ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆರ್ಸಿಲಾರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ, ಕಂಟಿನ್ಯುಯಸ್ ಗಾಲ್ವನಿಜಿಂಗ್ ಲೈನ್ (ಸಿಜಿಎಲ್‌) ಪ್ರಾರಂಭಿಸುವುದಾಗಿ ಘೋಷಣೆ

ಹೊಸ CGL, ತನ್ನ ಮೂಲ ಸಂಸ್ಥೆಗಳಾದ ಆರ್ಸಿಲಾರ್ ಮಿತ್ತಲ್ ಮತ್ತು ನಿಪ್ಪಾನ್ ಸ್ಟೀಲ್‌ನ ಸುದೀರ್ಘ ಜಾಗತಿಕ ನೈಪುಣ್ಯತೆಯಿಂದ ಅತ್ಯಾಧುನಿಕ ತಂತ್ರಜ್ಞಾನವನ್ನು ಪಡೆದುಕೊಂಡು, ಉನ್ನತ-ದರ್ಜೆಯ, ವಿಶೇಷ ಸ್ಟೀಲ್‌ಗಗಿ ಬಹುತೇಕವಾಗಿ ಆಮದುಗಳ ಮೇಲೆ ಅವಲಂಬಿತವಾಗಿರುವ ಆಟೋಮೋಟಿವ್ ಕ್ಷೇತ್ರಕ್ಕೆ ಒಂದು ಮಹತ್ತರ ಪರಿವರ್ತನೆ ತರಲು ಸಜ್ಜಾಗಿದೆ. ಇದು, ನಿಪ್ಪಾನ್ ಸ್ಟೀಲ್‌ನ ಪರವಾನಗಿ ಪಡೆದ ಉತ್ಪನ್ನಗಳೂ ಒಳಗೊಂಡಂತೆ, ಗಾಲ್ವನೈಜ್ಡ್ (GI) ಮತ್ತು ವಾಲ್ವ ನ್ನೀಲ್ಡ್ (GA) ಕೋಟಿಂಗ್ ಮಾಡಲಾದ ಮಟ್ಟಸ ಸ್ಟೀಲ್‌ಗಳನ್ನು ಉತ್ಪಾದಿಸಲಿದೆ.

ಹೊಸ ಅತ್ಯಾಧುನಿಕ ಕಂಟಿನ್ಯುಯಸ್ ಗಾಲ್ವನಿಜಿಂಗ್ ಲೈನ್ ಪ್ರಾರಂಭ

Profile Ashok Nayak Jul 17, 2025 11:58 AM

ಬೆಂಗಳೂರು: ಆರ್ಸಿಲಾರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ (AM/NS India) ತನ್ನ ಪ್ರಮುಖ ಕಾರ್ಖಾನೆಯಲ್ಲಿ ಹೊಸ ಅತ್ಯಾಧುನಿಕ ಕಂಟಿನ್ಯುಯಸ್ ಗಾಲ್ವನಿಜಿಂಗ್ ಲೈನ್ (CGL) ಪ್ರಾರಂಭಿಸಿ ರುವುದಾಗಿ ಘೋಷಿಸಿದೆ.

ಈ ಬೆಳವಣಿಗೆಯು, AM/NS ಇಂಡಿಯಾವನ್ನು, ಸದಾ ಬದಲಾಗುತ್ತಿರುವ ಆಟೋಮೋಟಿವ್ ಅಪ್ಲಿಕೇಶನ್‌ಗಳಿಗಾಗಿ ಸುರಕ್ಷಿತವಾದ, ಬಾಳಿಕೆ ಬರುವ ಮತ್ತು ದೀರ್ಘಕಾಲ ಇರುವ 1180 ಮೆಘಾ ಫೇಸಲ್‌ (MPa) ವರೆಗಿನ ಶಕ್ತಿ ಮಟ್ಟಗಳಿರುವ ಅಡ್ವಾನ್ಡ್ ಹೈ-ಸ್ಟ್ರೆನ್ತ್ ಸ್ಟೀಲ್(AHSS) ಉತ್ಪಾದಿಸುವ ಸಾಮರ್ಥ್ಯದ ಭಾರತದ ಏಕೈಕ ಆಧುನಿಕ CGL ಲೈನ್ ಆಗಿದೆ.

