ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: 2025-26ರಲ್ಲಿ ಬೆಸ್ಟ್‌ ಬ್ಲೂಚಿಪ್‌ ಮ್ಯೂಚುವಲ್‌ ಫಂಡ್ಸ್ ಯಾವುದು? ಇಲ್ಲಿದೆ ಮಾಹಿತಿ

ಷೇರು ಮಾರುಕಟ್ಟೆಯಲ್ಲಿ ಮಂದಗತಿ ಇದ್ದಾಗ ಸಾಮನ್ಯವಾಗಿ ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಷೇರುಗಳಲ್ಲಿ ಮತ್ತು ಈ ವಲಯದ ಮ್ಯೂಚುವಲ್‌ ಫಂಡ್‌ಗಳಲ್ಲಿ ಲಾಭ ಇಳಿಕೆಯಾಗುತ್ತದೆ. ಆದರೆ ಇದೇ ಸಂದರ್ಭ ಹೂಡಿಕೆದಾರರು ಲಾರ್ಜ್‌ ಕ್ಯಾಪ್‌ ಅಥವಾ ಬ್ಲೂ ಚಿಪ್‌ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆಗೆ ಆದ್ಯತೆ ನೀಡುತ್ತಾರೆ.

2025-26ರಲ್ಲಿ ಬೆಸ್ಟ್‌ ಬ್ಲೂಚಿಪ್‌ ಮ್ಯೂಚುವಲ್‌ ಫಂಡ್ಸ್ ಯಾವುದು?

Profile Vishakha Bhat May 2, 2025 9:43 PM

ಕೇಶವಪ್ರಸಾದ .ಬಿ

ಮುಂಬೈ: ಷೇರು ಮಾರುಕಟ್ಟೆಯಲ್ಲಿ ಮಂದಗತಿ ಇದ್ದಾಗ ಸಾಮನ್ಯವಾಗಿ ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಷೇರುಗಳಲ್ಲಿ ಮತ್ತು ಈ ವಲಯದ ಮ್ಯೂಚುವಲ್‌ ಫಂಡ್‌ಗಳಲ್ಲಿ ಲಾಭ ಇಳಿಕೆಯಾಗುತ್ತದೆ. ಆದರೆ ಇದೇ ಸಂದರ್ಭ ಹೂಡಿಕೆದಾರರು ಲಾರ್ಜ್‌ ಕ್ಯಾಪ್‌ ಅಥವಾ ಬ್ಲೂ ಚಿಪ್‌ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆಗೆ ಆದ್ಯತೆ ನೀಡುತ್ತಾರೆ. ಅಮೆರಿಕದ ಸುಂಕ ಸಮರ, ರಿಸೆಶನ್‌ ಭೀತಿ, ಜಾಗತಿಕ ಆರ್ಥಿಕತೆಯ ನಿಧಾನಗತಿಯ ಸಂದರ್ಭದಲ್ಲಿ ಯಾವ ಬ್ಲೂ ಚಿಪ್‌ ಮ್ಯೂಚುವಲ್‌ ಫಂಡ್‌ಗಳನ್ನು ಹೂಡಿಕೆಗೆ ಆಯ್ಕೆ ಮಾಡಬಹುದು ಎಂಬ ಗೊಂದಲ ಹೂಡಿಕೆದಾರರಲ್ಲಿ ಇರಬಹುದು. ಆದರಿಂದ ಈ ಎಪಿಸೋಡ್‌ನಲ್ಲಿ ನಾವು 2025-26ರಲ್ಲಿ ಟಾಪ್‌ ಪರ್ಫಾರ್ಮಿಂಗ್‌ ಬ್ಯೂಚಿಪ್‌ ಮ್ಯೂಚುವಲ್‌ ಫಂಡ್‌ಗಳು ಯಾವುದು ಎಂಬುದನ್ನು ತಿಳಿಯೋಣ.

ಫೈನಾನ್ಷಿಯಲ್‌ ಎಕ್ಸ್‌ಪ್ರೆಸ್‌ ಈ ಪಟ್ಟಿಯನ್ನು ಪ್ರಕಟಿಸಿದ್ದು, ಯಾವ ಮ್ಯೂಚುವಲ್‌ ಫಂಡ್‌ ನಲ್ಲಿ ಹೂಡಿಕೆ ಮಾಡಬಹುದು ಎಂದು ಗೊಂದಲದಲ್ಲಿ ಇರುವವರಿಗೆ ಉಪಯುಕ್ತ ಆಗಬಹುದು.

  1. ನಿಪ್ಪೋನ್‌ ಇಂಡಿಯಾ ಲಾರ್ಜ್‌ ಕ್ಯಾಪ್‌ ಫಂಡ್‌

Nippon India Large Cap Fund

5 ವರ್ಷಗಳಲ್ಲಿ ಪರ್ಫಾಮೆನ್ಸ್‌

ರಿಟರ್ನ್ಸ್‌ : 21.48%

ಕೆಟಗರಿಯ ರಿಟರ್ನ್ಸ್‌ : 18.24%

ಈ ಫಂಡ್‌ನ ಹೆಚ್ಚಿನ ಹೂಡಿಕೆ ಎಲ್ಲಿ: ಎಚ್‌ಡಿಎಫ್‌ಸಿ ಬ್ಯಾಂಕ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಐಸಿಐಸಿಐ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌, ಬಜಾಜ್‌ ಫೈನಾನ್ಸ್ ನಿಪ್ಪೋನ್‌ ಇಂಡಿಯಾ ಲಾರ್ಜ್‌ ಕ್ಯಾಪ್‌ ಮ್ಯೂಚುವಲ್‌ ಫಂಡ್‌ 2007ರ ಆಗಸ್ಟ್‌ನಲ್ಲಿ ಬಿಡುಗಡೆ ಆಯಿತು. ಇದು ಲಾರ್ಜ್‌ ಕ್ಯಾಪ್‌ ಷೇರುಗಳಲ್ಲಿ 83% ಹೂಡಿಕೆಯನ್ನು ಮಾಡುತ್ತದೆ. ಮಿಡ್‌ ಕ್ಯಾಪ್‌ ಷೇರುಗಳಲ್ಲಿ 11% ಹಾಗೂ ಸ್ಮಾಲ್‌ ಕ್ಯಾಪ್‌ ಸ್ಟಾಕ್ಸ್‌ಗಳಲ್ಲಿ 4% ಹೂಡಿಕೆಯನ್ನು ಮಾಡುತ್ತದೆ.

ಕನಿಷ್ಠ 3-4 ವರ್ಷಗಳಿಗೆ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಬಯಸುವವರು ನಿಪ್ಪೋನ್‌ ಇಂಡಿಯಾ ಲಾರ್ಜ್‌ ಕ್ಯಾಪ್‌ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಬಹುದು.

ಐಸಿಐಸಿಐ ಪ್ರುಡೆನ್ಷಿಯಲ್ ಬ್ಲೂಚಿಪ್‌ ಫಂಡ್‌

ICICI Pru Bluechip Fund

5 ವರ್ಷಗಳಲ್ಲಿ ಪರ್ಫಾಮೆನ್ಸ್‌

ರಿಟರ್ನ್ಸ್‌ : 20.69 %

ಕೆಟಗರಿಯ ರಿಟರ್ನ್ಸ್‌ : 18.24%

ಈ ಫಂಡ್‌ನ ಹೆಚ್ಚಿನ ಹೂಡಿಕೆ ಎಲ್ಲಿ: ಎಚ್‌ಡಿಎಫ್‌ಸಿ ಬ್ಯಾಂಕ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಐಸಿಐಸಿಐ ಬ್ಯಾಂಕ್‌, ಭಾರ್ತಿ ಏರ್‌ಟೆಲ್‌, ಎಲ್‌ &ಟಿ.

ಐಸಿಐಸಿಐ ಪ್ರುಡೆನ್ಷಿಯಲ್‌ ಬ್ಲೂಚಿಪ್‌ ಫಂಡ್‌ 2008ರ ಮೇನಲ್ಲಿ ಬಿಡುಗಡೆಯಾಗಿದೆ. ದೀರ್ಘಾವಧಿಗೆ ಉತ್ತಮ ರಿಟರ್ನ್ಸ್‌ ಅನ್ನು ಹೂಡಿಕೆದಾರರಿಗೆ ನೀಡುತ್ತಾ ಬಂದಿದೆ. ಹೈ-ಗ್ರೋತ್‌ ಪೊಟೆನ್ಷಿಯಲ್‌ ಇರುವಂತಹ ಷೇರುಗಳನ್ನು ಆಯ್ಕೆ ಮಾಡಿಕೊಂಡು ಹೂಡಿಕೆಯನ್ನು ಮಾಡುತ್ತದೆ.ಈ ಐಸಿಐಸಿಐ ಪ್ರುಡೆನ್ಷಿಯಲ್‌ ಬ್ಲೂಚಿಪ್‌ ಫಂಡ್‌ ಲಾರ್ಜ್‌ ಕ್ಯಾಪ್‌ಗಳಲ್ಲಿ 85%, ಮಿಡ್‌ ಕ್ಯಾಪ್‌ಗಳಲ್ಲಿ 6.2%, ಸ್ಮಾಲ್‌ ಕ್ಯಾಪ್‌ಗಳಲ್ಲಿ 0.66% ಹೂಡಿಕೆ ಮಾಡಿದೆ.

ಕೆನರಾ ರೊಬೆಕೊ ಬ್ಲೂ ಚಿಪ್‌ ಈಕ್ವಿಟಿ ಫಂಡ್:‌

Canara Robeco Bluechip Equity Fund

5 ವರ್ಷಗಳಲ್ಲಿ ಪರ್ಫಾಮೆನ್ಸ್‌

ರಿಟರ್ನ್ಸ್‌ : 20.11 %

ಕೆಟಗರಿಯ ರಿಟರ್ನ್ಸ್‌ : 18.24%

ಈ ಫಂಡ್‌ನ ಹೆಚ್ಚಿನ ಹೂಡಿಕೆ ಎಲ್ಲಿ: ಎಚ್‌ಡಿಎಫ್‌ಸಿ ಬ್ಯಾಂಕ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಐಸಿಐಸಿಐ ಬ್ಯಾಂಕ್‌, ಇನ್ಫೋಸಿಸ್.‌ ಕೆನರಾ ರೊಬೆಕೊ ಬ್ಲೂ ಚಿಪ್‌ ಈಕ್ವಿಟಿ ಫಂಡ್ 2010ರ ಆಗಸ್ಟ್‌ನಲ್ಲಿ ಸ್ಥಾಪನೆಯಾಗಿದೆ. ಮಾರುಕಟ್ಟೆಯ ನಾನಾ ಸಂದರ್ಭಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಲಾರ್ಜ್‌ ಕ್ಯಾಪ್‌ಗಳಲ್ಲಿ 88% ಹೂಡಿಕೆ ಮಾಡಿದ್ದರೆ, ಮಿಡ್‌ ಕ್ಯಾಪ್‌ಗಳಲ್ಲಿ 8% ಹೂಡಿದೆ. ಸ್ಮಾಲ್‌ ಕ್ಯಾಪ್‌ಗಳಲ್ಲಿ ಹೂಡಿಕೆ ಮಾಡಿಲ್ಲ.

ಬರೋಡಾ ಬಿಎನ್‌ಪಿ ಪಾರಿಬಸ್‌ ಲಾರ್ಜ್‌ ಕ್ಯಾಪ್‌ ಫಂಡ್:‌

Baroda BNP Paribas Large Cap Fund

5 ವರ್ಷಗಳಲ್ಲಿ ಪರ್ಫಾಮೆನ್ಸ್‌

ರಿಟರ್ನ್ಸ್‌ : 20.04 %

ಕೆಟಗರಿಯ ರಿಟರ್ನ್ಸ್‌ : 18.24%

ಈ ಫಂಡ್‌ನ ಹೆಚ್ಚಿನ ಹೂಡಿಕೆ ಎಲ್ಲಿ: ಎಚ್‌ಡಿಎಫ್‌ಸಿ ಬ್ಯಾಂಕ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಐಸಿಐಸಿಐ ಬ್ಯಾಂಕ್‌, ಟಿಸಿಎಸ್‌ ಮತ್ತು ಕೋಟಕ್‌ ಮಹೀಂದ್ರಾ ಬ್ಯಾಂಕ್.‌

‌2004ರಲ್ಲಿ ಸ್ಥಾಪನೆಯಾದ ಬರೋಡಾ ಬಿಎನ್‌ಪಿ ಪಾರಿಬಸ್‌ ಲಾರ್ಜ್‌ ಕ್ಯಾಪ್‌ ಫಂಡ್‌, ಉತ್ತಮ ಬ್ಯಾಲೆನ್ಸ್‌ಶೀಟ್‌ ಹೊಂದಿರುವ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತದೆ. ಹೂಡಿಕೆದಾರರಿಗೆ ಉತ್ತಮ ಲಾಭ ನೀಡಿದೆ.

ಲಾರ್ಜ್‌ ಕ್ಯಾಪ್‌ ಷೇರುಗಳಲ್ಲಿ 82% ಹೂಡಿಕೆಯನ್ನು ಮಾಡಿದೆ. ಮಿಡ್‌ ಕ್ಯಾಪ್‌ ಸ್ಟಾಕ್ಸ್‌ಗಲ್ಲಿ 9% ಮತ್ತು ಉಳಿದದ್ದನ್ನು ಬಾಂಡ್‌ಗಳಲ್ಲಿ ಇನ್ವೆಸ್ಟ್‌ ಮಾಡಿದೆ.

ಇನ್ವೆಸ್ಕೊ ಇಂಡಿಯಾ ಲಾರ್ಜ್‌ ಕ್ಯಾಪ್‌ ಫಂಡ್

Invesco India Largecap Fund‌

5 ವರ್ಷಗಳಲ್ಲಿ ಪರ್ಫಾಮೆನ್ಸ್‌

ರಿಟರ್ನ್ಸ್‌ : 19.87 %

ಕೆಟಗರಿಯ ರಿಟರ್ನ್ಸ್‌ : 18.24%

ಈ ಫಂಡ್‌ನ ಹೆಚ್ಚಿನ ಹೂಡಿಕೆ ಎಲ್ಲಿ: ಎಚ್‌ಡಿಎಫ್‌ಸಿ ಬ್ಯಾಂಕ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಐಸಿಐಸಿಐ ಬ್ಯಾಂಕ್‌, ಭಾರ್ತಿ ಏರ್‌ಟೆಲ್.‌

2009ರಲ್ಲಿ ಬಿಡುಗಡೆಯಾದ ಇನ್ವೆಸ್ಕೊ ಇಂಡಿಯಾ ಲಾರ್ಜ್‌ ಕ್ಯಾಪ್‌ ಫಂಡ್‌, ಹಲವು ಸಂದರ್ಭಗಳಲ್ಲಿ ಹೂಡಿಕೆದಾರರಿಗೆ ಉತ್ತಮ ಲಾಭ ನೀಡಿದೆ. ಲಾರ್ಜ್‌ ಕ್ಯಾಪ್‌ ಕೆಟಗರಿಯಲ್ಲಿ ಗ್ರೋತ್‌ ಓರಿಯೆಂಟೆಡ್‌ ಸ್ಟಾಕ್ಸ್‌ಗಳಲ್ಲಿ ಹೂಡಿಕೆ ಮಾಡುತ್ತದೆ. ಇದು ಲಾರ್ಜ್‌ ಕ್ಯಾಪ್‌ ಷೇರುಗಳಲ್ಲಿ 85%, ಮಿಡ್‌ ಕ್ಯಾಪ್‌ಗಳಲ್ಲಿ 9%, ಸ್ಮಾಲ್‌ ಕ್ಯಾಪ್‌ಗಳಲ್ಲಿ 6% ಹೂಡಿಕೆ ಮಾಡುತ್ತದೆ.

