲವರಿಗೆ ಬಾಂಗ್ಲಾದೇಶ ಹಿಂದೂ ಗಳದ್ದು ಎಂದು ಹೇಳಲು ಈ ಮೇಲಿನ ನಿದರ್ಶನವಷ್ಟೇ.

ಅಂತಹ ಬಾಂಗ್ಲಾದೇಶದಲ್ಲಿ ಇಂದು ಹಿಂದೂಗಳೆ ಅಲ್ಪ ಸಂಖ್ಯಾತರು, ಆ ಅಲ್ಪ ಸಂಖ್ಯಾತರನ್ನೀಗ ಬಾಂಗ್ಲಾ ಮುಸಲ್ಮಾನರು ಹಾಡ ಹಗಲೇ ಕೊಚ್ಚಿ ಹಾಕುತ್ತಿzರೆ.
ಇತ್ತೀಚಿಗೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮಾರಣಹೋಮದ ಸುದ್ದಿ ಈಗಾಗಲೇ ಎಡೆ ತಲುಪಿದೆ. ಅಲ್ಲಿನ ಮುಸಲ್ಮಾನರು ಕ್ಷುಲ್ಲಕ ಕಾರಣ ಗಳಿಗಾಗಿ ಅಲ್ಲಿನ ಹಿಂದುಗಳನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ದಾಳಿಗೆ ಇದಾಗಲೇ ಹತ್ತಾರು ಜನ ಹಿಂದೂಗಳು ಬಲಿಯಾಗಿದ್ದಾರೆ.

ಸುಮಾರು 150 ಕ್ಕೂ ಹೆಚ್ಚು ಜನ ಹಿಂದೂಗಳು ತೀವ್ರವಾಗಿ ಗಾಯಗೊಂಡಿದ್ದಾರೆ, ಸುಮಾರು ೮೦ ಕ್ಕೂ ಅಧಿಕ ಪ್ರಮುಖ ಹಿಂದೂ ದೇವಾಲಯಗಳು ನೆಲಸಮ ವಾಗಿವೆ. ಇದು ಅಲ್ಲಿನ ಇಸ್ಲಾಮೊ-ಬಿಯಾ ಅಡಿಯಲ್ಲಿ ಶೇಖ್ ಹಸೀನಾ ನಡೆಸುತ್ತಿರುವ ಸರಕಾರದ ಮಾಹಿತಿ. ನಿಜ ಅಂಕಿ ಅಂಶಗಳು ಆ ದೇವರಿಗೆ ಗೊತ್ತು. ಅಲ್ಲಿನ ಅಳಿದುಳಿದ ಹಿಂದುಗಳು, ಸಂಘರ್ಷಕ್ಕೆ ತುತ್ತಾದವರು ನೀಡುತ್ತಿರುವ ಮಾಹಿತಿಯ ಪ್ರಕಾರ ನೂರಾರು ಹಿಂದೂಗಳನ್ನು ಅಲ್ಲಿ ಸಂಹಾರ ಮಾಡಲಾಗಿದೆ. ಸಾವಿರಾರು ಜನ ಪೆಟ್ಟು ತಿಂದು, ಮನೆ ಮಠ ಕಳೆದುಕೊಂಡು ಬೀದಿಗೆ ಬಂದರೆ, ನೂರಾರು ಪ್ರಮುಖ ಹಿಂದೂ ಧಾರ್ಮಿಕ ಸ್ಥಳಗಳು ನೆಲಕಚ್ಚಿವೆ.

ಬಾಂಗ್ಲಾದೇಶದಲ್ಲಿರುವ 64 ಜಿಗಳ ಪೈಕಿ 22 ಜಿಲ್ಲೆಗಳಲ್ಲಿ ಅಲ್ಲಿನ ಸರಕಾರ ಈ ಹತ್ಯಾಕಾಂಡವನ್ನು ನಿಲ್ಲಿಸಲು ಬಾಂಗ್ಲಾದೇಶಿ ಬಾರ್ಡರ್ ಗಾರ್ಡಗಳನ್ನು
ನಿಯೋಜಿಸಿರುವುದೇ ಇದಕ್ಕೆ ನಿದರ್ಶನ. ಕರ್ನಾಟಕದಲ್ಲಿ ನಾವು ದಸರಾ ಹಬ್ಬದ ನಿಮಿತ್ತ ವಿಜೃಂಭಣೆಯಿಂದ ಮಾಡುವ ನಾಡದೇವಿ ಚಾಮುಂಡೇಶ್ವರಿಯ ಉತ್ಸವದಂತೆ ಬಂಗಾಳಿ ಹಿಂದೂಗಳೂ ದುರ್ಗೆಯ ಪೂಜೆಯನ್ನು ವಿಶೇಷವಾಗಿ ಮಾಡುತ್ತಾರೆ. ಅಕ್ಟೋಬರ್ 13, 2021 ರಿಂದ ಇತ್ತೀಚಿಗೆ ಬಾಂಗ್ಲಾದೇಶದಲ್ಲಿ ನವರಾತ್ರಿಯ ನಿಮಿತ್ತ ನಡೆಯುವ ಈ ದುರ್ಗಾ ಪೂಜೆಯನ್ನೇ ಗುರಿಯಾಗಿಸಿಟ್ಟುಕೊಂಡು ಹಲವು ದಾಳಿಗಳು ನಡೆದವು.

ದುರ್ಗಾ ಪೂಜೆಯ ಉತ್ಸವದಲ್ಲಿ ಕುರಾನಿನ ಪ್ರತಿಯೊಂದನ್ನು ಇರಿಸಿದ ಕಾರಣಕ್ಕಾಗಿ ಕೋಮು ಪ್ರಚೋದನೆ ಉಂಟಾಗಿ ಮುಸಲ್ಮಾನರು ಹಿಂದೂಗಳ ಮೇಲೆ ಎಗ್ಗಿಲ್ಲದೆ ಮುಗಿಬಿದ್ದರು. ಮೊದಲಿಗೆ ಕುಮಿ ಜಿಲ್ಲೆಯಲ್ಲಿ ಆರಂಭವಾದ ಈ ಆಕ್ರಮಣಗಳು ನಿಧಾನವಾಗಿ ಚಾಂದಪುರ, ಚಟ್ಟೋಗ್ರಾಮ, ಬಂದ ರ್ಬನ್, ನಾಹೋಕಲಿ, ರಂಗಪುರ ಜಿಗಳಿಗೂ ಹಬ್ಬಿ ಇಲ್ಲಿಯವರೆಗೆ ಸುಮಾರು 22 ಜಿಲ್ಲೆಗಳಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರಗಳು ನಡೆಯುತ್ತಿವೆ. ಅಂದಹಾಗೆ ‘ಕುರಾನಿನ ಒಂದು ಪ್ರತಿ’ ದುರ್ಗಾ ಪೂಜೆಯ ಸ್ಥಳದಲ್ಲಿತ್ತೆಂಬ ಕಾರಣಕ್ಕೆ ಈ ದಾಳಿಗಳಾಗಿದ್ದಾಗಿಯೂ, ಆ ಕುರಾನ ಪ್ರತಿಯನ್ನು ಇಕ್ಬಾಲ್ ಹುಸೈನ್, ಫಯಾಜ್ ಹಾಗೂ ಏಕ್ರಾಮ್ ಹುಸೈನ್ ಎಂಬ ಮೂವರು ಉದ್ದೇಶಪೂರಕವಾಗಿ ಇರಿಸಿದ್ದಾಗಿಯೂ ಇದಾಗಲೇ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಭಾರತ ಸ್ವತಂತ್ರವಾದ ಮೇಲೆ ಇಬ್ಬಾಗವಾದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ಭಾರತಕ್ಕೆ ಬರದೇ ಅಲ್ಲಿಯೇ ಉಳಿದಿರುವ ಹಿಂದೂಗಳ ಪರಿಸ್ಥಿತಿ ಇದು. 1947 ರಲ್ಲಿ ಬಾಂಗ್ಲಾದೇಶದಲ್ಲಿ (ಆಗಿನ ಪೂರ್ವ ಪಾಕಿಸ್ತಾನದಲ್ಲಿ) ಶೇ.30 ರಷ್ಟು ಹಾಗೂ ಪಾಕಿಸ್ತಾನದಲ್ಲಿ ಶೇ.13 ರಷ್ಟು ಹಿಂದೂಗಳು ಉಳಿದುಹೋದರು. ಭಾವನೆಗಳೋ, ಸಂಬಂಧಗಳೋ, ಸ್ಥಳೀಯ ಪ್ರೇಮವೋ, ಆಸ್ತಿ ಪಾಸ್ತಿಯ ಕಾರಣಗಳೋ, ಒಟ್ಟಾರೆಯಾಗಿ ಜೀವದ ಹಂಗು ತೊರೆದು ಅಲ್ಲಿಯೇ ಬದುಕಬೇಕೆಂಬ ಛಲದಲ್ಲಿ ಉಳಿದ ಈ ಹಿಂದೂಗಳು ಇಂದು ಪಾಕಿಸ್ತಾನದಲ್ಲಿ ಶೇ.13 ರಿಂದ 4 ರಷ್ಟು ಹಾಗೂ ಬಾಂಗ್ಲಾದೇಶದಲ್ಲಿ 30 ರಿಂದ 7 ಕ್ಕೆ ಕುಸಿದಿದ್ದಾರೆ.

