ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಹಾಂಕೋ ಅಂದರೇನು ?

ಜಪಾನಿನ ವಿಶಿಷ್ಟ ಸಂಸ್ಕೃತಿಗಳಲ್ಲಿ ಹಾಂಕೋ ಅಥವಾ ಇನ್ಕಾನ್ ಎಂಬುದು ಸಹ ಒಂದು. ಇದು ಜಪಾನಿನ ಶ್ರದ್ಧೆ, ಭದ್ರತೆ ಮತ್ತು ನ್ಯಾಯದ ಮೌಲ್ಯಗಳ ಪ್ರತೀಕ. ‘ಹಾಂಕೋ’ ಎನ್ನುವುದು ಒಬ್ಬ ವ್ಯಕ್ತಿಯ ಅಥವಾ ಸಂಸ್ಥೆಯ ಅಧಿಕೃತ ಮುದ್ರೆ. ಜಪಾನಿನ ಅನೇಕ ಕಾನೂನು ಪ್ರಕ್ರಿಯೆ ಗಳಲ್ಲೂ ಇದಕ್ಕೆ ಅತೀವ ಪ್ರಾಮುಖ್ಯ. ಇದನ್ನು ಸಾಮಾನ್ಯವಾಗಿ ಮರದಿಂದ, ಆನೆಯ ದಂತದಿಂದ, ಕಲ್ಲಿ ನಿಂದ ಅಥವಾ ಪ್ಲಾಸ್ಟಿಕ್‌ನಿಂದ ತಯಾರಿಸುತ್ತಾರೆ

ಹಾಂಕೋ ಅಂದರೇನು ?

‘ನೀವು ಜಪಾನಿಗೆ ಹೋದಾಗ ಹಾಂಕೋ ಬಗ್ಗೆ ಕೇಳಿದ್ದೀರಾ?’ ಎಂದು ಸ್ನೇಹಿತರೊಬ್ಬರು ಕೇಳಿದರು. ನಾನು ಆ ಬಗ್ಗೆ ಕೇಳಿದ್ದೆ. ಆದರೆ ನನಗೆ ಅದರ ಬಗ್ಗೆ ಹೆಚ್ಚಿನ ವಿವರಗಳು ಗೊತ್ತಿರಲಿಲ್ಲ. ಜಪಾನಿನಲ್ಲಿ ಎಂಟು ವರ್ಷಗಳಿಂದ ಇರುವ ಸ್ನೇಹಿತರೊಬ್ಬರು ಹಾಂಕೋ ಬಗ್ಗೆ ಸಾಕಷ್ಟು ಮಾಹಿತಿ ನೀಡಿದರು. ಜಪಾನಿನ ವಿಶಿಷ್ಟ ಸಂಸ್ಕೃತಿಗಳಲ್ಲಿ ಹಾಂಕೋ ಅಥವಾ ಇನ್ಕಾನ್ ಎಂಬುದು ಸಹ ಒಂದು. ಇದು ಜಪಾನಿನ ಶ್ರದ್ಧೆ, ಭದ್ರತೆ ಮತ್ತು ನ್ಯಾಯದ ಮೌಲ್ಯಗಳ ಪ್ರತೀಕ. ‘ಹಾಂಕೋ’ ಎನ್ನುವುದು ಒಬ್ಬ ವ್ಯಕ್ತಿಯ ಅಥವಾ ಸಂಸ್ಥೆಯ ಅಧಿಕೃತ ಮುದ್ರೆ. ಜಪಾನಿನ ಅನೇಕ ಕಾನೂನು ಪ್ರಕ್ರಿಯೆ ಗಳಲ್ಲೂ ಇದಕ್ಕೆ ಅತೀವ ಪ್ರಾಮುಖ್ಯ. ಇದನ್ನು ಸಾಮಾನ್ಯವಾಗಿ ಮರದಿಂದ, ಆನೆಯ ದಂತದಿಂದ, ಕಲ್ಲಿ ನಿಂದ ಅಥವಾ ಪ್ಲಾಸ್ಟಿಕ್‌ನಿಂದ ತಯಾರಿಸುತ್ತಾರೆ.

ಈ ಮುದ್ರೆಯನ್ನು ಶ್ರೇಣಿಯಂತೆ ವಿವಿಧ ರೀತಿಯಲ್ಲಿ ಉಪಯೋಗಿಸಲಾಗುತ್ತದೆ. ಇದನ್ನು ಭಾರ ತೀಯ ಅಥವಾ ಪಾಶ್ಚಾತ್ಯ ದೇಶಗಳ ಸಹಿಗೆ ಸಮಾನವಾಗಿ ಪರಿಗಣಿಸಬಹುದು. ಹಾಂಕೋ ಪದ್ಧತಿ ಚೀನಾದಿಂದ ಜಪಾನಿಗೆ ಸುಮಾರು ಎಂಟನೇ ಶತಮಾನದಲ್ಲಿ ಬಂದಿತು. ಪ್ರಾಚೀನ ಕಾಲದಲ್ಲಿ ಇದನ್ನು ಸಾಮಂತರು ಅಥವಾ ಅರಸರು ಮಾತ್ರ ಬಳಸುತ್ತಿದ್ದರು.

ಇದನ್ನೂ ಓದಿ: Vishweshwar Bhat Column: ಜಪಾನಿನ ದೈನಿಕಗಳು

ಕಾಲಕ್ರಮೇಣ ಸಾಮಾನ್ಯ ಜನತೆಗೂ ಈ ಪದ್ಧತಿ ಪ್ರವೇಶವಾಯಿತು. ಈಗ ಜಪಾನಿನ ಪ್ರತಿಯೊಬ್ಬ ವ್ಯಕ್ತಿಗೆ ತನ್ನದೇ ಆದ ಹಾಂಕೋ ಇರುತ್ತದೆ. ಅದನ್ನು ಬ್ಯಾಂಕ್ ಖಾತೆ ತೆರೆಯಲು, ಮನೆ ಖರೀದಿಸಲು, ಉದ್ಯೋಗ ಒಪ್ಪಂದಗಳಿಗೆ ಬಳಸುತ್ತಾರೆ. ಹಾಂಕೋದಲ್ಲಿ ಬಹು ಪ್ರಕಾರಗಳಿವೆ. ಅವುಗಳ ಬಳಕೆಯ ಉದ್ದೇಶದಿಂದ ಅವನ್ನು ವಿಭಜನೆ ಮಾಡಲಾಗುತ್ತದೆ.

ಉದಾಹರಣೆಗೆ, ಜಿತ್ಸು-ಇನ್. ಇದು ಅಧಿಕೃತವಾಗಿ ನೋಂದಾಯಿತ ಮುದ್ರೆ. ನೋಟರಿ ಕಚೇರಿಯಲ್ಲಿ ಇದನ್ನು ನೋಂದಾಯಿಸಿ ಅಧಿಕೃತವಾಗಿ ಬಳಸಲಾಗುತ್ತದೆ. ಮನೆ ಖರೀದಿ, ಆಸ್ತಿ ಹಸ್ತಾಂತರ, ದೊಡ್ಡ ವ್ಯವಹಾರಗಳಲ್ಲಿ ಈ ಮುದ್ರೆ ಬೇಕೇ ಬೇಕು. ಎರಡನೆಯದು, ಗಿನ್-ಕೋ-ಇನ್. ಇದು ಬ್ಯಾಂಕ್ ವ್ಯವಹಾರಗಳಿಗಾಗಿ ಬಳಸುವ ಹಾಂಕೋ. ಬ್ಯಾಂಕ್ ಖಾತೆ ತೆರೆಯುವಾಗ ಈ ಮುದ್ರೆ ಬೇಕಾಗುತ್ತದೆ.

ಇದು ಸಾಮಾನ್ಯವಾಗಿ ಚಿಕ್ಕದಾಗಿ, ಒಬ್ಬ ವ್ಯಕ್ತಿಯ ಹೆಸರು ಮಾತ್ರ ಹೊಂದಿರುತ್ತದೆ. ಮೂರನೆಯದು, ಮಿಟೋಮ್-ಇನ್. ಈ ಮುದ್ರೆ ಸಾಮಾನ್ಯ ಹಾಗೂ ದೈನಂದಿನ ಬಳಕೆಗೆ ಬಳಸುವ ಮುದ್ರೆ. ಕೆಲಸದ ಸ್ಥಳದಲ್ಲಿ ಡಾಕ್ಯುಮೆಂಟ್‌ಗೆ ಒಪ್ಪಿಗೆಯ ಸೂಚನೆ ನೀಡಲು ಉಪಯೋಗಿಸಲಾಗುತ್ತದೆ. ನಾಲ್ಕನೆ ಯದು, ಶಾ-ಇನ್. ಇದು ಕಂಪನಿಗಳು ಉಪಯೋಗಿಸುವ ಹಾಂಕೋ. ಇದು ಕಂಪನಿಯ ಅಧಿಕೃತ ಮುದ್ರೆ. ಒಪ್ಪಂದಗಳು, ಲೆಕ್ಕಪತ್ರ ಗಳು, ಅಧಿಕೃತ ಪತ್ರಗಳಲ್ಲಿ ಇದನ್ನು ಬಳಸಲಾಗುತ್ತದೆ. ಹಾಂಕೋ ತಯಾರಿಸುವುದು ಒಂದು ಕಲೆ. ಇದು ತಜ್ಞರ ಕೈಯಿಂದ ಅಥವಾ ಯಂತ್ರದ ಮೂಲಕ ತಯಾರಿಸ ಲ್ಪಡುತ್ತದೆ.

