Sunday, 22nd September 2024

ಇದು ನಮ್ಮವರಲ್ಲದ ನಮ್ಮವರ ಕಥೆ -4

ಶಿಶಿರ ಕಾಲ

ಶಿಶಿರ್‌ ಹಗಡೆ

ಇಂಟ್ರೋ: ಇದೆಲ್ಲವೂ ಬ್ರಿಟಿಷರು ತಮ್ಮ ಹಿತಾಸಕ್ತಿಗೆ, ಸುಖ – ತೀಟೆಗೆ ಯಾವ ಮಟ್ಟಕ್ಕೆ ಇಳಿದಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿ ನಮ್ಮ ಇತಿಹಾಸದಲ್ಲಿ ದಾಖಲಾಗಲೇ ಬೇಕು. ಈ ಜಗತ್ತಿನಲ್ಲಿ ಅತ್ಯಂತ ಭೀಕರ ದೌರ್ಜನ್ಯಕ್ಕೊಳಗಾದ ದೇಶ – ವರ್ಗದಲ್ಲಿ ಮೊದಲು ಭಾರತೀಯರೇ ನಿಲ್ಲಬೇಕು. ಅದಕ್ಕೆ ಕಾರಣೀಭೂತರಾಗಿ ಬ್ರಿಟಿಷರೇ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕು.

1917- ಹೀಗೆ ಕೊನೆಗೂ ಹೋರಾಟ, ಸತ್ಯಾಗ್ರಹ, ದಂಗೆಗಳು, ಅಸಹಾಕಾರ ಚಳವಳಿಗಳು ಮತ್ತು ಅದೆಲ್ಲದಕ್ಕಿಂತ ಹೆಚ್ಚಾಗಿ ಜಾಗತಿಕ ಬೆಳವಣಿಗೆಗಳು ಮತ್ತು ಅದರಿಂದಾಗಿ ಉಂಟಾದ ಮಹಾ ಯುದ್ಧವೊಂದರ ಸನ್ನಿವೇಶ ಇವೆಲ್ಲ ಕಾರಣದಿಂದಾಗಿ ಬ್ರಿಟಿಷರ covidಅಂದಿನ ಆರ್ಥಿಕತೆಗೆ ಬೆನ್ನೆಲುಬಿನಂತಿದ್ದ ಕೂಲಿ – ಜೀತ ಪದ್ಧತಿ ಕಾಗದದಲ್ಲಿ ಕೊನೆ ಗೊಂಡಿತು. ಒಂದು ಈ ಸಮಯದಲ್ಲಿ ಹೇಳಲೇ ಬೇಕು.

ಇದೆಲ್ಲ ಕೇವಲ ಬ್ರಿಟಿಷರzಬ್ಬರದ್ದೇ ಕುಕೃತ್ಯ ಎಂದರೆ ತಿಳಿವಳಿಕೆ ಅಪೂರ್ಣವಾಗುತ್ತದೆ. ಫ್ರೆಂಚರು ಮತ್ತು ಡಚ್ಚರು ಕೂಡ ಇಂಥದ್ದೇ ಕಂತ್ರಿ ಕೆಲಸ ಮಾಡಿದವರು. ಇವರೆಲ್ಲ ತಮ್ಮ ತಮ್ಮ ಆಡಳಿತದಲ್ಲಿದ್ದ ಬಂದರಿನಲ್ಲಿ ಭಾರತೀಯರನ್ನು ಈ ರೀತಿ ಹೊಸ ಮಾದರಿಯ ಜೀತಕ್ಕೆ ದೂಡಿದವರೇ. ಆದರೆ ಬ್ರಿಟಿಷರಿಗೆ ಹೋಲಿಸಿದರೆ ಆ ಪ್ರಮಾಣ ಸಣ್ಣದು. ಜಮೈಕಾ ಮತ್ತು ಬ್ರಿಟಿಷ್ ವೆಸ್ಟ್ ಇಂಡೀಸ್ – 46800, ಟ್ರಿನಿಡಾಡ್ – 143900, ಬ್ರಿಟಿಷ್ ಗಾಯನ – 238960, ದಕ್ಷಿಣ ಆಫ್ರಿಕಾದ ನಾಟಲ್ -152,200, ಪೂರ್ವ ಆಫ್ರಿಕಾ – 39,400, ಮಾರಿಷಸ್ – 451,800, ಫಿಜಿ – 56000 ಮತ್ತು ಮಲಯಾ – 130000 ಈ ಸಂಖ್ಯೆ ಕೂಲಿ ಪದ್ಧತಿ ಕೊನೆಯಾಗುವ ಸಂದರ್ಭದಲ್ಲಿ ಬ್ರಿಟಿಷರು ಕರೆದೊಯ್ದದ್ದರಲ್ಲಿ ಬದುಕುಳಿದ ಜೀವಗಳದ್ದು.

ಆ ಸಮಯದಲ್ಲಿ ಬ್ರಿಟಿಷರಿಂದ ದೇಶಾಂತರಿಗಳಾದ ಒಟ್ಟು ಸಂಖ್ಯೆ 12,58,800. ಇನ್ನು ಫ್ರೆಂಚರು ಗ್ವಾವೆಲೋಪ್ – 42,200,  ಮಾರ್ಟಿನಿಕ್ – 25,700, ರಿಯುನಿಯನ್ – 63,500 ಮತ್ತು ಡಚ್ಚರು ಸುರಾನಾಮ್ – 34,000. ಒಟ್ಟಾರೆ ಇಂಥದ್ದೊಂದು ಅನಿಷ್ಟ ದೌರ್ಜನ್ಯದಿಂದ ದೇಶಾಂತರವಾದವರ ಒಟ್ಟು ಸಂಖ್ಯೆ ಹದಿನೈದು ಲಕ್ಷ.

ನೆನಪಿಡಬೇಕಾದದ್ದು – ಇವೆಲ್ಲ ಹೀಗೆ ಹೋದವರಲ್ಲಿ ಬದುಕುಳಿದವರ, ಹೊರಜಗತ್ತಿಗೆ ಸಿಕ್ಕ ಆಗಿನ ಕಾಲದ, ಬ್ರಿಟಿಷರ ಲೆಕ್ಕ. ಇದರಲ್ಲಿ ಸತ್ತವರೆಲ್ಲ ಲೆಕ್ಕಕ್ಕೆ ಹೊರಗೆ. ಹದಿನೈದೇ ಲಕ್ಷ – ಒಬ್ಬರೂ ಸತ್ತೇ ಇಲ್ಲವೆಂದರೂ ಈ ಸಂಖ್ಯೆ ಇಂದು ಚಿಕ್ಕದೆನಿಸಬಹುದು – ಆದರೆ 1901 ರಲ್ಲಿ ಭಾರತದ ಜನಸಂಖ್ಯೆ ಇದ್ದದ್ದೇ 23 ಕೋಟಿ. ಈ ಹಿನ್ನೆಲೆಯಲ್ಲಿ ಭಾರತೀಯರನ್ನು ಬ್ರಿಟಿಷರು ಜೀತಕ್ಕೊಳ ಪಡಿಸಿದ ಪ್ರಮಾಣ ಎಷ್ಟು ದೊಡ್ಡದು ಎನ್ನುವುದನ್ನು ಗ್ರಹಿಸಬೇಕೇ ವಿನಃ ಹದಿನೈದು ಲಕ್ಷ – ಏನ್ ಮಹಾಸಂಖ್ಯೆ ಎಂದು ಇವತ್ತಿನ ಜನಸಂಖ್ಯೆಯ ಹಿನ್ನೆಲೆಯಲ್ಲಿ ನೋಡುವುದು ತಪ್ಪಾಗುತ್ತದೆ.

ಬ್ರಿಟಿಷರು ಆಸ್ತಿ, ಚಿನ್ನದಿಂದ ಹಿಡಿದು ಕೊಹಿನೂರ್ ವಜ್ರದವರೆಗೆ ಇದ್ದದ್ದೆಲ್ಲ ಲೂಟಿ ಹೊಡೆದದ್ದಲ್ಲದೇ ಕೊನೆಯಲ್ಲಿ ನಮ್ಮ ಜನರ ದೇಹವನ್ನು, ರಕ್ತವನ್ನು ಕೂಡ ಬಿಡಲಿಲ್ಲವಲ್ಲ!! ಮೊನ್ನೆ ಐದು ಪೌಂಡಿನ ಮುಖಬೆಲೆಯ ಗಾಂಧಿ ಭಾವಚಿತ್ರವಿರುವ
ನಾಣ್ಯವನ್ನು ಬ್ರಿಟಿಷರು, ಋಷಿ ಸನಕ್ ಬಿಡುಗಡೆ ಮಾಡಿದಾಗ ಭಾರತ ಸಂಭ್ರಮಿಸಿದ್ದು ನೋಡಿದ್ದೇವೆ. ಭಾರತದ ಎಲ್ಲ ಮೀಡಿಯಾಗಳು ಬ್ರಿಟಿಷ್ ಪಾರ್ಲಿಮೆಂಟನ್ನು ಹೊಗಳಿದ್ದೇ ಹೊಗಳಿದ್ದು. ಏನ್ ಕರ್ಮ ನೋಡಿ. ಗಾಂಧಿಯ ಪ್ರತಿಮೆ,
ಬಸವಣ್ಣನ ಪ್ರತಿಮೆ ಸ್ಥಾಪಿಸುವುದು ಇದೆಲ್ಲ ಬ್ರಿಟಿಷರು ಮಾಡಿದ ಕ್ರೌರ್ಯಕ್ಕೆ, ದೌರ್ಜನ್ಯಕ್ಕೆ, ನಮ್ಮವರು ಹಿಂದೆ ಪಟ್ಟ ಸಂಕಟಕ್ಕೆ,  ಲೆಕ್ಕಕ್ಕೇ ಸಿಗದ ಕೊಟ್ಯಂತರ ಸಾವಿಗೆ, ಹರಿದ ರಕ್ತಕ್ಕೆ ಯಾವ ಲೆಕ್ಕದ ಸಾಟಿ? ಅಂತೂ ಸ್ವಾತಂತ್ರ್ಯ ಈ ಕೂಲಿಗಳಿಗೆ ಸಿಕ್ಕಿತು.

ಆದರೆ ಬ್ರಿಟಿಷರಿಗೆ ಈ ಪುಕ್ಸಟ್ಟೆ ಜೀತದವರ ಮೋಹ ಹೋಗಲಿಲ್ಲ. ಇವರಲ್ಲಿ ಒಂದಿಷ್ಟು ಮಂದಿಯನ್ನು ಮಹಾಯುದ್ಧಕ್ಕೆ ಬಳಸಿ ಕೊಳ್ಳಲಾಯಿತು. ಗಾಂಧಿ ಅದಾಗಲೇ ದಕ್ಷಿಣ ಆಫ್ರಿಕಾ ಬಿಟ್ಟು ಭಾರತಕ್ಕೆ – ಸ್ವಾತಂತ್ರ್ಯ ಹೋರಾಟಕ್ಕೆ ಬಂದಾಗಿತ್ತು. ಗಾಂಧೀಜಿಗೆ ಈ ಸಮಸ್ಯೆಗೆ ಸುಖಾಂತ್ಯ ಕಾಣಿಸುವುದು ಅಸಾಧ್ಯ ಎಂದು ಮನದಟ್ಟಾಗಿ ಹೋಗಿತ್ತು. ಈ ದಕ್ಷಿಣ ಅಮೆರಿಕದ ಕೂಲಿಗಳೆಲ್ಲ ಅಲ್ಲಿ ಆಯಾ ದೇಶಗಳಲ್ಲಿ ಅನಾಥರಾಗಿದ್ದರು.

ಇತ್ತ ಭಾರತಕ್ಕೆ ಸ್ವಾತಂತ್ರ್ಯ ಬಂದಿರಲಿಲ್ಲ – ಮತ್ತು ಭಾರತ ಒಂದು ಗಣರಾಜ್ಯವಾಗಿರಲಿಲ್ಲ. ಅದರರ್ಥ ಆಗ ಕೂಡ ಬ್ರಿಟಿಷ್ ಆಡಳಿತ ಭಾರತದಲ್ಲಿತ್ತು ಮತ್ತು ರಾಜರು ಕಪ್ಪ ಕೊಟ್ಟು ಆಳ್ವಿಕೆ ನಡೆಸುತ್ತಿದ್ದರು. ಸ್ವಾತಂತ್ರ್ಯ ಹೋರಾಟ, ಭಾರತೀಯತೆ ಇವೆಲ್ಲ ಇನ್ನೊಂದು ಕಡೆ. ಆ ಸಂದರ್ಭದಲ್ಲಿ ವಸಾಹತುಶಾಹಿಯ ವಿರೋಧ ದೇಶದಲ್ಲ ಔನ್ನತ್ಯದಲ್ಲಿತ್ತು. ಭಾರತೀಯರ ಈ ಕೂಲಿಗಳ ಬಗ್ಗೆ ದ್ವಂದ್ವ ನಿಲುವುಗಳಿದ್ದವು. ಕೂಲಿ ಒಡಂಬಡಿಕೆಯನ್ನು ಬಲ್ಲ ಭಾರತೀಯರು, ಅದನ್ನು ನಖ ಶಿಖಾಂತ ವಿರೋಧಿಸಿದವ ರೆಲ್ಲ ಹಾಗೆ ಅಂದು ಹೋದವರು ಭಾರತಕ್ಕೆ ಮರಳಿ ಬರಬೇಕೆನ್ನುವುದನ್ನು ಬಯಸಿದ್ದರು ಮತ್ತು ಒತ್ತಾಯಿಸುತ್ತಿದ್ದರು.

ಆದರೆ ಇನ್ನೊಂದು ವರ್ಗವಿತ್ತು – ಅವರಿಗೆ ಹೀಗೆ ಬ್ರಿಟಿಷರ ಅರೆಕಾಸಿನ ಆಸೆಗೆ ದೇಶ ಬಿಟ್ಟು ಹೊರಟವರ ಮೇಲೆ ಎಲ್ಲಿಲ್ಲದ ಕೋಪ ವಿತ್ತು. ಅವರು ಅಂದು ದೇಶ ಬಿಟ್ಟು ಹೋಗುವಾಗ ಇಲ್ಲದ ದೇಶಭಾವ ಈಗ ಮತ್ತೇಕೆ? ಅದೇಕೆ ಪುನಃ ಮರಳುತ್ತಾರೆ ಎನ್ನುವ ಪ್ರಶ್ನೆ ಏಳಲು ಶುರುವಾಯಿತು. ಗಾಂಧಿ, ಗೋಖಲೆ ಮತ್ತು ಈ ವಸಾಹತು ದೇಶಗಳಲ್ಲಿನ ಕೆಲವು ಭಾರತೀಯ ಮುಖಂಡರು ಇವರೆಲ್ಲ ಭಾರತಕ್ಕೆ ಮರಳುವುದೇ ಸೂಕ್ತ ಮತ್ತು ನ್ಯಾಯ ಯುತ ಎಂದರು. ಅಲ್ಲಿ ಕೇವಲ ಇತ್ತೀಚೆಗೆ ದೇಶ ಬಿಟ್ಟು ಹೋದ ಕೂಲಿಗಳಷ್ಟೇ ಇರಲಿಲ್ಲವಲ್ಲ. ಅವರ ಮಕ್ಕಳಿದ್ದರು, ಮೊಮ್ಮಕ್ಕಳಿದ್ದರು.

ಅಲ್ಲಿ ಒಂದೆರಡು ತಲೆಮಾರು ಗತಿಸಿ ಹೋಗಿತ್ತು. ಬಹಳಷ್ಟು ಮಧ್ಯವಯಸ್ಕರು ಭಾರತದಲ್ಲಿ ಹುಟ್ಟಿದವರಾಗಿರಲಿಲ್ಲ. ಅದರಲ್ಲಿ ಬಹಳಷ್ಟು ಮಂದಿ ಬೇರೆ ದೇಶದ ಮಹಿಳೆಯರನ್ನು ಮದುವೆ ಬೇರೆ ಆಗಿದ್ದರು. ಆಗಲೇ ಬೇಕಿತ್ತು – ಏಕೆಂದರೆ ಬ್ರಿಟಿಷರು ಹೆಚ್ಚಾಗಿ ಭಾರತದಿಂದ ಒಯ್ದದ್ದು ಪುರುಷರನ್ನು ಮಾತ್ರ. ಅಲ್ಲದೇ ಇವರೆಲ್ಲ ಕೂಲಿ ಕೆಲಸ ಅ ಮಾಡಿಕೊಂಡಿದ್ದವರು. ಅವರು ಯಾವುದೇ ನುರಿತ ಕೆಲಸಗಾರರಾಗಿರಲಿಲ್ಲ. ಹಾಗಾಗಿ ಭಾರತದ ಸಮುದ್ರತಟ ದಲ್ಲಿರುವ ಕೂಲಿಗಳಿಗೆ ಇವರೆಲ್ಲ ಮರಳಿ ಬಂದರೆ ಮೊದಲೇ
ಕಿತ್ತುತಿನ್ನುವ ಬಡತನವಿದ್ದದರಿಂದ ಇವರ ಆಗಮನ ಇನ್ನಷ್ಟು ಕಷ್ಟಕ್ಕೆ – ಬಡತನಕ್ಕೆ ಅವರನ್ನೆಲ್ಲ ತಳ್ಳಬಹುದು ಎಂದೆನಿಸಿ ಇವರು ಮರಳಿ ಬರುವುದು ಬೇಡವೆಂದೇ ಗಲಾಟೆಯೆಬ್ಬಿಸಿದರು.

