ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jungkook: ಖ್ಯಾತ ಗಾಯಕನ ಮನೆಗೆ ಅಕ್ರಮವಾಗಿ ಎಂಟ್ರಿ ಕೊಟ್ಟು ಆತಂಕ ಸೃಷ್ಟಿಸಿದ್ದ ಮಹಿಳೆ ಅರೆಸ್ಟ್‌

ದಕ್ಷಿಣ ಕೊರಿಯಾದ ಸೈನ್ಯದಲ್ಲಿ ಮಿಲಿಟರಿ ಸೇವೆ ಸಲ್ಲಿಸುತ್ತಿದ್ದ ಗಾಯಕ ಜಂಗ್ ಕುಕ್ ಅವರು ಇದೀಗ ಮತ್ತೆ ಪ್ರಚಲಿತದಲ್ಲಿದ್ದಾರೆ. ಕೊರಿಯಾದಲ್ಲಿಯೇ ಪ್ರಸಿದ್ಧ ವ್ಯಕ್ತಿಯಾದ ಇವರು ಕೊರಿಯಾದಲ್ಲಿ ಐಶಾರಾಮಿ ಮನೆ, ಬಂಗಲೆ ಇತ್ಯಾದಿ ಕೂಡ ಹೊಂದಿದ್ದಾರೆ. ಇದೀಗ ಜಂಗ್ ಕುಕ್ ಅವರ ಮನೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ಕದಿಯಲೆಂದು ಬಂದ ಚೀನಾ ಮೂಲದ ಮಹಿಳೆಯೊಬ್ಬರು ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ನಡೆದಿದ್ದು ನುಗ್ಗಲು ಯತ್ನಿಸಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ

ಖ್ಯಾತ ಗಾಯಕನ ಮನೆಗೆ ಅಕ್ರಮ ಪ್ರವೇಶ; ಮಹಿಳೆ ಅರೆಸ್ಟ್‌!

Profile Pushpa Kumari Jul 1, 2025 5:08 PM

ದಕ್ಷಿಣ ಕೋರಿಯಾ: ಬಿಟಿಎಸ್ ಸದಸ್ಯ ಹಾಗೂ ದಕ್ಷಿಣ ಕೋರಿಯಾದ ಪ್ರಸಿದ್ಧ ಗಾಯಕರಾದ ಜಂಗ್ ಕುಕ್ (Jungkook) ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿದ್ದಾರೆ. ದಕ್ಷಿಣ ಕೊರಿ ಯಾದ ಬುಸಾನ್‌ ಮೂಲದವರಾದ ಜಂಗ್ ಕುಕ್ ಅವರು‌ ಸಿಂಗಿಂಗ್ ಶೋ, ನೃತ್ಯ, ರಾಪ್ ಮತ್ತು ಕ್ರೀಡೆಗಳಲ್ಲಿ ಅಪಾರವಾದ ಸಾಧನೆಯನ್ನು ಮಾಡಿದ್ದಾರೆ. ದಕ್ಷಿಣ ಕೊರಿಯಾದ ಸೈನ್ಯ ದಲ್ಲಿ ಮಿಲಿಟರಿ ಸೇವೆ ಸಲ್ಲಿಸುತ್ತಿದ್ದ ಗಾಯಕ ಜಂಗ್ ಕುಕ್ ಅವರು ಇದೀಗ ಮತ್ತೆ ಪ್ರಚಲಿತ ದಲ್ಲಿ ದ್ದಾರೆ. ಕೊರಿಯಾದಲ್ಲಿಯೇ ಪ್ರಸಿದ್ಧ ವ್ಯಕ್ತಿಯಾದ ಇವರು ಕೊರಿಯಾದಲ್ಲಿ ಐಶಾರಾಮಿ ಮನೆ, ಬಂಗಲೆ ಇತ್ಯಾದಿ ಕೂಡ ಹೊಂದಿದ್ದಾರೆ. ಇದೀಗ ಜಂಗ್ ಕುಕ್ ಅವರ ಮನೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ಕದಿಯಲೆಂದು ಬಂದ ಚೀನಾ ಮೂಲದ ಮಹಿಳೆಯೊಬ್ಬರು ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ನಡೆದಿದ್ದು ನುಗ್ಗಲು ಯತ್ನಿಸಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಜಂಗ್‌ಕುಕ್ ಅವರ ಮನೆಯೂ ಲಕ್ಶೂರಿ ಮಾತ್ರವಲ್ಲದೆ ಸಾಕಷ್ಟು ರಕ್ಷಣಾತ್ಮಕ ವ್ಯವಸ್ಥೆ ಕೂಡ ಹೊಂದಿದೆ. ಮುಂಭಾಗದ ಬಾಗಿಲಿನಲ್ಲಿ ಅತ್ಯಾಧುನಿಕ ಪಾಸ್ ಕೋಡ್ ಸಿಸ್ಟಂ ಹೊಂದಿದೆ. ಪಾಸ್ ಕೋಡ್ ಹಾಕುವ ಮೂಲಕ ಬಾಗಿಲನ್ನು ತೆಗೆಯಲು ಚೀನಾ ಮಹಿಳೆ ಯತ್ನಿಸಿದ್ದು ಅನೇಕ ಸಲ ಪಾಸ್ ವರ್ಡ್ ಹಾಕಿ ಪ್ರಯತ್ನಿಸಿದ್ದಾರೆ. ಆದರೆ ಬಾಗಿಲು ಆಟೋಮ್ಯಾಟಿಕ್ ಲಾಕ್ ಆಗಿ ಸೈರನ್ ಬರಲು ಆರಂಭವಾಗಿದೆ.

ಇದನ್ನು ಓದಿ:Tapassi Movie: ತೆರೆಮೇಲೆ ಮೋಡಿ ಮಾಡೋಕೆ ಕ್ರೇಜಿಸ್ಟಾರ್‌ ರೆಡಿ; ಬಹುನಿರೀಕ್ಷಿತ ‘ತಪಸ್ಸಿ’ ಚಿತ್ರ ಈ ವಾರ ರಿಲೀಸ್‌

ಸೈರನ್ ಸೌಂಡ್ ಕೇಳಿ ಸೆಕ್ಯೂರಿಟಿ ಫೋರ್ಸ್ ಬಂದರೆ ಸಿಕ್ಕಿಹಾಕಿಕೊಳ್ಳಬಹುದು ಎಂಬ ಭಯದಲ್ಲಿ ಮಹಿಳೆ ಅಲ್ಲಿಂದ ಎಸ್ಕೆಪ್ ಆಗಿದ್ದಾರೆ. ಜಂಗ್ ಕುಕ್ ಅವರು ಮಿಲಿಟರಿ ಸೇವೆಯನ್ನು ಮುಗಿಸಿ ಮನೆಗೆ ವಾಪಾಸಾಗುತ್ತಿದ್ದಂತೆ ಈ ಮಹಿಳೆ ಅಕ್ರಮವಾಗಿ ಪ್ರವೇಶಿಸಲು ಮುಂದಾಗಿದ್ದಾರೆ‌. ಮಹಿಳೆಯು ಬಾಗಿಲು ತೆರೆಯಲು ಯತ್ನಿಸುವ ವಿಡಿಯೊ‌ ಸಿಟಿಟಿವಿಯಲ್ಲಿ ಸೆರೆಯಾಗಿದ್ದು ಮಹಿಳೆಯನ್ನು ಬಂಧಿಸಲಾಗಿದೆ.

ಇದೀಗ ಕಲಾವಿದರ ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ವ್ಯಾಪಕ ಚರ್ಚೆ ಏರ್ಪಡುತ್ತಿದೆ. ಬಿಟಿಎಸ್ ಸದಸ್ಯರಾಗಿದ್ದ ಜಂಗ್ ಕುಕ್ ನಂತಹ ಮೇರು ಕಲಾವಿದರಿಗೆ ರಕ್ಷಣೆ ಇಲ್ಲ ಎಂಬ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ನೆಟ್ಟಿಗರಿಂದ ಅಭಿಪ್ರಾಯ ವ್ಯಕ್ತ ವಾಗುತ್ತಿದೆ. ಹೀಗಾಗಿ ಸಂಸ್ಥೆ ಹಾಗೂ ಬಿಟಿಎಸ್ ಸದಸ್ಯರಿಗೆ ಕಿರುಕುಳ ನೀಡುವ ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಿಟಿಎಸ್ ಸಂಸ್ಥೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದೆ.