Sunday, 22nd September 2024

ಉತ್ಸಾಹವೇ ಬಂಡವಾಳ: ಹೂಡು ಉದ್ಯೋಗ ನೀಡು

ಆಶಯ

ಮುರುಗೇಶ ಆರ್‌.ನಿರಾಣಿ, 

ಕರ್ನಾಟಕ ಸರಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು

ಬಹಳಷ್ಟು ಯುವಕರು ಹೊಸ ಸಾಹಸಕ್ಕೆ ಹೆದರುತ್ತಾರೆ. ಈ ಕಾರಣಕ್ಕೆ ಕೆಲವೇ ಮಾಲೀಕರಿದ್ದಾರೆ. ರಾಜಕೀಯದಲ್ಲಿ ಕೆಲವೇ ನಾಯಕರಿದ್ದಾರೆ. ಅಗಣಿತ ಹಿಂಬಾಲಕರಿದ್ದಾರೆ. ಇದರ ಬದಲು ಉತ್ಸಾಹವನ್ನು ಸಮರ್ಪಕವಾಗಿ ಬಳಸಿದರೆ ಬಂಡವಾಳ ಕೂಡ ಹರಿದು ಬರುತ್ತದೆ.ನಡೆಯ ತೊಡಗಿದರೆ ದಾರಿ ಕಾಣ ತೊಡಗುತ್ತದೆ.

ಧಾರವಾಡದ ಎಂಜಿನಿಯರಿಂಗ್ ಕಾಲೇಜಿಗೆ ಇತ್ತೀಚೆಗೆ ಉಪನ್ಯಾಸಕ್ಕೆಂದು ಹೋಗಿದ್ದೆ. ಓದು ಮುಗಿದ ಮೇಲೆ ನೌಕರಿಗೆ ಅಲೆಯದೇ ಸ್ವಂತ ಉದ್ಯೋಗ ಆರಂಭಿಸಬೇಕು. ಕಾರ್ಖಾನೆಗಳನ್ನು ಕಟ್ಟಬೇಕು. ಹೊಸ ಉದ್ಯೋಗಗಳನ್ನು ಸೃಷ್ಟಿಸಬೇಕು. ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು ಎಂದು ಹೇಳುತ್ತಿದ್ದಾಗ ವಿದ್ಯಾರ್ಥಿಯೊಬ್ಬ ಥಟ್ಟನೇ ಎದ್ದು ನಿಂತು ‘ಸರ್’ ಎಂದು ಬ್ರೇಕ್ ಹಾಕಿದ. ‘ಏನಾದರೂ ಪ್ರಶ್ನೆ ಇದೆಯೇ?’ ಎಂದು ಕೇಳಿದೆ. ಆ ಯುವಕ ‘ಸರ್ ಓದಬೇಕು ಎನ್ನುವ ಉತ್ಸಾಹದಿಂದ ಸ್ವಲ್ಪ ಹಣ ಹೊಂದಿಸಿಕೊಂಡು ಕಾಲೇಜು ಮೆಟ್ಟಿಲೇರಿದ್ದೇನೆ. ನೀವು ಉದ್ಯಮಿಯಾಗು ಎಂದು ಹೇಳುತ್ತಿದ್ದೀರಿ. ನನಗೆ ಬಂಡವಾಳ ಬೇಕಲ್ಲ?’ ಎಂದು ನೇರವಾಗಿ ಪ್ರಶ್ನೆ ಕೇಳಿದ.ಅವನ ಧ್ವನಿಯಲ್ಲಿ ಒಂದಿಷ್ಟು ಅಸಮಾಧಾನ ಇರುವುದು ಕಾಣಿಸಿತು.

