Bengaluru News: ಹುಡುಗಿಯರನ್ನು ಸಪ್ಲೈ ಮಾಡ್ತಾನೆ, ರಾಜಕಾರಣಿ ಜತೆ ಮಲಗು ಅಂತಾನೆ; ಗಂಡನ ವಿರುದ್ಧ ಮುಸ್ಲಿಂ ಮಹಿಳೆ ದೂರು
Bengaluru News: ನೊಂದ ಮಹಿಳೆ ನೀಡಿರುವ ದೂರಿನ ಮೇರೆಗೆ ಪತಿ ವಿರುದ್ಧ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ರಾಜಕಾರಣಿಯ ಜತೆ ಸಹಕರಿಸಬೇಕು ಎಂದು ಪದೇ ಪದೇ ಬಲವಂತ ಮಾಡುತ್ತಿದ್ದ. ಇದಕ್ಕೆ ಒಪ್ಪಲಿಲ್ಲ ಎಂದು ತಲಾಖ್ ಹೇಳಿ, ನನ್ನನ್ನು ಮಾರಾಟ ಮಾಡಲು ಮುಂದಾಗಿದ್ದ ಎಂದು ಪತಿ ವಿರುದ್ಧ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.


ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ರಾಜಕಾರಣಿ ಜತೆ ಮಲಗುವಂತೆ ಪೀಡಿಸಿ, ಬ್ಲ್ಯಾಕ್‌ಮೇಲ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಪತಿಯ ಕಾಟದಿಂದ ನೊಂದ ಮುಸ್ಲಿಂ ಬನಶಂಕರಿ ಪೊಲೀಸ್ ಠಾಣೆಗೆ (Bengaluru News) ತೆರಳಿ ದೂರು ನೀಡಿದ್ದಾರೆ. ರಾಜಕಾರಣಿಯ ಜತೆ ಸಹಕರಿಸಬೇಕು ಎಂದು ಪದೇ ಪದೇ ಬಲವಂತ ಮಾಡುತ್ತಿದ್ದ. ಇದಕ್ಕೆ ಒಪ್ಪಲಿಲ್ಲ ಎಂದು ತಲಾಖ್ ಹೇಳಿ, ನನ್ನನ್ನು ಮಾರಾಟ ಮಾಡಲು ಮುಂದಾಗಿದ್ದ ಎಂದು ಆ ಮಹಿಳೆ ಪತಿ ವಿರುದ್ಧ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.
ನನ್ನ ಗಂಡನೊಬ್ಬ ನೀಚ, ಆತ ವೇಶ್ಯಾವಾಟಿಕೆ ದಂಧೆ ನಡೆಸುತ್ತಾನೆ. ಹುಡುಗಿಯರನ್ನು ಸಪ್ಲೈ ಮಾಡುತ್ತಾನೆ. ಹುಡುಗಿಯರನ್ನು ಹಣಕ್ಕಾಗಿ ಮಾರಾಟ ಕೂಡ ಮಾಡುತ್ತಾನೆ ಎಂದು ಪತಿಯ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ರಾಜಕಾರಣಿ ಜತೆ ಮಲಗು, ಅವರೊಂದಿಗೆ ಸಹಕರಿಸು ಎಂದು ಬಲವಂತ ಮಾಡುತ್ತಿದ್ದ. ಇದಕ್ಕೆ ನಾನು ಒಪ್ಪಲಿಲ್ಲ. ಹಾಗಾಗಿ ನನ್ನ ಫೋಟೋಗಳನ್ನು ಬೇರೆಯವರಿಗೆ ತೋರಿಸಿ ನನ್ನನ್ನೂ ಮಾರಾಟ ಮಾಡಲು ಯತ್ನಿಸಿದ್ದಾನೆ ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ.
ಈ ಸುದ್ದಿಯನ್ನೂ ಓದಿ | Standard Operating Procedure: ಕಾಲ್ತುಳಿತ ದುರಂತ; ಜನಸಂದಣಿ ನಿರ್ವಹಣೆಗೆ ಎಸ್‌ಒಪಿ ರೂಪಿಸಿದ ರಾಜ್ಯ ಸರ್ಕಾರ
ಮಗಳಿಗೆ ಆಗುತ್ತಿರುವ ಅನ್ಯಾಯ ಕೇಳಲು ಬಂದ ಪೋಷಕರಿಗೂ ಗಂಡ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಪತ್ನಿ ಕುಟುಂಬಸ್ಥರಿಗೆ ಮಚ್ಚು, ಲಾಂಗ್ ತೋರಿಸಿ ಹೆದರಿಸಿದ್ದ. ಇನ್ನು ಹೆಂಡತಿಗೆ ಪ್ರತಿದಿನ ಗಂಡ ಚಿತ್ರಹಿಂಸೆ ನೀಡುತ್ತಿದ್ದರೆ, ಮತ್ತೊಂದೆಡೆ ಅತ್ತೆ, ಮಾವನಿಂದಲೂ ನಿರಂತರ ಟಾರ್ಚರ್ಗೆ ನಾನು ಬೇಸತ್ತು ಹೋಗಿದ್ದೇನೆ. ಮನೆಯಲ್ಲಿ ಗಂಡನಿಲ್ಲದ ವೇಳೆ ಬಾಡಿ ಮಸಾಜ್ ಮಾಡು ಅಂತ ಮಾವ ಕೂಡ ಪೀಡಿಸುತ್ತಿದ್ದ ಎಂದು ಮಹಿಳೆ ಆರೋಪ ಮಾಡಿದ್ದಾರೆ.
ನೊಂದ ಮಹಿಳೆ ನೀಡಿರುವ ದೂರು ಆಧರಿಸಿ ಅವರ ಪತಿ ಯೂನಸ್ ಪಾಷಾ ಎಂಬುವವರ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಗಂಡ ನನಗೆ ವರದಕ್ಷಿಣೆ ಕಿರುಕುಳವೂ ನೀಡಿ, ಗರ್ಭಪಾತ ಮಾಡಿಸಿದ್ದಾನೆ. ವರದಕ್ಷಿಣೆ ಕಿರುಕುಳದ ಆರೋಪದ ಮೇರೆಗೆ ಆಕೆಯ ಅತ್ತೆ-ಮಾವನ ವಿರುದ್ಧವೂ ಕೇಸ್ ದಾಖಲಿಸಲಾಗಿದೆ.