ಅದೆಲ್ಲದಕ್ಕಿಂತ ಹೆಚ್ಚಾಗಿ – ಇವರು ಭಾರತಕ್ಕೆ ಬರುವ ಖರ್ಚು ನೋಡಿಕೊಳ್ಳುವವರು ಯಾರು? ಬ್ರಿಟಿಷರಿಗೆ ಅವರು ಆಯಾ ದೇಶದ ಇದ್ದರೆ ಅಲ್ಲಿಯ ಕೆಲಸಕ್ಕೆ ಅವಶ್ಯಕತೆಗೆ ಬೇಕಿತ್ತು. ಬ್ರಿಟಿಷರಿಗೆ ಅವರನ್ನು ಖರ್ಚು ಹಾಕಿ ವಾಪಾಸ್ ಭಾರತಕ್ಕೆ ಮರಳುವಂತೆ ವ್ಯವಸ್ಥೆ ಮಾಡುವ ಒಲವು, ಅವಶ್ಯಕತೆ ಎರಡೂ ಇರಲಿಲ್ಲ. ಇನ್ನು ಅಲ್ಲಿದ್ದವರಿಗೆ ಅವರ ಸ್ವಂತ ಖರ್ಚಿನಿಂದ ಬರೋಣವೆಂದರೆ ಬ್ರಿಟಿಷ್ ಪ್ಲಾಂಟರ್‌ಗಳು ಅವರಿಗೆ ಸಂಬಳವನ್ನೇ ಕೊಟ್ಟಿರಲಿಲ್ಲ. ಬದಲಿಗೆ ಅವರ ಆಹಾರಕ್ಕೆ, ಉಳಿಯುವುದಕ್ಕೆ ಜಾಗಕ್ಕೆ ಬಾಡಿಗೆ ಹೀಗೆ ನೂರೆಂಟು ಕಥೆ ಹೇಳಿ ಸಬೂಬು ಕೊಟ್ಟರು.

ಅಷ್ಟಾಗಿಯೂ ಕೆಲವರು ಗಯಾನ ಮತ್ತು ವೆಸ್ಟ್ ಇಂಡೀಸ್ ನಿಂದ ಭಾರತಕ್ಕೆ ಹೇಗೋ ಉಳಿಸಿದ ಹಣದಿಂದ ಬಂದುಬಿಟ್ಟರು – ಆದರೆ ಅವರಿಗೆ ಭಾರತದಲ್ಲಿ ಬದುಕಲೇ ಆಗಲಿಲ್ಲ. ಅವರಲ್ಲಿ ಆಸ್ತಿ ಇರಲಿಲ್ಲ, ಸಂಪಾದನೆಗೆ, ಕೃಷಿಗೆ ಒಂದಗಲ ನೆಲವೂ ಅವರ
ಹೆಸರಿನಲ್ಲಿರಲಿಲ್ಲ. ದೇಶ ಅದಾಗಲೇ ಬದಲಾಗಿ ಹೋಗಿತ್ತು – ಅವರಿಗೆ ಪರಿಚಯವಿರುವವರು, ನೆಂಟರು ಯಾರೂ ಬದುಕಿರಲಿಲ್ಲ ಇಲ್ಲವೇ ಎಲ್ಲಿಯೋ ಹೋಗಿಬಿಟ್ಟಿದ್ದರು – ಅಥವಾ ಇದೇ ಬ್ರಿಟಿಷರು ಅವರನ್ನು ಕೂಡ ಇನ್ನೊಂದ್ಯಾವುದೋ ದೇಶಕ್ಕೆ ಸಾಗಿಸಿಬಿಟ್ಟಿ ದ್ದರು. ಅವರೆಲ್ಲರಿಗೆ ಹೊರಗಿದ್ದಾಗ ನಮ್ಮ ದೇಶ ಭಾರತ ಎಂದೆನಿಸುತ್ತಿತ್ತು, ಆದರೆ ಮರಳಿ ಬಂದಾಗ ಭಾರತ ಅವರಿದ್ದ ದೇಶಕ್ಕಿಂತ ಹೆಚ್ಚಿಗೆ ಪರಕೀಯವೆನಿಸಿತು.

