Saturday, 21st September 2024

ಮತಾಂತರದ ಮೇಲೆ ಮೂರನೇ ಕಣ್ಣು ಬಿಡುವನೇ ಹಿಂದೂ ?

ಅಭಿವ್ಯಕ್ತಿ

ಮಹಾಂತೇಶ ವಕ್ಕುಂದ

ಮೊನ್ನೆ ಸುನೀಲ ಎಂಬ ಒಬ್ಬ ಯುವಕ ತನಗೆ ಗೊತ್ತಿರುವ ಯುವತಿಯೋರ್ವಳನ್ನು ವರಿಸಿ, ಆಕೆಯ ಕೊರಳಿಗೆ ತಾಳಿ ಕಟ್ಟುವ ಶುಭ ಸಮಾರಂಭಕ್ಕೆ ಆಹ್ವಾನ
ನೀಡಲು ಬಂದಿದ್ದ. ಆಮಂತ್ರಣ ಪತ್ರಿಕೆ ಸ್ವೀಕರಿಸಿ ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿ ಆತ ನಿರ್ಗಮಿಸಿದ ಮೇಲೆ ಆ ಪತ್ರಿಕೆಯನ್ನು ತೆಗೆದು ಓದಲು ಶುರು ಮಾಡಿದೆ.

ಏಸು ಕ್ರಿಸ್ತನ ಕೃಪೆಯಿಂದ ನಮ್ಮ ಮನೆಯಲ್ಲಿ ಲಗ್ನ ನೇಮಕ ಮಾಡಿದ ವಿವರ ಎಂಬ ವಾಕ್ಯದೊಂದಿದೆ ಪತ್ರಿಕೆ ಮುದ್ರಿತವಾಗಿತ್ತು. ಆತಂಕ ಹಾಗು ಕುತೂಹಲದ ನಡುವೆ ಪತ್ರಿಕೆಯನ್ನು ಪೂರ್ತಿ ಓದಿ ಮುಗಿಸಿದೆ. ಎಲ್ಲವೂ ಏಸು ಮಯ. ಕ್ರೈಸ್ತರ ಬೀದಿ ಬದಿ ಉಪದೇಶ ಸಾರುವ ಗೋಡೆ ಬರಹಗಳಂತೆ ಬರೆದ ಆ ಲಗ್ನ ಪತ್ರಿಕೆ ನೋಡಿ ಆಶ್ಚರ್ಯವಾಯಿತು. ಸುನೀಲ ನನಗೆ ಗೊತ್ತಿದ್ದ ಹುಡುಗ, ಹೆಚ್ಚು ಕಡಿಮೆ ವಾರದಲ್ಲಿ ಮೂರ್ನಾಲ್ಕು ಬಾರಿ ಆದರೂ ಸಿಗುತ್ತಿದ್ದ, ಆದರೆ ಆತನ ಜಾತಿ ಕೇಳುವ ಕೆಳಮಟ್ಟಕ್ಕೆ ನಾನೆಂದೂ ಹೋಗಿರಲಿಲ್ಲ. ಅಲ್ಲಿಯವರೆಗೆ ಆತನೂ ಉತ್ತರ ಕರ್ನಾಟಕದ ಸಾಮಾನ್ಯ ಲಿಂಗಾಯತ ಕುಟುಂಬ ದವನಾಗಿರಬಹುದು ಎಂದು ಸುಮ್ಮನಿದ್ದೆ. ಆದರೆ ಆ ದಿನದ ಲಗ್ನ ಪತ್ರಿಕೆ ಓದಿದ ಮೇಲೆ ಗೊತ್ತಾದದ್ದು ಮೂಲತಃ ಆತ ಒಬ್ಬ ದಲಿತ ಕುಟುಂಬದ ಕುಡಿ, ಕ್ರಿಶ್ಚಿಯನ ಮತಾಂಧರ ಮತಾಂತರ ದಾಳಿಗೆ ಬಲಿಯಾದ ಅವನ ಇಡೀ ಕುಟುಂಬ ಹಿಂದೂ ಸಮಾಜದಿಂದ ದೂರವಾಗಿ, ಹಣೆಯ ವಿಭೂತಿ ಕುಂಕುಮವನ್ನಳಿಸಿ, ಕೊರಳಿನ ರುದ್ರಾಕ್ಷಿಯನ್ನು ಕಿತ್ತು ಹಾಕಿ, ಸುಮಂಗಲೆಯರನ್ನು ವಿಧವೆಯರಂತೆ ನಡೆಸಿಕೊಳ್ಳುವ, ಮನೆಯ ಮುಂದಿನ ರಂಗೋಲಿ ಅಳಿಸಿ, ಹಿಂದೂ ದೇವರುಗಳ ಮೂರ್ತಿ ಭಾವಚಿತ್ರಗಳನ್ನು ಗಂಟು ಕಟ್ಟಿ ನದಿಗೆಸೆದು, ‘ಏಸು ನೀನೆ ಎಲ್ಲ’ ಎಂದು ಬದುಕುವ ಲಾಭಿಕೋರ ಕ್ರಿಶ್ಚಿಯನ್ನರ ಮತಾಂತರಕ್ಕೆ ಬಲಿಯಾದದ್ದು ಎಂದು.

