ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಯುದ್ಧ ಸನ್ನಾಹದಲ್ಲಿರುವ ಪಾಕಿಸ್ತಾನಕ್ಕೆ ಹೊಡೆತ; ಬಲೂಚಿಸ್ತಾನದಲ್ಲಿ ಬಾಂಬ್‌ ಸ್ಫೋಟಗೊಂಡು 7 ಸೈನಿಕರ ಸಾವು

ಪ್ರತ್ಯೇಕತೆಯ ಕೂಗು ಕೇಳಿ ಬರುತ್ತಿರುವ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಬಾಂಬ್‌ ದಾಳಿ ನಡೆದು 7 ಸೈನಿಕರು ಮೃತಪಟ್ಟು, 5 ಮಂದಿ ಗಾಯಗೊಂಡಿದ್ದಾರೆ. ʼʼಮಂಗಳವಾರ (ಮೇ 6) ನೈಋತ್ಯ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಸ್ವದೇಶಿ ನಿರ್ಮಿತ ಬಾಂಬ್ ಸ್ಫೋಟಗೊಂಡು ಪಾಕಿಸ್ತಾನದ ಅರೆಸೈನಿಕ ಪಡೆಯ 7 ಸಿಬ್ಬಂದಿ ಮೃತಪಟ್ಟು, ಐವರು ಗಾಯಗೊಂಡಿದ್ದಾರೆʼʼ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಬಲೂಚಿಸ್ತಾನದಲ್ಲಿ ಬಾಂಬ್‌ ಸ್ಫೋಟಗೊಂಡು 7 ಸೈನಿಕರ ಸಾವು

ಸಾಂದರ್ಭಿಕ ಚಿತ್ರ.

Profile Ramesh B May 6, 2025 9:32 PM

ಇಸ್ಲಾಮಾಬಾದ್‌: ಭಾರತದ ವಿರುದ್ಧ ಯುದ್ಧ ಸಾರಲು ಸನ್ನದ್ಧ ಎಂದು ಹೇಳಿಕೊಳ್ಳುತ್ತಿರುವ ಪಾಕಿಸ್ತಾನಕ್ಕೆ ತನ್ನದೇ ದೇಶದಲ್ಲಿ ದೊಡ್ಡ ಹೊಡೆತ ಬಿದ್ದಿದೆ. ಪ್ರತ್ಯೇಕತೆಯ ಕೂಗು ಕೇಳಿ ಬರುತ್ತಿರುವ ಬಲೂಚಿಸ್ತಾನದಲ್ಲಿ (Balochistan) ಬಾಂಬ್‌ ದಾಳಿ ನಡೆದು 7 ಸೈನಿಕರು ಮೃತಪಟ್ಟು, 5 ಮಂದಿ ಗಾಯಗೊಂಡಿದ್ದಾರೆ (7 Pakistani Soldiers Killed). ʼʼಮಂಗಳವಾರ (ಮೇ 6) ನೈಋತ್ಯ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಸ್ವದೇಶಿ ನಿರ್ಮಿತ ಬಾಂಬ್ ಸ್ಫೋಟಗೊಂಡು ಪಾಕಿಸ್ತಾನದ ಅರೆಸೈನಿಕ ಪಡೆಯ 7 ಸಿಬ್ಬಂದಿ ಮೃತಪಟ್ಟು, ಐವರು ಗಾಯಗೊಂಡಿದ್ದಾರೆʼʼ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಇರಾನ್‌ ಮತ್ತು ಅಘ್ಫಾನಿಸ್ತಾನ ಗಡಿಯನ್ನು ಹಂಚಿಕೊಂಡಿರುವ ಬಲೂಚಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ಪದೇ ಪದೆ ಹಿಂಸಾಚಾರ ಭುಗಿಲೇಳುತ್ತಿದ್ದು, ಅರೆಸೈನಿಕ ಪಡೆಗಳು ಸಂಚರಿಸುತ್ತಿದ್ದ ವಾಹನ ಮೇಲೆ ಈ ಬಾಂಬ್‌ ದಾಳಿ ನಡೆದಿದೆ. ಇಲ್ಲಿನ ಪ್ರತ್ಯೇಕತಾವಾದಿ ಗುಂಪುಗಳು ಪಾಕಿಸ್ತಾನ ಅಧಿಕಾರಿಗಳ ವಿರುದ್ಧ ತಮ್ಮ ಹೋರಾಟವನ್ನು ತೀವ್ರಗೊಳಿಸಿವೆ. ಬಲೂಚಿಸ್ತಾನದ ಪ್ರತ್ಯೇಕತಾವಾದಿ ಉಗ್ರಗಾಮಿ ಗುಂಪು ಭಾನುವಾರ ಜೈಲು ವ್ಯಾನ್ ಮೇಲೆ ನಡೆದ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ.

