Varun Tej-Lavanya Tripathi: ಮತ್ತೆ ಸಂಭ್ರಮದಲ್ಲಿ ಮೆಗಾ ಫ್ಯಾಮಿಲಿ; ಗುಡ್‌ನ್ಯೂಸ್ ಕೊಟ್ಟ ವರುಣ್-ಲಾವಣ್ಯ
ಕಳೆದೆರಡು ದಿನಗಳಿಂದ ತೆಲುಗು ನಟಿ ಲಾವಣ್ಯ ತ್ರಿಪಾಠಿ ಗರ್ಭಿಣಿ ಎನ್ನುವ ಸುದ್ದಿ ಹರಿದಾಡಿತ್ತು. ಇದೀಗ ಅಧಿಕೃತವಾಗಿ ಲಾವಣ್ಯ-ವರುಣ್ ತೇಜ್ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಪತಿ, ಪತ್ನಿ ಇಬ್ಬರೂ ಪುಟ್ಟ ಮಗುವಿನ ಶೂಗಳನ್ನು ಹಿಡಿದಿರುವ ಫೋಟೊ ಹಂಚಿಕೊಂಡಿದ್ದಾರೆ.

Telugu actors Varun Tej

ಹೈದರಾಬಾದ್: ತೆಲುಗು ಕಲಾವಿದರಾದ ವರುಣ್ ತೇಜ್ (Varun Tej) ಮತ್ತು ಲಾವಣ್ಯ ತ್ರಿಪಾಠಿ (Lavanya Tripathi) ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿಯ ವಿಚಾರವನ್ನು ಅವರೇ ಖುದ್ದಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 2023ರಲ್ಲಿ ಮದುವೆ ಯಾದ ಈ ಜೋಡಿಯಿಂದ ಗುಡ್‌ನ್ಯೂಸ್ ಯಾವಾಗ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಕೊನೆಗೂ ನಡುವೆ ಈ ಜೋಡಿ ಶುಭ ಸುದ್ದಿಯನ್ನು ಹಂಚಿಕೊಂಡಿದೆ. ಸದ್ಯ ನಟಿ ಲಾವಣ್ಯ ತಾಯಿ ಆಗಲಿರುವುದರಿಂದ ಮೆಗಾ ಕುಟುಂಬ ಖುಷಿಯಲ್ಲಿದ್ದು, ಮತ್ತೆ ಸಡಗರ ಮನೆ ಮಾಡಿದೆ.
ಕಳೆದೆರಡು ದಿನಗಳಿಂದ ಲಾವಣ್ಯ ತ್ರಿಪಾಠಿ ಗರ್ಭಿಣಿ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಇದೀಗ ಅಧಿಕೃತವಾಗಿ ದಂಪತಿಯೇ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಹಂಚಿಕೊಂಡಿದೆ. ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶುಭ ಸಮಾಚಾರವನ್ನು ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಪತಿ, ಪತ್ನಿ ಇಬ್ಬರೂ ಪುಟ್ಟ ಮಗುವಿನ ಶೂಗಳನ್ನು ಹಿಡಿದಿರುವ ಫೋಟೊ ಶೇರ್ ಮಾಡಿದ್ದಾರೆ. ಕ್ಯಾಪ್ಶನ್‌ನಲ್ಲಿ ಇದು "ಜೀವನದ ಅತ್ಯಂತ ಸುಂದರ ಕ್ಷಣ. ಅತೀ ಶೀಘ್ರದಲ್ಲೇ ಬರಲಿದೆʼʼ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಈ ಪೋಸ್ಟ್ ಅಭಿಮಾನಿಗಳ ಮನ ಗೆದ್ದಿದ್ದು ಲೈಕ್ಸ್, ಕಾಮೆಂಟ್ಸ್ ಮೂಲಕ ಶುಭ ಹಾರೈಸುತ್ತಿದ್ದಾರೆ.
2017ರಲ್ಲಿ ತೆರೆಕಂಡ ಶ್ರೀನು ವೈಟ್ಲಾ ನಿರ್ದೇಶನ 'ಮಿಸ್ಟರ್' ಸಿನಿಮಾದಲ್ಲಿ ವರುಣ್ ತೇಜ್ ಮತ್ತು ಲಾವಣ್ಯಾ ತ್ರಿಪಾಠಿ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದರು. ಆ ನಂತರದಲ್ಲಿ ʼಅಂತರಿಕ್ಷಂ' ಸಿನಿಮಾದಲ್ಲೂ ಲಾವಣ್ಯಾ ಮತ್ತು ವರುಣ್ ಒಟ್ಟಿಗೆ ಕಾಣಿಸಿಕೊಂಡರು. ಈ ವೇಳೆ ಇಬ್ಬರ ಮಧ್ಯೆ ಪ್ರೀತಿ ಮೂಡಿತ್ತು. ಮದುವೆಗೆ ಮೊದಲು ಅವರು ಐದು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ಜೂ. 9ರಂದು ಕುಟುಂಬ ಸದಸ್ಯರ ನಡುವೆ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡು 2023ರ ನವೆಂಬರ್‌ನಲ್ಲಿ ಇಟಲಿಯ ಟಸ್ಕನಿ ನಗರದಲ್ಲಿ ಮದುವೆಯಾಗಿತ್ತು. ಮದುವೆ ಬಳಿಕ ಕೂಡ ಲಾವಣ್ಯ ಸಿನಿಮಾ, ವೆಬ್ ಸಿರೀಸ್‌ನಲ್ಲಿ ನಟಿಸುತ್ತಿದ್ದು, ಇತ್ತೀಚೆಗೆ ಬ್ರೇಕ್ ಪಡೆದಿದ್ದರು.
ಇದನ್ನು ಓದಿ: Daiji Movie: ರಮೇಶ್ ಅರವಿಂದ್ ಅಭಿನಯದ ʼದೈಜಿ ಚಿತ್ರʼಕ್ಕೆ ದಿಗಂತ್ ಸೇರ್ಪಡೆ
ಮದುವೆಯ ನಂತರ ವರುಣ್ ತೇಜ್ ಕೂಡ ಹೆಚ್ಚು ಸಿನಿಮಾಗಳಲ್ಲಿ ನಟಿಸಿಲ್ಲ. 2023ರಲ್ಲಿ ಬಿಡುಗಡೆಯಾದ 'ಗಾಂಡೀವಧಾರಿ ಅರ್ಜುನ', ಕಳೆದ ವರ್ಷ ಬಿಡುಗಡೆಯಾದ 'ಆಪರೇಷನ್ ವ್ಯಾಲೆಂಟೈನ್', 'ಮಟ್ಕಾ' ಸಿನಿಮಾಗಳು ಹಿಟ್ ಆಗಿಲ್ಲ. ಪ್ರಸ್ತುತ ವರುಣ್ ತೇಜ್ 'VT-15' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ಮೆಗಾ ಫ್ಯಾಮಿಲಿಯಲ್ಲಿ ಸಾಲು ಸಾಲು ಸಂಭ್ರಮದ ಕ್ಷಣಗಳು ಹೆಚ್ಚಿದ್ದು ಚರಣ್- ಉಪಾಸನಾ ದಂಪತಿಗೆ ಮಗಳು ಕ್ಲಿಂಕಾರ ಹುಟ್ಟಿದ್ದು ಇದೀಗ ವರಣ್- ಲಾವಣ್ಯ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದು ಮತ್ತಷ್ಟು ಸಂತಸಕ್ಕೆ ಕಾರಣವಾಗಿದೆ