ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

GT vs LSG: ಗೆಲುವಿನೊಂದಿಗೆ 2025ರ ಐಪಿಎಲ್ ಟೂರ್ನಿಯನ್ನು ಮುಗಿಸುತ್ತೇವೆಂದ ಆವೇಶ್ ಖಾನ್!

Avesh Khan on LSG's win vs GT: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡ 33 ರನ್‌ಗಳಿಂದ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಪ್ರಮುಖ ಎರಡು ವಿಕೆಟ್ ಪಡೆದಿದ್ದ ವೇಗಿ ಆವೇಶ್ ಖಾನ್, ಈ ಗೆಲುವಿನಿಂದ ಆಟಗಾರರಲ್ಲಿ ಆತ್ಮವಿಶ್ವಾಸ ಮೂಡಿದ್ದು, ಟೂರ್ನಿಯನ್ನು ಗೆಲುವಿನೊಂದಿಗೆ ಮುಗಿಸುವ ಭರವಸೆ ಮೂಡಿದೆ ಎಂದು ಹೇಳಿದ್ದಾರೆ.

ಗುಜರಾತ್‌ ವಿರುದ್ಧದ ಗೆಲುವಿನ ಬಗ್ಗೆ ಆವೇಶ್‌ ಖಾನ್‌ ಹೇಳಿದ್ದಿದು!

ಲಖನೌ ಸೂಪರ್‌ ಜಯಂಟ್ಸ್‌ ಗೆಲುವಿನ ಬಗ್ಗೆ ಆವೇಶ ಖಾನ್‌ ಹೇಳಿಕೆ.

Profile Ramesh Kote May 23, 2025 6:11 PM

ಅಹಮದಾಬಾದ್: ಪ್ರಸಕ್ತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಗುರುವಾರ (ಮೇ 22) ಅಹಮದಾಬಾದ್ ನಡೆದಿದ್ದ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ (LSG) ತಂಡ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಗುಜರಾತ್ ಟೈಟನ್ಸ್ (GT) ತಂಡವನ್ನು ಅವರ ತವರು ನೆಲದಲ್ಲೇ 33 ರನ್‌ಗಳಿಂದ ಮಣಿಸಿದೆ. ಈ ಗೆಲುವು ಎಲ್‌ಎಸ್ ಜಿ ಆಟಗಾರರಲ್ಲಿ ಆತ್ಮವಿಶ್ವಾಸ ಮೂಡಿದ್ದು, ಟೂರ್ನಿಯ ಅಂತಿಮ ಪಂದ್ಯವನ್ನು ಜಯದೊಂದಿಗೆ ಮುಗಿಸುವ ಭರವಸೆ ಮೂಡಿದೆ ಎಂದು ವೇಗಿ ಆವೇಶ್ ಖಾನ್ (Avesh Khan) ಹೇಳಿದ್ದಾರೆ. ಈ ಟೂರ್ನಿಯಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ಈಗಾಗಲೇ ಸೋಲುವ ಮೂಲಕ ಪ್ಲೇಆಫ್ಸ್‌ನಿಂದ ಅಧಿಕೃತ ಹೊರ ಬಿದ್ದಿದೆ.

ಟೂರ್ನಿಯ ಆರಂಭಕ್ಕೂ ಮುನ್ನ ಈ ಬಾರಿ ಪ್ಲೇ ಆಫ್ಸ್‌ಗೇರುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ರಿಷಭ್ ಪಂತ್ ಸಾರಥ್ಯದ ಲಖನೌ ಸೂಪರ್ ಜಯಂಟ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೋಲುವ ಮೂಲಕ ಪ್ಲೇಆಫ್ಸ್ ರೇಸ್‌ನಿಂದ ಹೊರಬಿದ್ದಿತ್ತು. ಆದರೆ ಕಳೆದ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಶುಭಮನ್ ಗಿಲ್ ಸಾರಥ್ಯದ ಗುಜರಾತ್ ಟೈಟನ್ಸ್ ವಿರುದ್ಧ 33 ರನ್ ಅಂತರದ ಗೆಲುವು ಸಾಧಿಸಿ ಲಯಕ್ಕೆ ಮರಳಿದೆ. ಈ ಕುರಿತು ವೇಗಿ ಆವೇಶ್ ಖಾನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

