ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Adi Irani: ಸಿನಿಮಾ ಸಕ್ಸಸ್‌ ಆದರೂ ಮಗುವಿನ ಹಾಲು ಖರೀದಿಸಲು 5ರೂ. ಇರ್ಲಿಲ್ಲ.... ಶಾರುಖ್ ಖಾನ್ ಜೊತೆ ನಟಿಸಿದ್ದ ಖ್ಯಾತ ನಟ ಹೀಗಂದಿದ್ದೇಕೆ?

ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಅಭಿನಯದ ಬಾಜಿಗರ್ ಸಿನೆಮಾದಲ್ಲಿ ನಟಿಸಿದ್ದ ಆದಿ ಇರಾನಿ ತಾವು ಎದುರಿಸಿದ ಸಂಕಷ್ಟಗಳ ಬಗ್ಗೆ ಸಂದರ್ಶವೊಂದರಲ್ಲಿ ಹೇಳಿಕೊಂಡಿದ್ದಾರೆ. ಬಾಜಿಗರ್ ಮತ್ತು ಅನಾರಿ ಚಿತ್ರಗಳ ಬಳಿಕವೂ ಇವರ ವೃತ್ತಿಜೀವನವು ನಿರೀಕ್ಷೆಯಂತೆ ಸಾಗಲಿಲ್ಲ ಎಂದಿದ್ದಾರೆ. 1995ರಲ್ಲಿ ತನ್ನ ಮೊದಲ ಮಗಳು ಜನಿಸಿದ್ದು ಆಗ ಹಾಲಿನ ಬೆಲೆ 5ರೂಪಾಯಿ ಇತ್ತು. ಕೆಲವೊಮ್ಮೆ ಒಂದು ಪ್ಯಾಕ್ ಹಾಲು ಖರೀದಿ ಮಾಡಲು ನನ್ನಲ್ಲಿ ಹಣ ಇರುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಹಾಲು ಖರೀದಿಸಲು 5ರೂ. ಇರ್ಲಿಲ್ಲ; ಖ್ಯಾತ ನಟ ಅಳಲು

Profile Pushpa Kumari Mar 17, 2025 4:18 PM

ನವದೆಹಲಿ: ಶಾರುಖ್ ಖಾನ್‌ ನಟನೆಯ ಬಾಜಿಗರ್ ಚಿತ್ರವು ಸಿನಿ ಇಂಡಸ್ಟ್ರಿಯಲ್ಲೇ ಹಿಟ್ ಲಿಸ್ಟ್ ಸೇರಿತ್ತು. ಇಂದಿಗೂ ಈ ಸಿನಿಮಾ ಖ್ಯಾತಿ ಗಳಿಸಿದ್ದು ಈ ಚಿತ್ರದಲ್ಲಿ ನಟಿಸಿ ಫೇಮ್ ಗಿಟ್ಟಿಸಿಕೊಂಡಿದ್ದ ನಟ ಆದಿ ಇರಾನಿ (Actor Adi Irani) ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ ಕಷ್ಟಗಳ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಬಾಜಿಗರ್, ದಿಲ್, ವೆಲ್ಕಮ್‌ನಂತಹ ಹಿಟ್ ಸಿನಿಮಾಗಲ್ಲಿ ಕಾಣಿಸಿಕೊಂಡರೂ ತನ್ನ ವೃತ್ತಿಜೀವನ ನಿರೀಕ್ಷೆಯಂತೆ ಇರಲಿಲ್ಲ, ತನ್ನ ಮಗಳು ಜನಿಸಿದಾಗ, ಜೀವನ ನಿರ್ವಹಣೆ ಬಹಳ ಕಷ್ಟಕರವಾಗಿತ್ತು. ಹಾಲು ಲೀಟರ್‌ಗೆ 5 ರೂ. ಇದ್ದರೂ, ಅದನ್ನು ಖರೀದಿಸಲು ಸಹ ಸಾಧ್ಯವಾಗಿರಲಿಲ್ಲ ಎಂದು ಆರ್ಥಿಕ ಸಂಕಷ್ಟ ಅನುಭವಿಸಿದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಈ ಮೂಲಕ ಯಶಸ್ಸು ಯಾರಿಗೂ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಕಠಿಣ ಪರಿಶ್ರಮ ಸತತ ಪ್ರಯತ್ನದಿಂದ ಮಾತ್ರ ಅದು ಸಾಧ್ಯ ಎಂಬುದನ್ನು ನಟ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಬಾಜಿಗರ್ ಮತ್ತು ಅನಾರಿ ಚಿತ್ರಗಳ ಬಳಿಕವೂ ತಮ್ಮ ವೃತ್ತಿ ಜೀವನವು ನಿರೀಕ್ಷೆಯಂತೆ ಸಾಗಲಿಲ್ಲ ಎಂದಿದ್ದಾರೆ ಆದಿ ಇರಾನಿ. 1995ರಲ್ಲಿ ನನ್ನ ಮೊದಲ ಮಗಳು ಜನಿಸಿದ್ದು ಆಗ ಹಾಲಿನ ಬೆಲೆ 5ರೂಪಾಯಿ ಇತ್ತು ಕೆಲವೊಮ್ಮೆ ಒಂದು ಪ್ಯಾಕ್ ಹಾಲು ಖರೀದಿ ಮಾಡಲು ನನ್ನಲ್ಲಿ ಹಣ ಇರುತ್ತಿರಲಿಲ್ಲ, ನನ್ನ ಸ್ನೇಹಿತರ ಸ್ಕೂಟರ್ ಅನ್ನು ಪಡೆದು ಸಣ್ಣ ಪುಟ್ಟ ಕೆಲಸ ಮಾಡುವ ಜೊತೆಗೆ ಸೂಕ್ತ ಪಾತ್ರಗಳು ಸಿಗಬಹುದಾ ಎಂದು ಊರು ಊರು ಅಲೆಯುತ್ತಿದೆ. ಪೆಟ್ರೋಲ್ ಹಾಕಲು ಸಾಕಷ್ಟು ಹಣವಿಲ್ಲದ ಸಮಯಗಳಿದ್ದವು. ಅಂತಹ ಸಂದರ್ಭದಲ್ಲಿ ಸ್ಕೂಟರ್ ಬಿಟ್ಟು ಬಸ್ ನಲ್ಲಿ ತೆರಳಲು ಬಸ್ ನಿಲ್ದಾಣದ ಬಳಿ ಕಾಯುತ್ತಿದ್ದೆ. ಆಗ ನೀವ್ಯಾಕೆ ಬಸ್ ಹತ್ತಿದ್ದೀರಿ ಎಂದು ಜನ ಪ್ರಶ್ನಿಸಿದ್ದು ಇದೆ. ಇದನ್ನೆಲ್ಲ ಕಂಡು ಮನೆಗೆ ವಾಪಸ್ಸಾಗಿದ್ದು, ಇದೆ ಎಂದು ಜೀವನದಲ್ಲಿ ಎದುರಿಸಿದ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ.

ಇದನ್ನು ಓದಿ: Amit Shah: ಮಿಜೋರಾಂನ 7 ವರ್ಷದ ವಂಡರ್‌ ಕಿಡ್‌ಗೆ ಗಿಟಾರ್‌ ಗಿಫ್ಟ್‌ ನೀಡಿದ ಅಮಿತ್ ಶಾ

ಆದಿ ಇರಾನಿ ಅವರು ಬಾದ್ ಶಾ, ಹಮ್ ಆಪ್ಕೆ ದಿಲ್ ಮೆ ರೆಹ್ತಾಹೆ, ವೆಲ್ಕಂ ಸೇರಿದಂತೆ ಅನೇಕ ಬ್ಲಾಕ್ ಬಸ್ಟರ್ ಹಿಟ್ ಸಿನೆಮಾದಲ್ಲಿ ಅಭಿನಯಿಸಿದ್ದರೂ 2000 ಬಳಿಕ ಅವರಿಗೆ ಅಷ್ಟೇನೂ ಅವಕಾಶ ಸಿಕ್ಕಿಲ್ಲ ಎಂದು ಹೇಳಿಕೊಂಡಿದ್ದಾರೆ. 2022ರಲ್ಲಿ ಯಾಮಿ ಗೌತಮಿ ಅಭಿಯದ ಎ ಥರ್ಸ್ ಡೇ ಸಿನೆಮಾದಲ್ಲಿ ಪೋಷಕ ಪಾತ್ರದಲ್ಲಿ ಮಿಂಚಿದ್ದು ನಟ ಆದಿ ಇರಾನಿ ಅವರ ತಂಗಿ ಅರುಣ ಇರಾನಿ ಉದ್ಯಮ ರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರೂ ಇವರ ಸಂಕಷ್ಟಕ್ಕೆ ಸ್ಪಂದಿಸಲು ಬಂದಾಗಲು ಆದಿ ಇರಾನಿ ನಿರಾಕರಿಸಿದ್ದರು. ಹಾಗಾಗಿ ಜೀವನದಲ್ಲಿ ಯಶಸ್ಸಾಗಲು ಒಂಟಿಯಾಗಿ ಹೋರಾಟ ಮಾಡಬೇಕು, ಶ್ರಮ ಪಡಬೇಕು ಎಂದು ಆರ್ಥಿಕ ಸಂಕಷ್ಟ ಎದುರಿಸಿದ ಬಗ್ಗೆ ನಟ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.