Saturday, 21st September 2024

ಇದು ಕೇವಲ ಕ್ರಿಕೆಟ್ ಅಲ್ಲ, ಇಮ್ರಾನ್ !

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ದೇವ್ಲಾಲಿ (Deolali). ಇದೊಂದು ಪುಟ್ಟ, ಸುಂದರ ಊರು. ನಾಸಿಕ್ ಬಳಿ ಇದೆ. ಭಾರತೀಯ ಫಿರಂಗಿ ದಳದ ನೆಲೆ ಇರುವುದು ಅ. ಬೊಫೋರ್ಸ್ ಗನ್ ಪರೀಕ್ಷೆಗೆ ಒಳಪಟ್ಟಿದ್ದು ಅದೇ ದೇವ್ಲಾಲಿಯಲ್ಲಿ. ಬಾಂಬೆಯಲ್ಲಿ ಉದ್ಯೋಗದಲ್ಲಿದ್ದಾಗ ನಾನು ಅಲ್ಲಿ ವಾರಾಂತ್ಯಕ್ಕೆ ಹೋಗಿ ಅಣ್ಣನನ್ನು ಭೇಟಿ ಮಾಡುತ್ತಿದ್ದೆ. ಶನಿವಾರ ಮಧ್ಯಾಹ್ನ ಕೆಲಸ ಮುಗಿಸಿ ಹೊರಟು, ಭಾನುವಾರ ಕ್ರಿಕೆಟ್ ಪಂದ್ಯ ಆಡಿ ಸೋಮವಾರ ಡ್ಯೂಟಿಗೆ ವಾಪಸಾಗುತ್ತಿದ್ದೆ. ಮೊದಲ ಪಂದ್ಯದ ಮೊದಲು ನನ್ನ ಕ್ರಿಕೆಟ್ ಒಲವಿನ ಬಗ್ಗೆ ಸಾಕಷ್ಟು ಪ್ರಚಾರ ಸಿಕ್ಕಿತ್ತು. ನನ್ನ ಪ್ರತಿಭೆಗೂ ಮೀರಿದ ಪ್ರಚಾರ. ಕ್ರಿಕೆಟ್ ಆಡುವ ಮುನ್ಸೂಚನೆ ನನಗಿರಲಿಲ್ಲ.

ಪಂದ್ಯಕ್ಕೆ ಬೇಕಾದ ಶ್ವೇತ ಸಮವಸವನ್ನು ನನಗೆ ಹೊಂದಿಸಿಕೊಡಲಾಯಿತು. ಕ್ಯಾಪ್ಟನ್ ಕಠೋಚ್ ಎಂಬ ತೆಳ್ಳಗಿದ್ದ ಅಧಿಕಾರಿಯ ಪ್ಯಾಂಟ್ ನನಗೆ ಸರಿಹೊಂದು ತ್ತಿತ್ತು. ಅವರ ದ್ದೇ ಟೀ-ಶರ್ಟ್. ಮತ್ತೊಬ್ಬರ ಬಿಳೀ ಕ್ಯಾನ್ವಾಸ್ ಷೂಸ್. ಹಸಿರು ಹೊದಿಕೆಯ ಮೈದಾನವನ್ನು ಪ್ರವೇಶಿಸುವುದೇ ಒಂದು ಖುಷಿ. ಹೇಳಿ ಕೇಳಿ ಆರ್ಮಿಗೆ ಸೇರಿದ ಆಸ್ತಿ. ಶಿಸ್ತು ಬದ್ಧವಾಗಿ ಕಾಪಾಡಿಕೊಳ್ಳಲ್ಪಟ್ಟಿತ್ತು. ಮಧ್ಯಮ ವೇಗದ ಬೌಲರ್ ನಾನು. ಅತಿಥಿಯಾಗಿದ್ದ ರಿಂದ, ಪಂದ್ಯ-ಪೂರ್ವ ಬಿಲ್ಡಅಪ್ ಇದ್ದುದರಿಂದ ನನಗೇ ಆರಂಭಿಕ ಬೌಲರ್ ಆಗಿ ರಣವೀಳ್ಯ. (ಟಿವಿ ನೋಡುವು ದನ್ನು ನಿಲ್ಲಿಸಿ ಒಂದು ವರ್ಷದ ಮೇಲಾಯಿತು, ಆದರೂ ಅದರ ಪ್ರಭಾವದಿಂದ ಇಂಥ ಶಬ್ದಗಳು ಹೊರಡುತ್ತಿವೆ, ಕ್ಷಮಿಸಿ.) First bite of the cherry (ಕೆಂಪು ಹಣ್ಣಿನ ನೈವೇದ್ಯ) ಎನ್ನುತ್ತಾರೆ.

