Anita Anand: ಭಗವದ್ಗೀತೆ ಕೈಯಲ್ಲಿ ಹಿಡಿದೇ ಕೆನಡಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಅನಿತಾ ಆನಂದ್
Anita Anand Oath Taking:ಭಾರತೀಯ ಮೂಲದ ಅನಿತಾ ಆನಂದ್(Anita Anand), ಕೆನಡಾದ ಮಾರ್ಕ್ ಕಾರ್ನಿ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ವೇಳೆ ಅವರ ಕೈಯಲ್ಲಿದ್ದ ಭಗವದ್ಗೀತೆಯ ಗ್ರಂಥ ಎಲ್ಲರ ಗಮನ ಸೆಳೆದಿದೆ. ಅನಿತಾ ಭಗವದ್ಗೀತೆ ಮೇಲೆ ಕೈ ಇಟ್ಟು ಪ್ರಮಾಣ ವಚನ ಸ್ವೀಕರಿಸಿದ್ದಾರೆ.


ನವದೆಹಲಿ: ಭಾರತೀಯ ಮೂಲದ ಅನಿತಾ ಆನಂದ್(Anita Anand), ಕೆನಡಾದ ಮಾರ್ಕ್ ಕಾರ್ನಿ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ವೇಳೆ ಅವರ ಕೈಯಲ್ಲಿದ್ದ ಭಗವದ್ಗೀತೆಯ ಗ್ರಂಥ ಎಲ್ಲರ ಗಮನ ಸೆಳೆದಿದೆ. ಅನಿತಾ ಭಗವದ್ಗೀತೆ ಮೇಲೆ ಕೈ ಇಟ್ಟು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇನ್ನು ಅನಿತಾ ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಾಗಲೂ ಕೈಯಲ್ಲಿ ಭಗವದ್ಗೀತೆಯನ್ನು ಹಿಡಿದು ಎಲ್ಲರ ಗಮನ ಸೆಳೆದಿದ್ದರು. ಆ ಮೂಲಕ ಅವರು ಭಾರತೀಯ ಸಂಸ್ಕೃತಿ, ಸನಾತನ ಧರ್ಮವನ್ನು ಪರಿಪಾಲಿಸಿದ್ದಾರೆ. ಇದೀಗ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ.
ಕೆನಡಾದ ವಿದೇಶಾಂಗ ಸಚಿವರಾಗಿ ನೇಮಕಗೊಂಡಿರುವುದು ನನಗೆ ಗೌರವ ತಂದಿದೆ. ಸುರಕ್ಷಿತ, ಉತ್ತಮ ಜಗತ್ತನ್ನು ನಿರ್ಮಿಸಲು ಮತ್ತು ಕೆನಡಿಯನ್ನರಿಗೆ ತಲುಪಿಸಲು ಪ್ರಧಾನಿ ಮಾರ್ಕ್ ಕಾರ್ನಿ ಮತ್ತು ನಮ್ಮ ತಂಡದೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಅನಿತಾ ಆನಂದ್ ಪ್ರಮಾಣ ವಚನದ ವಿಡಿಯೊ ಇಲ್ಲಿದೆ
I am honoured to be named Canada’s Minister of Foreign Affairs. I look forward to working with Prime Minister Mark Carney and our team to build a safer, fairer world and deliver for Canadians. pic.twitter.com/NpPqyah9k3
— Anita Anand (@AnitaAnandMP) May 13, 2025
ಅನಿತಾ ಆನಂದ್ ಯಾರು?
ಅನಿತಾ ಆನಂದ್ ಅವರ ಪೋಷಕರು ಭಾರತೀಯ ಮೂಲದವರು. ಅವರು ತಾಯಿ ತಮಿಳುನಾಡು ಮೂಲದವರಾದರೆ, ತಂದೆ ಪಂಜಾಬ್ ಮೂಲದವರು. ಕೆನಡಾದಲ್ಲೇ ಜನಿಸಿದ ಅನಿತಾ ಆನಂದ್ ಕಾರ್ಪೊರೇಟ್ ವಕೀಲರಾಗಿ ತಮ್ಮ ವೃತ್ತಿಪರ ಜೀವನವನ್ನು ಪ್ರಾರಂಭಿಸಿದರು. ಅವರ ರಾಜಕೀಯ ಪ್ರಯಾಣವು 2015 ರಲ್ಲಿ ಒಂಟಾರಿಯೊ ಸರ್ಕಾರಿ ತಜ್ಞರ ಸಮಿತಿಗೆ ನೇಮಕಾತಿಯೊಂದಿಗೆ ಪ್ರಾರಂಭವಾಯಿತು. ತರುವಾಯ, 2019 ರಲ್ಲಿ, ಅವರು ಓಕ್ವಿಲ್ಲೆಯ ಸಂಸತ್ ಸದಸ್ಯರಾಗಿ ಆಯ್ಕೆಯಾದರು. 2019ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಸಚಿವರಾಗಿ ಇವರು ನಿರ್ವಹಿಸಿದ ಕಾರ್ಯ ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು.
