ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Amit Shah: ಮಿಜೋರಾಂನ 7 ವರ್ಷದ ವಂಡರ್‌ ಕಿಡ್‌ಗೆ ಗಿಟಾರ್‌ ಗಿಫ್ಟ್‌ ನೀಡಿದ ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ಈಶಾನ್ಯ ಭಾರತಕ್ಕೆ ಭೇಟಿ ನೀಡಿದ್ದು, ಶನಿವಾರ ಮಿಜೋರಾಂನ 7 ವರ್ಷದ ಬಾಲಕಿ, ಅದ್ಭುತ ಹಾಡುಗಾರ್ತಿ ಎಸ್ತರ್ ಲಲ್ದುಹವ್ಮಿ ಹಮ್ಟೆ ವಂದೇ ಮಾತರಂ ಗೀತೆಯನ್ನು ಹಾಡಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದಾಳೆ. ಅವಳ ಈ ಸಾಧನೆಗೆ ಅಮಿತ್ ಶಾ ಸಂಗೀತ ಸಾಧನ ಗಿಟಾರ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

7 ವರ್ಷದ ವಂಡರ್‌ಕಿಡ್‌ಗೆ ಗಿಟಾರ್‌ ಗಿಫ್ಟ್‌ ನೀಡಿದ ಅಮಿತ್ ಶಾ

ಎಸ್ತರ್ ಲಲ್ದುಹವ್ಮಿ ಗೆ ಗಿಟಾರ್‌ ನೀಡುತ್ತಿರುವ ಅಮಿತ್‌ ಶಾ

Profile Vishakha Bhat Mar 16, 2025 12:25 PM

ಮಿಜೋರಾಂ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಈಶಾನ್ಯ ಭಾರತಕ್ಕೆ ಭೇಟಿ ನೀಡಿದ್ದು, ಶನಿವಾರ ಮಿಜೋರಾಂನ 7 ವರ್ಷದ ಬಾಲಕಿ, ಅದ್ಭುತ ಹಾಡುಗಾರ್ತಿ ಎಸ್ತರ್ ಲಲ್ದುಹವ್ಮಿ ಹಮ್ಟೆ ವಂದೇ ಮಾತರಂ ಗೀತೆಯನ್ನು ಹಾಡಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದಾಳೆ. ಅವಳ ಈ ಸಾಧನೆಗೆ ಅಮಿತ್ ಶಾ ಸಂಗೀತ ಸಾಧನ ಗಿಟಾರ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಹಾಗೂ ಆಕೆಯನ್ನು ಅದ್ಭುತ ಮಗು ಎಂದು ಕರೆದಿದ್ದಾರೆ. ಈ ಬಗ್ಗೆ ಗೃಹ ಸಚಿವರು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಗೃಹ ಸಚಿವ ಅಮಿತ್ ಶಾ 3 ದಿನಗಳ ಭೇಟಿಗಾಗಿ ಮಾರ್ಚ್ 14ರಿಂದ ಅಸ್ಸಾಂಗೆ ತೆರಳಿದ್ದಾರೆ.

ಭಾರತದ ಮೇಲಿರುವ ಪ್ರೀತಿ ನಮ್ಮೆಲ್ಲರನ್ನೂ ಒಂದು ಮಾಡುತ್ತಿದೆ. ಮಿಜೋರಾಂನ ಐಜ್ವಾಲ್‌ನಲ್ಲಿ ವಂಡರ್‌ ಕಿಡ್ ಎಸ್ತರ್ ಲಲ್ದುಹವ್ಮಿ ಹಮ್ಟೆ ಅವರ ಸಿರಿಕಂಠದಲ್ಲಿ ಮೂಡಿಬಂದ ವಂದೇ ಮಾತರಂ ಹಾಡಿಗೆ ಬೆರಗಾದೆ. ಏಳು ವರ್ಷದ ಬಾಲಕಿಗೆ ಭಾರತ ಮಾತೆಯ ಮೇಲಿರುವ ಪ್ರೀತಿ ಹಾಡಿನಲ್ಲಿ ವ್ಯಕ್ತವಾಗುತ್ತದೆ. ಆಕೆಯ ಹಾಡು ಕೇಳುವುದೇ ಒಂದು ಅದ್ಭುತ ಅನುಭವ" ಎಂದು ಅಮಿತ್ ಶಾ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಗೃಹ ಸಚಿವರು ಆಕೆಗೆ ಹೊಚ್ಚ ಹೊಸ ಗಿಟಾರ್ ಅನ್ನು ಉಡುಗೊರೆಯಾಗಿ ನೀಡಿ, ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದರು.



