Ravi Hunz Column: ಎಲ್ಲಾ ಅವಘಡಗಳಿಗೆ ಮನುಸ್ಮೃತಿ ಇಂಧನವನ್ನೊದಗಿಸಿತು
ಆಡಳಿತಸೂತ್ರವನ್ನು ನಡೆಸಲು ಮತ್ತು ನ್ಯಾಯ ತೀರ್ಮಾನ ಮಾಡಲು ನಾಲ್ಕು ಪ್ರಮುಖ ‘ಶಿಷ್ಟ’ ಮತ್ತು ‘ಮೀಮಾಂಸಕ’ರೆಂಬ ನುರಿತ ಪಂಡಿತರೊಟ್ಟಿಗೆ ಮೂರು ವಿಧದ ಹತ್ತು ಬ್ರಾಹ್ಮಣರ ತಂಡವಿರುತ್ತಿದ್ದಿತು
Source : Vishwavani Daily News Paper
ಬಸವ ಮಂಟಪ
ರವಿ ಹಂಝ್
(ಭಾಗ-2)
ವಿದ್ಯೆಗೆ ಪ್ರಾಮುಖ್ಯ ಬರಲು ಕಾರಣ ಮಾನವನ ಸಹಜ ಸ್ವಭಾವವಾದ ಕುತೂಹಲ! ಮಗು ತೆವಳುತ್ತ, ಮುಟ್ಟುತ್ತ, ನೆಕ್ಕುತ್ತ, ನಡೆಯುತ್ತ, ಓಡುತ್ತ, ಕುತೂಹಲಿಯಾಗಿ ತನ್ನೆ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳುವ, ಉತ್ತರ ದೊರಕದಿದ್ದರೆ ಸಂಶೋಧಿಸುವ ಪ್ರವೃತ್ತಿಯೇ ಜ್ಞಾನಾರ್ಜನೆ ಯಾ ವಿದ್ಯಾರ್ಜನೆ ಅಥವಾ ವೇದಗಳ ವರ್ಣಗಳ ಪರಿಭಾಷೆಯಲ್ಲಿ ಬ್ರಾಹ್ಮಣ್ಯ!
ಮಾನವ ತನ್ನ ಕಲಿಕೆಯ ಯಾವ ಕಾಲಘಟ್ಟದಲ್ಲಿ ಕುತೂಹಲವನ್ನು ಕಳೆದುಕೊಳ್ಳುತ್ತಾನೋ ಆ ಕಾಲಘಟ್ಟ ಆವನನ್ನು ಕ್ಷತ್ರಿಯ, ವೈಶ್ಯ, ಶೂದ್ರನಾಗಿಸುತ್ತದೆಯೇ ಹೊರತು ಆತನ ಹುಟ್ಟಲ್ಲ. ಇನ್ನು ವಿಕಾಸಚಕ್ರ ಉರುಳಿದಂತೆ ವೇದಗಳಿಗೆ ಸೂತ್ರಗಳು ಸೇರಿಸಲ್ಪಟ್ಟವು. ಆಡಳಿತಸೂತ್ರವನ್ನು ನಡೆಸಲು ಮತ್ತು ನ್ಯಾಯ ತೀರ್ಮಾನ ಮಾಡಲು ನಾಲ್ಕು ಪ್ರಮುಖ ‘ಶಿಷ್ಟ’ ಮತ್ತು ‘ಮೀಮಾಂಸಕ’ರೆಂಬ ನುರಿತ ಪಂಡಿತರೊಟ್ಟಿಗೆ ಮೂರು ವಿಧದ ಹತ್ತು ಬ್ರಾಹ್ಮಣರ ತಂಡವಿರುತ್ತಿದ್ದಿತು.
ಇಲ್ಲಿ ಮೂರು ವಿಧದ ಎಂದರೆ ಬೇರೆ ಬೇರೆ ಸೂತ್ರಗಳನ್ನು ಬಲ್ಲ ಎಂದರ್ಥ. ಕ್ರಮೇಣ ಆ ಆಡಳಿತ ಸೂತ್ರಗಳು ವೇದಗಳಲ್ಲಿ ಸೇರಿಸಲ್ಪಟ್ಟವು. ಹಾಗಾಗಿಯೇ ಮುಂದೆ ವೇದಗಳನ್ನು ಬಲ್ಲ ಶಿಷ್ಟ, ಮೀಮಾಂಸಕರೊಟ್ಟಿಗೆ ಪ್ರತಿಯೊಂದು ವೇದಕ್ಕೊಬ್ಬ ಪರಿಣತನನ್ನು ಕೂಡಾ ನ್ಯಾಯಾಂಗ ಹೊಂದ ಲಾರಂಭಿಸಿದ್ದಿತು.
ಈ ಮಂಡಲಿಯ ಸದಸ್ಯನಿಗೆ ಕನಿಷ್ಠ ಒಂದು ವೇದದಲ್ಲಿನ ಪರಿಣತಿ ಅತ್ಯವಶ್ಯವಾಗಿದ್ದಿತು. ಹೀಗೆ ಸೂತ್ರಗಳು ವೇದಗಳಲ್ಲಿ ಸೇರಿಸಲ್ಪಟ್ಟು ವೇದಗಳು ಅಂದಿನ ಸಂವಿಧಾನವೆನಿಸಿದ್ದವು. ವೇದಗಳು ಆಡಳಿತದ ವ್ಯವಸ್ಥೆಯಾದಾಗ ನ್ಯಾಯ ನಿರ್ಣಾಯಕ ಮಂಡಳಿಯಲ್ಲಿ ವೇದಗಳಲ್ಲಿ ಪಾರಂಗತರಾದ ನಾಲ್ಕು ಬ್ರಾಹ್ಮಣರೆಂಬ ಪಂಡಿತರಿರುವುದು ಕಡ್ಡಾಯವಾಗಿದ್ದಿತು. ಈ ಪರಿಣತಿಯೇ ಅಂದಿನ ಪದವಿ ಗಳಾಗಿದ್ದ ಋಗ್ವೇದಿ, ದ್ವಿವೇದಿ, ತ್ರಿವೇದಿ, ಚತುರ್ವೇದಿ ಎಂಬ ಪದವಿಗಳು. ಹೀಗೆ ಸಹಜವಾಗಿ ವಿದ್ಯಾ ಪಾರಂಗತರಾದ ಪಂಡಿತರಿಗೆ ಅಧಿಕಾರ ದೊರಕುತ್ತಿತ್ತು.
