ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hina Khan: ಕ್ಯಾನ್ಸರ್‌ ಟ್ರೀಟ್‌ಮೆಂಟ್‌ ಮಧ್ಯೆಯೇ ಮೆಕ್ಕಾ ಯಾತ್ರೆ ಕೈಗೊಂಡ ಹೀನಾ ಖಾನ್‌- ವಿಡಿಯೊ ಇಲ್ಲಿದೆ

Hina Khan: ಕ್ಯಾನ್ಸರ್‌ನಿಂದ ಬಳಲುತ್ತಿರುವ ನಡಿ ಹೀನಾ ಖಾನ್‌ ತಮ್ಮ ಚಿಕಿತ್ಸೆ ನಡುವೆಯೇ ಮೆಕ್ಕಾ ಯಾತ್ರೆಗೆ ತೆರಳಿದ್ದು, ಈ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆದ ಫೋಟೋದಲ್ಲಿ ಹಿನಾಖಾನ್ ಮೆಕ್ಕಾದ ಮುಂಭಾಗದಲ್ಲಿ ಹಸಿರು ಬಣ್ಣದ ಬುರ್ಕಾ ಧರಿಸಿದ್ದು ಸನ್ ಗ್ಲಾಸ್ ತೊಟ್ಟು ಪೋಸ್ ನೀಡಿದ್ದು, ಅಭಿಮಾನಿಗಳ ಜೊತೆಯು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ನಟಿ ಹೀನಾ ಖಾನ್ ಮೆಕ್ಕಾ ಯಾತ್ರೆ- ಪೋಸ್ಟ್ ವೈರಲ್

Profile Pushpa Kumari Mar 17, 2025 5:03 PM

ನವದೆಹಲಿ: ಹಿಂದಿ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ಹೀನಾ ಖಾನ್ (Hina Khan) ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಅದಕ್ಕೆ ಬೇಕಾದ ಸೂಕ್ತ ಚಿಕಿತ್ಸೆ ಸಹ ಪಡೆಯುತ್ತಿದ್ದಾರೆ. ಹೀಗಾಗಿ ಚಿಕಿತ್ಸಾ ವಿಧಾನ ಆರೋಗ್ಯದ ಬಗ್ಗೆ ಆಗಾಗ ಅಭಿಮಾನಿಗಳಿಗೆ ಅಪ್​ಡೇಟ್ ನೀಡುವ ಹೀನಾ ಖಾನ್ ಇತರ ಕ್ಯಾನ್ಸರ್ ಪೀಡಿತರಿಗೂ ಸ್ಫೂರ್ತಿಯಾಗಿದ್ದಾರೆ. ಇದೀಗ ಕ್ಯಾನ್ಸರ್ ನಡು ವೆಯು ನಟಿ ರಂಜಾನ್ ಹಬ್ಬದ ಮೆಕ್ಕಾ ಪ್ರವಾಸ ಕೈಗೊಂಡಿದ್ದು ಈ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳ ಮನಗೆದ್ದಿದ್ದಾರೆ. ಸದ್ಯ ನಟಿ ಕಾನ್ಯರ್ ಇದ್ದರೂ ಧೃತಿಗೆಡದೆ ಗೆಲ್ಲುವೆ ಎಂಬ ಭರವಸೆಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ.

