IND vs ENG: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯ ಟೆಸ್ಟ್ ನಿವೃತ್ತಿ ಬಗ್ಗೆ ಗೌತಮ್ ಗಂಭೀರ್ ಪ್ರತಿಕ್ರಿಯೆ!
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡಕ್ಕೆ ಕಠಿಣ ಸವಾಲು ಎದುರಾಗಲಿದೆ ಎಂದು ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ. ಆದರೆ, ಈ ಇಬ್ಬರ ಸ್ಥಾನವನ್ನು ತುಂಬಲು ಇತರೆ ಆಟಗಾರರು ಸಿದ್ದರಿದ್ದಾರೆಂದು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ

ನವದೆಹಲಿ: ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ (Rohit Sharma) ಅನುಪಸ್ಥಿತಿಯು ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಭಾರತ ತಂಡಕ್ಕೆ ದೊಡ್ಡ ಸವಾಲು ಎದುರಾಗಲಿದೆ ಎಂದು ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ಒಪ್ಪಿಕೊಂಡಿದ್ದಾರೆ. ಆದರೆ ಇವರ ಟೆಸ್ಟ್ ಕ್ರಿಕೆಟ್ ನಿವೃತ್ತಿಯು ಇತರೆ ಆಟಗಾರರು ಮುಂದೆ ಬಂದು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅವಕಾಶವನ್ನು ಸೃಷ್ಟಿಸಿದೆ ಎಂದು ಹೇಳಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಒಂದೇ ವಾರದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಮುಂದಿನ ತಿಂಗಳು ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ ಭಾರಿ ಹಿನ್ನಡೆಯಾಗಿದೆ. ಸೀಮಿಂಗ್ ಬೌಲಿಂಗ್ ಕಂಡೀಷನ್ಸ್‌ನಲ್ಲಿ ಭಾರತ ತಂಡ ಕಠಿಣ ಸವಾಲನ್ನು ಎದುರಿಸಲಿದೆ.
"ನೀವು ಯಾವಾಗ ಕ್ರಿಕೆಟ್ ಪ್ರಾರಂಭಿಸುತ್ತೀರಿ ಮತ್ತು ಯಾವಾಗ ಮುಗಿಸಲು ಬಯಸುತ್ತೀರಿ ಎಂಬುದು ನಿಮ್ಮ ವೈಯಕ್ತಿಕ ನಿರ್ಧಾರ ಎಂದು ನಾನು ನಂಬುತ್ತೇನೆ. ಬೇರೆ ಯಾರಿಗೂ ಇದರ ಬಗ್ಗೆ ಹಕ್ಕಿಲ್ಲ. ಕೋಚ್ ಆಗಿರಲಿ, ಆಯ್ಕೆದಾರರಾಗಿರಲಿ ಅಥವಾ ದೇಶದ ಬೇರೆ ಯಾರೇ ಆಗಿರಲಿ, ಯಾವಾಗ ನಿವೃತ್ತಿ ಹೊಂದಬೇಕು ಮತ್ತು ಯಾವಾಗ ನಿವೃತ್ತಿ ಹೊಂದಬಾರದು ಎಂದು ಹೇಳುವ ಹಕ್ಕು ಯಾರಿಗಾದರೂ ಇದೆಯೇ? ಅದು ವೈಯಕ್ತಿಕ ನಿರ್ಧಾರ," ಎಂದು ನ್ಯೂಸ್ 18ಗೆ ಗೌತಮ್ ಗಂಭೀರ್ ತಿಳಿಸಿದ್ದಾರೆ.
IPL 2025: ವಿರಾಟ್ ಕೊಹ್ಲಿ ದಾಖಲೆ ಮುರಿಯಲು ಸಜ್ಜಾದ ಕೆ.ಎಲ್ ರಾಹುಲ್
"ನಮ್ಮ ಇಬ್ಬರು ಅತ್ಯಂತ ಹಿರಿಯ ಅನುಭವಿ ಆಟಗಾರರು ಇಲ್ಲದೆ ನಾವು ಹೊರಡುತ್ತೇವೆ. ಇತರ ಆಟಗಾರರು ತಮ್ಮ ಉಪಯುಕ್ತತೆಯನ್ನು ಸಾಬೀತುಪಡಿಸಲು ಇದು ಒಂದು ಅವಕಾಶ ಎಂದು ನನಗೆ ಹಲವು ಬಾರಿ ಅನಿಸುತ್ತದೆ. ಇದು ಕಷ್ಟಕರವಾಗಿರುತ್ತದೆ ಆದರೆ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಿರುವ ಆಟಗಾರರು ಇರುತ್ತಾರೆ. ಚಾಂಪಿಯನ್ಸ್ ಟ್ರೋಫಿಗೂ ಮುಂಚೆಯೇ ನನಗೆ ಈ ಪ್ರಶ್ನೆ ಕೇಳಲಾಗಿತ್ತು," ಎಂದು ಅವರು ಹೇಳಿದ್ದಾರೆ.
"ಜಸ್‌ಪ್ರೀತ್ ಬುಮ್ರಾ ಇಲ್ಲದಿದ್ದಾಗಲೂ ನಾನು ಇದನ್ನೇ ಹೇಳಿದ್ದೆ. ಯಾರೊಬ್ಬರ ಅನುಪಸ್ಥಿತಿಯೂ ಮತ್ತೊಬ್ಬ ಆಟಗಾರನಿಗೆ ವಿಶೇಷವಾದದ್ದನ್ನು ಮಾಡಲು ಅವಕಾಶ ನೀಡುತ್ತದೆ. ಈ ಅವಕಾಶಕ್ಕಾಗಿ ಕಾಯುತ್ತಿರುವ ಆಟಗಾರರು ಇರುತ್ತಾರೆ," ಎಂದು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ತಿಳಿಸಿದ್ದಾರೆ.
CSK vs RR: ಒಂದು ಸಿಕ್ಸರ್ ಸಿಡಿಸಿ ರೋಹಿತ್ ಶರ್ಮಾ ದಾಖಲೆ ಮುರಿದ ಎಂಎಸ್ ಧೋನಿ!
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ಆಡುವುದನ್ನು ಮುಂದುವರಿಸಲಿದ್ದಾರೆ. 2027ರ ಏಕದಿನ ವಿಶ್ವಕಪ್ ತಂಡದಲ್ಲಿ ಇಬ್ಬರೂ ಇರುತ್ತಾರೆಯೇ ಎಂದು ಕೇಳಿದಾಗ ಗಂಭೀರ್, "ಅದಕ್ಕೆ ಇನ್ನೂ ಸಾಕಷ್ಟು ಸಮಯವಿದೆ. ಅದಕ್ಕೂ ಮುನ್ನ ಟಿ20 ವಿಶ್ವಕಪ್ ನಡೆಯಬೇಕು. ಇದು ಫೆಬ್ರವರಿ-ಮಾರ್ಚ್‌ನಲ್ಲಿ ಭಾರತದಲ್ಲಿ ನಡೆಯಲಿರುವ ದೊಡ್ಡ ಟೂರ್ನಿಯಾಗಿದೆ. ಈಗ ಇಡೀ ಗಮನ ಅದರ ಮೇಲೆಯೇ ಇದೆ," ಎಂದು ಟೀಮ್ ಇಂಡಿಯಾ ಹೆಡ್ ಕೋಚ್ ತಿಳಿಸಿದ್ದಾರೆ.