‘ನನ್ನ ಪ್ರೀತಿಯ ಯುವ ಗೆಳೆಯನೆ ನಿನ್ನ ಪ್ರಶ್ನೆಯಲ್ಲಿಯೇ ಉತ್ತರ ಅಡಗಿದೆ. ಉತ್ಸಾಹದಿಂದ ಕಾಲೇಜಿಗೆ ಬಂದಿರುವೆ. ಕಾಲೇಜು ಓದು ಮುಗಿದ ಮೇಲೆ ಅದೇ ಉತ್ಸಾಹದಿಂದ ಕೈಗಾರಿಕೆ ಕಟ್ಟಬೇಕು. ಉತ್ಸಾಹ ಕೂಡ ದೊಡ್ಡ ಬಂಡವಾಳ. ಉತ್ಸಾಹಕ್ಕೆ ಅಪರಿಮಿತ ಶಕ್ತಿಯಿದೆ. ಉತ್ಸಾಹಕ್ಕಿಂತ ಮಿಗಿಲಾದ ಬಲವಿಲ್ಲ. ಜಗತ್ತೀನ ಎಲ್ಲ ಸಾಧನೆಗಳು ಉತ್ಸಾಹದಿಂದಲೇ ಆಗಿವೆ. ಉತ್ಸಾಹವನ್ನು ಸಮರ್ಪಕವಾಗಿ ಬಳಸಿದರೆ ಬಂಡವಾಳ ಕೂಡ ಹರಿದು ಬರುತ್ತದೆ.ನಡೆಯ ತೊಡಗಿದರೆ ದಾರಿ ಕಾಣ ತೊಡಗುತ್ತದೆ’ ಎಂದು ಹೇಳಿದೆ. ಹೌದು, ಉದ್ಯಮಿಯಾಗಿ ಬೆಳೆಯಲು ಬಹಳಷ್ಟು ಬಂಡವಾಳಬೇಕು. ತಂತ್ರಜ್ಞಾನದ ಅರಿವಿರಬೇಕು.

ಕುಟುಂಬದವರ ಪ್ರೋತ್ಸಾಹ ಬೇಕು…ಇತ್ಯಾದಿ ಬೇಕುಗಳನ್ನು ಒದಗಿಸಿಕೊಳ್ಳುವ ಪ್ರಶ್ನೆ ಬಹಳಷ್ಟು ಯುವಕರನ್ನು ಕಾಡುತ್ತಿವೆ. ಇತ್ತೀಚೆಗೆ ಇನ್ಫೋಸಿಸ್ ಸಂಸ್ಥೆಯ ಸುಧಾ ಮೂರ್ತಿ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ನಾನು ಮಾಡಿದ್ದೆ. ಆಗ ಅವರು ತಾವು ಕೇವಲ ೧೦ ಸಾವಿರ ಬಂಡವಾಳದಲ್ಲಿ ಇನ್ಫೋಸಿಸ್ ಆರಂಭಿಸಿದ ರೋಚಕ ಕತೆ ಬಿಚ್ಚಿಟ್ಟರು. ಅನಿಶ್ಚಿತತೆ ಆತಂಕದ ನಡುವೆ ಹಿಂದೆ-ಮುಂದೆ ನೋಡದೇ ತಮ್ಮ ಮೈಮೇಲೆ ಇದ್ದ ಚಿನ್ನದ ಸರವನ್ನು ಬಿಚ್ಚಿಕೊಟ್ಟ ಸಂಗತಿ ಹೇಳಿ ಒಂದು ಕ್ಷಣ ಮೌನವಾದರು. ಕೇವಲ ೧೦ ಸಾವಿರ ರು. ಬಂಡವಾಳದಲ್ಲಿ ಆರಂಭವಾದ ಉದ್ದಿಮೆ ಇಂದು ೧ಲಕ್ಷ ೫೦ ಸಾವಿರ ಜನರಿಗೆ ಉದ್ಯೋಗ ನೀಡಿದೆ.

ಚಿಂತನೆ, ಜಾಣ್ಮೆ, ಬದ್ಧತೆ ಮತ್ತು ಕಠಿಣ ಪರಿಶ್ರಮದಿಂದ ಇನೋಸಿಸ್ ಇಂದು ಭಾರತದ ಹೆಮ್ಮೆಯಾಗಿ ಬೆಳೆದು ನಿಂತಿದೆ. ಬಹಳಷ್ಟು ಸಮಾಜಮುಖಿ ಕೆಲಸಗಳನ್ನು ಈ ಸಂಸ್ಥೆ ಮಾಡುತ್ತಿದೆ. ಬಹಳಷ್ಟು ಯುವಕರು ಹೊಸ ಸಾಹಸಕ್ಕೆ ಹೆದರುತ್ತಾರೆ. ಈ ಕಾರಣಕ್ಕೆ ಕೆಲವೇ ಕೆಲವು ಮಾಲೀಕರಿದ್ದಾರೆ. ರಾಜಕೀಯದಲ್ಲಿ ಕೆಲವೇ ಕೆಲವು ನಾಯಕರಿದ್ದಾರೆ. ಅಗಣಿತ ಹಿಂಬಾಲಕರಿದ್ದಾರೆ. ಇಂಗ್ಲೆಂಡ್‌ನ ಖ್ಯಾತ ಉದ್ಯಮಿ ಜಾನ್ಸನ್ ಹೇಳುವ ಮಾತು-’ಉದ್ದಿಮೆ ಕಟ್ಟುವುದಕ್ಕೆ ಹಣ ಒಂದೇ ಮುಖ್ಯವಲ್ಲ.

ಸಾಹಸ ಮನೋಭಾವ, ಹುಮ್ಮಸ್ಸು, ಕನಸನ್ನು ಸಾಕಾರಗೊಳಿಸುವ ಇಚ್ಛಾಶಕ್ತಿ ಬೇಕು.’ ನಾನು ಸದಾ ಯುವಕರಿಗೆ ಈ ಮಾತನ್ನೇ ಹೇಳುತ್ತಿರುತ್ತೇನೆ. ಭಾರತವು ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದುವ ದೇಶಗಳಲ್ಲಿ ಒಂದಾಗಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ಟಾರ್ಟ್‌ಪ್ ಸೆಂಟರ್ ಎಂದು ಕರೆದಿದ್ದಾರೆ. ಇದಕ್ಕೆ ಪೂರಕವಾಗಿ ದೇಶದ ವಿಶ್ವವಿದ್ಯಾಲಯಗಳು ಯುವಕರನ್ನು ಸಿದ್ಧಗೊಳಿಸುವ ಕೆಲಸ ಮಾಡಬೇಕು. ನಮ್ಮ ಶಿಕ್ಷಣ ಹೊಸದನ್ನು ಕಟ್ಟುವ ಮನೋಭಾವ ಬೆಳೆಸ ಬೇಕು.

ರಾಜ್ಯ ಸರಕಾರ ಮತ್ತುಕೇಂದ್ರ ಸರಕಾರ ಕೈಗಾರಿಕೆಗಳ ಸ್ಥಾಪನೆಯ ವಿಧಾನಗಳನ್ನು ಬಹಳ ಸರಳಗೊಳಿಸಿದೆ. ೨೦೨೦-೨೫ ನೇ ಸಾಲಿನ ಕೈಗಾರಿಕಾ ನೀತಿ ಯಲ್ಲಿ ಹೊಸ ಕಂಪನಿಯ ನೋಂದಣಿ ಒಂದೇ ದಿನದಲ್ಲಿ ಆಗುತ್ತದೆ. ಹಿಂದೆ ಮೂರು ತಿಂಗಳು ಕಾಲಾವಕಾಶ ಬೇಕಾಗುತ್ತಿತ್ತು. ಗ್ರಾಮ ಪಂಚಾಯತಿ, ಆರೋಗ್ಯ, ಪೋಲಿಸ್, ಪರಿಸರ, ಕಂದಾಯ ಇಲಾಖೆಗಳ ನಿರಾಪೇಕ್ಷಣಾ (ನೋ ಅಬ್ಜೇಕ್ಸನ್ ಸರ್ಟಿಫೀಕೇಟ್) ಪ್ರಮಾಣ ಪತ್ರ ಪಡೆಯಲು ೫-೬ ತಿಂಗಳು ಅಲೆಯ
ಬೇಕಾಗುತ್ತಿತ್ತು. ಈಗ ಏಕಗವಾಕ್ಷಿ ಯೋಜನೆ ಜಾರಿಗೊಳಿಸಲಾಗಿದೆ. ಒಂದೇ ಕಡೆ ಎಲ್ಲ ಅವಶ್ಯಕ ಒಪ್ಪಿಗೆ ಪತ್ರಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ಕಂಪನಿ ನೋಂದಣಿ ಯಾಗುತ್ತಿದ್ದಂತೆ ನೌಕರರ ಪ್ರಾವಿಡೆಂಟ್ ಫಂಡ್, ಇಎಸ್‌ಐ, ಪಾವತಿಗೆ ಕೋಡ್ ನಂಬರ್ ರೂಪಗೊಳ್ಳುತ್ತವೆ. ಬ್ಯಾಂಕರ್ ಗಳು ಭೇಟಿಯಾಗ ತೊಡಗುತ್ತಾರೆ. ಇದು ನಿಜಕ್ಕೂ ಒಂದು ದೊಡ್ಡ ಬೆಳವಣಿಗೆ.

ಉನ್ನತ ಶಿಕ್ಷಣ ಕ್ಷೇತ್ರದ ಗುಣಾತ್ಮಕ ಸುಧಾರಣೆಗೆ ಕ್ರಮ ಕೈಗೊಂಡಿರುವ ಕರ್ನಾಟಕ ರಾಜ್ಯ ನೇ ಕೈಗಾರಿಕಾ ಕ್ರಾಂತಿಯಲ್ಲಿ ಮಹತ್ತರ ಪಾತ್ರ ವಹಿಸಲಿದೆ. ಗ್ರಾಮಗಳ ಸೀಶಕ್ತಿ ಸಂಘಗಳಿಂದ ಹಿಡಿದು ಬೃಹತ್ ಮಟ್ಟದ ಉದ್ಯಮಗಳಿಗಾಗಿಯೇ ಉತ್ತಮ ಆರ್ಥಿಕ ವ್ಯವಸ್ಥೆ ಕಲ್ಪಿಸಲು ಮಳೆಯರಿಗೆ ಪ್ರತ್ಯೇಕ ಆರ್ಥಿಕ ಸಂಸ್ಥೆ ರಚಿಸಲು ಸರಕಾರ ಚಿಂತನೆ ನಡೆಸಿದೆ. ಬಯೋಕಾನ್‌ನ ಕಿರಣ ಮುಜುಮ್‌ದಾರ ಶಾ ಅವರು ತಮ್ಮ ತಂದೆಯ ಗ್ಯಾರೇಜಿನಲ್ಲಿ ಉದ್ದಿಮೆ ಆರಂಭಿಸಿದರು.
ಆಗ ಅವರ ಬಳಿ ಕೇವಲ ೭ ಸಾವಿರ ರೂ. ಬಂಡವಾಳವಿತ್ತು. ಅವರು ಮಹಿಳಾ ಉದ್ದಿಮೆದಾರರಿಗೆ ಮಾದರಿಯಾಗಿ ನಿಂತಿದ್ದಾರೆ. ಇನ್ನು ಕಲಾವಿದ ಚಾರ್ಲಿ ಚಾಪ್ಲಿನ್ ಎಲ್ಲರಿಗೂ ಪ್ರಿಯವಾದ ಹೆಸರು.ಲಂಡನ್ನಿನ ಕೊಳಗೇರಿಯಲ್ಲಿ ಹುಟ್ಟಿ ಬೆಳೆದು ಅಂತಾರಾಷ್ಟ್ರೀಯ ಖ್ಯಾತಿ ಸಂಪಾದಿಸಿ ಸಿನೆಮಾ ಉದ್ದಿಮೆ
ಸಾಮ್ರಾಟ್‌ ನಾದದ್ದು ಉತ್ಸಾಹ ತುಂಬಿದ ಮನಸ್ಸಿನಿಂದ.

