ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಹೊಸ ಏಸರ್ (Acer) ಎಲೆಕ್ಟ್ರಿಕ್ ವಾಹನ ಮಳಿಗೆ ಆರಂಭ

ಭಾರತದಾದ್ಯಂತ 15 ನಗರಗಳಲ್ಲಿ ಇಬೈಕ್-ಗೋನ ಗಮನಾರ್ಹ ವಿಸ್ತರಣೆಯನ್ನು ಘೋಷಿಸಲು ನಾವು ಹರ್ಷಿಸುತ್ತೇವೆ,  ವಿವಿಧ ರಾಜ್ಯಗಳಲ್ಲಿ ಏಸರ್ ಎಲೆಕ್ಟ್ರಿಕ್ ವಾಹನಗಳ ಚಿಲ್ಲರೆ ಮಾರಾಟ ಮಳಿಗೆಗಳನ್ನು ಸ್ಥಾಪಿಸುವ ನಮ್ಮ ಕಾರ್ಯತಾಂತ್ರಿಕ ವಿಧಾನದ ಮೂಲಕ ಇದು ಕೆಲವೇ ತಿಂಗಳುಗಳಲ್ಲಿ ಸಾಧ್ಯವಾಗಿದೆ.

ಬೆಂಗಳೂರಿನಲ್ಲಿ ಹೊಸ ಏಸರ್ (Acer) ಎಲೆಕ್ಟ್ರಿಕ್ ವಾಹನ ಮಳಿಗೆ ಆರಂಭ

Profile Ashok Nayak Jul 17, 2025 12:29 PM

ಬೆಂಗಳೂರು: ಏಸರ್‌ನ ಅಧಿಕೃತ ಪರವಾನಗಿದಾರ ಮತ್ತು ಭಾರತದ ಪ್ರಮುಖ ಎಲೆಕ್ಟ್ರಿಕ್ ಮೊಬಿಲಿಟಿ ನಾವೀನ್ಯಕಾರರಲ್ಲಿ ಮುಂಚೂಣಿಯಲ್ಲಿರುವ ಇಬೈಕ್-ಗೋ ಪ್ರೈವೇಟ್ ಲಿಮಿಟೆಡ್, ಬೆಂಗಳೂರಿನಲ್ಲಿ ತನ್ನ ಏಸರ್ ಎಲೆಕ್ಟ್ರಿಕ್ ವೆಹಿಕಲ್ಸ್ ರಿಟೇಲ್ ಮಳಿಗೆಯನ್ನು ತೆರೆಯುವುದಾಗಿ ಘೋಷಿಸಿದ್ದು- ಇದು ಭಾರತದಾದ್ಯಂತ ಪ್ರಾರಂಭವಾಗುತ್ತಿರುವ 15 ಹೊಸ ಮಳಿಗೆಗಳಲ್ಲಿ ಒಂದಾ ಗಿದೆ. ಈ 15 ನಗರಗಳ ವಿಸ್ತರಣೆಯ ಭಾಗವಾಗಿರುವ ಬೆಂಗಳೂರಿನ ಮಳಿಗೆಯು, ಇಬೈಕ್-ಗೋ ಮತ್ತು ಏಸರ್ ಜೊತೆಗಿನ ವಿಶೇಷ ಪರವಾನಗಿ ಪಾಲುದಾರಿಕೆಯಡಿಯಲ್ಲಿ ಅಭಿವೃದ್ಧಿಪಡಿಸಲಾದ ಏಸರ್-ಬ್ರಾಂಡೆಡ್ ಎಲೆಕ್ಟ್ರಿಕ್ ವಾಹನಗಳನ್ನು ಪ್ರದರ್ಶಿಸಲಿದೆ.

ತಾಂತ್ರಿಕವಾಗಿ ಮುಂದುವರೆದಿರುವ ಮತ್ತು ಪರಿಸರ ಪ್ರಜ್ಞಾವಂತ ನಾಗರಿಕರಿಗೆ ಹೆಸರುವಾಸಿ ಯಾಗಿರುವ ಬೆಂಗಳೂರು, ಇಬೈಕ್-ಗೋನ ಮುಂದುವರಿದ ಎಲೆಕ್ಟ್ರಿಕ್ ಸಂಚಾರ ಪರಿಹಾರಗಳಿಗೆ ಪರಿಪೂರ್ಣ ವೇದಿಕೆಯನ್ನು ಒದಗಿಸುತ್ತದೆ. ಸುಸ್ಥಿರ ನಗರ ಸಾರಿಗೆಯ ಮೇಲೆ ಪ್ರಸಕ್ತವಾಗಿ ಹೆಚ್ಚು ತ್ತಿರುವ ಗಮನದೊಂದಿಗೆ, ಈ ಹೊಸ ಮಳಿಗೆಗಳು ದೈನಂದಿನ ಪ್ರಯಾಣ ಮತ್ತು ಮನ ರಂಜನಾ ಅಗತ್ಯಗಳನ್ನು ಪೂರೈಸಲು ಇ-ಸ್ಕೂಟರ್‌ಗಳು, ಇ-ಬೈಕ್‌ಗಳು ಮತ್ತು ಇ-ಸೈಕಲ್‌ಗಳಿಗೆ ಪ್ರವೇಶವನ್ನು ಒದಗಿಸುತ್ತದೆ. ಈ ಉತ್ಪನ್ನಗಳನ್ನು ಭಾರತೀಯ ರಸ್ತೆ ಪರಿಸ್ಥಿತಿಗಳಿಗೆ ಅನುಗುಣವಾಗಿ ವಿನ್ಯಾಸ ಗೊಳಿಸಲಾಗಿದ್ದು, ಜಾಗತಿಕ ಮಾನದಂಡಗಳನ್ನು ಅನುಸರಿಸುತ್ತವೆ, ಮತ್ತು ಬೆಂಗಳೂರಿನ ವೈವಿಧ್ಯ ಮಯ ಪ್ರಯಾಣಿಕರ ನೆಲೆಗೆ ಇದೊಂದು ಅಮೂಲ್ಯ ಸೇರ್ಪಡೆಯಾಗಲಿದೆ.

ಇದನ್ನೂ ಓದಿ: Vishweshwar Bhat Column: ವಿಮಾನ ನಿರ್ವಹಣಾ ತಂತ್ರಜ್ಞರು

ಇಬೈಕ್-ಗೋನ (eBikeGo) ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಹರಿಕಿರಣ್ ಮಾತನಾಡುತ್ತಾ, " ಭಾರತದಾದ್ಯಂತ 15 ನಗರಗಳಲ್ಲಿ ಇಬೈಕ್-ಗೋನ ಗಮನಾರ್ಹ ವಿಸ್ತರಣೆಯನ್ನು ಘೋಷಿಸಲು ನಾವು ಹರ್ಷಿಸುತ್ತೇವೆ,  ವಿವಿಧ ರಾಜ್ಯಗಳಲ್ಲಿ ಏಸರ್ ಎಲೆಕ್ಟ್ರಿಕ್ ವಾಹನಗಳ ಚಿಲ್ಲರೆ ಮಾರಾಟ ಮಳಿಗೆಗಳನ್ನು ಸ್ಥಾಪಿಸುವ ನಮ್ಮ ಕಾರ್ಯತಾಂತ್ರಿಕ ವಿಧಾನದ ಮೂಲಕ ಇದು ಕೆಲವೇ ತಿಂಗಳುಗಳಲ್ಲಿ ಸಾಧ್ಯವಾಗಿದೆ. ಈ ತ್ವರಿತ ವಿಸ್ತರಣೆಯು ಪರಿಸರ ಸ್ನೇಹಿ ಸಾರಿಗೆಗೆ ನಮ್ಮ ಬದ್ಧತೆಯನ್ನು ಒತ್ತಿಹೇಳುತ್ತದೆ, ಮತ್ತು ಇಬೈಕ್-ಗೋಅನ್ನು ಭಾರತೀಯ EV ಮಾರುಕಟ್ಟೆಯಲ್ಲಿ ಪ್ರಮುಖ ಸ್ವರ್ಧಿಯನ್ನಾಗಿ ಮಾಡುವುದರ ಜೊತೆಗೆ, ಎಲ್ಲಾ ಭಾರತೀಯರ ಹಸಿರು ಮತ್ತು ಸುಸ್ಥಿರ ಭವಿಷ್ಯವನ್ನು ಉತ್ತೇಜಿಸುತ್ತದೆ. ಹಾಗೇ ಇದು ನಮ್ಮ ಇ-ಸೈಕಲ್‌ಗಳು, ಇ-ಸ್ಕೂಟರ್‌ಗಳು ಮತ್ತು ಇ-ಬೈಕ್‌ಗಳು ಸೇರಿದಂತೆ ಇಬೈಕ್-ಗೋನ ಹೊಚ್ಚ ಹೊಸ e-2Ws ಉತ್ಪನ್ನ ಗಳ ಶ್ರೇಣಿಯ ಮೇಲೆ ಬೆಳಕು ಹರಿಸಲು ನಮಗೆ ಅನುವು ಮಾಡಿಕೊಡುತ್ತದೆ" ಎಂದು ಹೇಳಿದರು.