ಅಂದು ಆ ಮತಾಂತರವಾದ ಒಬ್ಬ ಹಿಂದೂ ಆ ಮದುವೆಯಲ್ಲಿ ಬ್ರಾಹ್ಮಣ ಕುಟುಂಬದ ಒಬ್ಬ ಕನ್ಯೆಯನ್ನು ಮದುವೆ ಯಾಗಿ ಇನ್ನೊಂದು Auto Conversion ಗೆ ಮುನ್ನುಡಿ ಬರೆದಿದ್ದ. ಬೆಳಗಾವಿ ಜಿಯ ಬೈಲಹೊಂಗಲ ತಾಲೂಕಿನ ಸುತಗಟ್ಟಿ, ದೇಶನೂರು, ಕೊಳದೂರು, ಮೊಹರೆ ಎಂಬಿತ್ಯಾದಿ ಹಳ್ಳಿಗಳಲ್ಲಿ ಅವ್ಯಾಹತವಾಗಿ ಸಾಗಿರುವ ಮತಾಂತರದ ಕರಾಳ ಮುಖದ ನೈಜ ಚಿತ್ರಣವಿದು. ಬರೀ ಇದೊಂದೇ ತಾಲೂಕಿಗೋ, ಇದೊಂದೇ ಜಿಗೋ ಸೀಮಿತವಾದುದಲ್ಲ ಈ ಮತಾಂತರದ ರೋಗ. ಇದೇ ರೀತಿ ನಾಡಿನ ಹಾಗು ದೇಶದ ಪ್ರತಿ ಜಿ, ತಾಲೂಕು ಹಾಗು ಹಳ್ಳಿ ಹಳ್ಳಿಗಳಿಗೂ ಈ ರೋಗ ಗಾಂಗ್ರೀನನಂತೆ ಹಬ್ಬುತ್ತಿದೆ.