ಸರ್ವ ಧರ್ಮ ಸಹಿಷ್ಣು ನಾನು, ವಸುದೈವ ಕುಟುಂಬಕಂ ಎಂದರಿತು ಜಗತ್ತಿನ ಯಾವ ಮೂಲೆಯದರೂ ಬದುಕ ಬ ಎಂದು ಬಾಂಧವರ ಜತೆ ಬದುಕಲು ಹೋದ
ಹಿಂದೂ ಅಲ್ಲಿ ಹೇಳ ಹೆಸರಿಲ್ಲದಂತೆ ಮರೆಯಾಗುತ್ತಿದ್ದಾನೆ. ಸ್ವಾತಂತ್ರ್ಯಕ್ಕೂ ಮೊದಲು ಅಖಂಡ ಭಾರತದ ಭಾಗವಾಗಿದ್ದ ಹಲವು ಭೂಭಾಗಗಳನ್ನು ಒಡೆದು
ಸುಮಾರು ಏಳು ದೇಶಗಳನ್ನು ಸೃಷ್ಟಿಸಿ ಹೋದ ಬ್ರಿಟಿಷರು, ಮುಸಲ್ಮಾನರು ತಮಗೊಂದು ಪ್ರತ್ಯೇಕ ರಾಷ್ಟ್ರಬೇಕೆಂದು ಕೇಳಿದರೆಂಬ ಕಾರಣಕ್ಕೆ ಅವರಿಗೆ ಎರಡು ಭೂಭಾಗಗಳನ್ನು ನೀಡಿ ಇಂದು ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶಗಳೆಂಬ ಎರಡು ಇಸ್ಲಾಮಿಕ ರಾಷ್ಟ್ರಗಳ ಉದಯಕ್ಕೆ ಕಾರಣೀಭೂತರಾದರು.

ಇಷ್ಟಾಗಿಯೂ ಎಲ್ಲ ಮುಸಲ್ಮಾನರೂ ಭಾರತವನ್ನೇನೂ ತೊರೆದಿಲ್ಲ, ೧೯೪೭ ರ ದೇಶ ವಿಂಗಡಣೆಯ ಸಂಧರ್ಭದಲ್ಲಿ ಭಾರತ ಬಿಟ್ಟ ಮುಸಲ್ಮಾ ನರು ಕೇವಲ ೬೫ ಲಕ್ಷ ಜನ ಅಷ್ಟೇ (ಒಟ್ಟು ಜನಸಂಖ್ಯೆಯ ಕೇವಲ ೪% ಮಾತ್ರ). ಮಿಕ್ಕ ಎಲ್ಲರೂ ಇ ಇದ್ದಾರೆ, ಅವರಲ್ಲಿ ಹಲವರು ಆ ಪಾಕಿಸ್ತಾನಕ್ಕೆ, ಬಾಂಗ್ಲಾದೇಶಿಗಳಿಗೆ ಹುಟ್ಟಿದವ
ರಂತೆ ನಮ್ಮ ಮಧ್ಯೆ ಬದುಕುತ್ತಿರುವುದು ಆಗಾಗ ಇಂಡಿಯಾ ಪಾಕಿಸ್ತಾನ ಮ್ಯಾಚಿನಲ್ಲಿ ಪಾಕಿಸ್ತಾನ ಗೆದ್ದಾಗ ಗಲ್ಲಿಯ ಸಂಧಿಗಳಲ್ಲಿ ಅವರು ಸಿಡಿಸುವ ಪಟಾಕಿಗಳಿಂದ ನಮಗೆ ಅರಿವಿಗೆ ಬರುತ್ತಿರುತ್ತದೆ. ಅಲ್ಲವೇ?. ಹೀಗೆ ಹಿಂದೂಗಳಿಗೊಂದು ಮುಸಲ್ಮಾನರಿಗೆ ಎರಡು ರಾಷ್ಟ್ರಗಳನ್ನು ನೀಡಿದ ಮೇಲೂ ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಆ ಸಂತತಿ ಮಾತ್ರ ಎಗ್ಗಿಲ್ಲದೆ ಬೆಳೆಯುತ್ತಿದೆ.

೧೯೪೭ ರಲ್ಲಿ ಭಾರತದಲ್ಲಿ ೩.೫ ಕೋಟಿಯಷ್ಟಿದ್ದ ಮುಸಲ್ಮಾ ನರು ಈಗ ೨೦ ಕೋಟಿಗೇರಿದ್ದಾರೆ, ಬಾಂಗ್ಲಾ ಹಾಗೂ ಪಾಕಿಸ್ತಾನದಲ್ಲಂತೂ ಅವರ ಸಂತತಿ ಬೆಳೆಸುವುದು ಒಂದೆಡೆಯಾದರೆ ಮುಸಲ್ಮಾನೇತರರಾದವರನ್ನು ಹಿಂಸಿಸಿ ಮತಾಂತರಿಸಿ, ಮತಾಂತರಗೊಳ್ಳದಿದ್ದಲ್ಲಿ ಕೊಲೆಗೈದು ತಮ್ಮ ಸಂಖ್ಯಾಬಲವನ್ನು ಏರಿಸುತ್ತಿದ್ದಾರೆ. ಈಗ ನಡೆಯುತ್ತಿರುವುದು ಅದೇ. ಇಂದು ಬಾಂಗ್ಲಾದೇಶದ ಒಟ್ಟು ಜನಸಂಖ್ಯೆ ೧೬.೫ ಕೋಟಿ. ಅದರಲ್ಲಿ ಶೇ. ೯೦ ರಷ್ಟು ಜನ ಮುಸಲ್ಮಾ ನರು. ಶೇ. ೭-೮ ರಷ್ಟು ಜನ ಮಾತ್ರ ಹಿಂದೂಗಳು. ಮಿಕ್ಕ ೧-೨ ರಷ್ಟು ಅನ್ಯ ಎಲ್ಲರು. ಕಳೆದ ೨-೩ ಶತಮಾನಗಳಲ್ಲಿ ಇಸ್ಲಾಮೇತರರು ಬಹುಸಂಖ್ಯಾತರಾಗಿರುವ ರಾಷ್ಟ್ರಗಳಲ್ಲಿ ಇಸ್ಲಾಮೀಕರಣ ಶುರುವಾಗಿ, ಅಲ್ಲಿ ಅವರ ಸಂಖ್ಯೆ ಅರ್ಧಕ್ಕಿಂತ ಹೆಚ್ಚಾದ ಮೇಲೆ ಮುಸಲ್ಮಾನರ ಬೇಡಿಕೆಗಳು, ಅವರು ನಡೆದುಕೊಳ್ಳುವ ರೀತಿ, ಅವರ ಧರ್ಮದ ಹೇರಿಕೆ, ಸರ್ವಾಽಕಾರದ ನಡುವಳಿಕೆಯನ್ನು ನಾವು ಕಂಡಿದ್ದೇವೆ.

ಬ್ರಿಟನ್, ಫ್ರಾನ್ಸ್, ಜರ್ಮನಿ, ಅಮೆರಿಕ, ದಕ್ಷಿಣ ಅಮೆರಿಕದ ಹಲವು ಭಾಗಗಳಲ್ಲಿ ಅವರ ಧರ್ಮ ವಿಸ್ತಾರ, ಆಫ್ರಿಕಾದ ಬಡ ರಾಷ್ಟ್ರಗಳನ್ನು ಇಸ್ಲಾಮೀಕರಣಗೊಳಿಸಿ
ಅಲ್ಲಿನ ಮಕ್ಕಳ ಕೈಗೆ ಗನ್ ನೀಡಿ ಧರ್ಮಾಂಧತೆಯ ಬೀಜ ಬಿತ್ತುವ ಈ ಇಸ್ಲಾಮಿ ಶಕ್ತಿಗಳು ತಮ್ಮ ನೆಲವನ್ನು ಸ್ಮಶಾನವಾಗಿಸದೇ ಬಿಡೋಲ್ಲ. ಸಿರಿಯಾ, ಲಿಬಿಯಾ, ಪ್ಯಾಲೆಸ್ತೇನಗಳಲ್ಲಿ ಇವರುಗಳೇ ಮಾಡಿದ ಅನಾಹುತಗಳಿಂದ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಾಗ ಇವರನ್ನು ಇವರ ಸಹೋದರ ರಾಷ್ಟ್ರ ಗಳೇ ಸೇರಿಸಿಕೊಳ್ಳಲಿಲ್ಲ.

ಬಾಂಗ್ಲಾ ಭುರ್ಖಾ ಫ್ಯಾಕ್ಟರಿಗಳಲ್ಲಿ ತಯಾರಾದ ಎಲ್ಲ ಸರಕುಗಳನ್ನು ಬೆಂಗಳೂರು, ಮುಂಬೈ, ದಿಲ್ಲಿಯಂತಹ ದೊಡ್ಡ ನಗರಗಳಿಗೆ ಕರೆಸಿಕೊಂಡು ಚೀಪ್
ಲೇಬರ್ ಎಂಬ ಶೀರ್ಷಿಕೆಯಡಿ ದುಡಿಸಿಕೊಂಡು ನಾಳೆ ರೋಹಿಂಗ್ಯಾಗಳಂತೆ ಬಾಂಗ್ಲಾ ಬಂಡುಕೋರರೂ ತಮ್ಮ ತೇಜೋವಧೆ ಮಾಡಲಿ ಎಂದು ಕಾಯುತ್ತಿರುವ ದೊಡ್ಡ ದೊಡ್ಡ ಬಿಸಿನೆಸ್ ಮೆನ್ ಗಳನ್ನು, ಬಿಲ್ಡರ್ ಡೆವೆಲಪರ್ ಗಳನ್ನೂ ಈ ಸಂಧರ್ಭದಲ್ಲಿ ಸ್ಮರಿಸಲೇಬೇಕು.

ಹೀಗೆಯೇ ವಲಸೆಗೆ ಬಂದ ಮುಸಲ್ಮಾನನೊಬ್ಬ ಫ್ರಾನ್ಸ್ ನಲ್ಲಿ ಸ್ಥಳೀಯ ಶಿಕ್ಷನೊಬ್ಬನನ್ನು ಕೊಂದು, ಪ್ರವಾದಿ ಮೊಹಮ್ಮದರಿಗೆ ಗೌರವ ಸೂಚಿಸಿರುವುದಾಗಿ ಹೇಳಿಕೊಂಡಾಗ ೨೦೨೦ ರಲ್ಲಿ ಫ್ರಾನ್ಸ್ ಸರಕಾರ ಅವನ ತಪ್ಪಿಗಾಗಿ ಕೇವಲ ಕೆಲವು ಮುಸ್ಲಿಂ ವಿರೋಧಿ ಆದೇಶಗಳನ್ನು ಹೊರಡಿಸಿದ್ದರೆಂಬ ಕಾರಣಕ್ಕೆ ಭಾರತದ ಭೋಪಾಲನಲ್ಲಿ, ಉತ್ತರ ಪ್ರದೇಶದ ಅಲೀಗಢದಲ್ಲಿ, ಮುಂಬೈನ ಬೇಂಡಿ ಬಜಾರ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ಪ್ರತಿಭಟಿಸಿ, ಫ್ರಾನ್ಸ್ ವಿರುದ್ಧ, ಫ್ರಾನ್ಸ್ ರಾಷ್ಟ್ರಪತಿ ಎಮ್ಯಾನುಯೆಲ್ ಮ್ಯಾಕ್ರೋನ್ ವಿರುದ್ಧ ಪ್ರತಿಭಟಿಸಿ, ಧಿಕ್ಕಾರ ಕೂಗಿದ ಮುಸ್ಲಿಂ ಬಾಂಧವರು ಸಾವಿರಾರು ಮೈಲಿ ದೂರದಲ್ಲಿ ಸತ್ತ ಒಬ್ಬ ಮುಸ್ಲಿಂ ತಪ್ಪಿತಸ್ಥನ ಸಮರ್ಥನೆಯಲ್ಲಿ ನಮ್ಮ ದೇಶದಲ್ಲೂ ಬಳೆ ಒಡೆದುಕೊಂಡು ಅತ್ತಿದ್ದರು.

ಅವರನ್ನು ಬೆಂಬಲಿಸಿ ಮೋದಿ ಸರಕಾರಕ್ಕೆ ದಿಕ್ಕಾರ ಕೂಗಿ ಅವಾರ್ಡ್ ವಾಪಸಿ ಗ್ಯಾಂಗ್‌ನ ಸದಸ್ಯರೂ, ಹಣ ಹಿಂದಿರುಗಿಸದೇ ಕೇವಲ ಸರ್ಟಿಫಿಕೇಟ್ ಮಾತ್ರ ವಾಪಸ ನೀಡಿ ತಮ್ಮ ಆಕ್ರೋಶ ಹೊರಹಾಕಿದ್ದರು, ಆದರೆ ಈಗ ? ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಈ ಧರ್ಮಾಂಧತೆಯ ಜ್ವಾಲೆಗೆ ನಾವು ಕಣ್ಣು ಮುಚ್ಚಿ ಕುಳಿತಿದ್ದೇವೆ. ತಪ್ಪಿತಸ್ತನನ್ನು ಶಿಕ್ಷಿಸಿದರೂ ಪ್ರತಿಭಟಿಸುವ ಮುಸಲ್ಮಾನರು ಒಂದೆಡೆಯಾದರೆ, ಬಾಂಗ್ಲಾದೇಶದಲ್ಲಿ ಅಮಾಯಕ ಹಿಂದೂಗಳನ್ನು ಹಾಡಹಗಲೇ ಕೊಚ್ಚಿ ಕೊಂದರು ನಮಗದರ ಪರಿವಿಲ್ಲದಾಗಿದೆ.

ಆ ಶ್ರೀ ಕೃಷ್ಣನ ವಾಣಿಯಂತೆ ವಸುದೈವ ಕುಟುಂಬಕಂ ಎಂದು ಬದುಕುವ ಹಿಂದೂವಿಗೆ ಇಡೀ ಜಗತ್ತೇ ಅವನ ಮನೆ, ಅಂತಹ ಈ ಮನೆಯೊಳಗೆ ಇಂದು ಅದೇ ಹಿಂದೂವಿನ ಕಗ್ಗೊಲೆಯಾಗುತ್ತಿರುವಾಗ ಮಿಕ್ಕ ಹಿಂದೂಗಳ ಮೌನ ಸಲ್ಲದು. ಜಗದಗಲಕ್ಕೆಲ್ಲ ವಿಸ್ತರಿಸಿರುವ ಹಿಂದೂ ಈ ಹತ್ಯಾ ಕಾಂಡವನ್ನು ಖಂಡಿಸಿ ಸರ್ವಧರ್ಮ ಸಮಭಾವದಲ್ಲಿ ಬಾಳುವ ಹಿಂದೂವನ್ನು ರಕ್ಷಿಸಲು ಪಣ ತೊಡಬೇಕಿದೆ. ನಾವೆಂದು ಅನ್ಯರ ನೋವಿನಲ್ಲಿ ಸುಖ ಕಾಣುವವರಲ್ಲ, ಆದರೆ ಆ ನೋವಿಗೆ ಸ್ಪಂದಿಸದಿದ್ದರೂ ಮಾನವೀಯತೆ, ಧಾರ್ಮಿಕತೆ ಹಾಗೂ ಕರ್ತವ್ಯ ಪ್ರಜ್ಞೆಗೆ ಚ್ಯುತಿ ಬರುವುದಂತೂ ಖಂಡಿತ. ಇನ್ನಾದರೂ ಜಾಗೃತರಾಗೋಣ.