21ನೇ ಶತಮಾನದಲ್ಲಿ ಕೂಡಾ ವಿದ್ಯೆಯೇ ಎಲ್ಲಾ ಉದ್ಯೋಗಗಳಿಗೂ ಪ್ರಮುಖ ಮಾನ ದಂಡ ವಾಗಿರುವಂತೆಯೇ ಅಂದಿನ ವ್ಯವಸ್ಥೆ ಕೂಡಾ ವಿದ್ಯಾರ್ಹತೆಯ ಮೇಲೆ ರೂಪುಗೊಂಡಿತ್ತು. ಅಂಬೇ ಡ್ಕರರು ತಮ್ಮ ‘ರಿಡಲ್ಸ್ ಆಫಗ ಹಿಂದೂಯಿಸಮ’ನಲ್ಲಿ ‘ಬ್ರಾಹ್ಮಣ’ ಎಂದು ಒತ್ತಿ ಹೇಳಿರುವ ಬ್ರಾಹ್ಮ ಣರೇ ಈ ಓದಿ ಪಾರಾಂಗತರಾದ ಪಂಡಿತ ಪುರುಷೋತ್ತಮರು. ಇವರೆಲ್ಲರೂ ಓದಿ ಪಂಡಿತ (ಬ್ರಾಹ್ಮಣ) ರಾದವರೇ ಹೊರತು ಹುಟ್ಟಿನಿಂದಲ್ಲ!
ಅಂಬೇಡ್ಕರರು ಹೇಗೆ ಕಾನೂನು ತಜ್ಞರಾಗಿ ಪಂಡಿತರೆನಿ ಸಿಕೊಂಡಿದ್ದರೋ ಅದೇ ರೀತಿ ಈ ಬ್ರಾಹ್ಮ ಣರು ಕೂಡಾ ಆಯಾಯ ಸಂವಿಧಾನಿಕ ವಿಷಯಗಳಲ್ಲಿ ಅಂದು ಪರಿಣತಿಯನ್ನು ಹೊಂದಿ ಪಂಡಿತ ರೆನಿಸಿಕೊಂಡಿದ್ದರು. ಇನ್ನು ಸಂಕ್ಷಿಪ್ತ ರೂಪದಲ್ಲಿದ್ದ ಸೂತ್ರಗಳು ಕ್ರಮೇಣವಾಗಿ ವಿಕಾಸ ಗೊಳ್ಳುತ್ತಾ ಸವಿವರವಾದ ಶಾಸ್ತ್ರಗಳಾದವು. ಕೇವಲ ಆಡಳಿತ ಸುವ್ಯವಸ್ಥೆಯನ್ನಷ್ಟೇ ಕುರಿತಲ್ಲದೇ ಸಾಮಾಜಿಕ ಉನ್ನತಿಯನ್ನು ತರುವ ಶಾಸಗಳು ಕೂಡಾ ಅನ್ವೇಷಣೆಗೊಂಡವು.
ಈ ನಿಟ್ಟಿನಲ್ಲಿ ಧನ್ವಂತರಿ, ಚರಕ, ಸುಶ್ರುತ, ಪಾಣಿನಿ, ಪತಂಜಲಿ, ಚಾರ್ವಾಕ, ಚಾಣಕ್ಯ ಮುಂತಾ ದವರು ತಮ್ಮ ತಮ್ಮ ಪರಿಣತಿಯ ವಿಷಯಗಳಲ್ಲಿ ಶಾಸ್ತ್ರಗಳನ್ನು ರಚಿಸಿದರು. ವೈದ್ಯಶಾಸ್ತ್ರ, ವ್ಯಾಕ ರಣಶಾಸ್ತ್ರ, ಯೋಗ, ಬಾಹ್ಯಾಕಾಶ, ಗಣಿತ, ಲೋಹ, ಅರ್ಥಶಾಸ್ತ್ರಗಳಲ್ಲದೇ ಯುದ್ಧ, ಶಸ್ತ್ರ, ಆನೆ ಪಳಗಿಸುವುದು, ಕುದುರೆಗಳ ತಳಿವರ್ಧನೆಯಂಥ ವಿಷಯಗಳ ಮೇಲೆ ಕೂಡಾ ಶಾಸ್ತ್ರಗಳು ರಚನೆ ಗೊಂಡವು.
ಅಂದಿನ ಭಾರತೀಯ ಅದೆಷ್ಟು ಅಗಾಧವಾಗಿ ವಿಷಯ ವಿಂಗಡನೆ, ಸಂಶೋಧನೆ, ತಾರ್ಕಿಕತೆ, ಸಂಕೀರ್ಣತೆಗಳ ಅಧ್ಯಯನದ ಬುನಾದಿಯ ಮೇಲೆ ಶಾಸ್ತ್ರ ರಚಿಸುತ್ತಿದ್ದನೆಂದು ಸೋಜಿಗವಾಗುತ್ತದೆ. ಆತನ ವಿಷಯಗಳ ಅಗಾಧತೆಯ ಉದಾಹರಣೆಯೆಂದರೆ ವಾತ್ಸಾಯನನ ಕಾಮಸೂತ್ರ! ಮುಂದಿನ ಶತಮಾನಗಳಲ್ಲಿ ಈ ಶಾಸ್ತ್ರಗಳು ಹದಿನಾಲ್ಕು ವಿದ್ಯೆಗಳಾಗಿ, ಅರವತ್ನಾಲ್ಕು ಕಲೆಗಳಾಗಿ ವಿಕಾಸ ಗೊಳ್ಳುತ್ತಾ ಸಾಗಿದವು.
