ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಗೆಳೆಯನ ಬಟ್ಟೆಬಿಚ್ಚಿ ನಡುರಸ್ತೆಯಲ್ಲಿ ಚಪ್ಪಲಿಯಲ್ಲಿ ಹೊಡೆದ ಹುಡುಗಿ; ಈಕೆಯ ರೌದ್ರಾವತಾರ ಕಂಡು ನೆಟ್ಟಿಗರು ಫುಲ್‌ ಶಾಕ್‌!

ಮಧ್ಯಪ್ರದೇಶದ ಇಂದೋರ್‌ನಲ್ಲಿ ತನ್ನ ಗೆಳೆಯನನ್ನು ಇನ್ನೊಬ್ಬ ಹುಡುಗಿಯ ಜೊತೆ ಹೋಟೆಲ್‌ನಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದ ಹುಡುಗಿಯೊಬ್ಬಳು ಆತನನ್ನು ನಡು ರಸ್ತೆಯಲ್ಲಿ ಮಲಗಿಸಿ ಸಾರ್ವಜನಿಕರ ಎದುರಿನಲ್ಲಿ ಬಟ್ಟೆ ಬಿಚ್ಚಿ ಚಪ್ಪಲಿಯಲ್ಲಿ ಹೊಡೆದಿದ್ದಾಳೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದ್ದು, ಹುಡುಗಿಯ ರೌದ್ರಾವತಾರ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.

ನಡುರಸ್ತೆಯಲ್ಲೇ ಯುವಕ ಬಟ್ಟೆಬಿಚ್ಚಿ ಚಪ್ಪಲಿ ಸೇವೆ; ಈ ವಿಡಿಯೊ ನೋಡಿ

Profile pavithra May 23, 2025 1:12 PM

ಭೋಪಾಲ್: ಇತ್ತೀಚೆಗೆ ಹೆಂಡತಿಯೊಬ್ಬಳು ಬೈಕ್‌ನಲ್ಲಿಯೇ ಗಂಡನಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದೀಗ ಪ್ರೀತಿಸಿ ಮೋಸ ಮಾಡಿದ ಹುಡುಗನಿಗೆ ಹುಡುಗಿಯೊಬ್ಬಳು ನಡು ರಸ್ತೆಯಲ್ಲಿ ಮಲಗಿಸಿ ಸಾರ್ವಜನಿಕರ ಎದುರಿನಲ್ಲಿ ಬಟ್ಟೆ ಬಿಚ್ಚಿ ಚಪ್ಪಲಿಯಲ್ಲಿ ಥಳಿಸಿದ್ದಾಳೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಹುಡುಗಿಯ ರೌದ್ರಾವತಾರ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.

ಈ ವೈರಲ್ ವಿಡಿಯೊದಲ್ಲಿ ಹುಡುಗಿಯೊಬ್ಬಳು ಇನ್ನೊಬ್ಬ ಹುಡುಗಿಯ ಜೊತೆ ಇದ್ದ ತನ್ನ ಗೆಳೆಯನನ್ನು ಹೋಟೆಲ್‌ನಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದು ಬೀದಿಯಲ್ಲಿ ಮಲಗಿಸಿ ಕ್ರೂರವಾಗಿ ಹೊಡೆದಿದ್ದಾಳೆ. ಹುಡುಗಿ ಹುಡುಗನ ಎದೆಯ ಮೇಲೆ ತನ್ನ ಕಾಲಿಟ್ಟು ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಅಷ್ಟೇ ಅಲ್ಲದೇ ಅವನ ಬಟ್ಟೆಯನ್ನು ಬಿಚ್ಚಿ ಹೊಡೆದಿದ್ದಾಳೆ. ಅಲ್ಲಿದ್ದ ಜನರು ಹುಡುಗಿಯ ರೌದ್ರಾವತಾರ ಕಂಡು ಬೆಚ್ಚಿಬಿದ್ದಿದ್ದಾರೆ.

ವಿಡಿಯೊ ನೋಡಿ...



ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೊ ನೋಡಿದ ನಂತರ, ನೆಟ್ಟಿಗರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಆದರೆ ಈ ವಿಷಯದಲ್ಲಿ ಯಾವುದೇ ಪೊಲೀಸ್ ಕ್ರಮ ಕೈಗೊಂಡ ಬಗ್ಗೆ ಯಾವುದೇ ವರದಿಗಳಿಲ್ಲ.

ಈ ಸುದ್ದಿಯನ್ನೂ ಓದಿ:Viral Video:ಜುಟ್ಟು ಹಿಡಿದುಕೊಂಡು ಬಡಿದಾಡಿಕೊಂಡ ಹುಡುಗಿಯರು; ಕಾರಣ ಕೇಳಿದ್ರೆ ಶಾಕ್‌ ಆಗ್ತೀರಿ!

ಮಧ್ಯಪ್ರದೇಶದ ಒಂದು ಕಡೆ ಇಂತಹ ಹೈಡ್ರಾಮಾ ನಡೆದರೆ, ಇನ್ನೊಂದು ಕಡೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಬುಧವಾರ(ಮೇ 21) ಧಾರಾಕಾರ ಮಳೆಯ ಸಮಯದಲ್ಲಿ ಬೀಸಿದ ಭಾರೀ ಗಾಳಿಗೆ ಮನೆಯ ಮೇಲ್ಛಾವಣಿ ಹಾರಿಹೋಗಿದೆ. ಆ ವೇಳೆ ಮನೆಯನ್ನು ರಕ್ಷಿಸಲು ಛಾವಣಿ ಹಿಡಿದಿದ್ದ ಮಕ್ಕಳಿಬ್ಬರು ಛಾವಣಿಯ ಜೊತೆಗೆ ಹಾರಿ ಹೋಗಿದ್ದಾರೆ. ಈ ಭಯಾನಕ ದೃಶ್ಯದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.ಘಟನೆಯಲ್ಲಿ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಈಗ ಅಪಾಯದಿಂದ ಪಾರಾಗಿದ್ದಾರೆ ಮತ್ತು ಸರಿಯಾದ ವೈದ್ಯಕೀಯ ಆರೈಕೆಯನ್ನು ಪಡೆಯುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.