Tips for fast writing: ಪರೀಕ್ಷೆಯಲ್ಲಿ ಅಕ್ಷರ ಸುಂದರವಾಗಿದ್ದರೆ ಸಾಲದು ವೇಗವಾಗಿಯೂ ಬರೆಯಬೇಕು; ಅದಕ್ಕಾಗಿ ಇಲ್ಲಿದೆ ಟಿಪ್ಸ್
ಅಕ್ಷರ ಸುಂದರವಾಗಿರಬೇಕು ನಿಜ ಆದರೆ ಸಮಯ ಸಂದರ್ಭಕ್ಕೆ ಅನುಗುಣವಾಗಿ ವೇಗವಾಗಿರುವುದು ಕೂಡ ಮುಖ್ಯವಾಗುತ್ತದೆ. ಎಷ್ಟೋ ಸಂದರ್ಭದಲ್ಲಿ ಮಕ್ಕಳು ಉತ್ತರ ಗೊತ್ತಿದ್ದರೂ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯನ್ನು ಪೂರ್ತಿಯಾಗಿ ಉತ್ತರಿಸುವಲ್ಲಿ ಸೋಲುತ್ತಾರೆ. ಇದಕ್ಕೆ ಮುಖ್ಯ ಕಾರಣ ಬರೆಯುವ ವೇಗದಲ್ಲಿ (Tips for fast writing) ಅವರು ಸೋತಿರುತ್ತಾರೆ. ಮೂರು ಗಂಟೆಗಳ ಅವಧಿಯ ಪರೀಕ್ಷೆಯಲ್ಲಿ ಬರೆಯುವ ವೇಗವನ್ನು ಹೆಚ್ಚಿಸಲು ಕೆಲವು ಟಿಪ್ಸ್ ಇಲ್ಲಿದೆ.

ಸಾಂದರ್ಭಿಕ ಚಿತ್ರ.


ಮೂರು ಗಂಟೆಗಳ ಪರೀಕ್ಷೆಗಳಲ್ಲಿ ಬರೆಯುವ ವೇಗವನ್ನು ಪ್ರಾರಂಭದಿಂದಲೇ ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ. ಇಲ್ಲವಾದರೆ ಪೂರ್ತಿ ಪ್ರಶ್ನೆ ಪತ್ರಿಕೆಗೆ ಬರೆಯಲು ಸಾಧ್ಯವಾಗುವುದಿಲ್ಲ. ಪೂರ್ತಿ ಅಂಕ ಪಡೆಯಬೇಕಾದರೆ ಕೇವಲ ಅಕ್ಷರ ಚೆನ್ನಾಗಿದ್ದರೆ ಸಾಲದು ಬರೆಯುವ ವೇಗವು ಮುಖ್ಯವಾಗಿರುತ್ತದೆ.

ಪರೀಕ್ಷೆಗಳಲ್ಲಿ ಸಮಯದ ಮಿತಿಯೊಳಗೆ ಉತ್ತರಗಳನ್ನು ಬರೆಯುವುದನ್ನು ಮೊದಲೇ ಅಭ್ಯಾಸ ಮಾಡಿಕೊಳ್ಳಬೇಕು. ಇದು ತಾಳ್ಮೆಯನ್ನು ಬೇಡುತ್ತದೆಯಾದರೂ ಇದು ಮೆದುಳಿಗೆ ಹೆಚ್ಚು ಕೆಲಸ ಕೊಡುತ್ತದೆ. ಜತೆಗೆ ಆತುರಾತುರವಾಗಿ ಕಾರ್ಯ ನಿರ್ವಹಿಸಲು ಮೆದುಳನ್ನು ಪ್ರೇರೇಪಿಸುತ್ತದೆ. ಇದರಿಂದ ತಪ್ಪುಗಳಾಗುತ್ತದೆ. ಹೀಗಾಗಿ ಕೊನೆಯ ಕ್ಷಣದ ಗೊಂದಲ ತಪ್ಪಿಸಲು ಮೊದಲೇ ವೇಗವಾಗಿ ಬರೆಯುವ ಅಭ್ಯಾಸ ರೂಢಿಸಿಕೊಂಡರೆ ಉತ್ತಮ.

ಪರೀಕ್ಷೆಗಳಲ್ಲಿ ವೇಗವಾಗಿ ಬರೆಯಲು ಸರಾಗವಾಗಿ ಚಲಿಸುವ ಮತ್ತು ಹಿಡಿದಿಡಲು ಆರಾಮದಾಯಕವಾದ ಪೆನ್ನುಗಳನ್ನು ಬಳಸಿ. ಗ್ರಾಡ್ ಅಥವಾ ರೋಲರ್ಬಾಲ್ ಪೆನ್ನುಗಳು ಬರೆಯುವ ವೇಗವನ್ನು ಹೆಚ್ಚಿಸುತ್ತವೆ. ಇದರಿಂದ ನಿಗದಿತ ಸಮಯದೊಳಗೆ ಆರಾಮವಾಗಿ ಎಲ್ಲ ಉತ್ತರಗಳನ್ನು ಬರೆದು ಮುಗಿಸಬಹುದು.

ಕರ್ಸಿವ್ ಬರವಣಿಗೆಯನ್ನು ಅಭ್ಯಾಸ ಮಾಡುವುದರಿಂದ ಪೆನ್ನುಗಳ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಇದು ಹೆಚ್ಚು ವೇಗವಾಗಿ ಬರೆಯಲು ನಿಮಗೆ ಅನುವು ಮಾಡಿಕೊಡುತ್ತದೆ. ಬರವಣಿಗೆಯಲ್ಲಿ ಸ್ಥಿರತೆಯನ್ನು ಅಭ್ಯಾಸ ಮಾಡಿದಷ್ಟು ಬರವಣಿಗೆಯ ವೇಗ ಹೆಚ್ಚಾಗುತ್ತದೆ.

ಮೊದಲು ಯೋಚನೆ ಮಾಡಿ ಬಳಿಕ ಬರೆಯಿರಿ. ಒಂದು ಪ್ರಶ್ನೆ ಬಿಟ್ಟು ಇನ್ನೊಂದನ್ನು ಬರೆಯುವುದು, ಒಮ್ಮೆ ಬರೆದುದನ್ನು ಅಳಿಸುವುದನ್ನು ಆದಷ್ಟು ಕಡಿಮೆ ಮಾಡಿ. ಮೊದಲು ಉತ್ತರವನ್ನು ಯೋಚಿಸಿ ಬಳಿಕ ಬರೆಯುವ ಅಭ್ಯಾಸ ಮಾಡಿದರೆ ಪರೀಕ್ಷೆಯಲ್ಲಿ ಬರೆಯುವ ವೇಗವನ್ನು ಹೆಚ್ಚಿಸಿಕೊಳ್ಳಬಹುದು.

ಪರೀಕ್ಷೆಯಲ್ಲಿ ಬೇರೆಯವರನ್ನು ನೋಡುತ್ತಾ, ಬೇರೆ ಏನನ್ನೋ ಯೋಚಿಸುತ್ತಾ ಸಮಯ ಕಳೆಯಬೇಡಿ. ಪರೀಕ್ಷೆಯಲ್ಲಿ ಸಮಯವನ್ನು ಉಳಿಸಲು ಪ್ರಯತ್ನಿಸಿ. ಹೆಚ್ಚುವರಿ ಉತ್ತರ ಅಥವಾ ಪರಿಷ್ಕರಣೆ ಮಾಡಿಕೊಳ್ಳಲು ಸಮಯವನ್ನು ಮೀಸಲಿರಿಸಿ. ಇದು ಕೂಡ ಬರೆಯುವ ವೇಗವನ್ನು ಹೆಚ್ಚಿಸುತ್ತದೆ.

ವಿಜ್ಞಾನ ಅಥವಾ ಅರ್ಥಶಾಸ್ತ್ರದಂತಹ ವಿಷಯಗಳಲ್ಲಿಅನುಮತಿಸಲಾಗುವ ಸಂಕ್ಷಿಪ್ತ ಪದಗಳನ್ನು ಬಳಸಿ (ಉದಾ., "w/" for with). ಉತ್ತಮ ವೇಗದಲ್ಲಿ ಸ್ಪಷ್ಟವಾಗಿ ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅನಗತ್ಯವಾದ ಪದಗಳನ್ನು ಸೇರಿಸದಂತೆ ಎಚ್ಚರವಹಿಸಿ. ಇದರಿಂದ ನಿಗದಿತ ಸಮಯದಲ್ಲಿ ಪರೀಕ್ಷೆ ಬರೆದು ಮುಗಿಸಬಹುದು.

ಪರೀಕ್ಷೆ ಸಮಯದಲ್ಲಿ ಪ್ರತಿ 30– 45 ನಿಮಿಷಗಳಿಗೊಮ್ಮೆ 10 ಸೆಕೆಂಡ್ಗಳ ಕಾಲ ಕೈ ಬೆರಳುಗಳನ್ನು ಬಿಡಿಸಿ. ಇದರಿಂದ ಸುದೀರ್ಘವಾಗಿ ಪರೀಕ್ಷೆ ಬರೆಯುವುದರಿಂದ ಕೈ ಬೆರಳುಗಳು ನೋಯುವುದಿಲ್ಲ. ಇದರಿಂದ ಕೂಡ ಬರವಣಿಗೆಯ ವೇಗವನ್ನು ಹೆಚ್ಚಿಸಿಕೊಳ್ಳಬಹುದು.