ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Double Murder Case: ಪರ ಪುರುಷನ ಜೊತೆ ಚಕ್ಕಂದ, ಇಬ್ಬರನ್ನೂ ಪತಿ ಕೊಚ್ಚಿ ಕೊಂದ

ಕೃಷಿ ಕೂಲಿ ಕೆಲಸ ಮಾಡುತ್ತಿದ್ದ ಶ್ರೀಮಂತ ದಿನದಲ್ಲಿ ಬಹುತೇಕ ಸಮಯ ಬೇರೆಯವರ ಜಮೀನಿನಲ್ಲಿ ಕಳೆಯುತ್ತಿದ್ದ. ಇತ್ತ ಪತ್ನಿ ಸೃಷ್ಟಿ ಗ್ರಾಮದ ಲೈಬ್ರರಿಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಖಾಜಪ್ಪ ಎಂಬಾತನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇದು ಬರ್ಬರ ಕೊಲೆಯಲ್ಲಿ ಅಂತ್ಯ ಕಂಡಿದೆ.

ಪರ ಪುರುಷನ ಜೊತೆ ಚಕ್ಕಂದ, ಇಬ್ಬರನ್ನೂ ಪತಿ ಕೊಚ್ಚಿ ಕೊಂದ

ಖಾಜಪ್ಪ ಮತ್ತು ಸೃಷ್ಟಿ

ಹರೀಶ್‌ ಕೇರ ಹರೀಶ್‌ ಕೇರ May 3, 2025 7:14 AM

ಕಲಬುರಗಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಪರ ಪುರುಷನೊಂದಿಗೆ ಚಕ್ಕಂದವಾಡುತ್ತಿದ್ದ ಪತ್ನಿ ಹಾಗೂ ಆ ಗಂಡಸನ್ನು ಪತಿಯೊಬ್ಬ ದೊಣ್ಣೆಯಿಂದ ಹೊಡೆದು, ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ (Double Murder Case) ಮಾಡಿರುವ ಘಟನೆ ಕಲಬುರಗಿಯ (Kalaburagi crime news) ಆಳಂದ ತಾಲೂಕಿನ ಮಾದನಹಿಪ್ಪರಗಾ (Madanahipparaga) ಗ್ರಾಮದಲ್ಲಿ ನಡೆದಿದೆ. ಶ್ರೀಮಂತ ಎಂಬಾತ, ಪತ್ನಿ ಸೃಷ್ಟಿ ಹಾಗೂ ಆಕೆಯ ಪ್ರಿಯಕರ ಖಾಜಪ್ಪನನ್ನು ಕೊಡಲಿಯಿಂದ ಕೊಚ್ಚಿ ಕೊಂದು ಪರಾರಿಯಾಗಿದ್ದಾನೆ. ಪೊಲೀಸರು ಈತನಿಗಾಗಿ ಬಲೆ ಬೀಸಿದ್ದಾರೆ.

ಮೂರು ವರ್ಷಗಳ ಹಿಂದೆ ಮಾದನಹಿಪ್ಪರಗಾ ಗ್ರಾಮದ ಶ್ರೀಮಂತನ ಜೊತೆ 22 ವರ್ಷದ ಸೃಷ್ಟಿ ಸಪ್ತಪದಿ ತುಳಿದಿದ್ದಳು. ಕೃಷಿ ಕೂಲಿ ಕೆಲಸ ಮಾಡುತ್ತಿದ್ದ ಶ್ರೀಮಂತ ದಿನದಲ್ಲಿ ಬಹುತೇಕ ಸಮಯ ಬೇರೆಯವರ ಜಮೀನಿನಲ್ಲಿ ಕಳೆಯುತ್ತಿದ್ದ. ಇತ್ತ ಪತ್ನಿ ಸೃಷ್ಟಿ ಗ್ರಾಮದ ಲೈಬ್ರರಿಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಖಾಜಪ್ಪ ಎಂಬಾತನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಅದರಂತೆ ಮೇ 1ರಂದು ಶ್ರೀಮಂತ ಕೆಲಸದ ಮೇಲೆ ಬೇರೆ ಊರಿಗೆ ತೆರಳಿದ್ದ ವೇಳೆ ಇತ್ತ ಸೃಷ್ಟಿ, ರಾತ್ರಿ ಪ್ರಿಯಕರ ಖಾಜಪ್ಪನಿಗೆ ಕರೆ ಮಾಡಿ ಮನೆಗೆ ಆಹ್ವಾನಿಸಿದ್ದಾಳೆ. ಸೃಷ್ಟಿ ಮನೆಗೆ ದಿಢೀರ್ ಅಂತ ಹೋದರೆ ಯಾರಿಗಾದರೂ ಅನುಮಾನ ಬರಬಹುದು ಎಂದು, ಜೆಸ್ಕಾಂ ಸಿಬ್ಬಂದಿಗೆ ಕರೆ ಮಾಡಿ ಟ್ರಾನ್ಸ್‌ಫಾರಂಗೆ ಬೆಂಕಿ ಬಿದ್ದಿದೆ ಕರೆಂಟ್ ತೆಗೆಯಿರಿ ಎಂದು ಹೇಳಿದ್ದಾನೆ. ಕೂಡಲೇ ಜೆಸ್ಕಾಂ ಸಿಬ್ಬಂದಿ ಕರೆಂಟ್‌ ತೆಗೆಯುತ್ತಿದ್ದಂತೆಯೇ ಖಾಜಪ್ಪ ಕತ್ತಲಲ್ಲಿ ಓಡಿ ಹೋಗಿ ಸೃಷ್ಟಿ ಮನೆ ಸೇರಿಕೊಂಡಿದ್ದಾನೆ.

ಮನೆ ಮುಂದೆ ಬೈಕ್ ನಿಂತಿರುವುದನ್ನು ಕಂಡು ಅಕ್ಕಪಕ್ಕದವರು ಶ್ರೀಮಂತನಿಗೆ ಕಾಲ್ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಶ್ರೀಮಂತ ಮನೆ ಹತ್ತಿರ ಬಂದು ಹೊರಗಡೆಯಿಂದ ಮನೆ ಲಾಕ್ ಮಾಡಿದ್ದಾನೆ. ಸ್ವಲ್ಪ ಸಮಯದ ಬಳಿಕ ಲಾಕ್ ತೆಗೆಯುತ್ತಿದ್ದಂತೆಯೇ ಪರಾರಿಯಾಲು ಯತ್ನಿಸಿದ ಖಾಜಪ್ಪನನ್ನು ಶ್ರೀಮಂತ ಬೆನ್ನಟ್ಟಿ ದೊಣ್ಣೆಯಿಂದ ತಲೆ ಹೊಡೆದಿದ್ದಾನೆ. ಏಟು ಬೀಳುತ್ತಿದ್ದಂತೆ ಕೆಳಗೆ ಬಿದ್ದಿದ್ದ ಖಾಜಪ್ಪನನ್ನು ಶ್ರೀಮಂತ ಭುಜದ ಮೇಲೆ ಹೊತ್ತುಕೊಂಡು ಬಂದು ಪತ್ನಿಯನ್ನು ನಡಿ ಪೊಲೀಸ್ ಠಾಣೆಗೆ ಹೋಗಿ ಇವನ ವಿರುದ್ಧ ಕಂಪ್ಲೇಂಟ್ ಕೊಡೊಣ ಎಂದಿದ್ದಾನೆ. ಆಗ ಸೃಷ್ಟಿ ಹೋಗಲು ಒಪ್ಪದಿದ್ದಕ್ಕೆ ಮತ್ತಷ್ಟು ಆಕ್ರೋಶಗೊಂಡ ಶ್ರೀಮಂತ, ಮನೆಯಲ್ಲಿದ್ದ ಕೊಡಲಿಯಿಂದ ಕೊಚ್ಚಿ ಇಬ್ಬರನ್ನೂ ಮನೆಯಂಗಳದಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆಯೇ ಘಟನ ಸ್ಥಳಕ್ಕೆ ಎಸ್ಪಿ ಅಡ್ಡೂರು ಶ್ರೀನಿವಾಸುಲು, ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಸ್ಪಿ ಶ್ರೀನಿವಾಸುಲು, ಪ್ರಾಥಮಿಕ ಮಾಹಿತಿ ಪ್ರಕಾರ ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಪತ್ನಿ ಸೃಷ್ಟಿ ಹಾಗೂ ಖಾಜಪ್ಪನನ್ನ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಜೋಡಿ ಕೊಲೆ ಮಾಡಿ ಪರಾರಿಯಾಗಿರೋ ಶ್ರೀಮಂತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದರು.

ಇದನ್ನೂ ಓದಿ: Suhas Shetty Murder Case: ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣದ 8 ಆರೋಪಿಗಳು ಸೆರೆ