ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Ravi Sajangadde Column: ನಿಲ್ಲದ ಕೆಸರೆರಚಾಟ, ಜನರು ಕಂಗಾಲು !

ಕೇಂದ್ರ ಮತ್ತು ರಾಜ್ಯದಲ್ಲಿ ಯಾವುದೇ ಸರಕಾರ ಬಂದರೂ ಈ ಪರಿಸ್ಥಿತಿಯಲ್ಲೇನೂ ಬದಲಾ ಗದು! ಜನರ ಸಂಕಷ್ಟ-ಸಮಸ್ಯೆಗಳಿಗೆ ದನಿಯಾಗಿ ಪರಿಹಾರ ಕಲ್ಪಿಸಬೇಕಾದ ಜನಪ್ರತಿನಿಧಿಗಳು ಮತ್ತು ಸರಕಾರಗಳು, ಜನರ ದೈನಂದಿನ ಬದುಕಿನ ಅವಿಭಾಜ್ಯ ಅಂಗ ವಾಗಿರುವ ಸಾಕಷ್ಟು ವಸ್ತುಗಳು ಮತ್ತು ಸೇವೆಗಳ ಬೆಲೆ/ಶುಲ್ಕವನ್ನು ಕಾಲಕಾಲಕ್ಕೆ, ಅವೈಜ್ಞಾನಿಕವಾಗಿ ಹೆಚ್ಚಿಸುತ್ತಾ ಹೋಗುವ ಪ್ರವೃತ್ತಿ ಮಾಮೂಲಾಗಿಬಿಟ್ಟಿದೆ

ನಿಲ್ಲದ ಕೆಸರೆರಚಾಟ, ಜನರು ಕಂಗಾಲು !

Profile Ashok Nayak Feb 19, 2025 9:03 AM

ಕ್ರಿಯಾಲೋಪ

ರವೀ ಸಜಂಗದ್ದೆ

ಮೆಟ್ರೋ ಒಂದು ಸ್ವಾಯತ್ತ ಸಂಸ್ಥೆ. ಅದಕ್ಕೆ ಅದರದ್ದೇ ಆದ ಇತಿಮಿತಿಗಳಿವೆ, ಒಂದ ಷ್ಟು ಸ್ವಾತಂತ್ರ್ಯವಿದೆ. ಹಾಗೆಂದ ಮಾತ್ರಕ್ಕೆ ಎರ್ರಾಬಿರ್ರಿ ಬೆಲೆ ಏರಿಸುವುದು ತರ ವಲ್ಲ. ಈ ವಿಷಯದಲ್ಲಿನ ರಾಜ್ಯ ಮತ್ತು ಕೇಂದ್ರ ಸರಕಾರಗಳ ದಿವ್ಯಮೌನವು ಜನರ ಪಾಲಿಗೆ ಅಸಹನೀಯವಾಗಿದೆ ! ಎಲ್ಲರದೂ ಇದೇ ಹಣೆಬರಹ! ಜನಸಾಮಾನ್ಯರ ಹಿತ ಕಾಪಾಡಬೇಕಾದವರು, ಬೆಲೆಯೇ ರಿಕೆಯ ಸಂದರ್ಭದಲ್ಲಿ ಜನರ ಕಷ್ಟ ಮತ್ತು ತೊಂದರೆ ಗಳ ಬಗ್ಗೆ ಯಾವ ಯೋಚನೆ ಯನ್ನೂ ಮಾಡದೆ, ಕೇವಲ ಸರಕಾರದ ಬೊಕ್ಕಸ ತುಂಬಿಸಿ ಕೊಳ್ಳುವ, ತನ್ಮೂಲಕ ತಮ್ಮನ್ನು ಚುನಾಯಿಸಿದವರ ಮೇಲೇ ಗದಾಪ್ರಹಾರ ಮಾಡುವ ಪ್ರವೃತ್ತಿ ಕಾಣಬರುತ್ತಿದೆ.

