ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಟಿ ಕತ್ರಿನಾ ಕೈಫ್‌, ನಾಳೆ ಸರ್ಪ ಸಂಸ್ಕಾರ

ಕತ್ರೀನಾ ಕೈಫ್‌ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದಿದ್ದು, ನಾಳೆಯ ಸರ್ಪ ಸಂಸ್ಕಾರ ಕಾರ್ಯಕ್ರಮಕ್ಕೆ ನೋಂದಾಯಿಸಿದ್ದಾರೆ. ಈ ಸರ್ಪ ಸಂಸ್ಕಾರವನ್ನು ಸಾಂಪ್ರದಾಯಿಕವಾಗಿ ಕ್ಷೇತ್ರದ ವಿಧಿವಿಧಾನಗಳಂತೆ ನೆರವೇರಿಸಲಾಗುತ್ತದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಟಿ ಕತ್ರಿನಾ ಕೈಫ್‌, ನಾಳೆ ಸರ್ಪ ಸಂಸ್ಕಾರ

ಕತ್ರಿನಾ ಕೈಫ್

ಹರೀಶ್‌ ಕೇರ ಹರೀಶ್‌ ಕೇರ Mar 11, 2025 2:36 PM

ಬೆಂಗಳೂರು: ಬಾಲಿವುಡ್‌ನ (Bollywood) ಖ್ಯಾತ ನಟಿ ಕತ್ರೀನಾ ಕೈಫ್ (Katrina Kaif) ರಾಜ್ಯದ ಪ್ರಸಿದ್ಧ ತೀರ್ಥಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ (Kukke Subrahmanya Temple) ಆಗಮಿಸಿದ್ದಾರೆ. ಇಂದು ಮತ್ತು ನಾಳೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕತ್ರೀನಾ ಕೈಫ್‌ ಅವರು ದೇವರ ದರ್ಶನ ಮಾಡಿದ್ದು, ಸರ್ಪಸಂಸ್ಕಾರ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲೆ ಉಳಿದುಕೊಳ್ಳಲಿರುವ ಬಾಲಿವುಡ್ ನಟಿ ನಾಳೆ ಸರ್ಪ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಕತ್ರೀನಾ ಕೈಫ್‌ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದಿದ್ದು, ನಾಳೆಯ ಸರ್ಪ ಸಂಸ್ಕಾರ ಕಾರ್ಯಕ್ರಮಕ್ಕೆ ನೋಂದಾಯಿಸಿದ್ದಾರೆ. ಈ ಸರ್ಪ ಸಂಸ್ಕಾರವನ್ನು ಸಾಂಪ್ರದಾಯಿಕವಾಗಿ ಕ್ಷೇತ್ರದ ವಿಧಿವಿಧಾನಗಳಂತೆ ನೆರವೇರಿಸಲಾಗುತ್ತದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ. ಇಂದು ಮಾಸ್ಕ್ ಧರಿಸಿ, ತಲೆಗೆ ದುಪ್ಪಟ್ಟ ಹಾಕಿಕೊಂಡು ಅವರು ದೇವರ ದರ್ಶನದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ.

ಇತ್ತಿಚೆಗೆ ಕತ್ರಿನಾ ಕೈಫ್‌ ಕುಂಭಮೇಳದಲ್ಲಿ ಪಾಲ್ಗೊಂಡಿದ್ದರು. "ಇಲ್ಲಿಗೆ ಬರಲು ಸಾಧ್ಯವಾಗಿರುವುದು ನನ್ನ ಅದೃಷ್ಟ. ನನಗೆ ನಿಜವಾಗಿಯೂ ಸಂತಸವಾಗುತ್ತಿದೆ. ಇದು ಬಹಳ ಸುಂದರವಾದ ಸ್ಥಳ. ಕುಂಭಮೇಳದ ಅನುಭವ ಪಡೆಯಲು ಈಗಷ್ಟೇ ಆರಂಭಿಸಿದ್ದೇನೆ. ನಾನು ಪುಣ್ಯವಂತೆ. ಇಡೀ ದಿನವನ್ನು ಇಲ್ಲಿ ಕಳೆಯಲು ನಾನು ಉತ್ಸುಕಳಾಗಿದ್ದೇನೆʼʼ ಎಂದು ಅವರು ಭಾವುಕರಾಗಿ ಹೇಳಿದ್ದರು.