ಚೆನ್ನಬಸವ ಪುರಾಣದಲ್ಲಿ ವೇಶ್ಯೆಯರ ದೈಹಿಕ ಅಂಗಾಂಗಗಳ ಸ್ವರೂಪವನ್ನು, ಮಾನಸಿಕ ಸ್ವಭಾವ ಗಳನ್ನು ಮತ್ತು ವೃತ್ತಿ ವಿಧಾನಗಳನ್ನು ವರ್ಗೀಕರಿಸಿ ವರ್ಣಿಸಲಾಗಿದೆ. ಅದರ ಒಂದು ಉದಾಹರಣೆ, “ವೇಶ್ಯಾಗೃಹಗಳಲ್ಲಿ ವಿಕಸಿಸುತ್ತಿರುವ ಅಡಕೆ, ನೆಲ್ಲಿ, ಬಿಲ್ಪತ್ರೆ ಕಾಯಿ, ನಿಂಬೆ, ಕಿತ್ತಲೆಹಣ್ಣುಗಳಂತೆ ಅರೆಬಿರಿದ ತಾವರೆಯ ಮೊಲೆಯವರಿದ್ದರು. ದೊಡ್ಡ ಭಾರವಾದ ಮೊಲೆಯವರಿದ್ದರು.
ದುಂಡನೆಯ ಮೊಲೆಯವರಿದ್ದರು. ತೆಂಗಿನಕಾಯಿ ಗಾತ್ರದ ಮೊಲೆಯವರಿದ್ದರು. ಮೃದುವಾದ ಮೊಲೆಯವರಿದ್ದರು. ಸ್ಥಿರವಾದ ಮೊಲೆಯವರಿದ್ದರು. ಗಟ್ಟಿಯಾದ ಮೊಲೆಯವರಿದ್ದರು. ಹೊಳೆ ಯುವ ಹೂವಿನಂತೆ ಅರಳಿದ ಕಣ್ಣೋಟದ ಸನ್ನೆಗಳನ್ನು ಮಾಡುವ ಹೆಂಗಸರಿದ್ದರು" ಎಂಬಷ್ಟರ ಮಟ್ಟಿಗೆ ವೇಶ್ಯಾವಾಟಿಕೆಯನ್ನು ಕಲಾಪ್ರಕಾರದಂತೆ ವರ್ಣಿಸಲಾಗಿದೆ.
ನಮ್ಮ ಇತಿಹಾಸವನ್ನು ಹೇಗೆ ನವ್ಯಜೀವಿಗಳು ತಿರುತಿರುಚಿ ಪಣ್ಯಸ್ತ್ರೀಯರಿಗೆ ಬಾಳು ಕೊಡುವಂಥ ಶೋಷಣೀಯ ಶೋಚನೀಯ ಪರಿಸ್ಥಿತಿ ಇದ್ದಿತು ಎನ್ನುವುದಕ್ಕೆ ವ್ಯತಿರಿಕ್ತವಾಗಿರುವ ದಾಖಲೆಯಾಗಿ ಇದನ್ನು ಉಲ್ಲೇಖಿಸಲಾಗಿದೆಯಷ್ಟೇ. ಇರಲಿ, ಈ ಒಂದು ಕ್ರಮಬದ್ಧ ಪ್ರಕ್ರಿಯೆಯು ಇಂದಿನ ಯಾವುದೇ ಸುಸಜ್ಜಿತ ಪ್ರೌಢ ಆಡಳಿತ ತಜ್ಞರ ಸ್ಥೂಲವಾದ ಯೋಜನೆಗಳ ರೂಪುರೇಷೆಗಿಂತ ಅಥವಾ ವಿಶ್ವ ವಿದ್ಯಾಲಯಗಳ ಬೋಧನೆಯ ವಿಷಯಗಳಿಗಿಂತ ಎಳ್ಳಷ್ಟೂ ಕಡಿಮೆಯಾಗಿರಲಿಲ್ಲ.
ಈ ತತ್ವಗಳು ಕೇವಲ ಸಮಾಜ ನಿರ್ವಹಣೆಗಷ್ಟೇ ಸೀಮಿತವೆನಿಸುವುದಿಲ್ಲ. ಇಂದಿನ ಯಾವುದೇ ಪ್ರಮುಖ ಬ್ರಹತ್ ಉದ್ಯಮಗಳ ಆಡಳಿತ ನಿರ್ವಹಣೆಯ ನೀಲನಕಾಶೆಗಳೂ ಇದೇ ತೆರನಾಗಿವೆ. ಯಾವುದೇ ಒಂದು ಯೋಜನೆ ತನ್ನ ಜೀವಿತೋದ್ದೇಶದ ಗುರಿ (ಮಿಷನ್), ಪ್ರಮುಖ ಸಾಮರ್ಥ್ಯ ಸೂಚಿ ಮೈಲಿಗಲ್ಲು (ಕೀ ಪರ್ಫಾರ್ಮೆನ್ಸ್ ಇಂಡಿಕೇಟರ್), ಕಾರ್ಯವಿಧಾನದ ಮಾನದಂಡ (ಪ್ರೋಸೆಸ್ ಮೆಟ್ರಿಕ್ಸ್), ಮಾನವ ಸಂಪನ್ಮೂಲಗಳ ಮಾನದಂಡ (ಪೀಪಲ್ ಮೆಟ್ರಿಕ್ಸ್), ಗುರಿಯನ್ನು ಮುಟ್ಟುವ ಮಾರ್ಗಸೂಚಿ (ರೋಡ್ ಮ್ಯಾಪ್), ಕಾರ್ಯಸೂಚಿ, ನಿರೀಕ್ಷಿತ ಫಲಿತಾಂಶ, ಅಡೆತಡೆಗಳ ಪರಿಹಾರೋಪಾಯಗಳನ್ನೆ ಒಳಗೊಂಡ ನೀಲನಕಾಶೆಯಂತೆಯೇ ಈ ವೇದ/ಸೂತ್ರ/ಶಾಸ್ತ್ರಗಳು ಅಂದಿನ ನೀಲನಕಾಶೆ ಗಳಾಗಿದ್ದವು.
