Saturday, 21st September 2024

ಮೇಲುಕೋಟೆಯನ್ನು ನರಕ ಮಾಡಿದ್ದ ಟಿಪ್ಪು

ವೀಕೆಂಡ್ ವಿಥ್ ಮೋಹನ್

ಮೋಹನ್ ವಿಶ್ವ

camohanbn@gmail.com

ಅಜ್ಞಾನವೆಂಬ ಕತ್ತಲಿನಿಂದ ಜ್ಞಾನವೆಂಬ ಬೆಳಕಿನೆಡೆಗೆ ಕರೆದೊಯ್ಯುವ ದೀಪಾವಳಿ ಹಬ್ಬ ಸಮೀಪಿಸುತ್ತಿದೆ, ಪ್ರತಿಯೊಬ್ಬ ಹಿಂದೂವು ಭರ್ಜರಿಯಾಗಿ ಆಚರಿಸುವ ಹಬ್ಬ ದೀಪಾವಳಿ.

ಜಗತ್ತಿನಾದ್ಯಂತ ಹಿಂದೂಗಳು ಮೂರುದಿನಗಳ ಕಾಲ, ನರಕಚತುರ್ದಶಿ, ಲಕ್ಷ್ಮೀ ಪೂಜೆ ಹಾಗೂ ಬಲಿಪಾಡ್ಯಮಿಯಂದು ಸಂತೋಷದಿಂದ ಮನೆಯವರ ಜತೆ ಪೂಜೆ ಮಾಡಿ, ದೀಪಗಳನ್ನು ಬೆಳಗಿ, ಹಬ್ಬದೂಟ ಮಾಡಿ ಆಚರಿಸುತ್ತಾರೆ. ಹಿರಿಯರು, ಕಿರಿಯರೆಂಬ ಭೇದಭಾವವಿಲ್ಲದೆ ದೀಪಾವಳಿ ಆಚರಿಸುತ್ತಾರೆ. ದೀಪಾ
ವಳಿ ಎಂದರೆ ಹಿಂದುಗಳಿಗೆ ವರ್ಷದ ಅತ್ಯಂತ ಸಂಭ್ರಮದ ಹಬ್ಬ, ಮನೆಮಂದಿಯೆಲ್ಲ ಸೇರಿ ಪಟಾಕಿ ಹೊಡೆ ಯುವುದರಲ್ಲಿನ ಸಂತೋಷಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಆದರೆ ಇದೇ ಸಂಭ್ರಮವನ್ನು ಕರ್ನಾಟಕದ ಒಂದು ಊರಿನ ಜನ ಮಾತ್ರ ಸಂತಾಪದದಿನವನ್ನಾಗಿ ನೋಡುತ್ತಾರೆ.

ಮಂಡ್ಯ ಜಿಲ್ಲೆಯ ಮೇಲುಕೋಟೆಯ ಅಯ್ಯಂಗಾರ್ ಬ್ರಾಹ್ಮಣರು ಪ್ರತಿ ವರ್ಷವೂ ನರಕ ಚತುರ್ದಶಿಯನ್ನು ಸಂತಾಪದ ದಿನವನ್ನಾಗಿ ಆಚರಿಸುತ್ತಾರೆ. ಸುಮಾರು ೨೫೦ವರ್ಷಗಳ ಹಿಂದೆ ಕ್ರೂರಿ ಟಿಪ್ಪುಸುಲ್ತಾನನ ಕ್ರೌರ್ಯಕ್ಕೆ ಸಿಲುಕಿ ಸುಮಾರು ೮೦೦ ಅಯ್ಯಂಗಾರ್ ಬ್ರಾಹ್ಮಣರು ತಮ್ಮ ಜೀವ ಬಿಟ್ಟಿದ್ದರು. ಮೇಲುಕೋಟೆಯ
ಅಯ್ಯಂಗಾರ್ ಬ್ರಾಹ್ಮಣರ ಮಾರಣ ಹೋಮ ನಡೆಸಿದ್ದಂತಹ ಟಿಪ್ಪುಸುಲ್ತಾನ್, ಹಿಂದೂಗಳ ವಿರುದ್ಧ ಸಮರ ವನ್ನೇ ಸಾರಿದ್ದ. ಮುಸಲ್ಮಾನ್ ಮತಾಂಧತೆಯ ಮೋಹಕ್ಕೊಳಗಾಗಿ, ಕೊಡಗಿನ ಸಾವಿರಾರು ಜನರನ್ನು ಮುಸಲ್ಮಾನ್ ಧರ್ಮಕ್ಕೆ ಮತಾಂತರ ಮಾಡಿದ್ದ ಟಿಪ್ಪು ಸುಲ್ತಾನ ನಿಗೆ ಅಯ್ಯಂಗಾರ್ ಬ್ರಾಹ್ಮಣರ ಮೇಲೆ ಮಾಡಿದ ದಾಳಿ ಯಾವ ಪಶ್ಚಾತಾಪವನ್ನೂ ಉಳಿಸಿರಲಿಲ್ಲ.

