Vishweshwar Bhat Column: ಅಪಾಯದಲ್ಲಿರುವ ವಿವಾಹ
ಜಪಾನಿನಲ್ಲಿ ಅವಿವಾಹಿತರ ಸಂಖ್ಯೆ ಕಳೆದ ಕಾಲು ಶತಮಾನದಲ್ಲಿ ಗಣನೀಯವಾಗಿ ಜಾಸ್ತಿಯಾಗಿದೆ. ಜಪಾನಿನ ಯುವಕರಲ್ಲಿ ಮದುವೆಯನ್ನು ಮುಂದೂಡುವ ಪ್ರವೃತ್ತಿ ಕಂಡುಬರುತ್ತಿದೆ. ಯುವತಿ ಯರೂ ಮದುವೆಗೆ ಅನಾಸಕ್ತಿ ತೋರುತ್ತಿರುವುದು ಇತ್ತೀಚಿನ ಟ್ರೆಂಡ್. ಯುವಕರಿಗಿಂತ ಯುವತಿಯರು ಉತ್ತಮ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿರುವುದರಿಂದ ಅವರಲ್ಲಿ ವಿವಾಹವಾಗಬೇಕೆನ್ನುವ ಮನೋಭಾವ ಕ್ಷೀಣಿಸು ತ್ತಿದೆ
ಸಂಪಾದಕರ ಸದ್ಯಶೋಧನೆ
ಜಪಾನಿನಲ್ಲಿ ಯಾವುದಾದರೂ ಒಂದು ಸಂಸ್ಥೆ ( Institution) ಅಪಾಯದ ಅಂಚಿನಲ್ಲಿ ಇದೆ ಯೆಂದರೆ ಅದು ಮದುವೆ. ಜಪಾನಿನ ಪುರುಷರ ಮದುವೆಯಾಗುವ ಸರಾಸರಿ ವಯೋಮಾನ 30
ವರ್ಷ ಮತ್ತು ಮಹಿಳೆಯರದ್ದು 28 ವರ್ಷ. 75 ವರ್ಷಗಳ ಹಿಂದೆ (1950), ಇದು ಅನುಕ್ರಮವಾಗಿ 26 ಮತ್ತು 23 ವರ್ಷಗಳಿತ್ತು. ಜಪಾನಿನಲ್ಲಿ ಅವಿವಾಹಿತರ ಸಂಖ್ಯೆ ಕಳೆದ ಕಾಲು ಶತಮಾನದಲ್ಲಿ ಗಣನೀಯವಾಗಿ ಜಾಸ್ತಿಯಾಗಿದೆ. ಜಪಾನಿನ ಯುವಕರಲ್ಲಿ ಮದುವೆಯನ್ನು ಮುಂದೂಡುವ ಪ್ರವೃತ್ತಿ ಕಂಡುಬರುತ್ತಿದೆ. ಯುವತಿಯರೂ ಮದುವೆಗೆ ಅನಾಸಕ್ತಿ ತೋರುತ್ತಿರುವುದು ಇತ್ತೀಚಿನ ಟ್ರೆಂಡ್. ಯುವಕರಿಗಿಂತ ಯುವತಿಯರು ಉತ್ತಮ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿರುವುದರಿಂದ ಅವರಲ್ಲಿ ವಿವಾಹವಾಗಬೇಕೆನ್ನುವ ಮನೋಭಾವ ಕ್ಷೀಣಿಸುತ್ತಿದೆ.
ಇದನ್ನೂ ಓದಿ: Vinayaka M Bhatta Column: ಭಾರತದಲ್ಲಿ ಆದಾಯ ತೆರಿಗೆ: ಸಿಂಹಾವಲೋಕನ
ಟೋಕಿಯೋದಂಥ ನಗರದಲ್ಲಿ ಸಾಮಾನ್ಯ ವ್ಯಕ್ತಿಗೆ ಜೀವನ ನಿರ್ವಹಣೆ ಸುಲಭವಲ್ಲ. ಅದರಲ್ಲೂ 10-12 ದಿನಗಳ ಸಂಬಳ ಸಿಂಗಲ್ ಬೆಡ್‌ರೂಮ್ ಅಪಾರ್ಟ್‌ಮೆಂಟ್ ಬಾಡಿಗೆಗೆ ವ್ಯಯವಾಗುತ್ತದೆ. ಮದುವೆಯಾದರೆ ಜೀವನ ನಿರ್ವಹಣೆ ಬಲು ದುಸ್ತರ ಎಂಬುದು ಮುಖ್ಯ ಕಾರಣ.
ಇಬ್ಬರ ಸಂಬಳವೂ ಸಂಸಾರ ನಿರ್ವಹಣೆಗೆ ಸಾಕಾಗುವುದಿಲ್ಲ. ಅದರಲ್ಲೂ ಮಕ್ಕಳಾದ ನಂತರ ಖರ್ಚುಗಳನ್ನು ನಿಭಾಯಿಸುವುದು ಇನ್ನೂ ಕಷ್ಟ. ಈ ಕಾರಣದಿಂದ ಮದುವೆ ಎಂಬುದು ಲಕ್ಸುರಿ ಯೇ. ಅದ ರಲ್ಲೂ ಹೆಂಡತಿ ಉದ್ಯೋಗದಲ್ಲಿ ಇರದಿದ್ದರೆ, ಸಂಸಾರವನ್ನು ನಿಭಾಯಿಸುವುದು ಕಷ್ಟ ವೇ. ಅನೇಕ ಕಂಪನಿಗಳು ತಮ್ಮ ಸಿಬ್ಬಂದಿಗೆ ಆಫೀಸಿನಲ್ಲಿಯೇ ವಾಸ್ತವ್ಯ ವ್ಯವಸ್ಥೆಯನ್ನು ಮಾಡಿರು ವುದರಿಂದ, ಅಂಥವರು ವಿವಾಹವಾಗುವುದನ್ನು ಮುಂದೂಡುತ್ತಾ ಹೋಗುವುದು ಸಾಮಾನ್ಯ.
ನಿರುದ್ಯೋಗ ಮತ್ತು ಕಡಿಮೆ ಸಂಬಳದ ಉದ್ಯೋಗವೂ ಅಲ್ಲಿನ ಯುವಕ-ಯುವತಿಯರು ಮದುವೆ ಯಾಗದಿರಲು ಇನ್ನೊಂದು ಕಾರಣ. ಕೈತುಂಬಾ ದುಡಿಯದ ಯುವಕರನ್ನು ಮದುವೆಯಾಗಲು ಅಲ್ಲಿನ ಹುಡುಗಿಯರು ನಿರಾಕರಿಸುತ್ತಿರುವುದು ಸಾಮಾನ್ಯ. ಜಪಾನಿನಲ್ಲಿ ಅರೇಂಜ್ಡ್ ಮ್ಯಾರೇಜ್‌ಗೆ ಯುವಕ-ಯುವತಿಯರು ಅನುಮತಿ ನೀಡುತ್ತಿಲ್ಲ. ಇದಕ್ಕೆ ಅಮೆರಿಕ ಮತ್ತು ಯುರೋಪಿನ ಪ್ರಭಾವ ವೂ ಕಾರಣವಿರಬಹುದು.
ನಗರೀಕರಣದ ಒತ್ತಡದಿಂದಾಗಿ ವಿವಾಹ ವಿಚ್ಛೇದನವೂ ಜಾಸ್ತಿಯಾಗುತ್ತಿರುವುದು ಕಳವಳಕಾರಿ. 30-40 ವರ್ಷಗಳ ಹಿಂದೆ, ಯುವಕ-ಯುವತಿಯರಿಗೆ ತಮ್ಮ ತಂದೆ-ತಾಯಂದಿರ ಸಹಕಾರ, ಬೆಂಬಲ ವಾದರೂ ಸಿಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ 20 ವರ್ಷ ದಾಟಿದ ಯುವಕ-ಯುವತಿಯರು ತಮ್ಮ ತಂದೆ-ತಾಯಿಯಿಂದ ಬೇರೆಯಾಗಿ ಸ್ವತಂತ್ರ ಜೀವನ ನಡೆಸುವ ಪ್ರವೃತ್ತಿ ಜಾಸ್ತಿ ಯಾಗಿರುವುದರಿಂದ, ಕುಟುಂಬ ಕಲ್ಪನೆಯೇ ಕುಸಿಯುತ್ತಿದೆ.
ಮಧ್ಯವಯಸ್ಸಿನಲ್ಲಿ ವಿವಾಹವಾಗುವವರ ಸಂಖ್ಯೆಯೂ ಹೆಚ್ಚುತ್ತಿರುವುದು ಇತ್ತೀಚಿನ ವಿದ್ಯಮಾನ. ಮದುವೆಯಾದರೂ ಮಕ್ಕಳು ಬೇಡ ( Childless by Choice ) ಎನ್ನುವವರ ಸಂಖ್ಯೆಯೂ ಜಾಸ್ತಿ ಯಾಗುತ್ತಿದೆ. ಇಪ್ಪತ್ತರ ಹರೆಯದ ಯುವಕ-ಯುವತಿಯರ ಪೈಕಿ ನಾಲ್ವರಲ್ಲಿ ಒಬ್ಬರು ಮದುವೆಯೇ ಬೇಡ ಎಂದು ನಿರ್ಧರಿಸಿಬಿಟ್ಟಿದ್ದಾರಂತೆ. ಹಾಗೆ ಐವರಲ್ಲಿ ಇಬ್ಬರು ಮಕ್ಕಳನ್ನು ಹೊಂದದೇ ಇರಲು ತೀರ್ಮಾನಿಸಿಬಿಟ್ಟಿದ್ದಾರಂತೆ.
ಇವೆಲ್ಲವುಗಳ ಪರಿಣಾಮವಾಗಿ ಜಪಾನಿನಲ್ಲಿ ವಿವಾಹ ಅತ್ಯಂತ ಅಪಾಯದಲ್ಲಿ ಸಿಲುಕಿರುವು ದಂತೂ ವಾಸ್ತವ. ಒಂದೆಡೆ, ವೃದ್ಧರ ಸಂಖ್ಯೆ ಹೆಚ್ಚುತ್ತಿರುವುದು ಮತ್ತು ನವಜಾತರ ಸಂಖ್ಯೆ ಕ್ಷೀಣಿಸು ತ್ತಿರುವುದು ದೇಶದ ಜನಸಂಖ್ಯಾ ನಕ್ಷೆಯನ್ನೇ ಅಲಕಲದ ಸ್ಥಿತಿಗೆ ಒಯ್ಯುತ್ತಿದೆ. ಈಗ ಜಪಾನಿನ ಜನಸಂಖ್ಯೆ ಹನ್ನೆರಡೂವರೆ ಕೋಟಿಯಷ್ಟಿದೆ. 2050ರ ಹೊತ್ತಿಗೆ ಅಲ್ಲಿನ ಜನಸಂಖ್ಯೆ ಎಂಟೂವರೆ ಕೋಟಿಗೆ ಇಳಿಯುವ ಅಪಾಯವಿದೆ.
ಜಪಾನಿನಲ್ಲಿ ವಿವಾಹ ಪ್ರಮಾಣ ಕುಸಿಯುತ್ತಿರುವುದಕ್ಕೆ ಅಲ್ಲಿನ ಯುವಕ-ಯುವತಿಯರ ಮನೋ ಭಾವದದ ಬದಲಾವಣೆ, ಮಕ್ಕಳನ್ನು ಸಾಕಿ-ಸಲಹುವ ವೆಚ್ಚದದ ಏರಿಕೆ, ಒಂಟಿಜೀವನದ ಸೌಕರ್ಯಗಳು ಮತ್ತು ಲಿಂಗ ಅಸಮಾನ ಸಮಾಜದಲ್ಲಿ ಕೆಲಸ ಹಾಗೂ ಕುಟುಂಬವನ್ನು ಸಮತೋ ಲನ ಗೊಳಿಸುವಲ್ಲಿನ ತೊಂದರೆಗಳು ಸೇರಿವೆ. ಜಪಾನ್ ಸರಕಾರವು ಮದುವೆಯನ್ನು ಪ್ರೋತ್ಸಾಹಿ ಸಲು ಮತ್ತು ಜನನ ಪ್ರಮಾಣವನ್ನು ಹೆಚ್ಚಿಸಲು ಮ್ಯಾಚ್-ಮೇಕಿಂಗ್ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ.