ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಮಂಗಳೂರಿನಲ್ಲಿ ಚೂರಿಯಿಂದ ಇರಿದು ಮತ್ತೊಬ್ಬನ ಕೊಲೆ

ಮುಸ್ತಫ ಜೊತೆ ಮಾತುಕತೆಗೆ ತನ್ನ ಇಬ್ಬರು ಪುತ್ರರೊಂದಿಗೆ ಸಲ್ಮಾನ್ ಬಂದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಸಲ್ಮಾನ್​ಗೆ ಮುಸ್ತಫ ಚೂರಿಯಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸಲ್ಮಾನ್​​ನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮಂಗಳೂರಿನಲ್ಲಿ ಚೂರಿಯಿಂದ ಇರಿದು ಮತ್ತೊಬ್ಬನ ಕೊಲೆ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ May 23, 2025 7:51 AM

ಮಂಗಳೂರು: ಮಂಗಳೂರಿನ ಬಳಿ ಮತ್ತೊಂದು ಕೊಲೆ ನಡೆದಿದೆ. ಮದುವೆ (marriage) ವಿಚಾರಕ್ಕೆ ನಡೆದ ಗಲಾಟೆ ವ್ಯಕ್ತಿಯ ಕೊಲೆಯಲ್ಲಿ (Murder Case) ಅಂತ್ಯವಾಗಿದೆ. ಮಂಗಳೂರು ಹೊರವಲಯದ ವಳಚ್ಚಿಲ್ ಬಳಿ ತಡರಾತ್ರಿ ಚಾಕುವಿನಿಂದ ಇರಿದು (Stabbing) ವಾಮಂಜೂರು ನಿವಾಸಿ ಸಲ್ಮಾನ್ (50) ಎಂಬಾತನನ್ನು ಆತನ ಸಂಬಂಧಿ ಮುಸ್ತಾಫ ಎಂಬಾತ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಸಲ್ಮಾನ್​ನ ಇಬ್ಬರ ಪುತ್ರರಾದ ರಿಯಾಬ್​, ಸಿಯಾಬ್​​ ಮೇಲೂ ಹಲ್ಲೆ ನಡೆಸಿ ಮುಸ್ತಾಫ ಪರಾರಿ ಆಗಿದ್ದಾನೆ. ಗಾಯಗೊಂಡ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಸಂಬಂಧಿ ಮುಸ್ತಫ ಎಂಬವರ ಮದುವೆಯನ್ನು ಸಲ್ಮಾನ್ ನೆರವೇರಿಸಿದ್ದ. ಇವರಿಬ್ಬರ ನಡುವೆ ಮದುವೆ ಸಂದರ್ಭದಲ್ಲಿ ವೈಮನಸ್ಸು ಉಂಟಾಗಿತ್ತು. ಇದೇ ವಿಚಾರವಾಗಿ ಮುಸ್ತಫ ಜೊತೆ ಮಾತುಕತೆಗೆ ತನ್ನ ಇಬ್ಬರು ಪುತ್ರರೊಂದಿಗೆ ಸಲ್ಮಾನ್ ಬಂದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಸಲ್ಮಾನ್​ಗೆ ಮುಸ್ತಫ ಚೂರಿಯಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸಲ್ಮಾನ್​​ನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸದ್ಯ ಪರಾರಿಯಾದ ಮುಸ್ತಫ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಕೊಡಲಿಯಂದ ಕೊಚ್ಚಿ ಪತ್ನಿಯ ಕೊಲೆ

ಕೊಪ್ಪಳ : ಪತಿಯೊಬ್ಬ (Husband) ಕೊಡಲಿಯಿಂದ ಕೊಚ್ಚಿ ಪತ್ನಿಯನ್ನು (wife) ಹತ್ಯೆಗೈದ ಆಘಾತಕಾರಿ ಘಟನೆ ಕೊಪ್ಪಳದ (koppala news) ಬೂದಗುಂಪ ಗ್ರಾಮದಲ್ಲಿ ನಡೆದಿದೆ. ಬೂದಗುಂಪ ಗ್ರಾಮದಲ್ಲಿ ಶಿವಪ್ಪ ಎಂಬಾತ ಕೊಡಲಿಯಿಂದ ಕೊಚ್ಚಿ ಪತ್ನಿ ಗಂಗಮ್ಮ ದೊಣ್ಣೆ (38) ಎಂಬವರನ್ನು ಹತ್ಯೆ (Murder case) ಮಾಡಿ ಪರಾರಿಯಾಗಿದ್ದಾರೆ. ಶಿವಪ್ಪ ಪ್ರತಿನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಇದರಿಂದ ನಿತ್ಯ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ನಿನ್ನೆ ಜಗಳ ತಾರಕಕ್ಕೇರಿದ್ದು, ರೊಚ್ಚಿಗೆದ್ದ ಶಿವಪ್ಪ ಪತ್ನಿ ಮಲಗಿದ್ದಾಗ ಕೊಡಲಿಯಿಂದ ಕೊಚ್ಚಿ ಕೊಂದು ಪರಾರಿ ಆಗಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Murder Case: ಸೂಟ್‌ಕೇಸ್‌ನಲ್ಲಿ ಮಹಿಳೆಯ ಶವ ಪತ್ತೆ; ಬೆಚ್ಚಿ ಬೀಳಿಸುವ ವಿಡಿಯೊ ವೈರಲ್