ಪ್ರಕೃತಿಯಾರಾಧನೆ ಜೀವಿತೋದ್ದೇಶದ ಮುಖ್ಯ ಗುರಿಯಾಗಿ, ವೇದಗಳು ಆ ಗುರಿಯನ್ನು ತಲುಪುವ ಪ್ರಮುಖ ಮಾರ್ಗಗಳಾಗಿ, ಸೂತ್ರ/ಶಾಸ್ತ್ರ/ವರ್ಣಗಳು ಆ ಗುರಿಯ ಮಾರ್ಗದಲ್ಲಿ ಕ್ರಮಿಸುವ ಕಾರ್ಯ ವಿಧಾನ, ಬೇಕಾಗುವ ಮಾನವ ಸಂಪನ್ಮೂಲ, ಅವುಗಳ ಮಾನದಂಡ, ನಿರೀಕ್ಷಿತ ಫಲಿತಾಂಶ, ಅಡೆ ತಡೆ, ಮಾರ್ಗೋಪಾಯಗಳನ್ನು ಸೂಚಿಸುವ ನೀಲನಕಾಶೆಯ ವಿವಿಧ ಅಂಶಗಳಾಗಿವೆ. ಇವೆಲ್ಲವೂ ಒಂದು ಸುಸಜ್ಜಿತ ಸಮಾಜವನ್ನು ಆಡಳಿತಾತ್ಮಕವಾಗಿ ನಡೆಸಲು ಸೃಷ್ಟಿಸಿದ ಅನು ಶಾಸನಗಳಾಗಿ ದ್ದವು.
ಹಾಗಾಗಿಯೇ ಅವು ಸದಾ ಪರಿಷ್ಕರಣೆಗೊಂಡು ನಿತ್ಯನೂತನವಾಗುತ್ತಿದ್ದವು. ಇಂಥ ಉನ್ನತ ವ್ಯವಸ್ಥೆಯ ಉದಾಹರಣೆಯಾಗಿ ವೀರಶೈವ ಗ್ರಂಥಗಳೂ (ವಚನಗಳೂ ಸೇರಿ) ಸೇರಿವೆ! ಈ ಎಲ್ಲಾ ಶಾಸ್ತ್ರಗಳನ್ನು ವ್ಯವಸ್ಥಿತವಾಗಿ ತಕ್ಷಶಿಲಾ ವಿಶ್ವವಿದ್ಯಾಲಯದಲ್ಲಿ ಬೋಧಿಸುತ್ತಿದ್ದರು. ತಕ್ಷಶಿಲಾ ವಿಶ್ವವಿದ್ಯಾಲಯವು ಪ್ರಮುಖವಾಗಿ ವೈದ್ಯಶಾಸಕ್ಕೆ ಖ್ಯಾತವಾಗಿದ್ದಿತು.
ಈ ಎಲ್ಲಾ ಶಾಸ್ತ್ರಗಳನ್ನು ಕ್ರಮೇಣ ಬ್ರಹ್ಮವಿದ್ಯೆಯೆಂದೂ, ಈ ಶಾಸ್ತ್ರಾಭ್ಯಾಸಿಗಳು ಮತ್ತು ಬೋಧಕರು ಬ್ರಾಹ್ಮಣರೆಂದೂ ಕರೆಯಲ್ಪಟ್ಟರು. ಹೀಗೆ ಕ್ರಮಬದ್ಧ, ವರ್ಗೀಕೃತ, ವೈಜ್ಞಾನಿಕ ತಳಹದಿಯ ನಾಗರಿಕ ಸಮಾಜ ರೂಪುಗೊಂಡಿದ್ದರಿಂದಲೇ ಭಾರತ ಆರ್ಯದೇಶ ಅಂದರೆ ಉದಾತ್ತ ನಾಗರಿಕರ ದೇಶವೆನಿಸಿದ್ದಿತು. ತಕ್ಷಶಿಲಾ, ನಳಂದಾ ವಿಶ್ವವಿದ್ಯಾಲಯಗಳು ಶೈಕ್ಷಣಿಕ ವ್ಯವಸ್ಥೆಯ ಸಮಗ್ರ ಗುಚ್ಛ (ಮ್ಯಾಕ್ರೋ) ಗಳಾಗಿ ಕಾರ್ಯನಿರ್ವಹಿಸಿದರೆ, ಗುರುಕುಲ ಮತ್ತು ಮಠೀಯ ವ್ಯವಸ್ಥೆಗಳು ದೇಶಾದ್ಯಂತ ಸಣ್ಣ (ಮೈಕ್ರೋ) ವ್ಯವಸ್ಥೆಗಳಾಗಿ ಕಾರ್ಯನಿರ್ವಹಿಸುತ್ತಿದ್ದವು.