ಈ ಕುರಿತು ಮಾತನಾಡಿದ ಆರ್ಸಿಲಾರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾದ (AM/NS India) ಚೀಫ್ ಎಕ್ಸಿಕ್ಯೂಟಿವ್ ಆಫಿಸರ್ ಶ್ರೀ ದಿಲಿಪ್ ಊಮ್ಮನ್, ಈ ಪ್ರಾರಂಭವು, ಮಹತ್ವಾಕಾಂಕ್ಷೆಯ 60,000 ಸಾವಿರ ಕೋಟಿ ವಿಸ್ತರಣಾ ಯೋಜನೆಯ ಪ್ರಮುಖ ಅನುಷ್ಠಾನವೂ ಆಗಿದ್ದು, ಸಂಸ್ಥೆಗಾಗಿ ಮಹತ್ತರವಾದ ಚಲನೆಯೂ ಆಗಿದೆ ಮತ್ತು ಇದನ್ನು ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2022ದಲ್ಲಿ ಉದ್ಘಾಟಿಸಿದ್ದರು. ಸಂಯೋಜಿತ ಸ್ಟೀಲ್ ಕಾರ್ಖಾನೆಯಲ್ಲಿರುವ ಈ ವಿಸ್ತರಣಾ ಯೋಜನೆಯು ಸದಾ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ಸ್ಟೀಲ್ ಗ್ರೇಡ್‌ಗಳ ವೈವಿಧ್ಯಮಯ ಪೋರ್ಟ್‌ಫೋಲಿಯೋದಾದ್ಯಂತ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿ ಹೊಂದಿದೆ.

ಇದನ್ನೂ ಓದಿ: Bangalore Stampede: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತದಲ್ಲಿ ಮೃತಪಟ್ಟವರ ವಿವರ ಇಲ್ಲಿದೆ

ಹೊಸ CGL, ತನ್ನ ಮೂಲ ಸಂಸ್ಥೆಗಳಾದ ಆರ್ಸಿಲಾರ್ ಮಿತ್ತಲ್ ಮತ್ತು ನಿಪ್ಪಾನ್ ಸ್ಟೀಲ್‌ನ ಸುದೀರ್ಘ ಜಾಗತಿಕ ನೈಪುಣ್ಯತೆಯಿಂದ ಅತ್ಯಾಧುನಿಕ ತಂತ್ರಜ್ಞಾನವನ್ನು ಪಡೆದುಕೊಂಡು, ಉನ್ನತ-ದರ್ಜೆಯ, ವಿಶೇಷ ಸ್ಟೀಲ್‌ಗಗಿ ಬಹುತೇಕವಾಗಿ ಆಮದುಗಳ ಮೇಲೆ ಅವಲಂಬಿತವಾಗಿರುವ ಆಟೋಮೋಟಿವ್ ಕ್ಷೇತ್ರಕ್ಕೆ ಒಂದು ಮಹತ್ತರ ಪರಿವರ್ತನೆ ತರಲು ಸಜ್ಜಾಗಿದೆ. ಇದು, ನಿಪ್ಪಾನ್ ಸ್ಟೀಲ್‌ನ ಪರವಾನಗಿ ಪಡೆದ ಉತ್ಪನ್ನಗಳೂ ಒಳಗೊಂಡಂತೆ, ಗಾಲ್ವನೈಜ್ಡ್ (GI) ಮತ್ತು ವಾಲ್ವ ನ್ನೀಲ್ಡ್ (GA) ಕೋಟಿಂಗ್ ಮಾಡಲಾದ ಮಟ್ಟಸ ಸ್ಟೀಲ್‌ಗಳನ್ನು ಉತ್ಪಾದಿಸಲಿದೆ. ಈ ವಿನೂತನ ಕೊಡುಗೆಗಳು, ಏಪ್ರಿಲ್ 2027ರಲ್ಲಿ ಜಾರಿಗೆ ಬರಲಿರುವ ಭಾರತದ ಕಾರ್ಪೊರೇಟ್ ಸರಾಸರಿ ಇಂಧನ ಸಾಮರ್ಥ್ಯ (CAFE) ಹಂತ IIIರ ನಿಯಮಗಳ ಪ್ರಮುಖ ಅವಶ್ಯಕತೆಗಳಿಗಾಗಿ ಆಧುನಿಕ ಮೊಬಿಲಿಟಿ ಪರಿಹಾರಗಳಾದ ಹಗುರ ತೂಕ ಮತ್ತು ವರ್ಧಿತ ಸುರಕ್ಷತೆ ಮೂಲಕ ಅತ್ಯುತ್ಕೃಷ್ಟ ಮರುಬಳಕೆ, ಉನ್ನತ-ರಚನೆ ಇಂಧನ ಸಾಮರ್ಥ್ಯ ಒದಗಿಸಲಿವೆ.

