ಸೊನಾಲಿಕಾದಿಂದ ಏಪ್ರಿಲ್ 2025ರಲ್ಲಿ 11,962 ಒಟ್ಟು ಟ್ರಾಕ್ಟರ್ ಮಾರಾಟದ ಮೂಲಕ 2026ರ ಹಣಕಾಸು ವರ್ಷಕ್ಕೆ ಸದೃಢ ಹೆಜ್ಜೆ
ಭಾರತದ ರೈತ ಸಮುದಾಯದಲ್ಲಿ ಆಶಾವಾದ ಹೆಚ್ಚಾಗುತ್ತಿದ್ದು ಅದಕ್ಕೆ ವರ್ಷದಿಂದ ವರ್ಷಕ್ಕೆ ಮುಂಗಾರು ಬೆಳೆಯ ಇಳುವರಿ ಹಾಗೂ ಸದೃಢ ಹಿಂಗಾರಿನ ಬಿತ್ತನೆ ಆಗುತ್ತಿದ್ದು ಉತ್ತಮ ಮಳೆಗಾಲ ದ ಮುನ್ಸೂಚನೆ ಅದಕ್ಕೆ ಪೂರಕವಾಗಿದೆ. ಕೃಷಿ ಸಂಪತ್ತು ಸೃಷ್ಟಿಸುವ ಪ್ರತಿ ಅವಕಾಶವನ್ನೂ ಬಳಸಿ ಕೊಳ್ಳುವ ನಿಟ್ಟಿನಲ್ಲಿ ಸೊನಾಲಿಕಾದ ಹೆವಿ ಡ್ಯೂಟಿ ಟ್ರಾಕ್ಟರ್ ಗಳು ರೈತರ ದಕ್ಷತೆಯನ್ನು ಗರಿಷ್ಠಗೊಳಿ ಸಲು ಉದ್ದೇಶಪೂರ್ವಕವಾಗಿ ರೂಪಿಸಲಾಗಿದೆ.


ಸೊನಾಲಿಕಾ ಈ ವರ್ಗದ ಅತ್ಯುತ್ತಮ ಟ್ರಾಕ್ಟರ್ ಗಳನ್ನು ಪೂರೈಸಲು ಸತತವಾಗಿ ಶ್ರಮಿಸು ತ್ತಿದೆ ಮತ್ತು ಪಾಲುದಾರರ ಹಿತಾಸಕ್ತಿಯನ್ನು ತನ್ನ ಪ್ರಥಮ ಆದ್ಯತೆಯಾಗಿರಿಸಿಕೊಂಡು ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ.
ಬೆಂಗಳೂರು: ಭಾರತದ ನಂ.1 ಟ್ರಾಕ್ಟರ್ ರಫ್ತು ಬ್ರಾಂಡ್ ಸೊನಾಲಿಕಾ ಟ್ರಾಕ್ಟರ್ಸ್ ಏಪ್ರಿಲ್ 2025ರಲ್ಲಿ ಒಟ್ಟು 11,962 ಟ್ರಾಕ್ಟರ್ ಮಾರಾಟದ ಮೂಲಕ 2026ರ ಹಣಕಾಸು ವರ್ಷಕ್ಕೆ ಅದ್ಭುತ ಚಾಲನೆ ನೀಡಿದ್ದು ರೈತರೇ ಪ್ರಥಮ ಎಂಬ ತತ್ವಕ್ಕೆ ತನ್ನ ಸದೃಢ ಬದ್ಧತೆಯನ್ನು ಈ ಬ್ರಾಂಡ್ ಮುಂದುವರಿಸಿದೆ. ರೈತರ ಪ್ರಾದೇಶಿಕ ಕೇಂದ್ರಿತ ಅಗತ್ಯಗಳಿಗೆ ತಕ್ಕಂತೆ ಅತ್ಯಾಧುನಿಕ ಟ್ರಾಕ್ಟರ್ ಗಳನ್ನು ರೂಪಿಸುವ ಸೊನಾಲಿಕಾ ಭಾರತದಾದ್ಯಂತ ರೈತರಿಗೆ ಸುಸ್ಥಿರ ಮತ್ತು ಲಾಭದಾಯಕ ಪ್ರಗತಿಯನ್ನು ನೀಡುವ ಮೌಲ್ಯ-ಪ್ರೇರಿತ ಪರಿಹಾರಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ. ಸೊನಾಲಿಕಾ ಟ್ರಾಕ್ಟರ್ಸ್ ಈಗಾಗಲೇ ತನ್ನ ಅತ್ಯತ ನಿರೀಕ್ಷೆಯ `ಸೊನಾಲಿಕಾ ತೂಫಾನಿ ಧಮಾಕ’ ಬಿಡುಗಡೆ ಮಾಡಿದ್ದು ಇದು ದೇಶಾದ್ಯಂತ ರೈತರಿಗೆ ನಂಬಲಾಗದ ಬೆಲೆಗಳಲ್ಲಿ ಸೊನಾಲಿಕಾ ಹೆವಿ ಡ್ಯೂಟಿ ಟ್ರಾಕ್ಟರ್ ಗಳನ್ನು ತರುವ ಅವಕಾಶ ಕಲ್ಪಿಸಿದೆ.
ಭಾರತದ ರೈತ ಸಮುದಾಯದಲ್ಲಿ ಆಶಾವಾದ ಹೆಚ್ಚಾಗುತ್ತಿದ್ದು ಅದಕ್ಕೆ ವರ್ಷದಿಂದ ವರ್ಷಕ್ಕೆ ಮುಂಗಾರು ಬೆಳೆಯ ಇಳುವರಿ ಹಾಗೂ ಸದೃಢ ಹಿಂಗಾರಿನ ಬಿತ್ತನೆ ಆಗುತ್ತಿದ್ದು ಉತ್ತಮ ಮಳೆಗಾಲ ದ ಮುನ್ಸೂಚನೆ ಅದಕ್ಕೆ ಪೂರಕವಾಗಿದೆ. ಕೃಷಿ ಸಂಪತ್ತು ಸೃಷ್ಟಿಸುವ ಪ್ರತಿ ಅವಕಾಶವನ್ನೂ ಬಳಸಿಕೊಳ್ಳುವ ನಿಟ್ಟಿನಲ್ಲಿ ಸೊನಾಲಿಕಾದ ಹೆವಿ ಡ್ಯೂಟಿ ಟ್ರಾಕ್ಟರ್ ಗಳು ರೈತರ ದಕ್ಷತೆಯನ್ನು ಗರಿಷ್ಠಗೊಳಿಸಲು ಉದ್ದೇಶಪೂರ್ವಕವಾಗಿ ರೂಪಿಸಲಾಗಿದೆ.
ಇದನ್ನೂ ಓದಿ: Bangalore News: ಎಪಿಎಸ್ ಎಜುಕೇಷನಲ್ ಟ್ರಸ್ಟ್ ನಿಂದ ಮೇ 3 ರಂದು ರಾಷ್ಟ್ರಮಟ್ಟದ ಶಿಕ್ಷಣ ಪ್ರದರ್ಶನ ಮತ್ತು ಉದ್ಯೋಗ ಮೇಳ
ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಇಂಟರ್ನ್ಯಾಷನಲ್ ಟ್ರಾಕ್ಟರ್ಸ್ ಲಿ.ಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ರಾಮನ್ ಮಿಟ್ಟಲ್, “ನಾವು ನಮ್ಮ 2026ರ ಆರ್ಥಿಕ ವರ್ಷದ ಪ್ರಯಾಣವನ್ನು ಏಪ್ರಿಲ್ 2025ರಲ್ಲಿ 11,962 ಒಟ್ಟು ಟ್ರಾಕ್ಟರ್ ಮಾರಾಟದ ಮೂಲಕ ಸಕಾರಾತ್ಮಕ ವಾಗಿ ಪ್ರಾರಂಭಿಸಿದ್ದು ಇದು ಮುಂದಿನ ಪರಿಣಾಮಕಾರಿ ವರ್ಷಕ್ಕೆ ವೇಗ ನೀಡಿದೆ.
ನಮ್ಮ ಹೆವಿ-ಡ್ಯೂಟಿ ಟ್ರಾಕ್ಟರ್ ಗಳನ್ನು ರೈತರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಅಭಿವೃದ್ಧಿ ಪಡಿಸಲಾಗಿದ್ದು ಅದು ಪ್ರತಿ ಜಮೀನಿನಲ್ಲೂ ಸಂಪತ್ತು ಪೂರೈಸುವ ನಮ್ಮ ರೈತ-ಪ್ರಥಮ ಸಿದ್ಧಾಂತ ದಿಂದ ಪ್ರೇರಿತವಾಗಿದೆ. ಸೊನಾಲಿಕಾ ಟ್ರಾಕ್ಟರ್ಸ್ ಸದಾ ಪಾಲುದಾರರ ಹಿತಾಸಕ್ತಿ ಹೆಚ್ಚಿಸುವ ಅತ್ಯುತ್ತಮ ಟ್ರಾಕ್ಟರ್ ಗಳನ್ನು ಪೂರೈಸುವುದರಲ್ಲಿ `ರಾಜಿಯಿಲ್ಲದ’ ನೀತಿ ಅನುಸರಿಸುತ್ತಿದೆ ಮತ್ತು ನಮ್ಮ ಗ್ರಾಹಕರಿಗೆ ಇಡೀ ವರ್ಷ ಯೋಜಿಸಿರುವ ಹೊಸ ಉಪಕ್ರಮಗಳ ಮೂಲಕ ಅನಂತ ಸಂತೋಷ ನೀಡಲು ಬದ್ಧವಾಗಿದೆ” ಎಂದರು.