ಕೆಲವರು ತಮ್ಮ ಹೆಸರನ್ನು ಕಾನ್ಜಿ ಅಕ್ಷರಗಳಲ್ಲಿ ಹಾಕಿಸುತ್ತಾರೆ. ಕಾನ್ಜಿ ಅಕ್ಷರಗಳ ವಿಭಿನ್ನ ವಿನ್ಯಾಸ ದಿಂದ ಹಾಂಕೋ ವಿಭಿನ್ನವಾಗಿ ಕಾಣಿಸು ತ್ತವೆ. ಜಿತ್ಸು-ಇನ್ ಹಾಂಕೋ ನೋಂದಾಯಿಸುವಾಗ ಸ್ಥಳೀಯ ಮುನಿಸಿಪಲ್ ಕಚೇರಿಯಲ್ಲಿ ನೋಂದಣಿ ಮಾಡಬೇಕು. ಈ ನೋಂದಣಿಗೆ ಒಂದು ಪ್ರಮಾಣಪತ್ರ ನೀಡಲಾಗುತ್ತದೆ. ಇದನ್ನು ಮುಂದಿನ ಅಧಿಕೃತ ವ್ಯವಹಾರಗಳಲ್ಲಿ ಸಲ್ಲಿಸಬೇಕು.

ಬ್ಯಾಂಕ್ ಖಾತೆ ತೆರೆಯುವಾಗ, ರಿಯಲ್ ಎಸ್ಟೇಟ್ ಖರೀದಿ ಅಥವಾ ಬಾಡಿಗೆ ಒಪ್ಪಂದ ಸಂದರ್ಭ ದಲ್ಲಿ, ಉದ್ಯೋಗ ಒಪ್ಪಂದ ಅಥವಾ ರಾಜೀನಾಮೆ ಪತ್ರ ಸಲ್ಲಿಸುವಾಗ, ವಿವಾಹ ನೋಂದಣಿ, ಕಾನೂನು ದಾಖಲೆಗಳಿಗೆ ಸಹಿ ಮಾಡುವಾಗ ಹಾಂಕೋ ಬಳಸಬೇಕಾಗುತ್ತದೆ. ಜಪಾನಿ ನಲ್ಲಿ ಸಹಿಗೆ ಹೋಲಿಸಿದರೆ ಹಾಂಕೋ ಹೆಚ್ಚು ವಿಶ್ವಾಸಾರ್ಹತೆ ಹೊಂದಿದೆ. ಮುದ್ರೆ ಹಾಕಿದರೆ ಅರ್ಥಪೂರ್ಣ ಒಪ್ಪಿಗೆ ಎಂದು ಪರಿಗಣಿಸುತ್ತಾರೆ. ಹಾಂಕೋ ಕಳೆದುಹೋದರೆ ಅಥವಾ ತಪ್ಪಾಗಿ ಬಳಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ಹೀಗಾಗಿ ಹಲವರು ತಮ್ಮ ಹಾಂಕೋಗಳನ್ನು ಲಾಕರ್‌ನಲ್ಲಿ ಸುರಕ್ಷಿತವಾಗಿ ಇಡುತ್ತಾರೆ. ತಾಂತ್ರಿಕ ಪ್ರಗತಿಯಲ್ಲಿ ಡಿಜಿಟಲ್ ಸಹಿಗಳು ಹಾಗೂ ಬಯೋ ಮೆಟ್ರಿಕ್ ದೃಢೀಕರಣಗಳು ಬಂದಿದ್ದರೂ, ಹಾಂಕೋ ಇನ್ನೂ ಹಲವಾರು ಸ್ಥಳಗಳಲ್ಲಿ ಬಳಕೆಯಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಹಾಂಕೋ ಅವಶ್ಯಕತೆ ಬೇಕೇ? ಎಂಬ ಚರ್ಚೆಗಳು ಹೆಚ್ಚಾಗಿವೆ. ಡಿಜಿಟಲ್ ಸಹಿಗಳು ಹೆಚ್ಚು ಸುರಕ್ಷಿತವೆಂದು ಕೆಲವರು ವಾದಿಸುತ್ತಿದ್ದಾರೆ. ಆದರೆ ಸಂಸ್ಕೃತಿಯ ಪ್ರಾಮುಖ್ಯ ಹಾಗೂ ಮಾನವೀಯ ಸಂಬಂಧ ಗಳನ್ನು ನೆನಪಿಸಲು ಹಲವರು ಹಾಂಕೋ ಪದ್ಧತಿಯ ಉಳಿವಿಗೆ ಒತ್ತಾಯಿಸುತ್ತಾರೆ.