ಇಲ್ಲಿ ನಡೆಯುವ ಸಾಲು ಸಾಲು ಮತಾಂತರಗಳಿಗೆ ಬಲಿಯಾದ ಅದೆಷ್ಟೋ ಕುಟುಂಬಗಳು ಇಂದು ಭಾನುವಾರದ ಚರ್ಚ ಪ್ರಾರ್ಥನೆಯ ವೇಳೆ ತಾವು ಹುಟ್ಟಿ ಬೆಳೆದ ಧರ್ಮದ ಗಂಧ ಗಾಳಿಯನ್ನೆಲ್ಲ ಆಕಾಶಕ್ಕೆ ತೂರಿ ಏಸು ಕ್ರಿಸ್ತನ ಪ್ರಾರ್ಥಿಸಿ ಆ ಪಾದ್ರಿಗಳು ಊದುವ ಪುಂಗಿಯ ನಾದಕ್ಕೆ ತಲೆ ಅಡಿಸಿ ಬರುತ್ತಿದ್ದಾರೆ.
ಈ ಮತಾಂತರ ಮಾಡುವ ತಂಡದ ಜನ ಕೆಲ ನಿಗದಿತ, ಹಿಂದುಳಿದ, ಆರ್ಥಿಕ-ಶೈಕ್ಷಣಿಕ-ಸಾಮಾಜಿಕ ಅಭಿವೃದ್ಧಿ ಹೆಚ್ಚಿಲ್ಲದ ಹಳ್ಳಿಗಳನ್ನು ಆಯ್ದು ಅಲ್ಲಿಗೆ ತಿಂಗಳಿಗೆ ಒಮ್ಮೆ ಒಂದು ಗುಂಪಿನಲ್ಲಿ ತೆರಳುತ್ತಾರೆ. ಮೊದಲ ಭೇಟಿಯಲ್ಲಿ ಅಲ್ಲಿ ವಾಸ್ತವ್ಯ ಪಡೆಯಲು ಚೂರು ಕಷ್ಟವಾದರೂ ಒಂದೋ ಎರಡೋ ಮನೆಗಳನ್ನು ಹಿಡಿದು ಅಲ್ಲಿಯೇ ವಾರಗಟ್ಟಲೆ ತಂಗಿ ಅವರ ಮನೆಯಲ್ಲಿ ತಮ್ಮ ಕ್ರಿಶ್ಚಿಯನ್ ಧರ್ಮದ ಅನುಕರಣೆ ಮಾಡಿ ಆ ಮನೆಯಲ್ಲಿರುವ ಸಣ್ಣ ಪುಟ್ಟ ಸಮಸ್ಸೆಗಳನ್ನು ನಿವಾರಿಸುವ ನೆಪವೊಡ್ಡಿ ಆ ಮನೆಯ ಸದಸ್ಯರನ್ನು ತಮ್ಮ ಬುಟ್ಟಿಗೆ ಬೀಳಿಸುತ್ತಾರೆ.

ಸಮಸ್ಸೆ ಪರಿಹಾರವಾದ ಮೇಲೆ ಹಿಂದೂ ದೇವರುಗಳು ಇಷ್ಟು ವರ್ಷ ತಮ್ಮ ಮನೆಯಲ್ಲಿದ್ದರೂ ತಮ್ಮನ್ನು ಸಮಸ್ಯೆಗಳು ಕಾಡಿರುವುದಾಗಿಯೂ, ಈಗ ಏಸು ಕ್ರಿಸ್ತನ ಕೃಪೆಯಿಂದ ಅವು ದೂರವಾಗಿರುವಾದಾಗಿಯೂ ನಂಬಿಸಿ, ಕೈಯಲ್ಲಿ ಒಂಚೂರು ಹಣ, ಸಣ್ಣ ಪುಟ್ಟ ಆಸ್ತಿ ನೀಡಿ, ಸಮಸ್ಯೆಗಳನ್ನು ಬಗೆಸಸಹರಿಸದ ಹಿಂದೂ ದೇವರು ಗಳನ್ನು ಗಂಟು ಕಟ್ಟಿ ನದಿಗೆಸೆಯುವಂತೆ ಹೇಳಿ, ಹಣೆಯ ವಿಭೂತಿ ಕುಂಕುಮವನ್ನಳಿಸಿ, ಕೊರಳಿನ ರುದ್ರಾಕ್ಷಿಯನ್ನು ಕಿತ್ತು ಹಾಕಿ, ಸುಮಂಗಲೆಯರು ಮನೆಯ ಮುಂದಿನ ರಂಗೋಲಿ ಹಾಕುವುದು ತಪ್ಪೆಂದು ಸಾರಿ, ಕೊರಳಿನ ತಾಳಿ ಹಾಗು ಕಾಲುಂಗುರ ಗುಲಾಮತೆಯ ಸಂಕೇತವೆಂದು ಪುಂಗಿ, ಅವುಗಳನ್ನು ಕಿತ್ತು ಹಾಕಿಸಿ, ಅವರನ್ನು ಮತಾಂತರಿಸಿ ತೆರಳುತ್ತಾರೆ.

ಅಲ್ಲಿಗೆ ಆಟ ಪ್ರಾರಂಭ. ಮುಂದಿನ ತಿಂಗಳು ಈ ಮತಾಂತರಿಗಳು ಊರಿಗೆ ಬಂದು ಇಳಿಯುವುದೇ ತಡ, ಆ ಊರ ಪಂಚಾಯತಿ ಅಧ್ಯಕ್ಷರು ಸೇರಿದಂತೆ ಹತ್ತಾರು ಜನ ಸಾಲು ಸಾಲಾಗಿ ನಿಂತು ಈ ಮತಾಂತರಿಗಳನ್ನು ನಮ್ಮ ಮನೆಗೆ ಬನ್ನಿ, ನಮ್ಮ ಮನೆಗೆ ಬನ್ನಿ ಎಂದು ಬೇಡುತ್ತಾರೆ. ಈ ಒಂದು ತಿಂಗಳ ಅವಧಿಯಲ್ಲಿ ತಾನು ಪಡೆದ ಲಾಭವನ್ನು ಮೊದಲೆರಡು ಕುಟುಂಬದ ಸದಸ್ಯರು ಊರಿಗೆಲ್ಲ ಢಂಗುರ ಸಾರಿ ಬಂದ ಪ್ರತಿಫಲ ಇದಾಗಿರುತ್ತದೆ. ಅಲ್ಲಿಂದ ಮುಂದೆ ಮತಾಂತರಿಗಳ ಕೆಲಸ ಸುಲಭ. ಮುಂಚೆ ಎರಡೇ ಮನೆ ಆಕ್ರಮಿಸಿದವರು ಈ ಸಾರಿ ಹತ್ತು ಮನೆ ಆವರಿಸುತ್ತಾರೆ.

ಮುಂದೆ ಹದಿನೈದು. ವರ್ಷಗಳು ಕಳೆದ ಹಾಗೆ ಇಡೀ ಊರಿಗೆ ಊರೇ ಮತಾಂತರಗೊಂಡು ದೇವಸ್ಥಾನಗಳ ಗಂಟೆಯ ಸದ್ದಿಲ್ಲದೇ, ವಚನ ಶ್ಲೋಕ ಮಂತ್ರ ಪಾಠಗಳಿಲ್ಲದೇ, ಹಣೆಗೆ ಕುಂಕುಮ ವಿಟ್ಟು ಹೂ ಮುಡಿದು ನಲಿಯುವ ಸೀಯರು ಕಟ್ಟು ಮಸ್ತಾದ ದೇಹದ ಗಂಡ ಮಗ್ಗುಲಲ್ಲಿದ್ದರು ವಿಧವೆಯರಂತೆ ಬರಿ ಹಣೆಯಲ್ಲಿ ಸುತ್ತುವ ಸ್ಮಶಾನ ಮೌನ ಆವರಿಸತೊಡಗುತ್ತದೆ. ಹೌದು, ಅಂಕಿ ಅಂಶಗಳ ಪ್ರಕಾರ ಪ್ರತಿ ವರ್ಷ ಸುಮಾರು ಎಂಟು ಲಕ್ಷಕ್ಕೂ ಅಽಕ ಜನ ಹಿಂದೂಗಳು ನಮ್ಮ ದೇಶದಲ್ಲಿ ಮತಾಂತರವಾಗುತ್ತಿದ್ದಾರೆ.

ನಮ್ಮ ದೇಶದಲ್ಲಿ 1930 ರಲ್ಲಿ ಫ್ರಾನ್ಸ್ ಮೂಲದ ಮೊದಲ ಮಿಷನರಿ ಜೊರ್ಡಾನ್ಸ ಕ್ಯಾಟಲಾನಿಯಿಂದ ಶುರುವಾದ ಹಿಂದೂವಿನ ಕ್ರಿಶ್ಚಿಯನ ಮತಾಂತರ ಈಗ ಕಾಳ್ಗಿಚ್ಚಿನಂತೆ ಹಬ್ಬಿದೆ. ಈ ಕಾಡ್ಗಿಚ್ಚು ತನ್ನ ಧರ್ಮಾಂತರದ ಅಗ್ನಿಯಲ್ಲಿ ಬೇಯಿಸಿ ಇಂದು ಭಾರತದಲ್ಲಿ ಮೂರು ಕೋಟಿ ಕ್ರಿಶ್ಚಿಯನ್ನರನ್ನೂ ಸೃಷ್ಟಿಸಿದೆ. ಇಂತಹ
ಅಗ್ನಿಯಲ್ಲಿ ಬೆಂದು ಧರ್ಮಾಂತರಣವಾದ ಅನೇಕರಲ್ಲಿ ಇತ್ತೀಚಿಗಷ್ಟೇ ಬಿಜೆಪಿ ಶಾಸಕರೊಬ್ಬರ ತಾಯಿಯ ಸುದ್ದಿ ಬೆಂಗಳೂರಿನ ವಿಧಾನಸಭೆಯಲ್ಲಿ ಗದ್ದಲವಾದ ಮೇಲೆ ಬೊಮ್ಮಾಯಿಯವರ ಸರಕಾರ ನಮ್ಮ ರಾಜ್ಯದಲ್ಲಿರುವ ಎಲ್ಲ ಮಿಷನರಿಗಳ ಹಾಗು ಅವರು ಮಾಡುವ ಧರ್ಮಾಂತರಗಳ ಅಧ್ಯಯನ ಮಾಡುವಂತೆ ಇತ್ತೀಚಿಗಷ್ಟೇ ಸೂಚಿಸಿತ್ತು.

ಹಿಂದೂ ಸಮಾಜದಲ್ಲಿರುವ ಅಸ್ಪೃಶ್ಯತೆ, ಜಾತಿ ಪದ್ಧತಿ, ಬಡತನ, ಮೇಲು ಕೀಳಿನ ಭಾವ, ಕೆಲ ಮೂಢ ನಂಬಿಕೆಗಳಿಂದಾಗುವ ಹಾನಿ ನಷ್ಟಗಳನ್ನೇ ತನ್ನ ಬಂಡವಾಳವನ್ನಾಗಿಸಿಕೊಂಡು ಹಿಂದುಗಳನ್ನು ಬಲೆಗೆ ಬೀಳಿಸುವ ಈ ‘ವಿಷ’ ನರಿಗಳು ಜಿದ್ದಿಗೆ ಬಿದ್ದ ಜೇಡನಂತೆ ತಮ್ಮ ಧರ್ಮಾಂತರದ ಬಲೆಯನ್ನು ಹೆಣೆಯು ತ್ತಿವೆ. ಮಲೆನಾಡಿನ ಮೂಲೆಗಳಲ್ಲಿ ಮನೆಮಾಡಿ ವಾಸಿಸುವ ಅದೆಷ್ಟೋ ಕುಟುಂಬಗಳು, ಕಾಡಂಚಲ್ಲಿರುವ ಆದಿ ವಾಸಿಗಳು, ತಾಂಡಾದಲ್ಲಿರುವ ಪರಿಶಿಷ್ಟ ವರ್ಗದವರು, ದಲಿತ ಕೇರಿಯ ಬಡ ಕುಟುಂಬಗಳು ಈ ಜೇಡನ ಬಲೆಗೆ ಸಿಕ್ಕ ಪುಟ್ಟ ಹುಳದಂತೆ ಒದ್ದಾಡಿ ಬಲಿ ಯಾಗುತ್ತಿರುವುದು ಅಷ್ಟೇ ಸತ್ಯ.

ಕಹಿ ಸತ್ಯ, ಕರಾಳ ಸತ್ಯ. ಭೂಮಿಯ ಮೇಲೆ ಭಗವಂತನ ಅವತಾರದಿಂದ ಆರಂಭವಾಗಿ, ಇಲ್ಲಿರುವ ಪ್ರತಿ ಮಾನವನ ಹುಟ್ಟಿನ ಮೂಲದ ಹಿಂದೆ ಆಲದ ಮರ ದಂತೆ ವಿಶಾಲವಾಗಿ ಹಬ್ಬಿರುವ ಹಿಂದುತ್ವ ಇಂದು ಜಗತ್ತಿನ ಅತಿ ದೊಡ್ಡ ಧರ್ಮಗಳ ಸಾಲಿನಲ್ಲಿ ಮೂರನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ನಮಗೆ ಕೋಟಿಗಟ್ಟಲೆ
ದೇವರುಗಳಿದ್ದಾರೆ, ಸಾವಿರಾರು ಆಚರಣೆಗಳಿವೆ, ಲಕ್ಷಾಂತರ ಮಠ ಮಂದಿರಗಳು, ನೂರಾರು ಭಾಷೆ, ಲೆಕ್ಕವಿಲ್ಲದಷ್ಟು ನಂಬಿಕೆಗಳು. ಈ ಎಲ್ಲ ವಿವಿಧತೆಗಳ ನಡುವೆ ಏಕೆತೆಯಂತೆ ಅಡಕವಾಗಿರುವುದು ನಮ್ಮ ಹಿಂದೂ ಜೀವನ ಶೈಲಿ. 350 ವರ್ಷ ಈ ದೇಶವನ್ನಾಳಿದ ಘಸ್ನಿ, ಘೋರಿ, ಸುಲ್ತಾನ, ತುಘಲಕರು, ಡಚ್, ಫ್ರೆಂಚ್, ಬ್ರಿಟೀಷ ವಸಾಹತು ಶಾಹಿಗಳೂ ಈ ದೇಶವನ್ನೇ ಮತಾಂತರಿಸುವ ಹುನ್ನಾರಕ್ಕೆ ಕೈ ಹಾಕಿದರೂ ಅವರು ಸಫಲರಾಗಲಿಲ್ಲ.

ಹಿಂದೂ ತನ್ನ ಪಟ್ಟು ಬಿಡದೆ ಹಿಂದುವಾಗಿ ಉಳಿದ ಆದರೆ ಹಿಂದುಸ್ಥಾನದ ಭೂಮಿ ಮಾತ್ರ ಛಿದ್ರವಾಯಿತು. ಕ್ರಿಶ್ಚಿಯನ್ನರಂತೆ ಬೆಂಬಡದ ಭೂತವಾಗಿ ಕಾಡಿದ ಇಸ್ಲಾಮಿ ಶಕ್ತಿಗಳು ಈ ದೇಶವನ್ನು ಕತ್ತರಿಸಿ ಕತ್ತರಿಸಿ ತಮ್ಮ ಸ್ವಾರ್ಥದ ಸ್ಮಶಾನ ಸೃಷ್ಟಿಸಿಕೊಂಡವು. ನಂದ, ಮೌರ್ಯ, ಪಲ್ಲವರ ಸಾಮ್ರಾಜ್ಯದಿಂದ ಹಿಡಿದು
ಚಾಲುಕ್ಯ, ಕದಂಬ ಹೊಯ್ಸಳರು ಸೇರಿ ಇಂದಿನ ಅಫಘಾನಿಸ್ತಾನದವರೆಗೂ ಹಬ್ಬಿಸಿದ್ದ ಭಾರತವನ್ನು ಪಂಜಾಬಿನ ಗಡಿಗೆ ತಂದು ನಿಲ್ಲಿಸಿದರು. ಹಣದ
ಆಮಿಷ ವೊಡ್ಡಿ ತನ್ನ ಅಧರ್ಮ ನೀತಿಯಿಂದ ಮತಾಂತರದ ಬಲೆಗೆ ಬೀಳಿಸಿಕೊಳ್ಳುವ ಈ ಮಿಷನರಿಗಳು 2001 ನೇ ಇಸವಿಯಲ್ಲಿ ಬರಿ ಒಂದೇ ವರ್ಷಕ್ಕೆ ಭಾರತ ದಾದ್ಯಂತ ಬರೀ ಮತಾಂತರಕ್ಕಾಗಿ 10500 ಕೋಟಿ ರು. ಖರ್ಚು ಮಾಡಿವೆ.

ಸಧ್ಯದ ವರದಿಯ ಪ್ರಕಾರ ಭಾರತದಲ್ಲಿರುವ ಕ್ರಿಶ್ಚಿಯನ್ನೇತರರನ್ನು ಮತಾಂತರ ಮಾಡಲಿಕ್ಕೆ 175 ಬಿಲಿಯನ್ ಡಾಲರ್ (ಸುಮಾರು 13 ಲಕ್ಷ ಕೋಟಿ ರು)
ಭಾರತಕ್ಕೆ ಬರಲಿದೆಯಂತೆ. ಇದೆಲ್ಲ ನಿಜವಾದರೆ ? ಧರ್ಮಾಚರಣೆ ಪ್ರತಿಯೊಬ್ಬರ ವೈಯಕ್ತಿಕ ಸ್ವಾತಂತ್ರ್ಯ. ಪ್ರಜಾಭುತ್ವದ ವಿಶ್ವದ ಅತೀ ದೊಡ್ಡ ರಾಷ್ಟ್ರ ಈ ಭಾರತದಲ್ಲಿ ಆ ಸ್ವಾತಂತ್ರ್ಯ ಸ್ವತಂತ್ರವಾಗಿದೆ. ಹಿಂದೂ ಸಮಾಜದ ಕೆಲ ವ್ಯವಸ್ಥೆಗಳು ಕಠಿಣವಾಗಿರಬಹುದು, ಜನ ಮನ ವಿರೋಧಿಯಾಗಿರಲೂ ಬಹುದು ಆದರೆ ಅದು ನಮ್ಮ ಮನೆಯ ವಿಚಾರ. ಈ ನ್ಯೂನ್ಯತೆಗಳನ್ನು ಅರಿತು ಅದ ತಿದ್ದುವ ಪರಿಣಾಮಕಾರಿ ನಡೆಯನ್ನು ನಮ್ಮ ಹಿಂದೂ ಸಮಾಜ ಈಗ ಇಡುತ್ತಿರುವುದಂತೂ ನಿಜ.