ಲಾರ್ಜ್‌ ಕ್ಯಾಪ್‌ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡೋದ್ರಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ. ಮೊದಲನೆಯದಾಗಿ ಲಾರ್ಜ್‌ ಕ್ಯಾಪ್‌ ಮ್ಯೂಚುವಲ್‌ ಫಂಡ್‌ ಅಥವಾ ಬ್ಲೂ ಚಿಪ್‌ ಮ್ಯೂಚುವಲ್‌ ಫಂಡ್‌ಗಳು ಕಾರ್ಪೊರೇಟ್‌ ವಲಯದಲ್ಲಿ ಸುಭದ್ರವಾಗಿರುವ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಉದಾಹರಣೆಗೆ ರಿಲಯನ್ಸ್‌ ಇಂಡಸ್ಟ್ರೀಸ್‌, ಟಾಟಾ, ಹಿಂದುಸ್ತಾನ್‌ ಯುನಿಲಿವರ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಹೀಗೆ ದೊಡ್ಡ ಸಂಸ್ಥೆಗಳ ಷೇರುಗಳಲ್ಲಿ ಹೆಚ್ಚು ಇನ್ವೆಸ್ಟ್‌ ಮಾಡುತ್ತವೆ.

ಈ ಸುದ್ದಿಯನ್ನೂ ಓದಿ: Gold price fall : ಬಂಗಾರದ ದರದಲ್ಲಿ 7,000 ರುಪಾಯಿ ಇಳಿಕೆ! ಈಗ ಖರೀದಿಸಬಹುದೇ?

ಇಂಥ ಷೇರುಗಳು ಎಕ್ಸ್‌ ಟ್ರಾ ಆರ್ಡಿನರಿ ಆದಾಯ ನೀಡದಿದ್ದರೂ, ಇವುಗಳಲ್ಲಿ ಡೌನ್‌ ಸೈಡ್‌ ರಿಸ್ಕ್‌ ಕಡಿಮೆ. ಇವುಗಳು ಖಾತರಿಯ ಆದಾಯವನ್ನು ನೀಡುತ್ತವೆ. ಜತೆಗೆ ವಿಶ್ವಾಸಾರ್ಹ ಷೇರುಗಳಲ್ಲಿ ಇನ್ವೆಸ್ಟ್‌ ಮಾಡಿದಂತಾಗುತ್ತದೆ. ಮಿಡ್‌ ಕ್ಯಾಪ್ ಮತ್ತು ಸ್ಮಾಲ್‌ ಕ್ಯಾಪ್‌ ಷೇರುಗಳಲ್ಲಿ ನಷ್ಟದ ಅಪಾಯವೂ ಹೆಚ್ಚು ಇರುತ್ತದೆ. ಆದ್ದರಿಂದ ಬ್ಲೂ ಚಿಪ್‌ ಮ್ಯೂಚುವಲ್‌ ಫಂಡ್‌ ಗಳು ದೀರ್ಘಕಾಲೀನವಾಗಿ ಹೂಡಿಕೆ ಮಾಡುವವರಿಗೆ ಲಾಭದಾಯಕವಾಗುತ್ತದೆ. ಇವುಗಳಲ್ಲಿ ಒಂದೇ ವರ್ಷಕ್ಕೆ ಲಾಭ ಪಡೆಯಬೇಕೆಂದು ಬಯಸುವುದು ಸಮಂಜಸವಲ್ಲ. ಕನಿಷ್ಠ 3-5 ವರ್ಷವಾದರೂ ಹೂಡಿಕೆ ಮಾಡಬೇಕು.