ಅದರಲ್ಲಿ ಬಹುಪಾಲು ಮಂದಿ ವಾಪಾಸ್ ಅದೇ ದೇಶಕ್ಕೆ ಹೋಗಿಬಿಟ್ಟರು ಮತ್ತು ಅಲ್ಲಿಯೇ ನೆಲವನ್ನು ಗೇಣಿಗೆ ಪಡೆದು ಅಥವಾ ಅದೇ ಪ್ಲಾಂಟೇಷನ್ ಓನರ್ ಕೆಳಗಡೆ ದಿನಗೂಲಿಗೆ ಕೆಲಸ ಮಾಡಲು ಶುರುಮಾಡಿದರು. ಹೊಟ್ಟೆಪಾಡು ಮತ್ತು ಬದುಕು. ಹೀಗೆ ಭಾರತ ಬದಲಾದ ಸ್ಥಿತಿಯನ್ನು ಮತ್ತು ಅಲ್ಲಿನ ಬ್ರಿಟಿಷ್ ದಬ್ಬಾಳಿಕೆಯನ್ನು ಉಳಿದವರಿಗೆ ಹೇಳಿ ಅವರೂ ವಾಪಸಾಗಲು ಮನಸ್ಸು ಮಾಡಲಿಲ್ಲ. ಸ್ವಲ್ಪ ನೆಲ ಆಸ್ತಿ ಇದ್ದವರು – ಇತ್ತೀಚಿಗೆ ಹೋದವರು ಮಾತ್ರ ಸ್ವಲ್ಪ ಪ್ರಮಾಣದಲ್ಲಿ ವಾಪಸಾದರು – ನೂರರ ಲೆಕ್ಕದಲ್ಲಿ.

ಅತ್ತ ಬ್ರಿಟಿಷರು ಕೂಡ ಅನ್ಯನೆಲದಲ್ಲಿಯೇ ನೆಲೆಸಲು ಆಯಾ ದೇಶಗಳಲ್ಲಿ ಯೋಚಿಸುತ್ತಿದ್ದರು. ಅವರಿಗೂ ಆ ಸಮಯದಲ್ಲಿ ಇಂಗ್ಲೆಂಡ್ ದೂರವಾಗಿಬಿಟ್ಟಿತ್ತು. ದಕ್ಷಿಣ ಆಫ್ರಿಕಾ, ಪೂರ್ವ ಆಫ್ರಿಕಾವನ್ನೇ ತಮ್ಮ ನೆಲ ಎಂದು ಒಂದಿಷ್ಟು ಬ್ರಿಟಿಷರು ಒಪ್ಪಿ ಕೊಂಡಾಗಿತ್ತು. ಹಾಗೆ ಮನಸ್ಸು ಮಾಡಿದವರಿಗೆಲ್ಲ ಭಾರತೀಯ ಕೂಲಿಗಳಷ್ಟೇ ಅಲ್ಲಿ  ಕೆಲಸಕ್ಕೆ ಬೇಕಿತ್ತು. ಹಾಗಾಗಿಯೇ ಹೊಸ ಹೊಸ ಕಾನೂನನ್ನು ಅಲ್ಲಿ ತರಲಾಯಿತು. ಈ ರೀತಿ ಕೂಲಿ ಪ್ರೋಗ್ರಾಮಿನಲ್ಲಿ ಬಂದಭಾರತೀಯರನ್ನು ಬಿಟ್ಟು ಉಳಿದ ಭಾರತೀ ಯರಿಗೆ (ವಕೀಲರು, ವರ್ತಕರು ಇತ್ಯಾದಿ) ಹೆಚ್ಚಿನ ಸುಂಕ ಹೇರುವ ಕಾನೂನುಗಳು ಜಾರಿಗೆ ಬಂದವು.

ಇದರಿಂದ ಉಳಿದ – ಕೂಲಿಯಲ್ಲದ ಭಾರತೀಯರನ್ನು ಹೊರಹಾಕುವ ಕುಮ್ಮಕ್ಕಿನ ಕೆಲಸಗಳು ಕೂಡ ನಡೆದವು. ಈ ಹೊಸ ಸುಂಕದ ಕಾರಣದಿಂದ ಅಲ್ಲಿದ್ದ ಎಲ್ಲ ಭಾರತೀಯರೂ ತಾವೂ ಕೂಲಿಗಳೆಂದು ಕೆಲಸಕ್ಕೆ ಇಳಿಯುವ ಸ್ಥಿತಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಿತು. ನಂತರದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಇಂಡಿಯನ್ ರಿಲೀಫ್ ಆಕ್ಟ್ ಜಾರಿಗೆ ಬಂತು. ಇದರ ಪ್ರಕಾರ ಈ ರೀತಿಯ
ಭಾರತೀಯ ಕೂಲಿಯೇತರರ ಮೇಲೆ ಹೇರಿದ್ದ ಹೆಚ್ಚಿನ ಸುಂಕದ ಕಾನೂನು ಹಿಂಪಡೆಯಲಾಯಿತು.

ಅಂತೆಯೇ ಎಲ್ಲ ಭಾರತೀಯರಿಗೂ ಭಾರತಕ್ಕೆ ಮರಳಲು ಅವಕಾಶ ಈ ಕಾನೂನಿನಿಂದ ಸಾಧ್ಯವೆನ್ನಲಾಯಿತು. ಆದರೆ ಅವರಲ್ಲಿ ಹೆಚ್ಚಿನ ಹೊಸ ತಲೆಮಾರಿನವರು, ಭಾರತವನ್ನು ನೋಡದೆ ಇರುವವರು ಅಲ್ಲಿಯೇ ಇರಲು ನಿರ್ಧರಿಸಿದರು. ಇದರಿಂದ ಅಲ್ಲಿನ ಬಿಳಿಯರಿಗೆ ಭಾರತೀಯರು ದಕ್ಷಿಣ ಆಫ್ರಿಕಾ ಬಿಟ್ಟು ಹೋಗದಿರುವುದು  ಕಿರಿಕಿರಿಯನ್ನುಂಟುಮಾಡಿತು. ಅಲ್ಲಿಯೇ  ಉಳಿದು ಕೊಂಡ ಬಿಳಿಯರ ದೌರ್ಜನ್ಯದಿಂದಾಗಿ ಭಾರತೀಯರಿಗೆ ಅಲ್ಲಿ ಬದುಕುವುದೂ ಕಷ್ಟವಾಯಿತು. ಅಕ್ಷರಶಃ ತ್ರಿಶಂಕು ಸ್ಥಿತಿ.

ಕ್ರಿಕೆಟ್ ಆಟಗಾರರಾದ ರಾಮ್ ನರೇಶ್ ಸರವಣ್, ಚಂದ್ರಪೌಲ, ಆಲ್ವಿನ್ ಕಾಲಿಚರಣ್, ದಿನೇಶ್ ರಮಾಡಿನ್ ಇವರೆಲ್ಲ ವೆಸ್ಟ್ ಇಂಡೀಸ್‌ನಲ್ಲಿ ಕೂಲಿ ಎನ್ನುವ ಪೂರ್ವ ಪ್ರತ್ಯಯ ಇರುವವರೇ. ಇವರೆಲ್ಲರಿಗಿಂತ ಮೊದಲು ವೆಸ್ಟಿಂಡೀಸ್ ತಂಡದಲ್ಲಿ ಆಡಿದ  ರತೀಯ ಕೂಲಿ ಹಿನ್ನೆಲೆಯವರು ಸೊನ್ನಿ ರಮಾಽನ. ಆತ ಕೂಡ ಹುಟ್ಟಿದ್ದು ಭಾರತೀಯ ಕೂಲಿ ತಂದೆತಾಯಿಗಳಿಗೆ – ಟ್ರಿನಿಡಾಡ್‌ ನಲ್ಲಿ.

ಇವರೆಲ್ಲ ಕ್ರಿಕೆಟ್ ಸೇರಿದ್ದು – ನಂತರದಲ್ಲಿ ಹೆಸರು ಮಾಡಿದ್ದು ನಿಜ ಆದರೆ ಅದನ್ನು ಕ್ರಿಕೆಟ್‌ನಲ್ಲ ಆಡುವಷ್ಟು ಭಾರತೀಯರು ಬೆಳೆದರು ಎಂದು ಖುಷಿ, ಹೆಮ್ಮೆ ಪಡುವಂತಿಲ್ಲ. ಉಳಿದವರ ಬಹುತೇಕರ ಸ್ಥಿತಿ ಕೂಲಿ ಪದ್ಧತಿಯ ಅಂತ್ಯಗೊಂಡ ನಂತರ ಮುಂದಿನ ಐದು ದಶಕ ಹಾಗೆಯೇ ಮುಂದುವರಿದಿತ್ತು. ಹೀಗೆ ಉಳಿದುಕೊಂಡವರು ಕ್ರಮೇಣ ಅವರದೇ ಒಂದು ಹೊಸ ಸಂಗೀತ ಪ್ರಭೇದ, ಆಹಾರ ಪದ್ಧತಿ, ಸಂಸ್ಕೃತಿ ಆಯಾ ದೇಶಗಳಲ್ಲಿ ಬೆಳೆಸಿಕೊಂಡಿzರೆ. ಗಾಯಾನಾಕ್ಕೆ ಹೋದವರೆಲ್ಲ ಹೆಚ್ಚಿನದಾಗಿ ಉತ್ತರಪ್ರದೇಶ ಮತ್ತು ಬಿಹಾರದವರು.

ಅವರೆಲ್ಲರದು ಇಂದು ಅಪಭ್ರಂಶಗೊಂಡ ಭೋಜಪುರಿ ಭಾಷೆ. ಇಂದಿಗೂ ಅವರ ಆಹಾರ ದಾಲ್ ರೋಟಿ, ಚನ್ನಾ, ಮತ್ತು ಅನ್ನ. ಹಬ್ಬಕ್ಕೆ ಗುಲಾಬ್ ಜಾಮೂನ್, ಬರ್ಫಿ, ಪಾಯಸ ಮಾಡಿಕೊಳ್ಳುತ್ತಾರೆ. ಇದರ ಜತೆ ಚೀಸ್ ಎಲ್ಲ ಸೇರಿಸಿ ಇನ್ನೊಂದು ತಳಿಯ ಆಹಾರ ಅವರದ್ದಾಗಿದೆ. ಅವರಲ್ಲಿ ಹೆಚ್ಚಿನವರು ಇಂದಿಗೂ ಹಿಂದೂ – ಇಂದಿಗೂ ದೀಪಾವಳಿ, ಶಿವರಾತ್ರಿ, ರಾಮನವಮಿ ಆಚರಿಸು ತ್ತಾರೆ. ಅವರೊಳಗೇ ಮದುವೆಗಳಾಗುತ್ತವೆ. ಅವರೆಲ್ಲರ ಸಂಸ್ಕೃತಿಯಲ್ಲಿ ಅಲ್ಲಿನ ಸಂಸ್ಕೃತಿ ಸ್ವಲ್ಪ ಸೇರಿಕೊಂಡಿದೆ.