ಬಲೂಚಿಸ್ತಾನದಲ್ಲಿ ನಡೆದ ದಾಳಿಯ ವರದಿ:



ಈ ಸುದ್ದಿಯನ್ನೂ ಓದಿ: Pak soldiers killed: ಪಾಕಿಸ್ತಾನದಲ್ಲಿ ಬಲೂಚ್‌ ಬಂಡುಕೋರರಿಂದ ಆತ್ಮಾಹುತಿ ಬಾಂಬ್‌ ಸ್ಫೋಟ; 90 ಸೈನಿಕರು ಬಲಿ

ʼʼಬಲೂಚ್‌ ಲಿಬರೇಷನ್‌ ಆರ್ಮಿ (Baloch Liberation Army-BLA)ಗೆ ಸೇರಿದ ಉಗ್ರಗಾಮಿಗಳು ಭದ್ರತಾ ಪಡೆಗಳು ಸಾಗುತ್ತಿದ್ದ ವಾಹನಗಳ ಮೇಲೆ ದಾಳಿ ನಡೆಸಿವೆ. ಕಛ್ಛಿ ಜಿಲ್ಲೆಯ ಮಚ್‌ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಈ ದಾಳಿ ನಡೆದಿದೆʼʼ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ. ಗಾಯಗೊಂಡ ಐವರನ್ನು ಹೆಲಿಕಾಫ್ಟರ್‌ ಮೂಲಕ ಕ್ವೆಟ್ಟಾದಲ್ಲಿರುವ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಎಲ್ಎ ನೇತೃತ್ವದ ಪ್ರತ್ಯೇಕತಾವಾದಿ ಗುಂಪುಗಳ ನಿರಂತರ ದಾಳಿಯಿಂದ ಬಳಲಿರುವ ಕಲ್ಲಿದ್ದಲು ಗಣಿಗಳಿಂದ ಸಮೃದ್ಧವಾಗಿರುವ ಈ ಪರ್ವತ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನದ ಸುಮಾರಿಗೆ ದಾಳಿ ನಡೆದಿದೆ. ಅದಾಗ್ಯೂ ಈ ದಾಳಿಯ ಹೊಣೆಯನ್ನು ಇನ್ನೂ ಯಾರೂ ಹೊತ್ತುಕೊಂಡಿಲ್ಲ. ಈ ವರ್ಷದ ಜನವರಿಯಿಂದ ಇದುವರೆಗೆ ಬಲೂಚಿಸ್ತಾನ ಪ್ರತ್ಯೇಕತಾವಾದಿಗಳ ದಾಳಿಗೆ ಸುಮಾರು 200 ಮಂದಿ ಭದ್ರತಾ ಪಡೆಯ ಸಿಬ್ಬಂದಿ ಮೃತಪಟ್ಟಿದ್ದಾರೆ. ಮಾರ್ಚ್‌ನಲ್ಲಿ ಬಿಎಲ್‌ಎ ರೈಲಿನ ಮೇಲೆ ನಡೆಸಿದ ದಾಳಿಯಲ್ಲಿ ಅನೇಕರು ಅಸು ನೀಗಿದ್ದರು.

ಬಲೂಚಿಸ್ತಾನದ ಬಂಡುಕೋರರು ಪಾಕಿಸ್ತಾನ ಸೇನೆಯನ್ನು ಗುರಿಯಾಗಿಸಿ ಮಾರ್ಚ್‌ನಲ್ಲಿ ನಡೆಸಿದ ಮತ್ತೊಂದು ದಾಳಿಯಲ್ಲಿ ಸುಮಾರು 90 ಸೈನಿಕರು ಅಸುನೀಗಿದ್ದರು. ಕ್ವೆಟ್ಟಾದಿಂದ ಟಫ್ತಾನ್‌ಗೆ ಪ್ರಯಾಣಿಸುತ್ತಿದ್ದ ಭದ್ರತಾ ಪಡೆಗಳ ಬೆಂಗಾವಲು ಪಡೆಯ ಮೇಲೆ ಈ ದಾಳಿಯಲ್ಲಿ ನಡೆದಿತ್ತು. ಬಲೂಚ್ ಲಿಬರೇಶನ್ ಆರ್ಮಿ (BLA) ದಾಳಿಯ ಹೊಣೆಯನ್ನು ಹೊತ್ತುಕೊಂಡು 90 ಸೈನಿಕರನ್ನು ಬಲಿ ಪಡೆದಿರುವುದಾಗಿ ಎಂದು ಹೇಳಿಕೊಂಡಿತ್ತು.

ಏನಿದು ಬಲೂಚಿಸ್ತಾನ್‌ ಲಿಬರೇಷನ್‌ ಆರ್ಮಿ?

2000ನೇ ಇಸವಿಯಲ್ಲಿ ಸ್ಥಾಪನೆಯಾದ ಬಲೂಚಿಸ್ತಾನ್‌ ಲಿಬರೇಷನ್‌ ಆರ್ಮಿ ಪ್ರತ್ಯೇಕ ಬಲೂಚಿಸ್ತಾನ ಬೇಕು ಎನ್ನುವ ಬೇಡಿಕೆ ಇಟ್ಟಿದೆ. 2000ನೇ ಇಸವಿಯಲ್ಲಿ ಬಿಎಲ್‌ಎ ಪಾಕ್‌ ಆಡಳಿತದ ವಿರುದ್ದ ರೊಚ್ಚಿಗೆದ್ದು ಸರಣಿ ಬಾಂಬ್‌ ಸ್ಫೋಟ ನಡೆಸುವ ಮೂಲಕ ಪ್ರತ್ಯೇಕತೆಯ ಕೂಗನ್ನು ಜೋರಾಗಿ ಮೊಳಗಿಸಿತ್ತು. ಇರಾನ್‌ ಮತ್ತು ಅಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಂತಿರುವ ಈ ಪ್ರಾಂತ್ಯದಲ್ಲಿ ಅನಿಲ, ಖನಿಜ ಸಂಪತ್ತು ಸಮೃದ್ಧವಾಗಿದೆ.