ಕಾಳಾಮುಖ ವೀರಶೈವ ಮಠಗಳು ಇಂಥ ಶಿಕ್ಷಣ ನೀಡುವಲ್ಲಿ ಖ್ಯಾತವಾಗಿದ್ದವು. ಇಲ್ಲಿ ಬೋಧಿಸು ತ್ತಿದ್ದ ಶಾಸ್ತ್ರಗಳು ಅಂದಿನ ವೈಜ್ಞಾನಿಕ ಅವಿಷ್ಕಾರಗಳಾಗಿದ್ದವೇ ಹೊರತು ಇಂದು ಅವಹೇಳಿಸು ವಂಥ ಸಂಕುಚಿತ ಮತೀಯ ಶಾಸ್ತ್ರಗಳಲ್ಲ. ಅಂದಿನ ಕಾಲಕ್ಕೆ ಉನ್ನತವೆನಿಸಿದ್ದ ಆ ಶಾಸ್ತ್ರಗಳನ್ನು ಕಲಿಯಲೆಂದೇ ಸಾಕಷ್ಟು ವಿದೇಶಿಯರು ತಕ್ಷಶಿಲಾ ಮತ್ತು ನಳಂದಾ ವಿಶ್ವವಿದ್ಯಾಲಯಗಳಿಗೆ ಬರುತ್ತಿದ್ದರು. ಇಂದಿಗೂ ಭಾರತೀಯ ಪುರಾತನ ಶಾಸ್ತ್ರಗಳ ಆಧಾರದ ಮೇಲೆ ಸಾಕಷ್ಟು ಸಂಶೋ ಧನೆಗಳು ನಡೆಯುತ್ತಿವೆ.
ಕಾಸ್ಮಿಕ್ (ಬ್ರಹ್ಮಾಂಡ) ಧ್ಯಾನ, ಆಕಾಶಿಕ್ ಕ್ಷೇತ್ರಗಳ ಬಗ್ಗೆ ಜಾಗತಿಕ ವಿಜ್ಞಾನ ಸಂಶೋಧನೆಗಳ ಬಗ್ಗೆ ಸೈ ಚಾನೆಲ್ಲಿನಲ್ಲಿ ಸಾಕಷ್ಟು ಸರಣಿಗಳಿವೆ. ರೇಡಿಯೋ ತರಂಗಗಳಂತೆಯೇ ಕಾಸ್ಮಿಕ್ ತರಂಗಗಳಿದ್ದು ಅವು ಆಕಾಶಿಕ್ ಕ್ಷೇತ್ರವನ್ನು ಹೊಂದಿರುವವೆಂದು ಸಾಕಷ್ಟು ಪಾಶ್ಚಿಮಾತ್ಯ ವಿಜ್ಞಾನಿಗಳು ಸಂಶೋ ಧನೆ ನಡೆಸುತ್ತಿದ್ದಾರೆ.
ಇದರ ಕುರಿತು ‘ಸೈ ಅಂಡ್ ಆಕಾಶಿಕ್ ಫೀಲ್ಡ್: ಆನ್ ಇಂಟೆಗ್ರಲ್ ಥಿಯರಿ ಆಫ್ ಎವೆರಿಥಿಂಗ್’ ಎಂಬ ಪುಸ್ತಕವನ್ನು ಹಂಗರಿಯ ಖ್ಯಾತ ವಿಜ್ಞಾನಿ ಇರ್ವಿನ್ ಲಾಸ್ಜ್ಲೋ ಪ್ರಕಟಿಸಿದ್ದಾರೆ. ಮಾನವನ ಚಿಂತನೆ ಗಳು ಈ ಆಕಾಶಿಕ್ ಕ್ಷೇತ್ರದಲ್ಲಿ ತೇಲುತ್ತಾ ಒಬ್ಬರಿಂದೊಬ್ಬರಿಗೆ ತಲುಪುವ ಶಕ್ತಿಯನ್ನು ಹೊಂದಿವೆ. ಹಾಗಾಗಿಯೇ ಒಂದೇ ಬಗೆಯ ಚಿಂತನೆಯನ್ನು ಹಲವರು ಆಲೋಚಿಸುತ್ತಿದ್ದರೆ ಒಮ್ಮೊಮ್ಮೆ ಮತ್ತೊಬ್ಬರಿಗೂ ಅಂತಹುದೇ ಹೊಳಹು ಸಿಗುತ್ತದೆ. ಆದರೆ ಇದು ಆಕಸ್ಮಿಕವಾಗಿ ಸಿಕ್ಕ ಸಿಗ್ನಲ್! ಇದನ್ನು ಕಾಸ್ಮಿಕ್ ಧ್ಯಾನದ ಮುಖಾಂತರ ನಿಖರವಾಗಿ ಒಬ್ಬರಿಂದೊಬ್ಬರಿಗೆ ತಲುಪಿಸ ಬಹುದಾದ ಕುರಿತಾಗಿ ವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ.
ಈ ಆಕಸ್ಮಿಕ ಸಿಗ್ನಲ್ಲುಗಳಿಗೆ ಉದಾಹರಣೆಯಾಗಿ ಟೆಲಿಫೋನ್ ಕಂಡುಹಿಡಿದ ಆಂಟೋನಿಯೋ ಮ್ಯುಚಿ ಮತ್ತು ಗ್ರಹಾಂ ಬೆಲ್, ಗ್ರಾಮಫೋನ್ ಕಂಡುಹಿಡಿದ ಥಾಮಸ್ ಎಡಿಸನ್ ಮತ್ತು ಎಮಿಲ್ ಬರ್ಲೈನರ್, ಜೆಟ್ ಎಂಜಿನ್ ಕಂಡುಹಿಡಿದ -ಫ್ರ್ಯಾಂಕ್ ವಿಟ್ಲ್ ಮತ್ತು ಹನ್ಸ್ ವಾನ್ ಓಹೇನ್ ಅವರು ಗಳ ಅವಿಷ್ಕಾರಗಳನ್ನು ಕೊಡುತ್ತಾರೆ.