ವಿಸ್ತರಣಾ ಯೋಜನೆಯು, ಪ್ರಸ್ತುತ ಇರುವ 9 MTPA ದಿಂದ 15 MTPA ಗೆ ಸಂಸ್ಥೆಯ ಸಾಮರ್ಥ್ಯ ವನ್ನು ಹೆಚ್ಚಿಸಲು ಹಾಗೂ ತನ್ನ ಹಾಝಿರಾ ಕಾರ್ಖಾನೆಯಲ್ಲಿ 24 MTPA ತಲುಪುವ ಗುರಿಯೊಂದಿಗೆ ಉತ್ತಮ ಪ್ರಗತಿ ಹೊಂದುತ್ತಿದೆ. ಇದು, ಅಪ್‌ಸ್ಟ್ರೀಮ್ ಮತ್ತು ಡೌನ್‌ಸ್ಟ್ರೀಮ್ ಸ್ಟೀಲ್ ಉತ್ಪಾದನಾ ಸಾಮರ್ಥ್ಯಗಳನ್ನು ಒಳಗೊಂಡಿದೆ.

ಪ್ರತ್ಯೇಕವಾಗಿ, ಸಂಸ್ಥೆಯು ಆಂಧ್ರಪ್ರದೇಶದಲ್ಲಿ ಒಂದು ಸಂಯೋಜಿತ ಉಕ್ಕಿನ ಕಾರ್ಖಾನೆ ಸ್ಥಾಪಿಸ ಲಿದ್ದು, ಈಗಾಗಲೇ ಇದಕ್ಕಾಗಿ ಭೂಸ್ವಾಧೀನವೂ ಪ್ರಾರಂಭವಾಗಿದೆ. ಒದಿಶಾದಲ್ಲೂ ಸಂಸ್ಥೆಯು ಮಹತ್ತರವಾದ ಅಸ್ತಿತ್ವ ಹೊಂದಿದ್ದು ಅಲ್ಲೂ ಕೂಡ ಸಂಯೋಜಿತ ಉಕ್ಕಿನ ಕಾರ್ಖಾನೆಗಳನ್ನು ಸ್ಥಾಪಿಸುವ ಗುರಿ ಹೊಂದಿದೆ.

ಸಮಾನಾಂತರವಾಗಿ ಸಂಸ್ಥೆಯು, ಸ್ಟೀಲ್ ತಯಾರಿಕೆಯ ಡೀಕಾರ್ಬನೈಜೇಶನ್ (ಅನಿಂಗಾಲೀಕರಣ) ಅನ್ನು ವರ್ಧಿಸುವ ತನ್ನ ಗಮನವನ್ನು ಇನ್ನಷ್ಟು ಚುರುಕುಗೊಳಿಸಿದೆ. ಇದು, ತನ್ನ ಎನರ್ಜಿ ಮಿಕ್ಸ್‌ಗಳಲ್ಲಿ ನವೀಕರಿಸಬಲ್ಲ ವಸ್ತುಗಳನ್ನು ಸಂಯೋಜಿಸಿ, ಶಕ್ತಿ-ಸಾಮರ್ಥ್ಯ ತಂತ್ರಜ್ಞಾನಗಳನ್ನು ಅನುಷ್ಠಾನಗೊಳಿಸಿ ಭಾರತದ ಹವಾಮಾನ ಗುರಿಗಳಿಗೆ ಅನುಗುಣವಾಗಿರುವ ಕಡಿಮೆ-ಇಂಗಾಲ ಮಾರ್ಗಪಥಗಳ ಶ್ರೇಣಿಯನ್ನು ಉತ್ಪಾದಿಸುವ ಆಲೋಚನೆ ನಡೆಸುತ್ತಿದೆ.