ಭಾರತದ ಧರ್ಮಕ್ಕೆ ಸಂಕಷ್ಟ ಬಂದಾಗ ನಾನು ಮತ್ತೆ ಮತ್ತೆ ಹುಟ್ಟಿ ಬರುವೆ ಎಂಬ ಆ ಶ್ರೀ ಕೃಷ್ಣನ ನಾಣ್ಣುಡಿಯಂತೆ ಧರ್ಮ ರಕ್ಷಣೆಗಾಗಿ, ಶೋಷಿತರ ಹಿತಾಸಕ್ತಿ ಗಾಗಿ ಹುಟ್ಟಿ ಬಂದ ಬುದ್ಧ, ಬಸವ, ಅಂಬೇಡ್ಕರರು, ಅವರಷ್ಟು ಪ್ರಭಾವಿಗಳಾಗದಿದ್ದರೂ ಅವರಂತೆಯೇ ಸಮಾನತೆ ಸಾರುತ್ತಿರುವ ಇಂದಿನ ಸಾವಿರಾರು
ಮಠಾಧೀಶರು, ಧರ್ಮಗುರುಗಳು, ಹಿಂದೂ ಧರ್ಮ ರಕ್ಷಕರು ಈ ದೇಶದಲ್ಲಿ ಧರ್ಮ ಕಾಯುವ ಕೆಲಸ ಸದಾ ಮಾಡುತ್ತಿದ್ದಾರೆ. ಶೋಷಿತರ, ದೀನ ದಲಿತರ ಬೆನ್ನಿಗೆ ನಿಂತು ಅವರಿಗೂ ಸಮಾನ ಹಕ್ಕು ಸ್ವಾತಂತ್ರ್ಯ ನೀಡಲು ತಮ್ಮ ಜೀವಗಳನ್ನು ಸವೆಸಿzರೆ, ಸವೆಸುತ್ತಲೂ ಇದ್ದಾರೆ.

ನ್ಯೂನ್ಯತೆಗಳು ನಮ್ಮಲ್ಲೂ ಇವೆ ಹಾಗಂತ ‘ಆ ನ್ಯೂನ್ಯತೆಗಳೇ ನಮ್ಮ ಅವನತಿಗೆ ದಾರಿಯಾದವು, ಮತಾಂತರಕ್ಕೆ ಕಾರಣವಾದವು’ ಎಂದು ಮುಂದಿನ ಪೀಳಿಗೆಗೆ
ಮುತ್ತಜ್ಜರು ಕಥೆ ಹೇಳುವಂತೆ ನಾವು ನಮ್ಮ ಮೊಮ್ಮಕ್ಕಳು ಮರಿಮಕ್ಕಳಿಗೆ ಹೇಳುವ ಬದಲು ಈ ಮತಾಂತರದ ಪಿಡುಗಿನ ವಿರುದ್ಧ ಹೋರಾಡುವ ಈ ಸಂಧರ್ಭ ವನ್ನು ನಿಭಾಯಿಸಬೇಕಿದೆ. ಅಸ್ತಿತ್ವದ ಬೇರಿಗೆ ಗೆದ್ದಲು ಹಿಡಿದರೆ ಆ ವಿಶಾಲ ಹಿಂದೂ ವೃಕ್ಷವೇ ಅಡಬಹುದೇನೋ ಎಂಬ ಭಯ ಆವರಿಸುವ ಮೊದಲೇ ಧರ್ಮ ಜಾಗೃತಿಯ ಜೀವಾಮೃತವನ್ನು ಆ ವೃಕ್ಷದ ಬುಡಕ್ಕೆ ಸುರಿದು ಗೆದ್ದಿಲನ್ನು ಗಲ್ಲಿಗೇರಿಸಬೇಕಿದೆ.