ಕೇಂದ್ರ ಮತ್ತು ರಾಜ್ಯದಲ್ಲಿ ಯಾವುದೇ ಸರಕಾರ ಬಂದರೂ ಈ ಪರಿಸ್ಥಿತಿಯಲ್ಲೇನೂ ಬದ ಲಾಗದು! ಜನರ ಸಂಕಷ್ಟ-ಸಮಸ್ಯೆಗಳಿಗೆ ದನಿಯಾಗಿ ಪರಿಹಾರ ಕಲ್ಪಿಸಬೇಕಾದ ಜನಪ್ರತಿ ನಿಧಿಗಳು ಮತ್ತು ಸರಕಾರಗಳು, ಜನರ ದೈನಂದಿನ ಬದುಕಿನ ಅವಿಭಾಜ್ಯ ಅಂಗ ವಾಗಿರುವ ಸಾಕಷ್ಟು ವಸ್ತುಗಳು ಮತ್ತು ಸೇವೆಗಳ ಬೆಲೆ/ಶುಲ್ಕವನ್ನು ಕಾಲಕಾಲಕ್ಕೆ, ಅವೈ ಜ್ಞಾನಿಕವಾಗಿ ಹೆಚ್ಚಿಸುತ್ತಾ ಹೋಗುವ ಪ್ರವೃತ್ತಿ ಮಾಮೂಲಾಗಿಬಿಟ್ಟಿದೆ.

ಇದನ್ನೂ ಓದಿ: Ravi Sajangadde Column: ಕೇಂದ್ರ ಬಜೆಟ್:‌ ಕೆಲವರಿಗೆ ಬೆಣ್ಣೆ, ಕರ್ನಾಟಕಕ್ಕೆ ಸುಣ್ಣ !

ರಾಜ್ಯದಲ್ಲಂತೂ ಕಳೆದೆರಡು ವರ್ಷ ಗಳಲ್ಲಿ ಬಹುತೇಕ ಸರಕು-ಸೇವೆಗಳ ಬೆಲೆ ದುಬಾರಿ ಯಾಗಿ ಬಿಟ್ಟಿದೆ. ಈ ಬೆಲೆಯೇರಿಕೆ ಪಟ್ಟಿಗೆ ಹೊಸ ಸೇರ್ಪಡೆ ‘ಬೆಂಗಳೂರು ಮೆಟ್ರೋ ಪ್ರಯಾಣದರ’ದಲ್ಲಿನ ವಿಪರೀತ ಏರಿಕೆ. ಮೆಟ್ರೋ ಪ್ರಯಾಣದರ ಏರಿಕೆಯ ವಿಚಾರವಾಗಿ ರಾಜ್ಯ ಸರಕಾರವು ಕೇಂದ್ರದ ಮೇಲೆ, ಕೇಂದ್ರವು ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸುವ ಹಾಗೂ ಬೆಲೆಯೇರಿಕೆಯ ವಿಷಯದಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸ ವನ್ನು ಬಹಳ ಚೆನ್ನಾಗಿ ಮಾಡುತ್ತಿವೆ!

Namma metro

ಒಂದು ನೂರು ಮೀಟರ್‌ನಷ್ಟು ಡಾಮರೀಕರಣ ಮಾಡಿದರೂ (ಅದರ ಕಾಮಗಾರಿ ಕಳಪೆ ಯಾಗಿದ್ದರೂ) ಕಾರ್ಪೊರೇಟರ್‌ನಿಂದ ಮೊದಲ್ಗೊಂಡು ಸಂಸದರವರೆಗೆ ಕ್ರೆಡಿಟ್ ತೆಗೆದು ಕೊಳ್ಳುವ, ಡಾಮರ್ ಆದ ರಸ್ತೆಯ ಇಕ್ಕೆಲಗಳಲ್ಲೂ ಪೋಸ್ಟರ್ ಹಾಕಿ ಪೋಸು ಕೊಡುವ ಈ ನಾಯಕರು, ಮೆಟ್ರೋ ಪ್ರಯಾಣದರ ಏರಿಕೆ ವಿಷಯದಲ್ಲಿ ಹಾವು ತುಳಿದಂತೆ, ಅದಕ್ಕೂ ತಮಗೂ ಸಂಬಂಧವಿಲ್ಲವೆಂಬಂತೆ ಆಡುತ್ತಿರುವುದು, ಅಸಂಬದ್ಧ ಹೇಳಿಕೆಗಳನ್ನು ಕೊಡು ತ್ತಿರುವುದು ರೇಜಿಗೆ ಹುಟ್ಟಿಸುವಂತಿದೆ.