ನಾನೆಲ್ಲಿಯಾದರೂ ಬ್ಯಾಟ್ಸ್‌ಮನ್‌ನ ಬುರುಡೆಗೆ ಗುರಿಯಿಟ್ಟರೆ ಹೇಗೆ ಎಂಬ ಲೆಕ್ಕಾಚಾರದಲ್ಲಿ ಹೊಚ್ಚ ಹೊಸ ಚೆಂಡನ್ನು ಕೊಡದೇ ಸ್ವಲ್ಪ ಹಳತಾದ ಚೆಂಡನ್ನು ಒದಗಿಸಲಾಗಿತ್ತು. (ಅವರಲ್ಲೂ ಒಳ್ಳೆಯ ಕ್ರಿಕೆಟಿಗರಿದ್ದರು ಆದರೆ ಅಭ್ಯಾಸವಿಲ್ಲದೆ ಟಚ್‌ನಲ್ಲಿರಲಿಲ್ಲ.) ಅದರಿಂದ ನನ್ನ ಉತ್ಸಾಹಕ್ಕೆ ತುಸು ಭಂಗವಾಯಿತು ನಿಜ, ಆದರೆ ಆ ಸಣ್ಣ ಪ್ರಮಾಣದ ನಷ್ಟ ಬೇರೊಂದು ರೀತಿಯಲ್ಲಿ ತುಂಬಲ್ಪಟ್ಟಿತ್ತು. ಭಾನುವಾರವಾದ್ದರಿಂದ ಅಧಿಕಾರಿಗಳ ಪರಿವಾರ ದವರು ಪ್ರೇಕ್ಷಕರಾಗಿ ಜಮಾಯಿ ಸಿದ್ದರು. ನನ್ನ ಗಮನ ಸ್ಟಂಪ್ಸ್ ಮೇಲಿತ್ತು, ಆದರೆ ಮನಸ್ಸು ಬೌಂಡರಿಯಾಚೆ ನೆರೆದಿದ್ದ ಕೆಲವು ಸುಂದರ ಮುಖಗಳಿಂದ ವಿಚಲಿತವಾಗಿತ್ತು.

ವಿಕೆಟ್ ಉರುಳಿಸುವುದರ ಬದಲು ನನ್ನ ಬೌಲಿಂಗ್ ವೇಗದಿಂದ ಪ್ರೇಕ್ಷಕ(!)ರ ಮನಸ್ಸನ್ನು ಗೆಲ್ಲುವ ಬಯಕೆ ಯಿಂದ ದೂರದಿಂದ ಓಡಿಬಂದು ಕ್ರೀಸ್ ಬಳಿ ಎಗರು ವಾಗ ಧಡಾರನೆ ಬಿದ್ದೆ. ಷೂಸ್‌ನ ಕೆಳಭಾಗ ಸವೆದುದ್ದ ರಿಂದ ಮೇಲೆಗರುವಾಗ ಬಲಗಾಲು ಜಾರಿತ್ತು. ಹಿಂದಿನ ವರ್ಷ ತಾನೇ ಪತ್ರಿಕೋದ್ಯಮ ವ್ಯಾಸಂಗ ಮುಗಿಸಿದ್ದೆ. ಡಿಪ್ಲೊಮಾ ಪಡೆಯಲು ಭಾರತೀಯ ಪರಂಪರೆಯ ಆಯ್ದ ವಿಷಯದ ಮೇಲೆ ಮಹಾಪ್ರಬಂಧವನ್ನು ಸಲ್ಲಿಸುವುದು ಕಡ್ಡಾಯವಾಗಿತ್ತು. ನಾನು ಆಯ್ದು ಕೊಂಡಿದ್ದ ವಿಷಯ ಕರ್ಮ ಯೋಗ. ಸಾಕಷ್ಟೇ ಅಧ್ಯಯನ ನಡೆಸಿದ್ದೆ.