ಅವರೆಲ್ಲರಿಗೆ ಬಾಲಿವುಡ್ ಎಂದರೆ ಇವತ್ತಿಗೂ ಪಂಚಪ್ರಾಣ. ಅವರೆಲ್ಲ ಮುಕೇಶ್, ರಫಿ ಹಾಡನ್ನು ಇಂದಿಗೂ ಕೇಳುತ್ತಾರೆ – ರೀಮಿಕ್ಸ್ ಮಾಡಿ ರಂಜಿತರಾಗುತ್ತಾರೆ. ಅವರೆಲ್ಲ ಸೇರಿ ಶಾರುಖ್ ಖಾನ್, ಅಲ್ಕಾ ಯಾಗ್ನಿಕ್, ಸೋನು ನಿಗಮ್ ಇವರನ್ನೆಲ್ಲ ಕರೆಸಿಕೊಂಡಿzರೆ. ಅಲ್ಲಿ ಹಿಂದಿ ಮತ್ತು ಭೋಜಪುರಿ ಚಲನಚಿತ್ರಗಳನ್ನು ಅಲ್ಲಿನ ಸಿನೆಮಾ ಮಂದಿರಗಳಿಗಳಲ್ಲಿ ಹಾಕಿಸಿ ನೋಡಿ ಖುಷಿಪಡುತ್ತಾರೆ. ಭಜನೆ, ರಾಮ್‌ಲೀಲಾ ಹೀಗೆ ಅವರಲ್ಲಿ ಒಂದಿಷ್ಟು ಭಾರತೀಯತೆ ಇನ್ನೂ ಜೀವಂತವಾಗಿದೆ.

ಇಂಡೋ – ಗಯಾನಾ ಸಂಗೀತ ಪ್ರಬೇಧ ಅಲ್ಲಿ ಫೇಮಸ್. ಆ ಸಂಗೀತ ಪ್ರಭೇದಕ್ಕೆ ಅವರಿಟ್ಟುಕೊಂಡ ಹೆಸರು – ಚಟ್ನಿ ಮ್ಯೂಸಿಕ್ !! ಚಟ್ನಿಯಂತೆ ಅವರ ಸಂಗೀತ ಎಲ್ಲ ಭಾರತೀಯ ಸಂಗೀತವನ್ನು ಸೇರಿಸಿ ರುಬ್ಬಿದಂತೆ. ಗಾಯಾನಾದಲ್ಲಿ ಇವರು ಪ್ರತ್ಯೇಕವಾಗಿ ಗುರುತಿಸಿಕೊಂಡರೂ ಅವರದು ಸಹಬಾಳ್ವೆ. ಇನ್ನು ಸುರಿನಾಮ್‌ನಲ್ಲಿ ಉಳಿದ ಭಾರತೀಯರದ್ದು ಹೆಚ್ಚು ಕಡಿಮೆ ಅದೇ ಕಥೆ. ಅವರ ಭಾಷೆ, ಸಂಸ್ಕೃತಿ, ಸಂಗೀತ ಎಲ್ಲವೂ ಕಲಸುಮೇಲೋರಗ. ಸುರನಾಮಿ ಹಿಂದೂಸ್ತಾನಿ ಎನ್ನುವ ಭಾಷೆ ಕೇಳುವಾಗ ಅಲ್ಲಲ್ಲಿ ಹಿಂದಿ ಶಬ್ಧಗಳು ಕೇಳಿಸಿದಂತಾದರೂ ಹಿಂದಿ ಭಾಷಿಕರಿಗೆ ಕೂಡ ಅದು ಅರ್ಥವಾಗುವುದಿಲ್ಲ.

ಮಾರಿಷಸ್‌ನಲ್ಲಿ ಮಾತ್ರ ಉಳಿದುಕೊಂಡ ಭಾರತೀಯರು ಸ್ವಲ್ಪ ಮಟ್ಟಿಗೆ ಬೆಳೆದು ರಾಜಕೀಯ ಶಕ್ತಿಪಡೆದಿದ್ದಾರೆ. ಮಾರಿಷಸ್‌ನಲ್ಲಿ ತಮಿಳರಿದ್ದಾರೆ, ತೆಲಗಾರಿದ್ದಾರೆ, ಮರಾಠಿಗಳಿದ್ದಾರೆ, ಗುಜರಾತಿಗಳಿದ್ದಾರೆ,ಬೆಂಗಾಲಿಗಳಿದ್ದಾರೆ. ಮಾರಿಷಸ್ ನ ಮೊದಲ ಮುಖ್ಯ ಮಂತ್ರಿ, ಪ್ರಧಾನಿ ಸೀವುಸಾಗುರ್ ರಾಮಗೋಲಮ್ – ಅವರ ತಂದೆ ಮೊಹೀತ್ ರಾಮಗೋಲಮ್ ಇದೇ ಕೂಲಿ ಪದ್ಧತಿಯಲ್ಲಿ  ಭಾರತದಿಂದ ಮಾರಿಷಸ್ ಗೆ ತಲುಪಿದವರು.

ಬಹುತೇಕ ಕಡೆ ಅಲ್ಲಿನ ಮೂಲನಿವಾಸಿಗಳು ಮತ್ತು ಭಾರತೀಯ ಮೂಲದವರಿಗೆ ಘರ್ಷಣೆಗಳಾಗಿವೆ, ಇಂದಿಗೂ ಆಗುತ್ತಿವೆ. ಉಗಾಂಡಾದಲ್ಲಿ 1895 ರಲ್ಲಿ ರೈಲ್ವೆ ಹಳಿಗಳನ್ನು ಹಾಕಲು ಭಾರತದಿಂದ ಬಂದ ಕೂಲಿಗಳು ನಂತರದಲ್ಲಿ ಅಲ್ಲಿಯೇ ಉಳಿದು ಆರ್ಥಿಕವಾಗಿ ಸದೃಢ ಗೊಂಡಿದ್ದರು. ನಂತರದಲ್ಲಿ 1972ರಲ್ಲಿ ಆಳಲು ಶುರುಮಾಡಿದ ಇದಿ ಅಮೀನ್ 80 ಸಾವಿರ ಭಾರತೀಯ ಮೂಲದವರನ್ನು ದೇಶದಿಂದ ಜಾಗ ಖಾಲಿ ಮಾಡುವಂತೆ ಮೂರು ತಿಂಗಳ ಸಮಯಕೊಟ್ಟದ್ದು,  ಅವರೆಲ್ಲ ನಂತರದಲ್ಲಿ ಇಂಗ್ಲೆಂಡ್, ಭಾರತ, ಕೀನ್ಯಾ, ಪಾಕಿಸ್ತಾನ ಹೀಗೆ ದಿಕ್ಕಾಪಾಲಾದದ್ದು ಇವೆಲ್ಲ ಇತಿಹಾಸ.