ಸಂಸ್ಕೃತದ ಶ್ಲೋಕವನ್ನು ಜಗತ್ತಿನ ಮೊತ್ತ ಮೊದಲ ರೆಕಾರ್ಡಿಂಗ ಆಗಿ 1877 ರಲ್ಲಿ ಥಾಮಸ್ ಎಡಿಸನ್ ಎಂಬ ಅಮೆರಿಕಾ ವಿಜ್ಞಾನಿ ಗ್ರಾಮಾಫೋನ್ ಕಂಡು ಹಿಡಿದು ಅದನ್ನು ಪ್ರಚಾರ ಪಡಿಸಲು ಇಂಗ್ಲೆಂಡ್ ನಲ್ಲಿ ಸಭೆ ಸೇರಿಸಿ ಸಾವಿರಾರು ಕ್ರಿಶ್ಚಿಯನ್ ಮತ್ತು ಇತರ ಧರ್ಮದವರ ಎದುರು ಹೇಳಿ ಅದನ್ನು ರೆಕಾರ್ಡ್ ಮಾಡಿ ಸ್ವಲ್ಪ ಸಮಯದ ನಂತರ ಧ್ವನಿ ಸಂಸ್ಕರಿಸಿ ಹಾಕಿದ್ದನಂತೆ, ಆಗ ಅಲ್ಲಿ ಸೇರಿದವರೆ ಈ ಭಾಷೆ ಯಾವುದು, ಈ ಶ್ಲೋಕ ಯಾವುದು ಎಂದು ಕೇಳಿದಾಗ ಥಾಮಸ್ ಎಡಿಸನ್ ಇದು ಪ್ರಪಂಚದ ತಾಯಿ ಧರ್ಮ, ಹಿಂದೂ ಧರ್ಮದ ವೇದಗಳ ಶ್ಲೋಕ ಎಂದು ವಿವರಿಸಿದ್ದನಂತೆ.

ನಮ್ಮವರೇ ನಿಷ್ಕಾಳಜಿ ವಹಿಸಿದರೂ, ಸಾವಿರಾರು ಮೈಲಿ ದೂರ ನೆಲೆಸಿದ ವಿದೇಶಿಗನೊಬ್ಬ ಹಿಂದೂ ಧರ್ಮವನ್ನು ವಿಶ್ವದ ಮಾತೃ ಧರ್ಮವೆಂದು ಬಣ್ಣಿಸಿದ್ದ. ಅಂತಹ ತಾಯಿ ಧರ್ಮಕ್ಕೆ ಇಂದು ಮತಾಂತರದ ಕಾಯಿಲೆ ಅಂಟುತ್ತಿದೆ. ಆದರೆ ಈ ರೋಗಗ್ರಸ್ಥ ಸಮಾಜದಲ್ಲಿ ಹಿಂದೂ ಘೋರ ತಪಸ್ಸಿಗೆ ಕುಳಿತ ಪರಶಿವನಂತೆ ಕಣ್ಣು ಮುಚ್ಚಿ ಧ್ಯಾನಾಸಕ್ತನಾಗಿರುವ ಕಾರಣ ಮಾತಾಂತರಿಗಳೆಂಬ ಮನ್ಮಥರು ಮಾತ್ರ ಪರಶಿವನ ಮೇಲೆ ಮತಾಂತರದ ಬಾಣ ಬಿಡುತ್ತಲೇ ಇದ್ದಾರೆ. ಮನ್ಮಥರ ಆಟ ಮನೆ ಮನಗಳನ್ನು ಮುರಿಯುವ ಮೊದಲು ಹಿಂದೂ ಆ ಪರಶಿವನಂತೆ ಮೂರನೆಯ ಕಣ್ಣು ಬಿಡಬೇಕಿದೆ.