ನನ್ನ ಸುದೀರ್ಘ ಅಧ್ಯಯನ ಕಲಿಸಿಕೊಡದಿದ್ದುದನ್ನು ಅಂದಿನ ಕ್ರಿಕೆಟ್ ಫೀಲ್ಡಿನ ಅನುಭವ ಮನವರಿಕೆ ಮಾಡಿಕೊಟ್ಟಿತ್ತು: ಕಾರಣ ಮತ್ತು ಪರಿಣಾಮ (Cause and Effect). ಅ ಡ್ರಾ, ಅ ಬಹುಮಾನ. ಯಾರನ್ನೋ ಮೆಚ್ಚಿಸ ಹೋಗಿ ನನ್ನ ವೇಗವನ್ನು ಹೆಚ್ಚಿಸುವ ದುಸ್ಸಾಹಸ ಮಾಡಿದ್ದೆ. ಕ್ರಿಕೆಟ್ ಮರೆತೆ. ಷೂಸ್ ನೆಲವನ್ನು ಕಚ್ಚಲು ಅವಶ್ಯವಾದ ಗ್ರಿಪ್ ಇಲ್ಲದಿರುವುದನ್ನು ಮರೆತೆ. ಮಗುಚಿಬಿದ್ದೆ. ಕ್ಷಣದ ಪಾಠ ಕಲಿತೆ. ಗಮನವಿಡಬೇಕಾದ ಕಡೆ ಗಮನವಿಟ್ಟು ಬೌಲ್ ಮಾಡಿದೆ.

ಫಲದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಒಳ್ಳೆಯ ಫಲಿತಾಂಶವೂ ಸಿಕ್ಕಿತು. ಆಗ ನಾನು ಕಡು ನಾಸ್ತಿಕ. ನಾಸ್ತಿಕರಿಗೂ ಕರ್ಮ ಸಿದ್ಧಾಂತ ಅನ್ವಯವಾಗುತ್ತದೆ. ಬೆಂಗಳೂರು ಪ್ರೆಸ್ ಕ್ಲಬ್ ಕ್ರಿಕೆಟ್ ತಂಡಕ್ಕೆ ಬಲಿಷ್ಠವಾದ ತಂಡವೆಂದು ಹೆಸರಿತ್ತು. ಭಾರತ ಮತ್ತು ಸಿಂಗಪೂರ್ ಪ್ರವಾಸದಲ್ಲಿದ್ದ ಆಸ್ಟ್ರೇಲಿಯಾದ ತಂಡವೊಂದರ ಜತೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆಯ ಪಿಚ್‌ನಲ್ಲಿ ಮ್ಯಾಚ್ ಆಡಿದೆವು. ಆ ತಂಡದಲ್ಲಿ ವಿವಿಧ ವೃತ್ತಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಆಟಗಾರರಿದ್ದರು. ಪ್ರವಾಸಿ ಗರಲ್ಲಿ ಇಬ್ಬರು ಮಹಿಳೆಯರಿದ್ದು, ಒಬ್ಬಳಿಗೆ ಆಡಲು ಅವಕಾಶ ನೀಡಿದ್ದರು. ಮ್ಯಾಚ್ ಸೋತೆವು. ನಮ್ಮ ಸೋಲಿನಲ್ಲಿ ಸ್ಕರ್ಟ್ ತೊಟ್ಟು ಶಾರ್ಟ್-ಲೆಗ್‌ನಲ್ಲಿ ಫೀಲ್ಡ್ ಮಾಡುತ್ತಿದ್ದ ಆಟಗಾರ್ತಿಯ ಪಾತ್ರವೇನೂ ಇರಲಿಲ್ಲ.

ಎದುರಾಳಿ ಬಲಿಷ್ಠ ತಂಡವಾಗಿದ್ದುದು ಸೋಲಿಗೆ ಕಾರಣವಾಗಿತ್ತು. ಒಮ್ಮೆ, ಕರ್ನಾಟಕ ರಾಜ್ಯ ಮಹಿಳಾ ಕ್ರಿಕೆಟಿಗರು ನಮ್ಮ ವಿರುದ್ಧ ಪಂದ್ಯವನ್ನಾಡುವ ಇಚ್ಛೆ ವ್ಯಕ್ತಪಡಿಸಿದರು. ನಮ್ಮ ನಾಯಕ, ನಾವು ತಂಡದ ಸದಸ್ಯರು ಅವರದ್ದು ಮಹಿಳಾ ತಂಡವೆಂದು ಕಡೆಗಣಿಸದೆ, ಮನಃಪೂರ್ವಕವಾಗಿ ಆಡುತ್ತೇವೆಯೋ ಕೇಳಿದ. ನಮ್ಮಲ್ಲಿ ಒಂದಿಬ್ಬರು ಆಸಕ್ತಿ ತೋರಲಿಲ್ಲ. ಹಣಾಹಣಿ ನಡೆಯಲಿಲ್ಲ. ಮೈಸೂರಿನಮ್ಮೆ, ಪೋಲೀಸರ ವಿರುದ್ಧ ಪಂದ್ಯ ಏರ್ಪಾಡಾಗಿತ್ತು. ನಮ್ಮದು ಮೇಲೆ ತಿಳಿಸಿದ ತಂಡವಲ್ಲ; ಇದ್ದವರು ಮೈಸೂರಿನ ಪತ್ರಕರ್ತರು. ನಾವು ಮೊದಲು ಫೀಲ್ಡ್ ಮಾಡಿದೆವು. ಮೈದಾನವನ್ನು ಪ್ರವೇಶಿಸುವಾಗ ಒಬ್ಬ ಪತ್ರಕರ್ತರು ಇದೊಂದು ಥರಾ ಕಳ್ಳ ಪೊಲೀಸ್ ಆಟ, ಅಲ್ವಾ? ಎಂದು ನುಡಿದರು. ಹಾಸ್ಯಕ್ಕಾಗಿಯೇ ಹೇಳಿರಬೇಕು.

ಬೇರಾರೂ ನಕ್ಕಿದ್ದು ನೆನಪಿಲ್ಲ. ಆ ಮಾತು ಬೇರೆ. ಕ್ರಿಕೆಟ್ ಮೈದಾನದಲ್ಲಿ ನನ್ನ ಸ್ಪರ್ಧಾತ್ಮಕ ಮನೋಭಾವ ತೀವ್ರವಾಗಿರುತ್ತೆ. ನಾನಾಡುವುದೇ ಗೆಲ್ಲಲಿಕ್ಕೆ.
ಹೇಗಾದರೂ ಗೆಲ್ಲಬೇಕೆಂದಲ್ಲ. ನ್ಯಾಯಯುತವಾಗಿ ಆಡಿ ಎದುರಾಳಿಗೆ ಪೈಪೋಟಿ ನೀಡಿ ಗೆಲ್ಲುವ ಹಪಹಪಿ. ಯಾವುದೇ ಕ್ಷೇತ್ರದಲ್ಲಿ, ಗೆದ್ದೇನಾಗಬೇಕು, ಗೆದ್ದು ಸಾಧಿಸುವುದೇನು ಎಂಬಂತಹ ನಿರ್ಲಿಪ್ತತೆ ನನ್ನಲ್ಲಿದೆ. ಆದರೆ ಕ್ರಿಕೆಟ್ ಮೈದಾನದಲ್ಲಿ ನಾನು ವೀರಾವೇಶದಿಂದ ಆಡುತ್ತೇನೆ. ಯಾವತ್ತೂ, ಯಾವುದೇ ಪಂದ್ಯವನ್ನು ಲಘುವಾಗಿ ಪರಿಗಣಿಸದ ನಾನು ಅಂದು ಮಾತ್ರ ಸ್ವಲ್ಪ ಔದಾರ್ಯ ತೋರಿದೆ.

ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳು ಮತ್ತು ಅಧಿಕಾರೇತರರ ನಡುವಿನ ಕಂದಕ ಬಲು ದೊಡ್ಡದು. ಅದು ಆಟದ ಮೈದಾನದಲ್ಲೂ ವ್ಯಕ್ತವಾಗುತ್ತಿತ್ತು. ತಂಡದಲ್ಲಿ ಹೊಂದಾಣಿಕೆ ಇರಲಿಲ್ಲ. ನಾನು ತೋರಿದ ಔದಾರ್ಯ ಅಧಿಕಾರೇತರ ಆಟಗಾರನೊಬ್ಬನಿಗೆ ಲಾಭ ತಂದುಕೊಟ್ಟಿತು. ನನ್ನ ಉದ್ದೇಶವೂ ಅದೇ ಆಗಿತ್ತು. ಅದೇ ಕಾರಣದಿಂದ ಮ್ಯಾಚ್ ಸೋತೆವು. ಸೋಲನ್ನು ಸಮಚಿತ್ತದಿಂದ ಸ್ವೀಕರಿಸುವ ಗುಣ ಯಾವುದೇ ಕ್ರೀಡಾಪಟುವಿನಲ್ಲಿರುವಂತೆ ನನ್ನಲ್ಲೂ ಇದೆ. ಆದರೆ, ಅಂದು
ನೋವಾಗಿದ್ದು ನಮ್ಮ ಎದುರಾಳಿಗಳು ವಿಜಯದಲ್ಲಿ ತೋರಿದ ಅಭಿರುಚಿಯ ಅಭಾವ. ಸಾಽಸಿದ್ದು ಪ್ರತಿಸ್ಪರ್ಧಿಗಳ ಮೇಲಿನ ವಿಜಯ ಎಂಬುದು ಅವರ ವಿಜಯೋತ್ಸವದಲ್ಲಿ ಕಾಣುತ್ತಿರಲಿಲ್ಲ; ಪತ್ರಕರ್ತರನ್ನು ಸದೆಬಡಿದೆವು ಎಂಬ ಅವರ ಆಂಗಿಕ ಭಾಷೆ ಕಣ್ಣಿಗೆ ರಾಚುತ್ತಿತ್ತು.

ಲಾಠಿ ಬೀಸಬೇಕಾಗಿದ್ದವರ ಮೇಲೆ ಬ್ಯಾಟನ್ನಾದರೂ ಬೀಸಿ ಗೆದ್ದೇವಲ್ಲ ಎನ್ನುವ ಆನಂದ ವಿಜಯಿಗಳಲ್ಲಿ ತುಳುಕುತ್ತಿತ್ತು. ಕ್ರಿಕೆಟ್‌ಗಾಗಿ ಕ್ರಿಕೆಟ್ ಇಲ್ಲವಾಗಿದೆ. ವಾಸ್ತವದಲ್ಲಿ, ಬೆಟ್ಟಿಂಗ್ ಹಗರಣ ಬೆಳಕಿಗೆ ಬಂದಿದ್ದೇ ತಡವಾಗಿ. ಅದು ಸ್ಫೋಟವಾಗುವ ೨ ದಶಕಕ್ಕೂ ಮುಂಚೆ ಆ ಕುರಿತು ಗುಸುಗುಸು ನಡೆಯುತ್ತಿತ್ತು.
ಬೆಳೆಯುವ ಪೈರನ್ನು ಮೊಳಕೆಯಲ್ಲಿ ನೋಡು ಎನ್ನುವಂತೆ ಕೆಳಮಟ್ಟದ ಲೀಗ್ ಪಂದ್ಯಗಳ ಮ್ಯಾಚ್ ಫಿಕ್ಸಿಂಗ್ ಯಾವುದೋ ಕಾಲದಿಂದಲೂ ನಡೆದುಕೊಂಡು ಬಂದಿದೆ.

ಇದು ಅಚ್ಚರಿಯಾದರೆ ನೀವು ಮೂಢರಿದ್ದೀರಿ ಅಥವಾ ಮುಗ್ಧರಿದ್ದೀರಿ. ಹಣದ ಪ್ರಾಬಲ್ಯ ಹೆಚ್ಚಾದಂತೆ ಕಲೆ ನಶಿಸುತ್ತದೆ, ಕ್ರೀಡಾ ಮನೋಭಾವ ಕ್ಷೀಣಿಸುತ್ತದೆ. ಒಬ್ಬ
ಖಾನ್ ಕಾಡಿನಲ್ಲಿ ಶಿಕಾರಿಯಾಡುತ್ತಾನೆ. ಮತ್ತೊಬ್ಬ ಬಡಜನರ ಮೇಲೆ ಕಾರ್ ಹತ್ತಿಸುತ್ತಾನೆ. ಮಗದೊಬ್ಬ ಮಗನನ್ನು ಗಾಂಜಾ ಗೆ ಎಳೆಯುತ್ತಾನೆ. ಅರುಂಧತಿ ರಾಯಂಥ ಅಜೆಂಡಾ-ಪ್ರೇರಿತ ಸಾಹಿತಿಗಳು ಹುಟ್ಟಿಕೊಳ್ಳುತ್ತಾರೆ. ಅಜರುದ್ದೀನ್‌ನಂತಹ ಆಸೆಬುರುಕ ಕ್ರಿಕೆಟಿಗರು ಅಣಬೆಯಂತೆ ಹರಡುತ್ತಾರೆ. ಸ್ವಾಭಾವಿಕ ವಾಗಿ, ಸಿನೆಮಾ ಮತ್ತು ಕ್ರಿಕೆಟ್ ಎರಡೂ ಕ್ಷೇತ್ರಗಳಲ್ಲೂ ಮಾಫಿಯಾ ಮನೆಮಾಡಿದೆ.

ವಿಶ್ವಕಪ್ ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್ ಮೈದಾನದ ನಮಾಜ್ ಮಾಡಿದ್ದು ತಪ್ಪಲ್ಲ. ಸ್ವಚ್ಛತೆಯ ಅರಿವಿದ್ದಿದ್ದರೆ ನಮಾಜ್ ಮಾಡುತ್ತಿರಲಿಲ್ಲ. ಆಡುವಾಗ
ಆಟಗಾರರು ಬೆವರಿರುತ್ತಾರೆ. ದುಬೈನಂಥ ಮರುಭೂಮಿ ನಖಶಿಖಗಳಿಂದ ನೀರಿಳಿಸುತ್ತದೆ. ಮುಖದಿಂದ ಇಳಿದ ಬೆವರು ತುಟಿಗೆ ಹರಿದುಬರುತ್ತದೆ. ಬಾಯಿ ತೊಳೆದುಕೊಳ್ಳಲು ಮೈದಾನದಲ್ಲಿ ವಾಶ್‌ಬೇಸಿನ್ ಇರುವುದಿಲ್ಲ. ಹಾಗಾಗಿ ಬೆವರಿಳಿದ ಆಟಗಾರರು ಮೈದಾನದ ಉಗುಳುತ್ತಾರೆ. ಅಂದಿನ ಪಂದ್ಯದಲ್ಲಂತೂ ಪಾಕಿಸ್ತಾನದ ಆರಂಭಿಕ ಆಟಗಾರರು ಭಾರತದ ಆಟಗಾರರಿಗೆ ಬೆವರಿಳಿಸಿದರು.

ಹಾಗಾಗಿ, ಬೆವರಿನ ಉಪ್ಪನ್ನು ಬಾಯಿಂದ ಹೊರಹಾಕಲು ಮೈದಾನದ ಹೆಚ್ಚು ಉಗಿದದ್ದು ಭಾರತದವರೇ. ಡ್ರಿಂಕ್ಸ್ ವಿರಾಮದಲ್ಲಿ ಮೈದಾನದ ಸಿಗುವ ನೀರನ್ನು ಬಾಯಿಗೆ ಸುರಿದುಕೊಂಡು ಮುಕ್ಕಳಿಸಿ ಮೈದಾನದ ಉಗುಳುವ ದೃಶ್ಯ ಸರ್ವೇ ಸಾಮಾನ್ಯ. ರಿಜ್ವಾನ್ ನಮಾಜ್ ಮಾಡಿದ್ದು ಸ್ವಚ್ಛತೆಯ ದೃಷ್ಟಿಯಿಂದ ಸರಿಕಾಣದು.
ಅರ್ಧ ಶತಕ ಗಳಿಸಿದಾಗ, ಸೆಂಚುರಿ ಹೊಡೆದಾಗ ಬಾಟ್ಸ್ ಮನ್ ತನ್ನ ನೆಚ್ಚಿನ ದೇವರನ್ನು ನೆನಪಿಸಿಕೊಳ್ಳುತ್ತಾನೆ. ಆಕಾಶ ದತ್ತ ನೋಡಿ ಕಣ್ಣುಮುಚ್ಚಿ ಸೂರ್ಯ ದೇವನಿಗೋ, ಇಷ್ಟ ದೇವರಿಗೋ, ಕಾಲವಾಗಿರಬಹುದಾದ ಹಿರಿಯರಿಗೋ ನಮಿಸುತ್ತಾನೆ. ಇದನ್ನು ಆಕ್ಷೇಪಿಸಲಾಗದು. ಕ್ಲಿಷ್ಟಕರ ಕ್ಯಾಚ್ ಹಿಡಿಯ ಬೇಕಾದಾಗಲೋ, ದೌಡಾಯಿಸುತ್ತಿರುವ ಚೆಂಡನ್ನು ತಡೆಯಬೇಕಾದರೋ ಬೀಳುವುದು ಅನಿವಾರ್ಯ.