ಯಾರು ಈ ವಂಡರ್‌ ಕಿಡ್?

ವಂಡರ್‌ ಕಿಡ್‌ ಎಂದೇ ಖ್ಯಾತಿಗಳಿಸಿರುವ ಮಿಜೋರಾಂನ 7 ವರ್ಷದ ಬಾಲಕಿ, ಎಸ್ತರ್ ಲಲ್ದುಹವ್ಮಿ ಹಮ್ಟೆ 2020ರಲ್ಲಿ 'ಮಾ ತುಜೇ ಸಲಾಂ' ಮೂಲಕ ಮೊಟ್ಟ ಮೊದಲ ಬಾರಿ ದೇಶಾದ್ಯಂತ ಜನಪ್ರಿಯತೆ ಗಳಿಸಿದಳು. ಆಕೆ ಹಾಡಿದ್ದ ಆ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಕೆಯ ವಿಭಿನ್ನ ಕಂಠಸಿರಿ, ಭಾವಪರವಶತೆ, ಹಾಡಿನಲ್ಲಿ ಬೆರೆತ ದೇಶಭಕ್ತಿ ಮೆಚ್ಚುಗೆ ಗಳಿಸಿತ್ತು. ಇದಾದ ನಂತರ ಬಾಲಕಿಗೆ ಮಣಿಪುರ ಸರ್ಕಾರ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿತು. ರಾಜ್ಯಪಾಲರಿಂದಲೂ ವಿಶೇಷ ಮೆಚ್ಚುಗೆ ಗಳಿಸಿದ್ದಳು.

ಈ ಸುದ್ದಿಯನ್ನೂ ಓದಿ: Manipur Fraud Case: ಅಮಿತ್‌ ಶಾ ಪುತ್ರ ಎಂದು ಶಾಸಕರಿಗೆ ನಕಲಿ ಸಚಿವಗಿರಿ ಆಫರ್‌ ; ಮೂವರು ವಂಚಕರ ಬಂಧನ

ಗೃಹ ಸಚಿವ ಅಮಿತ್ ಶಾ 3 ದಿನಗಳ ಭೇಟಿಗಾಗಿ ಮಾರ್ಚ್ 14ರಿಂದ ಅಸ್ಸಾಂಗೆ ತೆರಳಿದ್ದಾರೆ. ಶನಿವಾರ (ಮಾರ್ಚ್‌ 15)ರಂದು ಮಿಜೋರಾಂಗೆ ಭೇಟಿ ನೀಡಿದರು. ಅಸ್ಸಾಂ ರೈಫಲ್ಸ್‌ನಿಂದ ರಾಜ್ಯ ಸರ್ಕಾರಕ್ಕೆ ಭೂಮಿ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, ಜನ ಸೇವೆಯಲ್ಲಿ ಭಾಗಿಯಾಗಿರುವ ಅಸ್ಸಾಂ ರೈಫಲ್ಸ್‌ ಅನ್ನು ಶ್ಲಾಘಿಸಿದರು. "ಅಸ್ಸಾಂ ರೈಫಲ್ಸ್ ಭ್ರಾತೃತ್ವ, ಭದ್ರತೆಯ ಮಾರ್ಗದರ್ಶಿ ತತ್ವದಡಿ ಮಿಜೋರಾಂ ಜನರ ಸೇವೆ ಮಾಡುತ್ತಿದೆ. ಇಂದು, ಜನರ ಅನುಕೂಲಕ್ಕಾಗಿ ತನ್ನ ಭೂಮಿಯ ಗಮನಾರ್ಹ ಭಾಗವನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಿದೆ. ಇದರೊಂದಿಗೆ ರೈಫಲ್ಸ್ ಜನರಿಗೆ ತನ್ನ ಬದ್ಧತೆಯನ್ನು ತೋರಿಸಿದೆ ಎಂದು ಹೇಳಿದ್ದಾರೆ.