ತನ್ನ ತಂದೆ ಹೈದರಾಲಿಗಿಂತಲೂ ಅಪಾಯಕಾರಿಯಾಗಿದ್ದ ಟಿಪ್ಪುಸುಲ್ತಾನ್, ಮತಾಂಧತೆಯ ಅಮಲಿನಲ್ಲಿ ತೇಲಾಡುತ್ತಿದ್ದ. ಮೇಲುಕೋಟೆಯಲ್ಲಿ ಚೆಲುವ ನಾರಾಯಣಸ್ವಾಮಿ ಹಾಗೂ ಯೋಗಾ ನರಸಿಂಹಸ್ವಾಮಿ ಎಂಬ ಬೃಹತ್ ದೇವಸ್ಥಾನಗಳಿವೆ, ೧೨ನೆಯ ಶತಮಾನದಲ್ಲಿ ಹೊಯ್ಸಳರದೊರೆ ವಿಷ್ಣುವರ್ಧನನ ಕಾಲದಲ್ಲಿ ಮೇಲುಕೋಟೆಗೆ ಬಂದು ನೆಲೆಸಿದ್ದಂತಹ ಅಯ್ಯಂಗಾರ್ ಬ್ರಾಹ್ಮಣರು, ವಿಜಯ ನಗರದ ಅರಸರ ಆಡಳಿತದಲ್ಲಿ ಉತ್ತಂಗದಲ್ಲಿದ್ದ ಅಯ್ಯಂಗಾರ್ ಬ್ರಾಹ್ಮಣರು ಮೇಲು ಕೋಟೆ ಯಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದರು. ೧೬ನೆಯ ಶತಮಾನದಲ್ಲಿ ವಿಜಯನಗರವು ಛಿದ್ರವಾದ ಮೇಲೆ ಮೈಸೂರು ಸಂಸ್ಥಾನವು ಸ್ವತಂತವಾಯಿತು.

ಮೈಸೂರು ಮಹಾರಾಜರ ೧೫೦ ವರ್ಷಗಳ ಆಡಳಿತದಲ್ಲಿ ಉತ್ತಮ ಏಳಿಗೆ ಯನ್ನು ಕಂಡಿದ್ದಂತಹ ಅಯ್ಯಂಗಾರ್ ಬ್ರಾಹ್ಮಣರು ಚೆಲುವ ನಾರಾಯಣ ದೇಗುಲ ವನ್ನು ಮೈಸೂರು ಮಹಾರಾಜರ ಮೂಲಕ ತಮ್ಮ ಸುಪರ್ದಿಗೆ ತೆಗೆದು ಕೊಂಡಿದ್ದರು. ಮೈಸೂರು ಮಹಾರಾಜರ ಆಸ್ಥಾನದಲ್ಲಿ ಅಯ್ಯಂಗಾರ್ ಗಳು ಹಲವು ವಿದ್ವಾಂಸರು ಆಸ್ಥಾನ ಪಂಡಿತರಾಗಿದ್ದರು. ಹಲವು ಕ್ಲಿಷ್ಟಕರ ಸನ್ನಿ ವೇಶಗಳಲ್ಲಿ ಅಯ್ಯಂಗಾರ್ ಬ್ರಾಹ್ಮಣರು ಮಹಾರಾಜರಿಗೆ ಸಲಹೆ ನೀಡುತ್ತಿದ್ದರು.

೧೭೬೦ರ ದಶಕದಲ್ಲಿ ಮೈಸೂರಿನ ಮಹಾರಾಜರು ತಮ್ಮ ಆಡಳಿತದಲ್ಲಿ ಬರುವ ಹಲವು ಪ್ರದೇಶಗಳನ್ನು ನೋಡಿ ಕೊಳ್ಳುವ ಅಽಕಾರವನ್ನು ಸೈನ್ಯದ ದಳವಾಯಿ ಗಳಿಗೆ ನೀಡಿ ದ್ದರು. ಒಬ್ಬ ಬಾಡಿಗೆ ಸೈನಿಕನಾಗಿ, ಹಣ ನೀಡುತ್ತಿದ್ದ ರಾಜರು ಗಳ ಪರವಾಗಿ ಕೆಲಸ ಮಾಡುತ್ತಿದಂತಹ ಹೈದರಾಲಿ ಕೂಡ ಮೈಸೂರು ರಾಜರ ಆಡಳಿತದಲ್ಲಿ ಒಬ್ಬ ದಳವಾಯಿಯಾಗಿದ್ದ. ಈತನ ಇತಿಹಾಸ ವನ್ನು ಕೆದಕಿ ನೋಡಿದರೆ, ಈತನು ದಕ್ಷಿಣ ಭಾರತದ ಬಹುತೇಕ ರಾಜರುಗಳ ಸೈನ್ಯದಲ್ಲಿ ಬಾಡಿಗೆ ಸೈನಿಕ ನಾಗಿ ಕೆಲಸ ಮಾಡಿದ್ದಾನೆ, ಈತನಿಗೆ ಒಂದು ಶಾಶ್ವತ ನೆಲೆಯೆಂಬುದಿರಲಿಲ್ಲ. ೧೭೬೩ರಲ್ಲಿ ಎರಡನೇ ಕೃಷ್ಣರಾಜ ಒಡೆಯರ್ ನಿಧನರಾದ ನಂತರ, ದಳವಾಯಿಯಾಗಿದ್ದಂತಹ ಹೈದರಾಲಿ ಸಂದರ್ಭವನ್ನು ಬಳಸಿ ಕೊಂಡು ಮೈಸೂರು ರಾಜ್ಯಕ್ಕೆ ತಾನೇ ಅಽಪತಿಯೆಂದು ಸ್ವಯಂ ಘೋಷಿಸಿ ಕೊಂಡನು.