IPL 2025: ಚೊಚ್ಚಲ ಶತಕ ಬಾರಿಸಿ ದಾಖಲೆ ಬರೆದ ಮಿಚೆಲ್‌ ಮಾರ್ಷ್‌

ಅಂತಿಮ ಪಂದ್ಯವನ್ನು ಗೆಲ್ಲುತ್ತೇವೆ: ಆವೇಶ್ ಖಾನ್

ಪಂದ್ಯ ಮುಗಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇಗಿ ಆವೇಶ್ ಖಾನ್, ಗುಜರಾತ್ ಟೈಟನ್ಸ್ ವಿರುದ್ಧದ ಗೆಲುವು ತಂಡದ ಆಟಗಾರರಲ್ಲಿ ಸಕಾರಾತ್ಮಕ ಭಾವನೆಯನ್ನು ಮೂಡಿಸಿದೆ ಎಂದು ಹೇಳಿದ್ದಾರೆ.

"ಪ್ರತಿಯೊಂದು ತಂಡದ ಆಟಗಾರರು ಗೆಲುವು ಪಡೆಯುವ ದೃಷ್ಟಿಯಿಂದಲೇ ಮೈದಾನಕ್ಕೆ ಇಳಿಯುತ್ತಾರೆ. ಆದರೆ ದುರದೃಷ್ಟವಶಾತ್ ಕೆಲವು ವೇಳೆ ಫಲಿತಾಂಶಗಳು ನಮ್ಮ ತಂಡದ ಪರ ಇರುವುದಿಲ್ಲ. ನಾವು ಈಗಾಗಲೇ ಟೂರ್ನಿಯಿಂದ ಹೊರಗುಳಿದಿದ್ದೇವೆ ಎಂಬುದು ನಮಗೆ ತಿಳಿದಿದೆ. ಆದರೆ ಮುಂದಿನ ಪಂದ್ಯದಲ್ಲೂ ಸಂಘಟಿತ ಪ್ರದರ್ಶನ ನೀಡಿ ಗೆಲುವು ಸಾಧಿಸುವ ಮೂಲಕ ಟೂರ್ನಿಯನ್ನು ಮುಗಿಸುವ ಮನಸ್ಥಿತಿಯಲ್ಲಿ ನಾವು (ಆಟಗಾರರು) ಇದ್ದೇವೆ," ಎಂದು ಎಲ್‌ಎಸ್‌ಜಿ ವೇಗಿ ತಿಳಿಸಿದ್ದಾರೆ.

IPL 2025: ʻಫೇಕ್‌ ನ್ಯೂಸ್‌ʼ-ಎಲ್‌ಎಸ್‌ಜಿ ತೊರೆಯುವ ಬಗ್ಗೆ ರಿಷಭ್‌ ಪಂತ್‌ ಸ್ಪಷ್ಟನೆ!

ಗೆಲುವು ಆತ್ಮವಿಶ್ವಾಸ ಮೂಡಿಸಿದೆ

"ನಾವು ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸುತ್ತೇವೆ ಎಂಬುದಕ್ಕೆ ಪ್ರಬಲವಾದ ಕಾರಣವಿದೆ. ಆದ್ದರಿಂದ ಅಂತಿಮ ಪಂದ್ಯ ಗೆಲ್ಲುವುದು ನಮ್ಮ ಗುರಿಯಾಗಿದೆ. ಅಲ್ಲದೆ ಗುಜರಾತ್ ಟೈಟನ್ಸ್ ವಿರುದ್ಧ ಸಿಕ್ಕಿರುವ 33 ರನ್ ಗೆಲುವು ತಂಡದ ಆಟಗಾರರಲ್ಲಿ ದೊಡ್ಡ ಆತ್ಮವಿಶ್ವಾಸ ಮೂಡಿಸಿದೆ. ಟೂರ್ನಿಯ ಎರೆನೇ ಹಂತದಲ್ಲಿ ನಾವು ಸತತವಾಗಿ ಐದು ಅಥವಾ ಆರು ಪಂದ್ಯಗಳಲ್ಲಿ ಸೋಲು ಕಂಡಿದ್ದೆವು. ಆದರೆ ಈ ಗೆಲುವು ನಮಗೆ ಸ್ಫೂರ್ತಿ ನೀಡಿದೆ. ಈ ಗೆಲುವಿನಿಂದ ನಮ್ಮಲ್ಲಿ ಸಕಾರಾತ್ಮಕ ಭಾವನೆ ಮೂಡಿದ್ದು, ಟೂರ್ನಿಯನ್ನು ಗೆಲುವಿನೊಂದಿಗೆ ಮುಗಿಸುವ ಭರವಸೆ ಮೂಡಿದೆ," ಎಂದು ಆವೇಶ್ ಖಾನ್ ಹೇಳಿದ್ದಾರೆ.

ಎಲ್‌ಎಸ್‌ಜಿಗೆ 33 ರನ್ ಗೆಲುವು

2025ರ ಐಪಿಎಲ್ ಟೂರ್ನಿಯ ನಿಮಿತ್ತ ಮೇ 22 (ಗುರುವಾರ) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 64ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಲಖನೌ ಸೂಪರ್ ಜಯಂಟ್ಸ್ ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ (117 ರನ್) ಸ್ಫೋಟಕ ಶತಕ ಹಾಗೂ ನಿಕೋಲಸ್ ಪೂರನ್ (56* ರನ್) ಅವರ ಅಜೇಯ ಅರ್ಧ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 235 ಬೃಹತ್ ಮೊತ್ತ ಕಲೆ ಹಾಕಿತು.

IPL 2025: ರಿಷಭ್‌ ಪಂತ್‌ ಎದುರಿಸುತ್ತಿರುವ ಸಮಸ್ಯೆಯನ್ನು ರಿವೀಲ್‌ ಮಾಡಿದ ಯೋಗರಾಜ್‌ ಸಿಂಗ್‌!

ನಂತರ ಗುರಿಯನ್ನು ಹಿಂಬಾಲಿಸಿದ ಗುಜರಾತ್ ಟೈಟನ್ಸ್, ಶಾರುಖ್ ಖಾನ್ (57 ರನ್) ಅವರ ಅರ್ಧಶತಕ, ಶುಭಮನ್ ಗಿಲ್ (35 ರನ್) ಹಾಗೂ ಜೋಸ್ ಬಟ್ಲರ್ (33 ರನ್) ಸ್ಫೋಟಕ ಆಟದ ಹೊರತಾಗಿಯೂ 20 ಓವರ್‌ಗಳ ಅಂತ್ಯಕ್ಕೆ 202 ರನ್ ಗಳಿಸಿ 33 ರನ್ ಸೋಲು ಕಂಡಿತು. ವಿಲ್ ಓ ರೌರ್ಕಿ (27ಕ್ಕೆ3) ಯಶಸ್ವಿ ಬೌಲರ್, ಆದರೆ ಆವೇಶ್ ಖಾನ್ ಹಾಗೂ ಆಯುಷ್ ಬದೋನಿ ತಲಾ ಎರಡು ವಿಕೆಟ್ ಪಡೆದು ಗುಜರಾತ್ ಟೈಟನ್ಸ್ ಆಟಗಾರರ ರನ್ ದಾಹಕ್ಕೆ ಕಡಿವಾಣ ಹಾಕಿದರು. ಎಲ್‌ಎಸ್‌ಜಿ ತಂಡ, ಮೇ 27 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಟೂರ್ನಿಯ ತಮ್ಮ ಕೊನೆಯ ಪಂದ್ಯ ಆಡಲಿದೆ.