೧೯೮೭ ರಲ್ಲಿ ಭಾರತೀಯ ಮೂಲದವರ ಆಡಳಿತ ಸರಕಾರ ಫಿಜಿಯಲ್ಲಿತ್ತು. ಅಲ್ಲಿ ಕೂಡ ಘರ್ಷಣೆ, ದಂಗೆಗಳಾದವು. ಹೀಗೆ ಅಲ್ಲ
ಭಾರತೀಯರ ಯಶಸ್ಸೇ ಅವರಿಗೆ ಮುಳುವಾಯಿತು. ಹೀಗೆ – ಕೂಲಿ ಪದ್ಧತಿ ಮುಗಿದ ಮೇಲೆ ಒಂದೊಂದು ಕಡೆ – ಒಂದೊಂದು ಕಥೆ. ಈ ಎಲ್ಲ ಇತ್ತೀಚಿನ ಕಥೆ, ಇತಿಹಾಸ ಇಂದು ಹೇಳುವಾಗ ಬ್ರಿಟಿಷರಿಂದ ಇದೆಲ್ಲ ನಡೆದದ್ದು ಎನ್ನುವ ಮೂಲ  ಇತಿಹಾಸವನ್ನೇ ಮರೆಮಾಚಲಾಗುತ್ತದೆ. ಸತ್ಯ ಮತ್ತು ನಾವು ಓದಿದ ಇತಿಹಾಸ – ಇವೆರಡರ ನಡುವಿನ ವ್ಯತ್ಯಾಸ, ಅಂತರ ಎಷ್ಟಿದೆ! ಇದೆಂತಹ ವಿಪರ್ಯಾಸ!

ಇದೆಲ್ಲವೂ ಬ್ರಿಟಿಷರು ತಮ್ಮ ಹಿತಾಸಕ್ತಿಗೆ, ಸುಖ – ತೀಟೆಗೆ ಯಾವ ಮಟ್ಟಕ್ಕೆ ಇಳಿದಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿ ನಮ್ಮ ಇತಿಹಾಸದಲ್ಲಿ ದಾಖಲಾಗಲೇ ಬೇಕು. ಈ ಜಗತ್ತಿನಲ್ಲಿ ಅತ್ಯಂತ ಭೀಕರ ದೌರ್ಜನ್ಯಕ್ಕೊಳಗಾದ ದೇಶ – ವರ್ಗದಲ್ಲಿ ಮೊದಲು ಭಾರತೀಯರೇ ನಿಲ್ಲಬೇಕು. ಅದಕ್ಕೆ ಕಾರಣೀಭೂತರಾಗಿ ಬ್ರಿಟಿಷರೇ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕು.

ಇಂತಹ ಕರಾಳ ಇತಿಹಾಸವನ್ನು ಮಸುಕಾಗಲು ಭಾರತೀಯರಾದ ನಾವು ಬಿಡಬಾರದು. ಆ ಕಾರಣಕ್ಕೇ ಈ ಎಲ್ಲ ದೇಶಗಳ ನಮ್ಮ ವರ, ಇಂದು ನಮ್ಮವರಾಗಿರದವರ ಇತಿಹಾಸ ನಮ್ಮ ಇತಿಹಾಸದೊಂದಿಗೆ ಜೋಡಣೆಯಾಗಬೇಕು. ಬ್ರಿಟಿಷರ ದಬ್ಬಾಳಿಕೆ ಯಿಂದ ಭಾರತ ಛಿದ್ರವಾಗಿದ್ದಲ್ಲದೆ – ಭಾರತೀಯರು ಕೂಡ ಪ್ರಪಂಚದಾದ್ಯಂತ ದಿಕ್ಕಾಪಾಲಾಗಿ ಹೋದರಲ್ಲ. ಅವರೆಲ್ಲ ನಮ್ಮವರೇ ಆಗಿದ್ದವರು – ನಮ್ಮತನವನ್ನು ಕಳೆದುಕೊಂಡವರು. ಇವರೆಲ್ಲರ ಜಾನಪದದಲ್ಲಿ ಅದೆಷ್ಟೋ ಕರುಳು ಹಿಚುಕುವ ಹಾಡುಗಳಿವೆ. ಇವರೆಲ್ಲ ಎಲ್ಲೇ- ಹೇಗೆ ಇದ್ದರೂ ಪರದೇಶಿಗಳು, ಇಂದಿಗೂ ಪರಕೀಯರು!

ಭಾರತೀಯ ಹೆಸರುಗಳನ್ನು ಇಟ್ಟುಕೊಳ್ಳುವ ಇವರೆಲ್ಲರಲ್ಲಿ ಹರಿಯುತ್ತಿರುವುದು ಭಾರತೀಯ ರಕ್ತ. ಆದರೆ ಅವರು ಭಾರತೀಯ ರಲ್ಲ. ಟಿನಿಂಗ ಮಿನಿಂಗ ಟಿಶ್ಯಾ ! ಹುಹ್ಹ್ !

(ಸರಣಿ ಮುಗಿಯಿತು)