ಇವರೆಲ್ಲರಲ್ಲೂ ಜನಪರ ಕಾಳಜಿ ಶೂನ್ಯವಾಗಿರುವುದು ಸ್ಪಷ್ಟವಾಗಿ ಗೋಚರಿ ಸುತ್ತಿದೆ. ಇಂಥ ವಿಚಾರಗಳಲ್ಲಿ ಜನರ ಪರವಾಗಿ ನಿಲ್ಲಬೇಕಾದ ಸಂಸದರು ಮತ್ತು ರಾಜ್ಯ ಸರಕಾರದ ಸಚಿವರು, ತಂತಮ್ಮ ಪಕ್ಷ ಗಳಲ್ಲಿ ಪ್ರಭುತ್ವ ಸ್ಥಾಪಿಸಲು ಹೆಚ್ಚೆಚ್ಚು ಮುನ್ನೆಲೆಗೆ ಬರಲೆಂದು ಬಣ ರಾಜಕೀಯ ಮಾಡುವುದರಲ್ಲಿ, ಆಯಕಟ್ಟಿನ ಸ್ಥಾನಗಳ ಬದಲಾವಣೆಯ ಕಸರತ್ತಿನಲ್ಲಿ ಸಂಪೂರ್ಣ ವ್ಯಸ್ತರಾಗಿ ಬಿಟ್ಟಿದ್ದಾರೆ!

ಜನಸಾಮಾನ್ಯರ ವಿಷಯ ಯಾರಿಗೂ ಬೇಡ! ಯಾಕೆಂದರೆ ಮುಂದಿನ 3 ವರ್ಷಗಳ ಕಾಲ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಯಾವುದೇ ಚುನಾವಣೆ ಇಲ್ಲವಲ್ಲಾ! ಅಲ್ಲಿಗೆ, ‘ಉದಯ ವಾಯಿತು ನಮ್ಮ ಚೆಲುವ ಕನ್ನಡ ನಾಡು’! ರಾಜ್ಯದಲ್ಲಿ ಕಳೆದೆರಡು ವರ್ಷಗಳಲ್ಲಿ ಬೆಲೆ ಯೇರಿಕೆಯನ್ನು ಕಂಡಿರುವ ವಸ್ತುಗಳು ಮತ್ತು ಸೇವೆಗಳ ಪಟ್ಟಿಯನ್ನೊಮ್ಮೆ ನೋಡಿ ದರೆ ಗಾಬರಿಯಾಗುತ್ತದೆ.

ವಿದ್ಯುತ್ ದರ ಶೇ.14.5 ರಷ್ಟು, ಬಸ್ಸಿನ ಪ್ರಯಾಣ ದರ ಮತ್ತು ಹಾಲಿನ ದರ ಶೇ.15 ರಷ್ಟು, ಆಸ್ತಿ ನೋಂದಣಿ ದರ/ತೆರಿಗೆ ಶೇ.25ರಷ್ಟು, ಆಸ್ತಿ ಮೌಲ್ಯಾಂಕನ ದರ ಶೇ.30ರಷ್ಟು ವಾಹನ ನೋಂದಣಿ ಶುಲ್ಕ ಶೇ.10ರಷ್ಟು,ರಾಜ್ಯ ಸರಕಾರ ಪ್ರಾಯೋಜಿತ ಕಾಲೇಜು ಶುಲ್ಕ ಶೇ.10 ರಷ್ಟು, ವಿದ್ಯುತ್ ಚಾಲಿತ ವಾಹನದ ಮೇಲಿನ ತೆರಿಗೆ ಶೇ.10ರಷ್ಟು ಹೀಗೆ ಪಟ್ಟಿಯು ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ.

ಇನ್ನು ಆಸ್ತಿ ನೋಂದಣಿ ಶುಲ್ಕ, ಆಸ್ಪತ್ರೆ ಶುಲ್ಕ, ಜನನ-ಮರಣ ನೋಂದಣಿ ಮತ್ತು ಪ್ರಮಾ ಣೀಕರಣ ಶುಲ್ಕಗಳೂ ಈ ಯಾದಿಗೆ ಸೇರುತ್ತವೆ. ಇಷ್ಟೆಲ್ಲಾ ಆಗಿಯೂ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳವರು ಅಧಿಕಾರ ಹಂಚಿಕೆ ಮತ್ತು ಆಂತರಿಕ ಸಂಘರ್ಷದಲ್ಲೇ ಮುಳುಗಿ ದ್ದಾರೆ. ಊಹೂಂ! ಜನಸಾಮಾನ್ಯರ ಗೋಳು ಯಾರಿಗೂ ಬೇಡ, ಅದನ್ನು ಕೇಳುವವರೇ ಇಲ್ಲ.

ಮೆಟ್ರೋ ಪ್ರಯಾಣದರ ಏರಿಕೆಯ ವಿಚಾರವನ್ನೇ ನೋಡುವುದಾದರೆ, ಮೆಟ್ರೋ ಒಂದು ಸ್ವಾಯತ್ತ ಸಂಸ್ಥೆ. ಅದಕ್ಕೆ ಅದರದ್ದೇ ಆದ ಇತಿಮಿತಿಗಳಿವೆ ಮತ್ತು ಒಂದಷ್ಟು ಸ್ವಾತಂತ್ರ್ಯ ವಿದೆ. ಹಾಗೆಂದ ಮಾತ್ರಕ್ಕೆ ಎರ್ರಾಬಿರ್ರಿ ಬೆಲೆಯೇ ರಿಸುವುದು ತರವಲ್ಲ. ಈ ಬೆಲೆಯೇರಿಕೆ ಯ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳ ದಿವ್ಯಮೌನವು ಜನರ ಪಾಲಿಗೆ ತೀರಾ ಅಸಹನೀಯವಾಗಿದೆ! ಮೆಟ್ರೋ ಪ್ರಯಾಣ ದರವು ಶೇ.45ರಿಂದ ಶೇ.75ರಷ್ಟು ಏರಿಕೆ ಯಾಗಿರುವುದು ಒಪ್ಪತಕ್ಕ ವಿಚಾರವೇ ಅಲ್ಲ!

ಸದ್ಯಕ್ಕಿರುವ ಮಾಹಿತಿಯ ಪ್ರಕಾರ, ಮೆಟ್ರೋ ಪ್ರಯಾಣ ದರವನ್ನು ನಿಗದಿ ಮಾಡುವುದು ಕೇಂದ್ರ ಸರಕಾರವು ನೇಮಕ ಮಾಡಿರುವ ಸಮಿತಿ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಗಳ ಪ್ರತಿನಿಧಿಗಳು ಇರುತ್ತಾರೆ. ರಾಜ್ಯ ಸರಕಾರವು ದರ ಹೆಚ್ಚಳದ ಪ್ರಸ್ತಾವನೆಯನ್ನು ಈ ಸಮಿತಿಗೆ ಸಲ್ಲಿಸುತ್ತದೆ. ಈ ಸ್ವಾಯತ್ತ ಸಮಿತಿಯು ಸದರಿ ಪ್ರಸ್ತಾವನೆಯನ್ನು ಪರಾಮರ್ಶಿಸಿ, ಅಂತಿಮ ಶಿಫಾರಸನ್ನು ಕೇಂದ್ರದ ತತ್ಸಂಬಂಧಿ ಇಲಾಖೆಗೆ ಸಲ್ಲಿಸುತ್ತದೆ. ಆ ಇಲಾಖೆಯೋ, ಹೆಚ್ಚಿನ ವಿವರ ಪಡೆದುಕೊಳ್ಳುವ, ಪರಾಮರ್ಶಿಸುವ ಗೋಜಿಗೆ ಹೋಗದೆ, ದರ ಹೆಚ್ಚಳದ ಶಿಫಾರಸನ್ನು ಯಥಾವತ್ತಾಗಿ ಅಂಗೀಕರಿಸಿ, ಆದೇಶ ಹೊರಡಿಸಲು ‘ನಮ್ಮ ಮೆಟ್ರೋ’ಗೆ ಅನುಮೋದನೆ ನೀಡಿದೆ, ಇಷ್ಟೇ ಆದದ್ದು!