ಪರಸ್ಪರ ದೂರದ ದೇಶದಲ್ಲಿದ್ದು ಪರಿಚಯವಿಲ್ಲದ ಇವರುಗಳ ಅವಿಷ್ಕಾರಗಳಲ್ಲಿನ ಸಾಮ್ಯತೆ ಮಾತ್ರ ಅತ್ಯಂತ ಅಸಾಧಾರಣವೂ ಆಶ್ಚರ್ಯಕಾರಿಯೂ ಆಗಿದ್ದವು. ಅದಲ್ಲದೇ ಪರಸ್ಪರರು ತಮ್ಮ ಅವಿಷ್ಕಾರಗಳನ್ನು ಏಕಕಾಲದಲ್ಲಿಯೇ ಬಹಿರಂಗಗೊಳಿಸಿದ್ದರು!
ಈ ಜ್ಞಾನದ ಪುನರುತ್ಥಾನವನ್ನೇ ಅಲ್ಲಮಪ್ರಭು, ಅಕ್ಕ ಮಹಾದೇವಿ, ಚೆನ್ನಬಸವಣ್ಣರು ಕರಣಹಸಿಗೆ, ಮಂತ್ರಗೋಪ್ಯ, ಸೃಷ್ಟಿ ವಚನ, ಕಾಲಜ್ಞಾನ ವಚನಗಳ ಮೂಲಕ ಆರಂಭಿಸಿದ್ದುದು. ವೈದ್ಯಶಾಸ್ತ್ರ, ಶಿಲ್ಪಶಾಸ್ತ್ರ, ಯೋಗಾಚಾರ, ಕುಂಡಲಿನಿ ಜಾಗೃತಿ ವಿಧಾನಗಳಲ್ಲದೆ ಈ ಕಾಲಜ್ಞಾನಶಾಸ್ತ್ರಗಳನ್ನೂ ಕಾಳಾಮುಖರ ಮಠಗಳಲ್ಲಿ ಬೋಧಿಸುತ್ತಿದ್ದುದು ಶಾಸನಗಳಿಂದ ತಿಳಿದುಬರುತ್ತದೆ.
ಬಳ್ಳಿಗಾವಿಯ ಅಂಥ ಕಾಳಾಮುಖ ಕೇಂದ್ರದಿಂದ ಬಂದಿರುವ ಅಲ್ಲಮ, ಅಕ್ಕ ಮಹಾದೇವಿಯರು ಚೆನ್ನಬಸವಣ್ಣನೊಡಗೂಡಿ ಈ ಗ್ರಂಥಗಳನ್ನು ರಚಿಸಿzರೆ. ಚೆನ್ನಬಸವಣ್ಣನ ಕಾಲಜ್ಞಾನ ವಚನ ವೊಂದು ಹೀಗಿದೆ: “ಕಾಮಕೇರಿಯ ಕುಲದ ಕಂದಗೆ| ಭೂಮಿ ತೊಲಗದು ಶಾಪ ಫಲಗಳು| ಸ್ವಾಮಿ ಶ್ರೀಗುರು ಮುರಿಗೆರಾಯನ ಶಾಪ ಫಲಬಿಡದು| ಪ್ರೇಮದಿಂದ ನಾಲ್ಕುಪಟ್ಟಕೆ| ನೇಮ ಕರ್ಮದ ಕಾಲ ಕಡೆಯಾಗಿ| ಕಾಮಿತದ ಫಲ ಕೆಟ್ಟು ಬರುವುದು ಸ್ವಾಮಿ ಕೃಪೆತಪ್ಪಿ||" ಇದು ಇತ್ತೀಚಿನ ಶೂನ್ಯಪೀಠದ ಶರಣರ ಸುದ್ದಿಗೆ ಅನ್ವಯವಾಗಿರುವುದನ್ನು ಓದುಗರು ಸುಲಭವಾಗಿ ಗ್ರಹಿಸಬಹುದು.
ಇದೇ ರೀತಿಯ ಕಾಲಜ್ಞಾನ ಸಾಹಿತ್ಯವೇ ಹಾರನಹಳ್ಳಿ ಕೋಡಿಮಠದಲ್ಲಿರುವುದು, ಚಿದಂಬರಂ ನಾಡಿ ಶಾಸ್ತ್ರಗಳಲ್ಲಿರುವುದಲ್ಲದೆ ಅನೇಕ ಮಠಗಳಲ್ಲಿಯೂ ಇದ್ದಿತು. ಆದರೆ ಇವುಗಳನ್ನು ಓದಿ ಸಮರ್ಥ ವಾಗಿ ಅರ್ಥೈಸುವಂಥ ಕಾಲಜ್ಞಾನಿಗಳು ಮಾತ್ರ ಈಗಿಲ್ಲವಷ್ಟೇ. ಇರಲಿ, ಈ ಪುರಾತನ ಶಾಸ್ತ್ರಗಳ ಕುರಿತು ಪಾಶ್ಚಿಮಾತ್ಯ ರಾಷ್ಟ್ರಗಳು ಗಂಭೀರ ಸಂಶೋಧನೆಗಳನ್ನು ನಡೆಸುತ್ತಿದ್ದರೆ, ಇತ್ತ ಈ ಕುರಿತು ಸಂಶೋಧಿಸಲೆಂದೇ ಹುಟ್ಟಿಕೊಂಡಿರುವ ಭಾರತೀಯ ವಿಜ್ಞಾನ ಕಾಂಗ್ರೆಸ್ ನಗೆಪಾಟಲಿ ಗೀಡಾಗುತ್ತಿದೆ.