ಸುಬ್ರಹ್ಮಣ್ಯ ಕ್ಷೇತ್ರ ದೇಶದಾದ್ಯಂಥ ಸರ್ಪ ಸಂಸ್ಕಾರ ಸೇವೆಗೆ ಹೆಸರಾಗಿದೆ. ನಾಗದೋಷ, ಸರ್ಪಹತ್ಯೆಗಳಿಗೆ ಇಲ್ಲಿ ಪರಿಹಾರ ನೀಡುವ ಸೇವೆಗಳನ್ನು ಒದಗಿಸಲಾಗುತ್ತದೆ. ವಿವಾಃ ಸಮಸ್ಯೆ, ಸಂತಾನ ಸಮಸ್ಯೆ, ಚರ್ಮದೋಷಗಳಿಗೆ ಕೂಡ ಉತ್ತರ ಬಯಸಿ ಜನ ಇಲ್ಲಿಗೆ ಆಗಮಿಸುತ್ತಾರೆ. ದೇಶದ ಹಲವು ಖ್ಯಾತ ಜ್ಯೋತಿಷಿಗಳು ಬಾಲಿವುಡ್‌ನ ಹಾಗೂ ಇಂಡಿಯನ್‌ ಕ್ರಿಕೆಟ್‌ನ ಸೆಲೆಬ್ರಿಟಿಗಳಿಗೆ ಸಮಸ್ಯೆ ಒದಗಿದಾಗ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೇವೆ ಒಪ್ಪಿಸಲು ಸೂಚಿಸಿದ್ದುಂಟು. ಹೀಗೆಯೇ ಸಚಿನ್‌ ತೆಂಡುಲ್ಕರ್‌, ಕೆಎಲ್‌ ರಾಹುಲ್ ಮೊದಲಾದ ಕ್ರಿಕೆಟಿಗರು, ಅಜಯ್‌ ದೇವಗನ್‌, ರಿಷಿ ಕಪೂರ್‌, ಪವನ್‌ ಕಲ್ಯಾಣ್‌ ಮೊದಲಾದ ಸಿನಿಮಾ ಸೆಲೆಬ್ರಿಟಿಗಳು ಇಲ್ಲಿಗೆ ಭೇಟಿ ನೀಡಿದ್ದಾರೆ ಹಾಗೂ ಸರ್ಪಸಂಸ್ಕಾರ ಮಾಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಕುಕ್ಕೆಗೆ ಅದರದೆ ಆದ ಖ್ಯಾತಿ ಇದೆ. ಇಲ್ಲಿನ ಸುಬ್ರಹ್ಮಣ್ಯ ದೇವಾಲಯ ಸುಮಾರು 5000 ವರ್ಷಗಳ ಹಿಂದಿನದು ಎನ್ನಲಾಗಿದೆ. ಸುಬ್ರಹ್ಮಣ್ಯನು ಇಲ್ಲಿನ ದೇವತೆಯಾಗಿದ್ದು, ಕುಮಾರಧಾರಾ ನದಿಯ ಪುಣ್ಯ ತಟದಲ್ಲಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಮುಖ್ಯವಾಗಿ ಹೆಸರಾಗಿರುವುದೇ ನಾಗ ದೋಷ ಸಂಬಂಧಿ ಪೂಜೆಗಳಿಗಾಗಿ. ಇಲ್ಲಿ ನಡೆಸುವ ಆಶ್ಲೇಷ ಬಲಿ ಹಾಗೂ ಸರ್ಪ ಸಂಸ್ಕಾರಕ್ಕೆ ವಿಶಿಷ್ಟತೆ ಇದೆ.‌

ಇದನ್ನೂ ಓದಿ: Katrina Kaif: ಮಹಾ ಕುಂಭಮೇಳದಲ್ಲಿ ಪಾಲ್ಗೊಂಡ ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಭಾವುಕ