ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rashmika vs Anushka: ಬಾಕ್ಸ್‌ ಆಫೀಸ್‌ನಲ್ಲಿ ಕನ್ನಡತಿಯರ ಬಿಗ್‌ ಫೈಟ್‌; ಒಂದೇ ದಿನ ʼದಿ ಗರ್ಲ್‌ ಫ್ರೆಂಡ್‌ʼ-ʼಘಾಟಿʼ ರಿಲೀಸ್‌?

The Girlfriend vs Ghaati: ಬಹು ನಿರೀಕ್ಷಿತ ತೆಲುಗಿನ ʼದಿ ಗರ್ಲ್‌ ಫ್ರೆಂಡ್‌ʼ ಮತ್ತು ʼಘಾಟಿʼ ಚಿತ್ರಗಳು ಒಂದೇ ದಿನ ತೆರೆಗೆ ಬರುವ ಸಾಧ್ಯತೆ ಇದೆ. ಹೀಗಾದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಅನುಷ್ಕಾ ಶೆಟ್ಟಿ ಮಧ್ಯೆ ಬಾಕ್ಸ್‌ ಆಫೀಸ್‌ನಲ್ಲಿ ಬಿಗ್‌ ಪೈಟ್‌ ನಡೆಯಲಿದೆ ಎಂದು ಟಾಲಿವುಡ್‌ ತಜ್ಞರು ಊಹಿಸಿದ್ದಾರೆ.

ಒಂದೇ ದಿನ ರಶ್ಮಿಕಾ, ಅನುಷ್ಕಾ ಶೆಟ್ಟಿ ಚಿತ್ರ ತೆರೆಗೆ?

Profile Ramesh B Jul 17, 2025 5:47 PM

ಹೈದರಾಬಾದ್‌: ಸದ್ಯ ದೇಶದ ಗಮನ ಸೆಳೆದ ತೆಲುಗಿನ ಪ್ಯಾನ್‌ ಇಂಡಿಯಾ ಚಿತ್ರಗಳ ಪೈಕಿ ʼದಿ ಗರ್ಲ್‌ ಫ್ರೆಂಡ್‌ʼ (The Girlfriend) ಮತ್ತು ʼಘಾಟಿʼ (Ghaati) ಮೊದಲ ಸಾಲಿನಲ್ಲಿ ನಿಲ್ಲುತ್ತವೆ. ಈಗಾಗಲೇ ರಿಲೀಸ್‌ ಆಗಿರುವ ಈ ಚಿತ್ರಗಳ ಫಸ್ಟ್‌ ಲುಕ್‌, ಟೀಸರ್‌ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದೆ. ವಿಶೇಷವೆಂದರೆ ಇವೆರಡೂ ಮಹಿಳಾ ಪ್ರಧಾನ ಚಿತ್ರಗಳು. ಅಲ್ಲದೆ ಎರಡು ಚಿತ್ರಗಳಲ್ಲಿ ನಾಯಕಿಯರಾಗಿ ಕನ್ನಡತಿಯರೇ ನಟಿಸಿದ್ದಾರೆ. ʼದಿ ಗರ್ಲ್‌ ಫ್ರೆಂಡ್‌ʼ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಹೀರೋಯಿನ್‌ ಆಗಿ ಕಾಣಿಸಿಕೊಂಡಿದ್ದು, ಕರಾವಳಿ ಮೂಲದ ಅನುಷ್ಕಾ ಶೆಟ್ಟಿ (Anushka Shetty) ʼಘಾಟಿʼ ಸಿನಿಮಾದ ನಾಯಕಿ. ಸದ್ಯ ಬಂದಿರುವ ಮಾಹಿತಿಯ ಪ್ರಕಾರ ಇವೆರಡು ಚಿತ್ರಗಳು ಒಂದೇ ದಿನ ತೆರೆಗೆ ಬರಲಿವೆಯಂತೆ. ಆ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ಕನ್ನಡತಿಯರ ಮಧ್ಯೆ ತೀವ್ರ ಪೈಪೋಟಿ (Rashmika vs Anushka) ನಡೆಯಲಿದೆ ಎನ್ನಲಾಗುತ್ತಿದೆ.

123 ತೆಲುಗು ಸುದ್ದಿಸಂಸ್ಥೆ ವರದಿ ಮಾಡಿರುವ ಪ್ರಕಾರ ಈ ಎರಡು ಚಿತ್ರಗಳು ಸೆ. 5ರಂದು ತೆರೆಗೆ ಬರಲಿವೆ. ಅದಾಗ್ಯೂ ಚಿತ್ರತಂಡಗಳು ಇದುವರೆಗೆ ಅಧಿಕೃತವಾಗಿ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಒಂದುವೇಳೆ ಈ ಸುದ್ದಿ ನಿಜವಾದರೆ ಎರಡೂ ಚಿತ್ರಗಳ ಕಲೆಕ್ಷನ್‌ ಮೇಲೆ ಇದು ಪರಿಣಾಮ ಬೀರಲಿದೆ ಎನ್ನುತ್ತಾರೆ ಬಾಕ್ಸ್‌ ಆಫೀಸ್‌ ಪಂಡಿತರು.

ಈ ಸುದ್ದಿಯನ್ನೂ ಓದಿ: Ghaati Movie: ಅನುಷ್ಕಾ ಶೆಟ್ಟಿ ಫ್ಯಾನ್ಸ್‌ಗೆ ನಿರಾಸೆ; ʼಘಾಟಿʼ ಚಿತ್ರದ ರಿಲೀಸ್‌ ಡೇಟ್‌ ಮತ್ತೆ ಮುಂದೂಡಿಕೆ



ʼದಿ ಗರ್ಲ್‌ ಫ್ರೆಂಡ್‌ʼ

ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್‌ಗೆ ಪ್ರವೇಶಿಸಿ ಇದೀಗ ದೇಶದ ಬಹು ಬೇಡಿಕೆಯ ನಟಿಯಾಗಿರುವ ರಶ್ಮಿಕಾ ಸದ್ಯ ʼಕುಬೇರʼ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಹೀಗಾಗಿ ಅವರ ಮುಂಬರುವ ʼದಿ ಗರ್ಲ್‌ ಫ್ರೆಂಡ್‌ʼ ಸಿನಿಮಾ ನಿರೀಕ್ಷೆ ಮೂಡಿಸಿದೆ. ಜು. 16ರಂದು ಈ ಚಿತ್ರದ ಮೊದಲ ಹಾಡು ರಿಲೀಸ್‌ ಆಗಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ರಾಹುಲ್ ರವೀಂದ್ರನ್ ನಿರ್ದೇಶನದ ʼದಿ ಗರ್ಲ್‌ ಫ್ರೆಂಡ್‌ʼ ಪ್ರೇಮಕಥೆಯನ್ನು ಒಳಗೊಂಡಿದ್ದು, ರಶ್ಮಿಕಾ ಪಾತ್ರ ಪ್ರಮುಖ ಆಕರ್ಷಣೆ ಎನ್ನಲಾಗುತ್ತಿದೆ. ಅಲ್ಲದೆ ಈ ಚಿತ್ರದಲ್ಲಿ ನಾಯಕನಾಗಿ ಮತ್ತೋರ್ವ ಸ್ಯಾಂಡಲ್‌ವುಡ್‌ ಪ್ರತಿಭೆ ದೀಕ್ಷಿತ್‌ ಶೆಟ್ಟಿ ನಟಿಸಿದ್ದಾರೆ. ಹೀಗಾಗಿ ಇದೊಂದು ಕನ್ನಡಿಗರ ಚಿತ್ರ ಎನ್ನಲಡ್ಡಿಯಿಲ್ಲ. ಚಿತ್ರ ಆರಂಭವಾಗಿ ವರ್ಷಗಳೇ ಉರುಳಿದ್ದು, ಸದ್ಯ ಬಿಡುಗಡೆ ಹಂತಕ್ಕೆ ಬಂದಿದೆ. ಈ ಚಿತ್ರದ ಮೂಲಕ ಮತ್ತೊಮ್ಮೆ ಗೆಲುವಿನ ಓಟ ಮುಂದುವರಿಸುವ ಭರವಸೆಯಲ್ಲಿದ್ದಾರೆ ರಶ್ಮಿಕಾ. ಸದ್ಯದಲ್ಲೇ ಬಿಡಗಡೆ ದಿನಾಂಕ ಘೋಷಣೆಯಾಗಲಿದೆ.



ʼಘಾಟಿʼ

ಪವರ್‌ಫುಲ್‌ ಪಾತ್ರಗಳ ಮೂಲಕ ತೆಲುಗು ಪ್ರೇಕ್ಷಕರ ಫೆವರೇಟ್‌ ಎನಿಸಿಕೊಂಡಿರುವ ಕನ್ನಡತಿ ಅನುಷ್ಕಾ ಶೆಟ್ಟಿ ಬಹಳ ದಿನಗಳ ಬಲಿಕ ತೆರೆ ಮೇಲೆ ಬರುತ್ತಿರುವ ಚಿತ್ರ ʼಘಾಟಿʼ. ಈಗಾಗಲೇ ಹೊರ ಬಿದ್ದಿರುವ ಈ ಸಿನಿಮಾದ ಟೀಸರ್‌ ಕುತೂಹಲ ಮೂಡಿಸಿದ್ದು, ಅನುಷ್ಕಾ ಅವರ ರಗಡ್‌ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದಾ ಹೊಸತನ ಪಾತ್ರ ನಿರ್ವಹಿಸುವ ಅವರಿಗೆ ಈ ಚಿತ್ರದಲ್ಲಿ ಮತ್ತೊಂದು ವಿಭಿನ್ನ, ಪವರ್‌ಫುಲ್‌ ರೋಲ್‌ ಸಿಕ್ಕಿದೆ. ಕ್ರಿಷ್ ಜಾಗರ್ಲಮುಡಿ ನಿರ್ದೇಶನದ ಈ ಆ್ಯಕ್ಷನ್‌ ಕ್ರೈಂ ಡ್ರಾಮಾದಲ್ಲಿ ಅವರು ದಿಟ್ಟ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ. ವಿಕ್ರಂ ಪ್ರಭು ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಅಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಈ ಸಿನಿಮಾ ತೆರೆ ಕಾಣಬೇಕಿತ್ತು. ಆದರೆ 2 ಬಾರಿ ರಿಲೀಸ್‌ ದಿನಾಂಕವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ. ಹೊಸ ರಿಲೀಸ್‌ ಡೇಟ್‌ ಇನ್ನಷ್ಟೇ ಹೊರ ಬೀಳಬೇಕಿದೆ.