ನಟಿ ಹೀನಾ ಖಾನ್ ಕಾನ್ಸರ್ ರೋಗದ ನಡುವೆಯೂ ಇತ್ತೀಚೆಗಷ್ಟೇ ಮೆಕ್ಕಾ ಧಾರ್ಮಿಕ ಯಾತ್ರೆಗೆ ತೆರಳಿದ್ದು ಈ ಫೋಟೋವನ್ನು ಸೋಷಿಯಲ್ ಮೀಡಿ ಯಾದಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆದ ಫೋಟೋದಲ್ಲಿ ಹಿನಾ ಖಾನ್ ಮೆಕ್ಕಾದ ಮುಂಭಾಗದಲ್ಲಿ ಹಸಿರು ಬಣ್ಣದ ಬುರ್ಖಾ ಧರಿಸಿದ್ದು ಸನ್ ಗ್ಲಾಸ್ ತೊಟ್ಟು ಪೋಸ್ ನೀಡಿದ್ದು ಅಭಿಮಾನಿಗಳ ಜೊತೆಯು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋವನ್ನು ಹಂಚಿಕೊಳ್ಳುವ ಮೂಲಕ ನನ್ನನ್ನು ಆಹ್ವಾನಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಇದೊಂದು ಪರಿಪೂರ್ಣ ಸಮಯ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಸದ್ಯ ನಟಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ನಟಿಯ ಮೆಕ್ಕಾ ಯಾತ್ರೆಯ ಪೋಸ್ಟ್ ಕಂಡು ಫ್ಯಾನ್ಸ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮ ಜೀವನೋತ್ಸಾಹ ಎಲ್ಲರಿಗೂ ಮಾದರಿ ಇದ್ದಂತೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ನಿಮ್ಮ ಆರೋಗ್ಯ ಆದಷ್ಟು ಬೇಗನೆ ಚೇತರಿಕೆ ಆಗಲಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ನಟಿ ಹೀನಾ 2024ರ ಜುಲೈನಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು‌ ತನಗೆ ಕ್ಯಾನ್ಸರ್ ಇದೆ ಎಂಬ ಬಗ್ಗೆ ನಟಿಯೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಗಂಭೀರ ಕಾಯಿಲೆ ವಿರುದ್ಧದ ಹೋರಾಟದ ಹೊರತಾಗಿಯೂ, ನಟಿ ತಮ್ಮ ಅಭಿಮಾನಿಗಳಿಗೆ ಧೈರ್ಯ ತುಂಬಿದ್ದು ಚಿಕಿತ್ಸೆ ಪಡೆದು, ಶೀಘ್ರವೇ ಚೆತರಿಸಿಕೊಳ್ಳುವುದಾಗಿ ಎಂದು ಭರವಸೆ ನೀಡಿದರು. ನಟಿ ಸದ್ಯ‌ ಕಿಮೋಥೆರಪಿ ಚಿಕಿತ್ಸೆ ಸಹ ಪಡೆಯುತ್ತಿದ್ದು ಕ್ಯಾನ್ಸರ್ ನ ಮೂರ ನೇ ಹಂತವನ್ನು ಗಟ್ಟಿಗಿತ್ತಿಯಾಗಿ ಎದುರಿಸುತ್ತಿದ್ದಾರೆ. ನಟಿ‌ ಬೇಗನೆ ಕ್ಯಾನ್ಸರ್ ಗೆದ್ದು ಬರಲಿ ಎಂದು ಆಕೆಯ ಅಭಿಮಾನಿಗಳು ಮನಸಾರೆ ಹರಸುತ್ತಿದ್ದಾರೆ.

ಇದನ್ನು ಓದಿ: Zaheer Khan: 20 ವರ್ಷಗಳ ಬಳಿಕ ಮತ್ತೆ ಜಹೀರ್ ಖಾನ್‌ಗೆ ಅಭಿಮಾನಿಯಿಂದ ಪ್ರೇಮ ನಿವೇದನೆ

ಇಂಡಿಯನ್ ಐಡಲ್ ಸಿಂಗಿಂಗ್ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಹೀನಾ ಖಾನ್‌ ಕೆಲವು ಜಾಹಿರಾತುಗಳ ಮೂಲಕವು ಪ್ರಸಿದ್ಧಿ ಪಡೆದಿದ್ದಾರೆ. ಫಿಯರ್ ಫ್ಯಾಕ್ಟರ್ ಕಾಥ್ರೋನ್ ಕೇ ಕಿಲಾಡಿ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ ಮೊದಲ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ. ಬಿಗ್ ಬಾಸ್ ಸೀಸನ್ 11 ನಲ್ಲಿ ಕೂಡ ಭಾಗಿಯಾಗಿ ಮೊದಲ ರನ್ನರ್ ಅಪ್ ಆದ ಹೆಗ್ಗಳಿಕೆ ಈ ನಟಿಗಿದೆ. ಪಂಜಾಬಿನ ಭಾಸೂಡಿ ಎಂಬ ಅಲ್ಬಾಂ ಸಾಂಗ್‌ನಲ್ಲಿ ಸಹ ಹೀನಾ ಖಾನ್ ಮಿಂಚಿದ್ದರು. ಬಳಿಕ ಸ್ಮಾರ್ಟ್ ಫೋನ್ ಎಂಬ ಶಾರ್ಟ್ ಫಿಲ್ಮ್ ಅಲ್ಲಿ ಸಹ ಅಭಿನಯಿಸಿದ್ದಾರೆ. ನಾಗಿನ್ ಸೀಸನ್ 5 ಹ್ಯಾಕ್ಡ್ , ಬಿಗ್ ಬಾಸ್ ತೂಫಾನಿ ಸೀನಿಯರ್ ಇನ್ನು ಅನೇಕ ಅಲ್ಬಾಂ ಸಾಂಗ್ ಮತ್ತು ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದ ಖ್ಯಾತಿ ಈ ನಟಿಗಿದೆ.