Columbia University: ಪ್ಯಾಲೆಸ್ತೀನ್ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳು; ಅಮಾನತುಗೊಳಿಸಿ, ಪದವಿ ರದ್ದು ಮಾಡಿದ ಕೊಲಂಬಿಯಾ ವಿಶ್ವವಿದ್ಯಾಲಯ
ಕಳೆದ ವರ್ಷ ಪ್ಯಾಲೆಸ್ಟೀನಿಯನ್ ಪರ ಪ್ರತಿಭಟನೆಗಳ ಸಂದರ್ಭದಲ್ಲಿ ಕ್ಯಾಂಪಸ್ ಕಟ್ಟಡವನ್ನು ವಶಪಡಿಸಿಕೊಂಡ ಕೆಲವು ವಿದ್ಯಾರ್ಥಿಗಳನ್ನು ಕೊಲಂಬಿಯಾ ವಿಶ್ವವಿದ್ಯಾಲಯವು ಗುರುವಾರ ಅಮಾನತುಗೊಳಿಸಿದೆ ಎಂದು ತಿಳಿದು ಬಂದಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಪದವಿ ಪಡೆದ ವಿದ್ಯಾರ್ಥಿಗಳ ಡಿಪ್ಲೊಮಾಗಳನ್ನು ಸಹ ಸಂಸ್ಥೆ ರದ್ದುಗೊಳಿಸಿದೆ.

ಸಾಂದರ್ಭಿಕ ಚಿತ್ರ

ಬೊಗೊಟಾ: ಕಳೆದ ವರ್ಷ ಪ್ಯಾಲೆಸ್ಟೀನಿಯನ್ ಪರ ಪ್ರತಿಭಟನೆಗಳ ಸಂದರ್ಭದಲ್ಲಿ ಕ್ಯಾಂಪಸ್ ಕಟ್ಟಡವನ್ನು ವಶಪಡಿಸಿಕೊಂಡ ಕೆಲವು ವಿದ್ಯಾರ್ಥಿಗಳನ್ನು ಕೊಲಂಬಿಯಾ ವಿಶ್ವವಿದ್ಯಾಲಯವು (Columbia University) ಗುರುವಾರ ಅಮಾನತುಗೊಳಿಸಿದೆ ಎಂದು ತಿಳಿದು ಬಂದಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಪದವಿ ಪಡೆದ ವಿದ್ಯಾರ್ಥಿಗಳ ಡಿಪ್ಲೊಮಾಗಳನ್ನು ಸಹ ಸಂಸ್ಥೆ ರದ್ದುಗೊಳಿಸಿದೆ. 2024 ರಲ್ಲಿ ಗಾಜಾದಲ್ಲಿ ನಡೆಯುತ್ತಿದ್ದ ಯುದ್ಧವನ್ನು ಪ್ರತಿಭಟಿಸಲು ಕಾಲೇಜಿನ ಹ್ಯಾಮಿಲ್ಟನ್ ಹಾಲ್ ಅನ್ನು ಆಕ್ರಮಿಸಿಕೊಂಡ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲು ನ್ಯಾಯಾಂಗ ಮಂಡಳಿಯು ಆದೇಶಿಸಿದೆ ಎಂದು ವಿಶ್ವವಿದ್ಯಾಲಯವು ಇಮೇಲ್‌ನಲ್ಲಿ ತಿಳಿಸಿದೆ.
ಕೊಲಂಬಿಯಾ ವಿಶ್ವವಿದ್ಯಾಲಯದ ಮಧ್ಯಂತರ ಅಧ್ಯಕ್ಷೆ ಕತ್ರಿನಾ ಆರ್ಮ್‌ಸ್ಟ್ರಾಂಗ್, ಆಡಳಿತದ ಕಳವಳಗಳು ನ್ಯಾಯಸಮ್ಮತವೆಂದು ಕರೆದಿದ್ದಾರೆ ಮತ್ತು ಅವುಗಳನ್ನು ಪರಿಹರಿಸಲು ತಮ್ಮ ಸಂಸ್ಥೆಯು ಸರ್ಕಾರದೊಂದಿಗೆ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ಏಪ್ರಿಲ್ 30, 2024 ರಂದು, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಗುಂಪೊಂದು ಕೊಲಂಬಿಯಾದ ಹ್ಯಾಮಿಲ್ಟನ್ ಹಾಲ್ ಒಳಗೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಮರುದಿನ ನ್ಯೂಯಾರ್ಕ್ ಪೊಲೀಸರು ಕ್ಯಾಂಪಸ್‌ಗೆ ನುಗ್ಗಿ ಹಲವಾರು ಜನರನ್ನು ಬಂಧಿಸಿದರು, ನಂತರ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ಇಸ್ರೇಲ್ ಕಡೆಗೆ ಯೆಹೂದ್ಯ ವಿರೋಧಿ ಭಾವನೆಯನ್ನು ಬೆಂಬಲಿಸುತ್ತಿದ್ದಾರೆಂದು ಆರೋಪಿಸಿ ವಿದ್ಯಾರ್ಥಿ ಕಾರ್ಯಕರ್ತರನ್ನು ಬಂಧಿಸಿ ಗಡಿಪಾರು ಮಾಡಲು ಸರ್ಕಾರ ಮುಂದಾಗಿದ್ದು, ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡಿರುವ ಮಧ್ಯೆಯೇ ಈ ಅಮಾನತುಗಳು ಮತ್ತು ಉಚ್ಚಾಟನೆಗಳು ನಡೆದಿವೆ.ವಿದ್ಯಾರ್ಥಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ನಡೆಸಲಾದ ಹಲವಾರು ಬಂಧನಗಳಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮಹಮೂದ್ ಖಲೀಲ್ ಮೊದಲಿಗರು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಕ್ಯಾಂಪಸ್‌ನಲ್ಲಿ ಯೆಹೂದಿ ವಿರೋಧಿ ನೀತಿಯನ್ನು ತಡೆಯಲು ವಿಶ್ವವಿದ್ಯಾಲಯ ವಿಫಲವಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು 400 ಮಿಲಿಯನ್ ಯುಎಸ್ ಡಾಲರ್ ಅನುದಾನವನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ. ಹೌಸ್ ರಿಪಬ್ಲಿಕನ್ನರು ಕೂಡ ವಿಶ್ವವಿದ್ಯಾನಿಲಯವನ್ನು ಟೀಕಿಸಿದ್ದು, ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡಿರುವ ದಾಖಲೆಗಳನ್ನು ಬಿಡುಗಡೆ ಮಾಡಿ ಎಂದು ಹೇಳಿದೆ. ಇಲ್ಲಿಯ ವರೆಗೂ ಕೊಲಂಬಿಯಾ ವಿಶ್ವ ವಿದ್ಯಾಲಯ ಇದು ವರೆಗೂ ವಿದ್ಯಾರ್ಥಿಗಳ ಹೆಸರನ್ನು ಬಿಡುಗಡೆ ಮಾಡಿಲ್ಲ.