ಇನ್ನು ಅನಿತಾ ನಾಲ್ಕು ಪದವಿಗಳನ್ನು ಪಡೆದಿದ್ದಾರೆ. ಕ್ವೀನ್ಸ್ ವಿಶ್ವವಿದ್ಯಾಲಯದಿಂದ (ಅಲ್ಲಿ ಅವರು ಚಿನ್ನದ ಪದಕ ವಿಜೇತರಾಗಿದ್ದರು) ರಾಜಕೀಯ ಅಧ್ಯಯನದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ನ್ಯಾಯಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್, ಡಾಲ್ಹೌಸಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಮತ್ತು ಟೊರೊಂಟೊ ವಿಶ್ವವಿದ್ಯಾಲಯದಿಂದ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಹೆಗ್ಗಳಿಕೆ ಇವರದ್ದು. ಇನ್ನು ಆನಂದ್ ಕೆನಡಾದ ವಕೀಲ ಮತ್ತು ವ್ಯವಹಾರ ಕಾರ್ಯನಿರ್ವಾಹಕ ಜಾನ್ ನೋಲ್ಟನ್ ಅವರನ್ನು ವಿವಾಹವಾದರು. ಇವರಿಗೆ ನಾಲ್ಕು ಮಕ್ಕಳಿದ್ದಾರೆ.
ಈ ಸುದ್ದಿಯನ್ನೂ ಓದಿ: ಕೆನಡಾದ ರಕ್ಷಣಾ ಸಚಿವರಾಗಿ ಅನಿತಾ ಆನಂದ್ ಆಯ್ಕೆ
ಮಾರ್ಕ್ ಕಾರ್ನಿಯವರ ಮೊದಲ ಸಚಿವ ಸಂಪುಟದ ಒಂದು ನೋಟ
ಮಾರ್ಕ್ ಕಾರ್ನಿ ಅವರ ಚೊಚ್ಚಲ ಸಚಿವ ಸಂಪುಟವು 28 ಸಚಿವರು ಮತ್ತು 10 ವಿದೇಶಾಂಗ ಕಾರ್ಯದರ್ಶಿಗಳನ್ನು ಒಳಗೊಂಡಿದೆ. ಶಫ್ಕತ್ ಅಲಿ, ಜಿಲ್ ಮೆಕ್‌ನೈಟ್, ಟಿಮ್ ಹಾಡ್ಗ್ಸನ್, ಎಲೀನರ್ ಓಲ್ಸ್ಜೆವ್ಸ್ಕಿ, ಮ್ಯಾಂಡಿ ಗುಲ್-ಮಾಸ್ಟಿ, ಜೋಯಲ್ ಲೈಟ್‌ಬೌಂಡ್, ಗ್ರೆಗರ್ ರಾಬರ್ಟ್‌ಸನ್, ಇವಾನ್ ಸೊಲೊಮನ್, ವೇಯ್ನ್ ಲಾಂಗ್ ಮತ್ತು ನಥಾಲಿ ಪ್ರೊವೊಸ್ಟ್ ಸೇರಿದಂತೆ 24 ಸದಸ್ಯರು ಹೊಸದಾಗಿ ಸಂಪುಟ ಸೇರಿದ ಸದಸ್ಯರು. ಫ್ರಾಂಕೋಯಿಸ್-ಫಿಲಿಪ್ ಷಾಂಪೇನ್, ಕ್ರಿಸ್ಟಿಯಾ ಫ್ರೀಲ್ಯಾಂಡ್ ಮತ್ತು ಡೊಮಿನಿಕ್ ಲೆಬ್ಲ್ಯಾಂಕ್ ತಮ್ಮ ಹಿಂದಿನ ಸ್ಥಾನಗಳಲ್ಲಿ ಮುಂದುವರಿಯಲಿದ್ದಾರೆ.
Canada, meet your new Cabinet.
— Mark Carney (@MarkJCarney) May 13, 2025
This is a team that is empowered and expected to lead.
Together, we will create a new economic and security relationship with the United States and build a stronger economy — the strongest economy in the G7. pic.twitter.com/6TadSrxRPB