ಆದರೆ ಪ್ರಾರ್ಥನೆಗಾಗಿ ಮೈದಾನದಲ್ಲಿ ಮೈಚೆಲ್ಲುವುದು ಅಷ್ಟೇನೂ ಸರಿಕಾಣದು. ನಂಬಿಕೆ, ಸ್ವಚ್ಛತೆಗೆ ಸಂಬಂಧಿಸಿದ ವಿಷಯ. ಸ್ವಚ್ಛವಲ್ಲದ ಸ್ಥಳದಲ್ಲಿ ನಮಾಜ್ ಮಾಡುವುದನ್ನು ಐಸಿಸಿ ನಿಷೇಧಿಸಿಲ್ಲ. ಹಾಗಾಗಿ ಒಬ್ಬ ರಿಜ್ವಾನೇ ಏಕೆ, ಇಡೀ ತಂಡವೇ ಮೈದಾನದಲ್ಲಿ ನಮಾಜ್ ಮಾಡಿಕೊಳ್ಳಲಿ. ಅಡ್ಡಿಯಿಲ್ಲ. ರಾಜಕಾರಣದಲ್ಲಿ ಧರ್ಮದ ನಿರಪೇಕ್ಷತೆಗೆ ಒತ್ತಾಯಿಸುವ ನಮ್ಮ ಜಾತ್ಯಾತೀತರು ಕ್ರೀಡೆಯಲ್ಲಿ ನಮಾಜ್ ಮಿಕ್ಸ್ ಆಗುವುದನ್ನು ನೋಡಿಯೂ ನೋಡದಂತಿರುತ್ತಾರೆ. ಆದರೆ ಅವರಿಗೆ ಅಸಂತೋಷ ಉಂಟುಮಾಡುವಂತೆ ಲಟ್ಯೆನ್ಸ್ ಪತ್ರಿಕೋದ್ಯಮದ ಮುಖ್ಯ ಭಾಗವಾದ ಇಂಡಿಯಾ ಟುಡೇ ಪಾಕ್ ತಂಡದ ಮಾಜಿ ನಾಯಕ ವಕಾರ್ ಯೂನಿಸ್‌ನ ಪ್ರಚೋದನಕಾರೀ ಹೇಳಿಕೆಯನ್ನು ಖಂಡಿಸಿ ಅವನ ಬುಡಕ್ಕೆರಡು ಬಿಟ್ಟಿದೆ.

ಮತ್ತೊಬ್ಬ ಮಾಜಿ ಕ್ಯಾಪ್ಟನ್ ಮತ್ತು ಹಾಲಿ ಪ್ರಧಾನಿ ಇಮ್ರಾನ್ ಖಾನ್ ಆದಿಯಾಗಿ ಮುಸ್ತಾಕ್ ಮೊಹಮದ್, ಇಂಜಮಾಮ -ಉಲ್-ಹಕ್ ವಗೈರೆಗಳು ಕ್ರಿಕೆಟ್ಟನ್ನು ಕ್ರಿಕೆಟ್ಟಾಗಿ ಆಡದೆ, ಹಿಂದೂಗಳ ಮೇಲೆ ಹಗೆ ಸಾಽಸುವ ಸಾಧನವೆಂದು ಭ್ರಮಿಸುವುದನ್ನು ನೇರಾನೇರ ಮಾತುಗಳಲ್ಲಿ ಖಂಡಿಸಿದೆ. ಭಯೋದ್ಪಾದಕರ ಬೃಹತ್ ಕೈಗಾರಿಕಾ ಕ್ಷೇತ್ರವಾಗಿರುವ ಪಾಕಿಸ್ತಾನದಿಂದ ರಫ್ತಾಗುವ ಮುಖ್ಯ ಸರಕೇ ಭಯೋತ್ಪಾದನೆ. ಆ ಭಯೋತ್ಪಾದನೆಗೆ ಪೂರಕವಾಗಿ ಆ ದೇಶದ ಮಾಜಿ/ಹಾಲಿ
ಕ್ರಿಕೆಟಿಗರು ವರ್ತಿಸುತ್ತಿರುವುದು ಖಂಡನೀಯ. ಈ ಪೀಡೆ ಗಳು ಜೆಂಟ್ಲ್‌ಮನ್ ಕ್ರೀಡೆಗೆ ತಗುಲಿದ ಶಾಪ. ಇವರು ಹರಡುತ್ತಿರುವುದು ಜನಾಂಗೀಯ ದ್ವೇಷ. ಈ ಕಾರಣಕ್ಕೆ, ಅವರನ್ನು ನಿರ್ಬಂಧಿಸಬೇಕಾದದ್ದು ಭಾರತ ಮಾತ್ರವಲ್ಲ, ಇಡೀ ಕ್ರಿಕೆಟ್ ಜಗತ್ತು.

ವಕಾರ್ ಮಾಡಿದ್ದು ಕ್ಷಮೆ ಕೇಳಿ ಬಚಾವಾಗಬಲ್ಲ ಸಣ್ಣ ತಪ್ಪನ್ನಲ್ಲ. ಅವನ ಮತಾಂಧತೆ ಕ್ರೀಡಾಲೋಕದ ಆರೋಗ್ಯವನ್ನು ಮತ್ತಷ್ಟು ಹಾಳುಗೆಡವಿದೆ. ಪಾಕಿಸ್ತಾನದ ನಾಲ್ವರು ಪ್ರಮುಖ ಕ್ರಿಕೆಟಿಗರು ಭಾರತೀಯ ವಧುವನ್ನು ವಿವಾಹವಾದರು. ಜಹೀರ್ ಅಬ್ಬಾಸ್ ಹಾಕಿಕೊಟ್ಟ ಮೇಲ್ಪಂಕ್ತಿ. ತನ್ನ ದೇಶದವಳೇ ಆದ ಮೊದಲನೆಯ ಹೆಂಡತಿಗೆ ತಲಾಖ್ ನೀಡಿ ಭಾರತೀಯಳನ್ನು ಮದುವೆಯಾದ. ಮೊಹಿಸಿನ್ ಖಾನ್ ಮದುವೆಯಾಗಿ, ಮಗಳಾದ ನಂತರ ಹೆಂಡತಿಯನ್ನು ವಿಚ್ಛೇದಿಸಿದ. ಶೋಯಬ್ ಮಲಿಕ್‌ನ ದಾಂಪತ್ಯ ಸಾನಿಯಾ ಮಿರ್ಜಾಳ ಪುಣ್ಯದಿಂದ ಮುಂದುವರೆದಿದೆ. ಹಾಸನ್ ಆಲಿ ಭಾರತೀಯ ಮುಸ್ಲಿಮಳ ಕೈ ಹಿಡಿದಿದ್ದಾನೆ, ಬಿಡದಿರಲಿ.
ಇಮ್ರಾನ್ ಖಾನಂತೂ ಭಾರತದ ಸೆಲೆಬ್ರಿಟಿಗಳನ್ನು ಪಲ್ಟಾಯಿ ಸಿದ್ದೂ, ಪಲ್ ಟಾಯಿಸಿದ್ದೇ. ಇವನ ಹೇಳಿಕೆಗಳನ್ನು ಗಮನಿಸಿದರೆ ಇವನು ಇಲ್ಲಿಗೆ ಬರುತ್ತಿದ್ದುದು ಕ್ರಿಕೆಟ್ ಆಡಲಿಕ್ಕೋ, ಜಿಹಾದ್ ಹೂಡಲಿಕ್ಕೋ ಎಂಬ ಅನುಮಾನ ಬರುತ್ತೆ.

ಕ್ರಿಕೆಟಿಗರು ಕ್ರಿಕೆಟಿರಾಗೇ ಉಳಿಯುತ್ತಿಲ್ಲ, ಅಭಿಮಾನಿಗಳೂ ಕ್ರಿಕೆಟ್ ಅಭಿಮಾನಿಗಳಾಗಿ ಉಳಿದಿಲ್ಲ. ಕ್ರೀಡೆ ಇರುವುದು ಸೌಹಾರ್ದತೆಯನ್ನು ಮೆರೆಯಲಿಕ್ಕೆ, ಪೋಷಿಸುವುದಕ್ಕೆ, ಸಂಬಂಧಗಳನ್ನು ಬೆಸೆಯುವುದಕ್ಕೆ. ಪಾಕೀ ಕ್ರಿಕೆಟಿಗರು ಕ್ರಿಕೆಟಿಗರಾಗಿರುವ ಅರ್ಹತೆಯನ್ನು ಕಳೆದುಕೊಂಡಿದ್ದಾರೆ. ಮತಾಂಧರಾಗಿರುವುದು ದುರಂತ, ಘೋರ, ಶೋಚನೀಯ, ಅಪಾಯಕರ. ಪಾಕಿಸ್ತಾನ ಭಾರತದ ಮೇಲೆ ಅಕ್ಟೋಬರ್ 24 ರಂದು ಗೆದ್ದ ಪಂದ್ಯವೇ ಫೈನಲ್ ಎಂದು ಆ ದೇಶದಲ್ಲಿ ಬಿಂಬಿಸಿ
ಸಂಭ್ರಮಿಸಲಾಗುತ್ತಿದೆ. ಆ ಲೆಕ್ಕದಲ್ಲಿ, ಭಾರತ ಇದುವರೆವಿಗೂ ಒಟ್ಟು 12 ಬಾರಿ ವಿಶ್ವ ಕಪ್ ಗೆದ್ದಿದೆ.