ಈತನ ಘೋಷಣೆಯಿಂದ ಅಯ್ಯಂ ಗಾರ್ ಬ್ರಾಹ್ಮಣ ಸಮುದಾಯಕ್ಕೆ ಭಾರಿ ಆಘಾತವಾಗಿತ್ತು, ಮೈಸೂರು ಅರಸರಿಗೆ ಕಷ್ಟ ಕಾಲದಲ್ಲಿ ಸಲಹೆ ನೀಡುತ್ತಿದ್ದಂತಹ
ಅಯ್ಯಂಗಾರ್ ಬ್ರಾಹ್ಮಣರಿಗೆ ಹೇಗಾದರೂ ಮಾಡಿ ಹೈದರಾಲಿ ಮಾಡಿದ ಮೋಸದಿಂದ ಮೈಸೂರು ರಾಜ್ಯವನ್ನು ಪುನಃ ಒಡೆಯರ್ ಕುಟುಂಬಕ್ಕೆ ಸಂಪೂರ್ಣವಾಗಿ ವಾಪಾಸ್ ಕೊಡಿಸಬೇಕೆಂಬ ಹಠವಿತ್ತು. ನೂರಾರು ವರ್ಷಗಳಿಂದ ಮೈಸೂರು ಅರಸರ ಕುಟುಂಬದ ನೆರಳಿನಲ್ಲಿ ತಮ್ಮ ಜೀವನಕಟ್ಟು ಕೊಂಡಿದ್ದಂತಹ ಅಯ್ಯಂಗಾರ್ ಬ್ರಾಹ್ಮಣ ಸಮುದಾಯಕ್ಕೆ ಒಡೆಯರ್ ಮನೆತನದವರ ಋಣ ತೀರಿಸಬೇಕಿತ್ತು.

ಮಹಾರಾಣಿ ಲಕ್ಷಮ್ಮಣ್ಣಿಯವರಿಗೆ ಅಯ್ಯಂಗಾರ್‌ರ ತಿರುಮಲ ಅಯ್ಯಂಗಾರ್ ಹಾಗೂ ನಾರಾಯಣ ಅಯ್ಯಂಗಾರ್ ರಾಜ್ಯವನ್ನು ಹೈದರಾಲಿಯಿಂದ ಪುನಃ ಹಿಂತಿ ರುಗಿ ಪಡೆಯುವ ತಂತ್ರಗಾರಿಕೆಯಲ್ಲಿ ಪ್ರಮುಖವಾಗಿ ಸಲಹೆಯನ್ನು ನೀಡುತ್ತಿದ್ದರು. ಇದನ್ನರಿತ ಹೈದರಾಲಿ ಇವರಿಬ್ಬರನ್ನೂ ಕುಟುಂಬ ಸಮೇತರಾಗಿ ಜೈಲಿನಲ್ಲಿ ರಿಸಿದನು. ಈತನ ಕ್ರೌರ್ಯ ವನ್ನು ಕಂಡಂತಹ ಮೇಲುಕೋಟೆಯ ಹಲವು ಅಯ್ಯಂಗಾರ್‌ಗಳು ದೂರದ ಮದ್ರಾಸಿಗೆ ವಲಸೆ ಹೊರಟು ಹೋದರು. ಆಶ್ಚರ್ಯ ವೆಂದರೆ ಹೈದರಾಲಿ ಕೆಲವು ಅಯ್ಯಂಗಾರ್ ಬ್ರಾಹ್ಮಣ ಸಮುದಾಯದ ಆಡಳಿತಾಽಕಾರಿಗಳನ್ನು ಹಾಗೆಯೆ ಉಳಿದ್ದಿದ್ದರು. ಅತ್ತ ಮಹಾರಾಣಿಯವರು ಬ್ರಿಟಿಷ ರೊಂದಿಗೆ ಹೈದರಾಲಿ ನಡೆಸಿದ ಕುತಂತ್ರ ರಾಜಕಾರಣದ ಬೆಗ್ಗೆ ವಿವರಿಸಿ, ಆತನ ಕಪಿಮುಷ್ಟಿಯಿಂದ ಮೈಸೂರು ರಾಜ್ಯವನ್ನು ಸಂಪೂರ್ಣ ವಾಗಿ ವಾಪಾಸ್
ಪಡೆಯಲು ಸತತ ಪ್ರಯತ್ನ ನಡೆಸುತ್ತಿದ್ದರು.