ಭಾರತದಲ್ಲಿ ಎರಡು ಶತಮಾನಗಳ ಹಿಂದೆ ಕೈಗಾರಿಕಾ ಯುಗ ಆರಂಭವಾಯಿತು. ಟೆಕ್ಸ್‌ಟೈಲ್ ಮಿಲ್‌ಗಳು ಮುಂಬಯಿಯಲ್ಲಿ ಸ್ಥಾಪನೆಯಾದವು. ಈ ಕೈಗಾರಿಕೆ ಗಳೇ ಭಾರತಕ್ಕೆ ಸ್ವಾತಂತ್ರ್ಯ ಬೇಕು ಎಂಬ ಚಿಂತನೆಯನ್ನು ಬೆಳೆಸಿದ್ದು ಮಹತ್ವದ ಸಂಗತಿಯಾಗಿದೆ. ನ್ಯೂಜಲೆಂಡ್ ದೇಶದಲ್ಲಿ ಕೈಗಾರಿಕೆ ಸ್ಥಾಪಿಸಲು ಕೇವಲ ಅರ್ಧ ದಿನದಲ್ಲಿಯೇ ಒಪ್ಪಿಗೆ ದೊರೆಯುತ್ತದೆ. ಇಮೇಲ್ ನಲ್ಲಿ ಅರ್ಜಿಯೊಂದಿಗೆ ಮತದಾನ ಪತ್ರ ವಿಳಾಸ ಮತ್ತು ಬ್ಯಾಂಕ್‌ಖಾತೆ ವಿವರ ತಿಳಿಸಿದರೆ ಸಾಕು. ಎಲ್ಲ ಒಪ್ಪಿಗೆ ಪತ್ರಗಳು ಇಮೇಲ್‌ನಲ್ಲಿ ಬಂದು ಬಿಡುತ್ತವೆ. ಅವುಗಳನ್ನು ಬ್ಯಾಂಕಿಗೆ ರವಾನಿಸಿದ ಕೆಲವೇ ಗಂಟೆಯಲ್ಲಿ ೫-೬ ಬ್ಯಾಂಕಿನವರು ಉದ್ದಿಮೆ ಸ್ಥಾಪಿಸಲು ಪ್ರಯತ್ನಿಸುವ ವ್ಯಕ್ತಿಯನ್ನು ಸಂಪರ್ಕಿಸುತ್ತಾರೆ. ಕರ್ನಾಟಕದಲ್ಲಿಯೂ ಇದೇ ಮಾದರಿ ಅನುಸರಿಸಲು ಸರಕಾರ ಸನ್ನದ್ಧವಾಗತೊಡಗಿದೆ.

ಮ್ಯಾನೇಜಮೆಂಟ್ ಬಹಳ ಮುಖ್ಯ. ನಿರ್ವಹಣಾ ಕೌಶಲ ಪ್ರತಿಯೊಬ್ಬರ ವೈಯಕ್ತಿಕ ಬೆಳವಣಿಗೆಗೂ, ದೇಶದ ಸಮಗ್ರ ಬೆಳವಣಿಗೆಗೂ ಅತ್ಯಂತ ಅವಶ್ಯ. ದೂರದೃಷ್ಟಿ, ಜ್ಞಾನ ಹಾಗೂ ತಂತ್ರಜ್ಞಾನವನ್ನು ಸಂಪತ್ತಾಗಿ ಪರಿವರ್ತಿಸುವದರಲ್ಲಿಯೇ ದೇಶದ ಭವಿಷ್ಯ ಅಡಗಿದೆ. ಒಳ್ಳೆಯ ಮ್ಯಾನೇಜ್ಮೆಂಟ್ ಯಾವತ್ತೂ ಸಮಯಕ್ಕೆ ಅತಿ ಹೆಚ್ಚು ಮಹತ್ವ ನೀಡುತ್ತದೆ. ಉತ್ಸಾಹಕ್ಕಿಂತ ಮಿಗಿಲಾದ ಬಲವಿಲ್ಲ. ಯುವಕರೇಧೈರ್ಯವಾಗಿ ಮುನ್ನುಗ್ಗಿ