ಮುಂದುವರೆಸಿ "ಇಬೈಕ್-ಗೋನ ಮಳಿಗೆ ವಿಸ್ತರಣೆಗೆ ನಾವು ಪಡೆದಿರುವ ಅಗಾಧ ಪ್ರತಿಕ್ರಿಯೆಯು ಮತ್ತು ಏಸರ್ ಬ್ರ್ಯಾಂಡ್‌ಗೆ ನಾವು ಪಡೆದಿರುವ ಉತ್ತಮ ಪ್ರತಿಕ್ರಿಯೆಯು, ನಮ್ಮ ಬಲವಾದ ಬ್ರ್ಯಾಂಡ್ ಆಕರ್ಷಣೆಗೆ ಸಾಕ್ಷಿಯಾಗಿದ್ದು, ನಮ್ಮ ವಿಶ್ವಾಸಾರ್ಹತೆಯ ಬಗ್ಗೆ ಎತ್ತಿ ಹೇಳುತ್ತದೆ. ಭಾರತೀಯ ರಸ್ತೆಗಳು ಮತ್ತು ಗ್ರಾಹಕರ ಅವಶ್ಯಕತೆಗಳಿಗೆ ಅನುಗುಣವಾಗಿರುವ ನಮ್ಮ ವಿಶ್ವಾಸಾರ್ಹ EV ಗಳ ವ್ಯಾಪಕ ಶ್ರೇಣಿಯು,  ವಿಶ್ವ ದರ್ಜೆಯ ಮಾನದಂಡಗಳನ್ನು ಹೊಂದಿದೆ.  ನಾವು ನಮ್ಮ ಚಿಲ್ಲರೆ ಮಳಿಗೆಗಳ ಜಾಲವನ್ನು ದೇಶಾದ್ಯಂತ ಇನ್ನಷ್ಟು ವಿಸ್ತರಿಸಿ, ಬೆಳೆಸುವದನ್ನು ಮುಂದುವರಿಸು ತ್ತೇವೆ" ಎಂದು ಹೇಳಿದರು.

ಹೊಸ ಏಸರ್ ಎಲೆಕ್ಟ್ರಿಕ್ ವಾಹನ ಮಳಿಗೆಯು, ವಿಳಾಸ: ನಂ 8, ಕೃಷ್ಣ ನಗರ, ಇಂಡಸ್ಟ್ರಿಯಲ್ ಲೇಔಟ್, ಹೊಸೂರು ರಸ್ತೆ, 9, ಚಿಕ್ಕು ಲಕ್ಷ್ಮಯ್ಯ ಲೇಔಟ್, ಆಡುಗೋಡಿ, ಬೆಂಗಳೂರು, ಕರ್ನಾಟಕ - 560029 ನಲ್ಲಿ ಆರಂಭವಾಗಿದೆ. ಏಸರ್‌ನ ಇ-ಮೊಬಿಲಿಟಿ ಕೊಡುಗೆಗಳ ಸಂಪೂರ್ಣ ಶ್ರೇಣಿಯನ್ನು, ಉಚಿತ ಟೆಸ್ಟ್ ರೈಡ್‌ಗಳನ್ನು ಮತ್ತು ಭವಿಷ್ಯದ ನಗರ ಪ್ರಯಾಣದ ಅನುಭವವನ್ನು ನೇರವಾಗಿ ಅನುಭವಿಸಲು, ನೀವು ಈ ಮಳಿಗೆಗೆ ಭೇಟಿ ನೀಡಬಹುದು. ಆರಂಭಿಕ ರಿಯಾಯಿತಿಯ ಭಾಗವಾಗಿ ಇ-ಸೈಕಲ್‌ಗಳು ₹35,999 ರಿಂದ ಪ್ರಾರಂಭವಾಗುತ್ತಿದ್ದು, ಮುಂಬರುವ ಇ-ಸ್ಕೂಟರ್‌ಗಳು ಮತ್ತು ಇ-ಬೈಕ್‌ಗಳ ಜೊತೆಗೆ ಇದು ದೈನಂದಿನ ಸವಾರರಿಗೆ ಉತ್ತಮ ಆಯ್ಕೆಯಾಗಿದೆ.