೧೭೮೩ರಲ್ಲಿ ಹೈದರಾಲಿ ನಿಧನನಾದನಂತರ, ಆತನ ಮಗ ಟಿಪ್ಪು ಸುಲ್ತಾನ್ ಅಽಕಾರಕ್ಕೆ ಬಂದ. ಸಣ್ಣವಯಸ್ಸಿನಿಂದಲೂ ಮುಸಲ್ಮಾನ್‌ಧರ್ಮದ ಕುರುಡು ಮತಾಂಧತೆಯ ದಾಸನಾಗಿದ್ದ ಟಿಪ್ಪು, ಸದಾಕಾಲ ಮತಾಂಧತೆಯ ನಶೆಯನ್ನು ತುಂಬುವ ಪುಸ್ತಕಗಳನ್ನು ಓದುತ್ತಿದ್ದ. ನಾವು ನೀವು ಶಾಲಾ ಪಠ್ಯಗಳಲ್ಲಿ
ಓದಿದ ಹಾಗೆ ಟಿಪ್ಪುವೇನು ಮಹಾನ್ ಧೈರ್ಯಶಾಲಿಯಾಗಿರಲಿಲ್ಲ. ಹೈದರಾಲಿ ಯುದ್ಧ ಮಾಡುತ್ತಿದ್ದಂತಹ ಸಂದರ್ಭದಲ್ಲಿ ಆತನಿಗೆ ಸಹಾಯ ಮಾಡಲಾಗದೇ, ಅವಿತು ಕಳ್ಳ ಮೈಬೀಳುತ್ತಿದ್ದಂತಹ ವ್ಯಕ್ತಿ ಟಿಪ್ಪು ಸುಲ್ತಾನ್. ಹೈದರಾಲಿ ಹಲವು ಬಾರಿ ಟಿಪ್ಪುವಿನ ಪುಕ್ಕಲು ತನವನ್ನು ನೋಡಿ ಛಡಿಯೇಟು ನೀಡಿದ್ದನು. ಹದಿನೈದರ ಹರೆಯದವನಾಗಿ ದ್ದಾಗ ಟಿಪ್ಪು ಹೇಡಿಯಂತೆ ಓಡಿಹೋಗಿದ್ದ, ಇದರಿಂದ ಕುಪಿತಗೊಂಡಿದ್ದ ಹೈದರಾಲಿ ಆತನಿಂದ ಕ್ಷಮಾಪಣಾ ಪತ್ರವನ್ನು ಬರೆಸಿಕೊಂಡಿದ್ದ.

ಅಪ್ಪನ ನಂತರ ಅಽಕಾರ ವಹಿಸಿ ಕೊಂಡ ಟಿಪ್ಪು ರಾಜ್ಯಭಾರಕ್ಕಿಂತಲೂ ಹೆಚ್ಚಾಗಿ ಮತಾಂಧತೆ ಯನ್ನು ಪಸರಿಸುತ್ತಿದ್ದ. ತನ್ನ ರಾಜ್ಯದಲ್ಲಿ ಹೇರುತ್ತಿದ್ದ ತೆರಿಗೆಗಳಿಂದ ಮುಸಲ್ಮಾನರಿಗೆ ಮಾತ್ರ ವಿನಾಯಿತಿ ನೀಡಿದ್ದ, ಭೂದಾಖಲೆಗಳ ಹೆಸರುಗಳಲ್ಲಿ ಪರ್ಷಿಯನ್ ಭಾಷೆಯನ್ನು ಬಳಸಲು ಶುರುಮಾಡಿದ್ದ, ಈಗಲೂ ನಮ್ಮ ರಾಜ್ಯದ ಭೂದಾಖಲೆಗಳಲ್ಲಿ ರುವ ಪಹಣಿ, ಖರಾಬು ಪದಗಳೆಲ್ಲವೂ ಟಿಪ್ಪುವಿನ ಅಂದಾದರ್ಬಾರಿನ ಉದಾಹರಣೆಗಳು.

ಊರುಗಳ ಹೆಸರುಗಳನ್ನೂ ಬದಲಾಯಿಸಲು ಶುರು ಮಾಡಿದ್ದ ಟಿಪ್ಪುಸುಲ್ತಾನ್, ಮೈಸೂರನ್ನು ನಜರ್ಬಾದ್, ಮಂಗಳೂರನ್ನು ಮಂಜ್ರಾಬಾದ್ ಮಾಡಿದ್ದ. ಮೈಸೂರು ಬಾಗದಲ್ಲಿರುವ ಆನೆಬಿಡಾರಗಳಲ್ಲಿ ಆನೆಗಳನ್ನು ಪಳಗಿಸಲು ಅಥವಾ ಆನೆಗಳ ಜತೆ ಸಂವಹನ ನಡೆ ಸಲು ಮಾವುತರು ಬಳಸುವ ಭಾಷೆ ಉರ್ದು, ಮಾವುತರ ಪೂರ್ವಜರು ಟಿಪ್ಪುವಿನ ಕಾಲದಲ್ಲಿ ಉರ್ದುಕಲಿತು ಆನೆಗಳ ಜತೆ ಸಂವಹಿಸುತ್ತಿದ್ದರು. ಈಗಲೂ ತಮ್ಮ ಪೂರ್ವಜರು ಹೇಳಿ ಕೊಟ್ಟಿರುವ ಸಂವಹನಸನ್ನೆ
ಗಳನ್ನೇ ಬಳಸುವ ಮಾವುತರು ಉರ್ದುವನ್ನೇ ಆನೆಗಳ ಜತೆ ಸಂವಹಿಸಲು ಬಳಸುತ್ತಾರೆ. ಅವರಿಗೆ ತಾವು ಬಳಸುತ್ತಿರುವ ಭಾಷೆ ಉರ್ದುವೆಂದು ತಿಳಿದಿಲ್ಲ, ಅವರ ಪೂರ್ವಜರು ಹೇಳಿ ಕೊಟ್ಟಿರುವ ವಿಶೇಷ ಸಂವಹನ ಭಾಷೆಯೆಂದೇ ಇಂದಿಗೂ ತಿಳಿದಿದ್ದಾರೆ.

ಕೊಡವರ ವಿರುದ್ಧ ಮೋಸದ ಯುದ್ಧ ಮಾಡಿಗೆದ್ದ ಟಿಪ್ಪು, ಸಿಕ್ಕ ಸಿಕ್ಕ ಕೊಡವರನ್ನು ಮತಾಂತರಿಸಿದ, ಇಂದಿಗೂ ಕೊಡಗಿನಲ್ಲಿ ಹಿಂದೂ ಹೆಸರಿನ ಉಪನಾಮವಿರುವ
ಮುಸಲ್ಮಾನರಿದ್ದಾರೆ. ಅವರ ಹೆಸರುಗಳ ನ್ನೊಮ್ಮೆ ಕೇಳಿದರೆ ಸ್ಪಷ್ಟವಾಗಿ ಅವರ ಪೂರ್ವಜರ ಕಾಲದಲ್ಲಿ ಅವರನ್ನು ತಾಂತರ ಮಾಡಿದರೆಂಬುದು ತಿಳಿಯುತ್ತದೆ.
ತನ್ನ ಅಽಕಾರಾವಽಯ ಸಂಪೂರ್ಣ ಸಮಯವನ್ನು ಮತಾಂತರಕ್ಕೆ ಉಪಯೋಗಿಸಿಕೊಂಡಿದ್ದ ಟಿಪ್ಪುವಿಗೆ ಅಯ್ಯಂಗಾರ್ ಬ್ರಾಹ್ಮಣರ ಮೇಲೆ ಬಹಳ ಕೋಪವಿತ್ತು. ಹೈದರಾಲಿಯ ಮರಣದ ನಂತರ, ಟಿಪ್ಪುವಿನ ಕ್ರೌರ್ಯವನ್ನು ನಿಲ್ಲಿಸಲು ಮಹಾರಾಣಿ ಲಕ್ಷಮ್ಮಣ್ಣಿಯವರು ಆತನ ಶತ್ರುಗಳೆಲ್ಲರನ್ನೂ ಒಗ್ಗೂಡಿಸಿ ಬ್ರಿಟಿಷರ ಸಹಾಯದಿಂದ ಆತನನ್ನು ಸದೆಬಡೆಯಲು ಹಗಲು ರಾತ್ರಿ ಕೆಲಸ ಮಾಡುತಿದ್ದರು.

ಟಿಪ್ಪುವಿನ ಬಳಿ ಮಂತ್ರಿಯಾಗಿದ್ದಂತಹ ಶಾಮಯ್ಯ ಅಯ್ಯಂಗಾರ್ ಮದ್ರಾಸ್ ರೆಜಿಮೆಂಟಿನ ಬ್ರಿಟಿಷ್ ಅಽಕಾರಿ ಲಾರ್ಡ್ ಜಾರ್ಜ್‌ಹ್ಯಾರಿಸ್ ನನ್ನು ರಹಸ್ಯವಾಗಿ ಭೇಟಿಯಾಗಿ, ಆತನ ಅಂದಾದರ್ಬಾರಿನ ಬಗ್ಗೆ ವಿವರಿಸಿ ಆತನನ್ನು ಸದೆಬಡಿಯಲು ಸಹಾಯ ಮಾಡುವಂತೆ ಕೋರಿದ್ದರು. ಟಿಪ್ಪುವಿಗೆ ಈ ವಿಷಯ ಹೇಗೋ
ಕಿವಿಗೆ ಬಿತ್ತು, ಆತನ ತಂದೆ ಹೈದರಾಲಿಗಿಂತಲೂ ಕೋಪಗೊಂಡ ಟಿಪ್ಪು ಅಯ್ಯಂಗಾರ್ ಬ್ರಾಹ್ಮಣರ ಮೇಲೆ ವಿಷಕಾರ ತೊಡಗಿದ. ಅಯ್ಯಂಗಾರ್ ಬ್ರಾಹ್ಮಣರನ್ನು ಕೇವಲ ಜೈಲಿಗೆ ಹಾಕುವುದರಿಂದ ಉಪಯೋಗವಿಲ್ಲ ಬದಲಾಗಿ ಅವರ ಇಡೀ ಊರನ್ನೇ ನಾಶ ಮಾಡಬೇಕೆಂಬ ನಿರ್ಧಾರಕ್ಕೆ ಬಂದ. ನರಕ ಚತುರ್ದಶಿಯ ದಿವಸ ಇಡೀ ಮೇಲುಕೋಟೆ ನಗರವೇ ಹಬ್ಬದ ಸಂಭ್ರಮದಲ್ಲಿತ್ತು, ಟಿಪ್ಪು ತನ್ನದೊಡ್ಡ ಸೈನ್ಯದೊಂದಿಗೆ ನಗರದೊಳಗೆ ನುಗ್ಗಿದ.

ತನ್ನ ಸೈನ್ಯದಿಂದ ಇಡೀ ಮೇಲುಕೋಟೆ ನಗರದಲ್ಲಿ ಸಿಕ್ಕಸಿಕ್ಕ ಅಯ್ಯಂಗಾರ್ ಬ್ರಾಹ್ಮಣರ ನರಮೇಧ ನಡೆಸಿದ, ಸುಮಾರು ೮೦೦ಜನ ಅಯ್ಯಂಗಾರ್ ಬ್ರಾಹ್ಮಣರು
ಈ ನರಮೇಧದಲ್ಲಿ ಸಾವನ್ನಪ್ಪಿದರು. ನೋಡನೋಡುತ್ತಲೇ ದೀಪಾವಳಿ ಹಬ್ಬದ ದಿವಸ ಮೇಲುಕೋಟೆ ಸ್ಮಶಾನವಾಯಿತು, ಕಂಡಕಂಡಲ್ಲಿ ಹೆಣಗಳ ರಾಶಿ, ಮನೆಗಳ ಗೋಡೆಗಳ ಮೇಲೆ ರಕ್ತದ ಕಲೆಗಳು, ರಸ್ತೆಗಳಲ್ಲಿ ಚೆಲ್ಲಾಪಿಲ್ಲಿಯಾಗಿದ್ದಂತಹ ದೇಹ ಗಳು, ಚರಂಡಿಯಲ್ಲಿ ಹರಿಯುತ್ತಿದಂತಹ ರಕ್ತ ಟಿಪ್ಪುವಿನ ಕ್ರೌರ್ಯಕ್ಕೆ ಸಾಕ್ಷಿಯಾಗಿದ್ದವು. ಅಳಿದುಳಿದ ಅಯ್ಯಂಗಾರಿಗಳು ತಮ್ಮ ಜೀವ ಉಳಿಸಿಕೊಳ್ಳಲು ಊರು ಬಿಟ್ಟು ಹೊರಟು ಹೋದರು.

ಪುಕ್ಕಲ ಟಿಪ್ಪುವನ್ನು ಹುಲಿಯಂತೆ ಬಿಂಬಿಸಿ ಪಠ್ಯಪುಸ್ತಕಗಳಲ್ಲಿ ಆತನು ನಡೆಸಿದ ಅಯ್ಯಂಗಾರ್ ಬ್ರಾಹ್ಮಣರ ಮಾರಣ ಹೋಮವನ್ನು ಮುಚ್ಚಿ ಹಾಕಲಾಯಿತು. ಜವಾಹರ ಲಾಲ್ ನೆಹರು ಕಮ್ಯುನಿಸ್ಟರ ಕೈಗೆ ಪಠ್ಯಪುಸ್ತಕ ರಚಿಸುವ ಅಽಕಾರವನ್ನು ನೀಡಿದ ದಿನವೇ ದೇಶದ್ರೋಹಿ ಕಮ್ಯುನಿಸ್ಟರು, ಇತಿಹಾಸವನ್ನು ತಿರುಚಿ ಮ ತಾಂಧ ಪುಕ್ಕಲು ಇಲಿಯೊಬ್ಬನನ್ನುಹುಲಿಯೆಂದು ಹೇಳಿದ್ದರು. ತನ್ನನ್ನುತಾನು ಹಿಂದೂಗಳ ಪರವೆಂದು ಸಾಽಸಲು ಟಿಪ್ಪು ಬಹಳಷ್ಟು ಸುಳ್ಳು ಪ್ರಚಾರಗಳನ್ನು ಮಾಡಿದ, ಶೃಂಗೇರಿಯ ದೇವಾಲಯವನ್ನು ಟಿಪ್ಪು ಕಟ್ಟಿಸಲು ಸಹಾಯ ಮಾಡಿದ್ದ.

ಒಂದೆಡೆ ಹಿಂದೂಗಳ ಮಾರಣ ಹೋಮ ನಡೆಸಿ ಮತ್ತೊಂದೆಡೆ ದೇವಸ್ಥಾನವನ್ನು ಕಟ್ಟಿಸುವ ಮೂಲಕ ತಾನು ಹಿಂದೂಗಳ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿಲ್ಲವೆಂದು ಹೇಳಿಕೊಳ್ಳುತ್ತಿದ್ದ. ತನ್ನಆಡಳಿತದಲ್ಲಿ ಒಂದಷ್ಟು ಹಿಂದೂ ಅಽಕಾರಿಗಳನ್ನು ಹೆದರಿಸಿ ಬೆದರಿಸಿ ಟಿಪ್ಪು ಇಟ್ಟು ಕೊಂಡಿದ್ದ. ಇಂದು ಆತನ ಪರವಾಗಿ ಮಾತನಾಡುವ ಒಂದಷ್ಟು ತಲೆ ತಿರುಕರು, ಈತನು ಮಾಡಿದ ಕ್ರೌರ್ಯವನ್ನು ಮರೆ ಮಾಚಲು ಶೃಂಗೇರಿಯ ದೇವಸ್ಥಾನಕ್ಕೆ ಟಿಪ್ಪು ಮಾಡಿದ ಸಹಾಯದ ಉದಾಹರಣೆಯನ್ನೇ ಕೊಡುತ್ತಾರೆ. ಶ್ರೀರಂಗಪಟ್ಟಣದಲ್ಲಿದ್ದಂತಹ ದೇವಸ್ಥಾನವನ್ನು ಭಗ್ನಗೊಳಿಸಿ ಅದರ ಅವಶೇಷಗಳ ಮೇಲೆ ಮಸೀದಿಯನ್ನು ಕಟ್ಟಿರುವುದರ ಬಗ್ಗೆ ಮಾತನಾಡುವುದಿಲ್ಲ.

ಹೊರಗಿನ ಜನರಿಗೆ ತಾನೊಬ್ಬ ಸಭ್ಯನೆಂದು ತೋರಿಸಿಕೊಳ್ಳಲು ಅಲ್ಲೊಂದು ಇಲ್ಲೊಂದು ಒಳ್ಳೆಯ ಕೆಲಸಗಳನ್ನು ಮಾಡಿದ ಮಾತ್ರಕ್ಕೆ ಟಿಪ್ಪು ಹೋರಾಟಗಾರ ನಾಗುವುದಿಲ್ಲ, ತನ್ನ ಧರ್ಮದ ಮತಾಂಧತೆಯ ನಶೆಯಲ್ಲಿರುತ್ತಿದ್ದ ಟಿಪ್ಪುವಿಗೆ ಇಡೀ ಭಾರತ ವನ್ನು ಮತಾಂತರಗೊಳಿಸಿ ಮುಸ್ಲಿಂ ರಾಷ್ಟ್ರ ಮಾಡುವ ಸ್ಪಷ್ಟ
ಉದ್ದೇಶವಿತ್ತು. ಮಲಬಾರಿನ ಭಾಗದಲ್ಲಿ ಸುಮಾರು ೪,೦೦,೦೦೦ ಹಿಂದೂ ಧರ್ಮದವರನ್ನು ಮುಸಲ್ಮಾನ್ ಧರ್ಮಕ್ಕೆ ಮತಾಂತರ ಮಾಡಿದ್ದ ಟಿಪ್ಪು, ಬಹಿರಂಗ ವಾಗಿ ಪತ್ರದ ಮುಖೇನ ಆಡಳಿತಾಽಕಾರಿಯೊಬ್ಬನಿಗೆ ತಿಳಿಸಿ ಆನಂದಿಸುವ ಮೂಲಕ ವಿಕೃತಿ ಮೆರೆದಿದ್ದ, ಸಾಮೂಹಿಕವಾಗಿ ಕೊಡವರನ್ನು ಮತಾಂತರ ಮಾಡಿದ್ದ ಕೃತ್ಯವನ್ನು ಟಿಪ್ಪು, ಅವರನ್ನು ಅಹಮದೀಯನ ಧರ್ಮಕ್ಕೆ ಕರೆತಂದು ಮೇಲ್ಪಂಕ್ತಿ ಗೊಳಪಡಿಸಿದ್ದೇನೆಂದು ಹೇಳಿದ್ದ.

ಟಿಪ್ಪು ತನ್ನ ಅಽಕಾರಾವಯಲ್ಲಿ ಹಿಂದೂ ಧರ್ಮದವರನ್ನು ಆಡಳಿತಾಽಕಾರಿಯನ್ನಾಗಿ ನೇಮಿಸಿದ್ದನ್ನೇ ಆತನು ಮಾಡಿದ್ದ ಒಳ್ಳೆಯ ಕೆಲಸವೆಂದು ಅರಚುವ ಎಡಚರರ ವಾದ ಹೇಗಿದೆಯೆಂದರೆ, ಬ್ರಿಟಿಷರ ಸೈನ್ಯದಲ್ಲಿ ಭಾರತೀಯರು ಕೆಲಸ ಮಾಡಿದ್ದಾರೆಂಬ ಕಾರಣಕ್ಕೆ ಬ್ರಿಟಿಷರು ಭಾರತದ ಪರವಾಗಿದ್ದರೆನ್ನಲಾದೀತೇ? ಅಮೆರಿಕ ಹಾಗೂ ವಿಯೆಟ್ನಾಂ ಯುದ್ಧದಲ್ಲಿ ವಿಯೆಟ್ನಾಮಿನ ಕೆಲವರು ಅಮೆರಿಕ ಪರವಾಗಿದ್ದರೆಂದ ಮಾತ್ರಕ್ಕೆ, ಅಮೆರಿಕ ವಿಯೆಟ್ನಾಂ ದೇಶಕ್ಕೆ ಒಳ್ಳೆಯದನ್ನು ಮಾಡಿದ್ದ ರೆನ್ನಲಾಗೀತೆ? ಟಿಪ್ಪುವಿನ ಕ್ರೌರ್ಯವನ್ನು ಇತಿಹಾಸದ ಪುಟಗಳಲ್ಲಿ ಮರೆಮಾಚುವಲ್ಲಿ ಎಡಚರರು ಸಫಲರಾಗಿದ್ದಿರಬಹುದು, ಆದರೆ ಈಗ ದೇಶದಲ್ಲಿ ರಾಜಕೀಯ ನೆಲೆಯನ್ನೇ ಕಳೆದುಕೊಂಡು ಜನರಿಂದತಿರಸ್ಕಾರಗೊಂಡಿರುವ ಎಡಚರರ ಸುಳ್ಳಿನ ಸರಮಾಲೆಗಳು ಎಳೆಎಳೆಯಾಗಿ ಹೊರಬರುತ್ತಿವೆ.

ಟಿಪ್ಪುವಿನ ಖಡ್ಗದ ಮೇಲಿನ ರಕ್ತದ ಶಾಪಯಾರನ್ನೂ ಬಿಡುವುದಿಲ್ಲ, ಟಿಪ್ಪುವಿನ ಖಡ್ಗವನ್ನು ಖರೀದಿಸಿದ ವಿಜಯ್ ಮಲ್ಯ ಏನಾದರು? ಟಿಪ್ಪು ಜಯಂತಿ ಮಾಡ ಹೊರಟ ಸಿದ್ದರಾಮಯ್ಯ ಏನಾದರು ? ಟಿಪ್ಪು ಜಯಂತಿಗೆ ಬೆಂಬಲ ಸೂಚಿಸಿ ವಿಧಾನಸೌಧದಲ್ಲಿ ಟಿಪ್ಪು ಜಯಂತಿ ಮಾಡಿದ ಡಿ.ಕೆ.ಶಿವಕುಮಾರ್ ಪರಿಸ್ಥಿತಿ ಎಲ್ಲಿಗೆ ಬಂದಿದೆ? ಇತಿಹಾಸದಲ್ಲಿ ಆತನ ಕ್ರೌರ್ಯಗಳು ಮರೆ ಮಾಚಿರಬಹುದು, ಆದರೆ ಮೇಲುಕೋಟೆಯ ಅಯ್ಯಂಗಾರ್ ಬ್ರಾಹ್ಮಣರು ಮಾತ್ರ ಮರೆತಿಲ್ಲ, ತಮ್ಮ
ಪೂರ್ವಜರ ಮೇಲಾದಂತಹ ಮಾರಣಹೋಮವನ್ನು ನೆನೆದು ಇಂದಿಗೂ ನರಕ ಚತುರ್ದಶಿಯಂದು ಮೃತಪಟ್ಟವರಿಗೆ ಸಂತಾಪ ಸೂಚಿಸುತ್ತಾರೆ.