ಈ ಶಾಸ್ತ್ರಗಳ ಕುರಿತು ಸಂಶೋಧನೆಯಿರಲಿ ಒಂದು ತಾರ್ಕಿಕ ವಿಷಯ ಮಂಡನೆ ಕೂಡಾ ಈ ಸಂಸ್ಥೆಗೆ ಸಾಧ್ಯವಾಗಿಲ್ಲ. ಅಥವಾ ಸಾಧ್ಯವಾಗಿದ್ದರೂ ಅದನ್ನು ಭಾವುಕತೆಯ ಹುಸಿ ಹಮ್ಮಿಗೀಡು ಮಾಡಿ ವಿಷಯದ ಗಂಭೀರತೆಯನ್ನು ಕಳೆದುಹಾಕುತ್ತಿದೆ ಎನ್ನುವುದು ನಾಡಿನ ವಿಷಾದಕರ ಸಂಗತಿ.
ಇನ್ನೊಂದೆಡೆ ಮನುವಾದಪ್ರಣೀತ ಪ್ರಚ್ಛನ್ನ some ವಿಧಾನಿಗಳು ಪುರಾತನ ಶಾಸ್ತ್ರವನ್ನು ಕಿಂಚಿತ್ತೂ ಗ್ರಹಿಸಲು ಪ್ರಯತ್ನಪಡದೆ ತಮ್ಮ ಮಾಂದ್ಯಬುದ್ಧಿಗೆ ಬಸವಣ್ಣನ, “ವೇದ ನಡನಡುಗಿತ್ತು, ಶಾ some ವನ್ನಾಗಲಿ ಕೆಲಕ್ಕೆ ಸಾರಿದ್ದಿತಯ್ಯಾ!
ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತಯ್ಯಾ! ಆಗಮ ಹೆರತೊಲಗಿ ಅಗಲಿದ್ದಿತಯ್ಯಾ! ನಮ್ಮ ಕೂಡಲಸಂಗಯ್ಯನು ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ" ಎಂಬ ವಚನವನ್ನು ಮಾಂದ್ಯಕ್ಕೆ ಗ್ರಹಿಸಿ ತಮ್ಮ ಸಿದ್ಧಾಂತದ ನೇರಕ್ಕೆ ಒಗ್ಗಿಸಿ ತರ್ಕಶಾ some ಗಳನ್ನು ಕಸದಬುಟ್ಟಿಗೆ ಎಸೆದರು.
ಅಂದಹಾಗೆ ಬಸವಣ್ಣನು ಇವರ ಅರ್ಥೈಸುವಿಕೆಗೆ ತಕ್ಕಂತೆ ಈ ವಚನವನ್ನು ರಚಿಸಿದ್ದರೆ ಅಕ್ಕ, ಅಲ್ಲಮ, ಚೆನ್ನರು ಕರಣಹಸಿಗೆ, ಮಂತ್ರಗೋಪ್ಯ, ಪದಮಂತ್ರಗೋಪ್ಯ, ಸೃಷ್ಟಿ ವಚನ, ಕಾಲಜ್ಞಾನ ವಚನಗಳನ್ನು ರಚಿಸುತ್ತಲೇ ಇರಲಿಲ್ಲ. ಓಂ ಅನ್ನು ಅ, ಉ, ಮ ಎಂದು ಒಡೆದು ಅವುಗಳಿಗೆ ವೇದ ಗಳನ್ನು ಜೋಡಿಸಿ ದೇಹ, ಮನಸ್ಸು, ಪ್ರಾಣ, ಯೋಗಗಳ ಜಾಗೃತಿಗೊಳಿಸುವ ಕುಂಡಲಿನಿ ಕುರಿತಾದ ಸಾಹಿತ್ಯವನ್ನು ರಚಿಸುತ್ತಲೇ ಇರಲಿಲ್ಲ!
ಈ ಸಮಗ್ರ ಸಾಹಿತ್ಯ ಬಿಡಿ, ಇದರ ರ ಠ ಈ ಕ ಯಾನೆ ಅ ಆ ಇ ಈ ಕಾಗುಣಿತ ಸಹ ಅರಿಯದ ಪ್ರತ್ಯೇಕಿ ಗಳು ಇದನ್ನೆ ತಮ್ಮ ಗುರು ಕಲಬುರ್ಗಿ ಬೋಧಿಸಿದ ‘ಪ್ರಕ್ಷಿಪ್ತ’ ಎಂಬ ಪದಪ್ರಯೋಗ ಮಾಡಿ ಅವಹೇ ಳಿಸಿ ಟಾಮ್-ಡಿಕ್ -ಹ್ಯಾರಿಗಳು ತೋಡಿದ ಮೋರಿಗೆ ಬಿದ್ದಿದ್ದಾರೆ. ಇರಲಿ, ಇಷ್ಟೊಂದು ವ್ಯವಸ್ಥಿತ ವಾಗಿ ವೈಜ್ಞಾನಿಕವಾಗಿದ್ದ ನೀಲನಕಾಶೆ, ನಂತರದ ಇತಿಹಾಸದಲ್ಲಿ ಹಾದಿ ತಪ್ಪಿದ್ದೇಕೆ?! ಇಂದಿನ ಬುದ್ಧಿಜೀವಿಗಳಂತೆಯೇ ಅಂದಿನ ಆಡಳಿತದ, ಅಧಿಕಾರದ ರುಚಿ ಕಂಡ ವೇದಶಾ some ಪಂಡಿತರು ಗಳು ಕ್ರಮೇಣ ಈರ್ಷ್ಯೆ, ಪಕ್ಷಪಾತ, ಗುಂಪುಗಾರಿಕೆಗಳಲ್ಲಿ ತೊಡಗಿ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಆರಂಭಕ್ಕೆ ನಾಂದಿ ಹಾಡಿರಬಹುದು.
ಇದರ ನಿಗ್ರಹಕ್ಕೆಂದೇ ಪುರೋಹಿತರ ಮೇಲೆ ಕ್ಷತ್ರಿಯರನ್ನು ಪ್ರಭುಗಳಾಗಿಸಿರಬಹುದೆನಿಸುತ್ತದೆ. ಏಕೆಂದರೆ ಹರಪ್ಪದಲ್ಲಿ ಸಿಕ್ಕಿರುವ ಪುರೋಹಿತನ ಪಳೆಯುಳಿಕೆ ಆತನನ್ನು ರಾಜನೆನ್ನುತ್ತ ಪುರೋ ಹಿತರೇ ರಾಜರಾಗಿದ್ದರೆಂಬ ವಾದವನ್ನು ಪುಷ್ಟೀಕರಿಸುತ್ತದೆ. ಜಗತ್ತಿನ ಎಲ್ಲಾ ಇತಿಹಾಸಗಳಲ್ಲಿಯೂ ಅಽಕಾರದ ಲಾಲಸೆ, ಮದ, ಈರ್ಷ್ಯೆಗಳ ಐತಿಹ್ಯ ಸಾಕಷ್ಟು ಕಾಣ ಸಿಗುತ್ತದೆ. ಅಂದಿನ ಭಾರತೀಯ ಕೂಡಾ ಆ ಅಧಿಕಾರ ಲಾಲಸೆಯಿಂದ ಮುಕ್ತನಾಗಿರಲಿಲ್ಲ.
ನಂತರದ ಭವಿಷ್ಯದ ಪಂಡಿತರು ಕೂಡಾ ಈ ನೀಲನಕಾಶೆಯನ್ನು ತಪ್ಪಾಗಿ ಗ್ರಹಿಸಿಯೋ ಅಥವಾ ತಮ್ಮ ದುರುದ್ದೇಶಗಳಿಗೆ ತಕ್ಕಂತೆ ತಿರುಚಿಯೋ, ತಮ್ಮ ಪ್ರಭುತ್ವಗಳನ್ನು ಮೆಚ್ಚಿಸಲೋ ಈ ವ್ಯವಸ್ಥೆ ಯ ದುರ್ಬಳಕೆ ಮಾಡಿ ಬಳಸಿಕೊಂಡು ಯಶಸ್ವಿಯಾಗಿ ಇದನ್ನು ಅವ್ಯವಸ್ಥೆಯಾಗಿಸಿದರು. ವ್ಯವಸ್ಥೆ ಯನ್ನು ಯಶಸ್ವಿಯಾಗಿ ಅವ್ಯವಸ್ಥೆಯಾಗಿಸುವ ಪರಂಪರೆಯನ್ನೇ ಭಾರತ ಮುಂದಿನ ಶತಮಾನ ಗಳಲ್ಲಿ ವೃದ್ಧಿಸಿಕೊಂಡು ಬಂದಿತು.
ಇದೇ ಕಾರಣಕ್ಕೇ ಅನೇಕ ಜಾಗತಿಕ ಪಂಡಿತರುಗಳು ಹಾಕಿಕೊಟ್ಟ ಸುವ್ಯವಸ್ಥಿತ ಯೋಜನೆಗಳು ಕೂಡಾ ಇಂದಿನ ಭಾರತದಲ್ಲಿ ಯಶಸ್ವಿಯಾಗಿ ತಲೆಕೆಳಗಾಗಿವೆ. ವ್ಯವಸ್ಥೆಯನ್ನು ಅವ್ಯವಸ್ಥೆ ಯಾಗಿ ಸುವ ಪರಿಯು ಶತಮಾನಗಳು ಉರುಳಿದಂತೆ, ಅಧಿಪತ್ಯಗಳು ಮುಳುಗಿದಂತೆ, ಇತಿಹಾಸದ ಪುಟಗಳು ತಿರುವುತ್ತಾ ಸಾಗಿದಂತೆ, ಅಧುನಿಕ 21ನೇ ಶತಮಾನದ ತಂತ್ರಜ್ಞಾನದ ಭಾರತದಲ್ಲಿನ ತಂತ್ರಾಂಶ ಹೊರಗುತ್ತಿಗೆ ಸಂಸ್ಥೆಗಳವರೆಗೆ ಯಶಸ್ವಿಯಾಗಿ ಸಾಗಿಬಂದಿದೆ.
ನೀವೀಗ ಎಲ್ಲಿ ಕಣ್ಣು ಆಡಿಸುವಿರೋ ಅ ಇದು ಢಾಳಾಗಿ ಕಾಣಿಸುತ್ತದೆ, ಪೂರ್ವಗ್ರಹದ ಕನ್ನಡಕ ವನ್ನು ತೆಗೆದು ನೋಡಬೇಕಷ್ಟೇ. ಸಮಗ್ರವಾಗಿ ಈ ಎಲ್ಲಾ ಅವಘಡಗಳಿಗೆ ಸ್ವತಂತ್ರ ಭಾರತದ ಸಂವಿಧಾನದಲ್ಲಿ ನುಸುಳಿದ ಬ್ರಿಟಿಷ್ ಪ್ರಣೀತ ಮನುಸ್ಮೃತಿಯು ಇಂಧನವನ್ನೊದಗಿಸಿತು ಮತ್ತು ಸಂವಿಧಾನ ಅದನ್ನು ಅಧಿಕೃತಗೊಳಿಸಿತು ಎಂಬುದು ಎಂದೆಂದಿಗೂ ಎಲ್ಲಿಯೂ ಗುರುತು ಹಾಕಿ ಕೊಳ್ಳಬೇಕಾಗಿ ಸಂಪ್ರತಿ.
(ಲೇಖಕರು ಶಿಕಾಗೊ ವಾಸಿ ಮತ್ತು ಸಾಹಿತಿ)
ಇದನ್ನೂ ಓದಿ: Yagati Raghu Nadig Column: ಚಿಣ್ಣರ ಸುಜ್ಞಾನವೂ, ಅಣ್ಣರ ಅಜ್ಞಾನವೂ..!