ವಿಷಯ ಹೀಗಿರುವಾಗ, ಈ ಅವೈಜ್ಞಾನಿಕ ಮತ್ತು ಅಸಂಬದ್ಧ ದರ ಏರಿಕೆಗೆ ರಾಜ್ಯ ಮತ್ತು ಕೇಂದ್ರದ ಎರಡೂ ಸರಕಾರಗಳು ನೇರ ಹೊಣೆಗಾರರು. ಮೆಟ್ರೋದ ಕಾರ್ಯಾಚರಣಾ ವೆಚ್ಚವನ್ನು ಒಂದಷ್ಟು ಸರಿದೂಗಿಸಲು ಈ ದರ ಏರಿಕೆ ಅನಿವಾರ್ಯ ಎಂಬುದು ಮೆಟ್ರೋ ಅಧಿಕಾರಿಗಳ ಸಮಜಾಯಿಷಿ. ಅದು ಹೌದಾದರೂ, ಈ ಪರಿಯ ಏರಿಕೆಯನ್ನು ಖಂಡಿತ ಒಪ್ಪಲಾಗದು. ಈ ದರ ಏರಿಕೆಯ ಕುರಿು ರಾಜ್ಯ ಮತ್ತು ಕೇಂದ್ರ ಸರಕಾರಗಳು, ಬೆಂಗಳೂರು ನಗರದ ಸಂಸದರು ಕಾರ್ಯಪ್ರವೃತ್ತರಾಗಿ, ಜನರ ದನಿಯಾಗಿ ಸಂಘಟಿತ ಹೋರಾಟವನ್ನು ನಡೆಸಬೇಕಿದೆ.

ಆದರೆ ದರ ಏರಿಕೆಯಾಗಿ ಎರಡೂವರೆ ವಾರಗಳು ಕಳೆದರೂ ಇವರ‍್ಯಾರೂ ಈ ಸಮಸ್ಯೆಯ ಪರಿಹಾರಕ್ಕೆ ಅಷ್ಟೊಂದು ಆಸಕ್ತಿಯನ್ನು ತೋರಿಸಿದಂತೆ ಕಾಣುತ್ತಿಲ್ಲ. ಎಲ್ಲರೂ ಸಾಮಾಜಿಕ ಮಾಧ್ಯಮಗಳಲ್ಲಿ ‘ಉತ್ತರ ಕುಮಾರನ ಪೌರುಷ’ವನ್ನು ಮೆರೆಯುತ್ತಿದ್ದಾರೆ. ಒಂದಿಬ್ಬರು ಜನಪ್ರತಿನಿಧಿಗಳು ಮಾತ್ರ ತಮ್ಮ ಆಪ್ತ ಸಹಾಯಕರಿಗೆ ಹೇಳಿ, ಲೆಟರ್‌ಹೆಡ್ ನಲ್ಲಿ ಚೆಂದದ ಪತ್ರವನ್ನು ಪ್ರಿಂಟ್ ಮಾಡಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ತೇಲಿ ಬಿಟ್ಟು ಕೈ ತೊಳೆದು ಕೊಂಡಿದ್ದಾರೆ.

ವರ್ಷಕ್ಕೊಮ್ಮೆ ಒಂದಂಕಿ ಪರ್ಸೆಂಟೇಜಿನಲ್ಲಿ ಸಂಬಳ ಏರಿಕೆ ಭಾಗ್ಯ ಸಿಗುವ (ಕೆಲವೊಮ್ಮೆ ಅದೂ ಖಾತ್ರಿಯಿಲ್ಲ!) ಈ ಕಾಲಮಾನದಲ್ಲಿ, ಇತರೆಲ್ಲಾ ಬಾಬತ್ತುಗಳ ಬೆಲೆಯೇರಿಕೆಯ ಬಿಸಿಗೆ ಈಗಾಗಲೇ ಹೈರಾಣಾಗಿರುವ ಬೆಂಗಳೂರು ನಿವಾಸಿಗಳ ಮೇಲೆ ಅತಿರೇಕದ ಪ್ರಮಾಣ ದಲ್ಲಿ ಮೆಟ್ರೋ ಪ್ರಯಾಣದರ ವನ್ನು ಏರಿಸಿದ್ದು ಸರ್ವಥಾ ಸ್ವೀಕಾರಾರ್ಹವಲ್ಲ.

ಜನಪ್ರತಿನಿಧಿಗಳೆಲ್ಲರೂ ಪರಸ್ಪರ ಕೆಸರೆರಚಾಟವನ್ನು ಕೈಬಿಟ್ಟು, ಈ ದರ ಏರಿಕೆಯನ್ನು ಒಕ್ಕೊರಲಿನಿಂದ ಖಂಡಿಸಬೇಕಿದೆ, ಜನರ ಮೇಲಿನ ಹೊರೆಯನ್ನು ತಗ್ಗಿಸಲು ಯತ್ನಿಸ ಬೇಕಿದೆ. ಸದ್ಯದ ಮಟ್ಟಿಗೆ ಈ ದರ ಏರಿಕೆಯಿಂದ ಮೆಟ್ರೋ ನಿಗಮವು ದಿನಕ್ಕೆ ಸರಾಸರಿ ಒಂದು ಕೋಟಿ ರುಪಾಯಿಯಷ್ಟು ಹೆಚ್ಚಿನ ಆದಾಯದ ಸಂಗ್ರಹದ ನಿರೀಕ್ಷೆಯಲ್ಲಿದೆ. ಅಂದ ರೆ ವರ್ಷಕ್ಕೆ 365 ಕೋಟಿ ರುಪಾಯಿ ಗಳು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಮೆಟ್ರೋದ ಲಾಭವನ್ನು ಸಮನಾಗಿ ಹಂಚಿ ಕೊಂಡಂತೆ, ಈ ವೆಚ್ಚವನ್ನು ಸರಿದೂಗಿಸಲು ತಲಾ 185 ಕೋಟಿ ರುಪಾಯಿ ಗಳನ್ನು ಎತ್ತಿಡುವ ನಿಟ್ಟಿನಲ್ಲಿ ಯೋಚಿಸಬೇಕು.

ಹಾಗಾದಾಗ ಮಾತ್ರವೇ ಜನರ ಮೇಲಿನ ಹೊರೆ ತಗ್ಗಿ ಕೊಂಚ ನಿರಾಳವಾದೀತು. ಒಂದು ಸರಕಾರಕ್ಕೆ ಈ ಮೊತ್ತ (185 ಕೋಟಿ) ಏನೇನೂ ಅಲ್ಲ. ಆದ್ದರಿಂದ, ಸರಕಾರಗಳು ಮತ್ತು ಜನಪ್ರತಿನಿಧಿಗಳು ಇಚ್ಛಾಶಕ್ತಿಯನ್ನು ತೋರಿಸಬೇಕು. ಹಾಗಾದಾಗ ಮಾತ್ರವೇ ‘ಜನಸೇವೆ’ ಮತ್ತು ‘ಜನಸೇವಕರು’ ಎಂಬ ಪರಿಕಲ್ಪನೆಗೆ ಅರ್ಥ ಬಂದೀತು.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)