Traffic Jam: ನಿಮಿಷ, ಗಂಟೆ, ದಿನವಲ್ಲ... ಬರೋಬ್ಬರಿ 2 ವಾರಗಳ ಟ್ರಾಫಿಕ್ ಜಾಮ್ ಹೇಗಿತ್ತು ಗೊತ್ತೆ?
ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಬೀಜಿಂಗ್- ಟಿಬೆಟ್ ಎಕ್ಸ್‌ಪ್ರೆಸ್‌ವೇಯಲ್ಲಿ 2010ರ ಆಗಸ್ಟ್ 14ರಿಂದ ಟ್ರಾಫಿಕ್ ಜಾಮ್ ಪ್ರಾರಂಭವಾಗಿತ್ತು. 12 ದಿನಗಳ ಕಾಲ ಜನರು, ವಾಹನಗಳು ಚಲಿಸಲು ಕಿಂಚಿತ್ತೂ ಜಾಗವಿರಲಿಲ್ಲ. ಸುಮಾರು 100 ಕಿ.ಮೀ. ಉದ್ದದವರೆಗೆ 12 ದಿನಗಳವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕಣ್ಣು ಹಾಯಿಸಿದಷ್ಟು ದೂರದವರೆಗೆ ವಾಹನಗಳೇ ಕಾಣುತ್ತಿತ್ತು. ಇದು ಆಧುನಿಕ ಜಗತ್ತಿನ ಇತಿಹಾಸದಲ್ಲಿ ಅತಿ ಉದ್ದದ ಟ್ರಾಫಿಕ್ ಜಾಮ್ ಎಂದೇ ಗುರುತಿಸಿಕೊಂಡಿದೆ.


ಬೀಜಿಂಗ್: ಐದು, ಹತ್ತು ನಿಮಿಷ ಟ್ರಾಫಿಕ್ ಜಾಮ್ (Traffic Jam)ನಲ್ಲಿ ಸಮಯ ಕಳೆಯುವುದು ನಮಗೆ ಹಿಂಸೆಯಾಗುತ್ತದೆ. ಆದರೆ ಇಲ್ಲೊಂದು ಕಡೆ ಉಂಟಾದ ಟ್ರಾಫಿಕ್ ಜಾಮ್‌ನಲ್ಲಿ ಸಾವಿರಾರು ಮಂದಿ ಒಂದೆರಡು ದಿನವಲ್ಲ ಬರೋಬ್ಬರಿ 12 ದಿನಗಳನ್ನು ಕಳೆದಿದ್ದರು. ಇದನ್ನು ವಿಶ್ವದ ಅತಿ ಉದ್ದದ ಟ್ರಾಫಿಕ್ ಜಾಮ್ (World’s longest traffic jam) ಎಂದೇ ಕರೆಯಲಾಗುತ್ತಿದೆ. 12 ದಿನಗಳ ಕಾಲ ನಡೆದ ಈ ಟ್ರಾಫಿಕ್ ಜಾಮ್ 100 ಕಿ.ಮೀ. ಗೂ ಹೆಚ್ಚು ಉದ್ದದವರೆಗೆ ವ್ಯಾಪಿಸಿತ್ತು. ಇದು ನಡೆದಿರುವುದು ಅಮೆರಿಕ, ಭಾರತ ಅಥವಾ ಯುರೋಪ್ ದೇಶದಲ್ಲಿ ಅಲ್ಲ. ಭಾರತದ ನೆರೆಯ ರಾಷ್ಟ್ರವಾದ ಚೀನಾದಲ್ಲಿ (China). ಇದರಲ್ಲಿ ಸಿಕ್ಕಿಹಾಕಿಕೊಂಡ ಪ್ರತಿಯೊಬ್ಬರಿಗೂ ಇದು ಅಗ್ನಿ ಪರೀಕ್ಷೆಯಾಗಿತ್ತು.
ನಗರ ಜೀವನದಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಕಾಲ ಕಳೆಯುವುದು ಹೆಚ್ಚಿನವರಿಗೆ ಅಭ್ಯಾಸವಾಗಿದೆ. ಒಂದೆರಡು ಗಂಟೆಯಾದರೆ ಹೇಗೋ ತಡೆದುಕೊಳ್ಳಬಹುದು. ಅದೇ ರೀತಿ ವಾರಗಳ ಕಾಲ ಟ್ರಾಫಿಕ್ ನಲ್ಲಿ ಕಳೆಯುವುದು ಬಹುತೇಕ ದೊಡ್ಡ ಹಿಂಸೆಯೆಂದೇ ಹೇಳಬಹುದು. ಬಹುತೇಕ ಎಲ್ಲರೂ ಟ್ರಾಫಿಕ್ ಜಾಮ್‌ನಲ್ಲಿ ಒಂದಲ್ಲ ಒಂದು ಬಾರಿ ಸಿಕ್ಕಿ ಹಾಕಿಕೊಂಡಿರುತ್ತಾರೆ. ಈ ಸಂದರ್ಭದಲ್ಲಿ ಸಿಟ್ಟು ಬರುವುದು, ಹತಾಶರಾಗುವುದು ಸಾಮಾನ್ಯ. ಹೀಗಾಗಿ ಎಲ್ಲರಿಗೂ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಳ್ಳುವುದು ಪ್ರಯಾಣದ ಕೆಟ್ಟ ಅನುಭವವಾಗಿರುತ್ತದೆ. ಆದರೂ ಕೆಲವು ಗಂಟೆಗಳ ಬಳಿಕವಾದರೂ ಎಲ್ಲವೂ ಕ್ಲಿಯರ್ ಆಗಿ ಗಮ್ಯಸ್ಥಾನವನ್ನು ತಲುಪಿದಾಗ ಹೆಚ್ಚಿನವರು ನಿಟ್ಟುಸಿರು ಬಿಡುತ್ತೀರಿ.
ಚೀನಾದಲ್ಲಿ ಸಂಭವಿಸಿದ ಒಂದು ದೊಡ್ಡ ಟ್ರಾಫಿಕ್ ಜಾಮ್‌ನ ಕಥೆ ಇಲ್ಲಿದೆ. ಇದೊಂದು ರೀತಿಯಲ್ಲಿ ಸಿಕ್ಕಿಹಾಕಿಕೊಂಡ ಎಲ್ಲರಿಗೂ ಅಗ್ನಿ ಪರೀಕ್ಷೆಯಾಗಿತ್ತು. ಈ ಟ್ರಾಫಿಕ್ ಜಾಮ್‌ನಲ್ಲಿ ವಾಹನಗಳು, ಚಾಲಕರು ಮತ್ತು ಪ್ರಯಾಣಿಕರು ಸುಮಾರು ಎರಡು ವಾರಗಳನ್ನು ಕಳೆದರು. ಬಹುತೇಕ ಎಲ್ಲರೂ ತಮ್ಮ ಗಮ್ಯಸ್ಥಾನವನ್ನು ತಲುಪಲು ಹಾತೊರೆಯುವಂತೆ ಮಾಡಿತ್ತು. ಚೀನಾದಲ್ಲಿ 12 ದಿನಗಳ ಕಾಲ ನಡೆದ ವಿಶ್ವದ ಅತಿ ಉದ್ದದ ಟ್ರಾಫಿಕ್ ಜಾಮ್‌ನಲ್ಲಿ ಸಾವಿರಾರು ವಾಹನಗಳು ಸಿಕ್ಕಿ ಹಾಕಿಕೊಂಡವು.
ಎಲ್ಲಿ ಉಂಟಾಗಿತ್ತು?
ಚೀನಾದ ರಾಜಧಾನಿ ಬೀಜಿಂಗ್‌ನ ಬೀಜಿಂಗ್- ಟಿಬೆಟ್ ಎಕ್ಸ್‌ಪ್ರೆಸ್‌ವೇಯಲ್ಲಿ 2010ರ ಆಗಸ್ಟ್ 14ರಿಂದ ಟ್ರಾಫಿಕ್ ಜಾಮ್ ಪ್ರಾರಂಭವಾಗಿತ್ತು. 12 ದಿನಗಳ ಕಾಲ ಜನರು ವಾಹನಗಳು ಚಲಿಸಲು ಕಿಂಚಿತ್ತೂ ಜಾಗವಿರಲಿಲ್ಲ. ಸುಮಾರು 100 ಕಿ.ಮೀ. ಉದ್ದದವರೆಗೆ 12 ದಿನಗಳವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದಬು. ಕಣ್ಣು ಹಾಯಿಸಿದಷ್ಟು ದೂರದವರೆಗೆ ವಾಹನಗಳೇ ಕಾಣುತ್ತಿತ್ತು. ಇದು ಆಧುನಿಕ ಜಗತ್ತಿನ ಇತಿಹಾಸದಲ್ಲಿ ಅತಿ ಉದ್ದದ ಟ್ರಾಫಿಕ್ ಜಾಮ್ ಆಗಿತ್ತು. ಈ ಟ್ರಾಫಿಕ್‌ನಲ್ಲಿ ಸಿಕ್ಕಿ ಹಾಕಿಕೊಂಡವರು ರಸ್ತೆಯಲ್ಲೇ ಊಟ ಮತ್ತು ನಿದ್ರೆ ಮಾಡಬೇಕಾಯಿತು.
ಕಾರಣ ಏನು?
ಎಕ್ಸ್‌ಪ್ರೆಸ್‌ವೇಯಲ್ಲಿ ನಿರ್ಮಾಣ ಹಂತದಲ್ಲಿದ್ದ ಬೀಜಿಂಗ್- ಟಿಬೆಟ್ ಎಕ್ಸ್‌ಪ್ರೆಸ್‌ವೇಗಾಗಿ ಮಂಗೋಲಿಯಾದಿಂದ ಬೀಜಿಂಗ್‌ಗೆ ಕಲ್ಲಿದ್ದಲು ಮತ್ತು ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಟ್ರಕ್‌ಗಳು ಟ್ರಾಫಿಕ್ ಜಾಮ್‌ಗೆ ಕಾರಣವಾಗಿದ್ದವು. ಎಕ್ಸ್‌ಪ್ರೆಸ್‌ವೇಯಲ್ಲಿ ನಡೆಯುತ್ತಿರುವ ಕೆಲಸದಿಂದಾಗಿ ಸಂಚಾರವನ್ನು ಏಕಮುಖವಾಗಿ ಪರಿವರ್ತಿಸಲಾಗಿದ್ದು, ಟ್ರಕ್‌ಗಳು ಬೀಜಿಂಗ್‌ನ ನಿರ್ಗಮನವನ್ನು ನಿರ್ಬಂಧಿಸಿದ್ದವು. ಅವುಗಳನ್ನು ತೆರವುಗೊಳಿಸಲು ಸುಮಾರು 12 ದಿನಗಳು ಬೇಕಾಯಿತು. ಈ ವೇಳೆ ಅನೇಕ ವಾಹನಗಳು ಹಾನಿಗೊಳಗಾದವು. ಇದರಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ತೆರವು ಮತ್ತಷ್ಟು ವಿಳಂಬಕ್ಕೆ ಕಾರಣವಾಯಿತು.
ಹೇಗಿತ್ತು ಪರಿಸ್ಥಿತಿ ?
ಚಾಲಕರು ಮತ್ತು ಪ್ರಯಾಣಿಕರಿಗಾಗಿ ಎಕ್ಸ್‌ಪ್ರೆಸ್‌ವೇಯ ಉದ್ದಕ್ಕೂ ತಾತ್ಕಾಲಿಕ ಮನೆಗಳನ್ನು ನಿರ್ಮಿಸಲಾಯಿತು. ತಿಂಡಿ, ತಂಪು ಪಾನೀಯ, ನೂಡಲ್ಸ್ ಮತ್ತು ಇತರ ಆಹಾರ ಪದಾರ್ಥಗಳನ್ನು ನಾಲ್ಕು ಪಟ್ಟು ಬೆಲೆಗೆ ಮಾರಾಟ ಮಾಡಲಾಯಿತು. ಜನರು ನಿಗದಿತ ದರಕ್ಕಿಂತ 10 ಪಟ್ಟು ಹೆಚ್ಚು ದರದಲ್ಲಿ ನೀರನ್ನು ಖರೀದಿಸಬೇಕಾಯಿತು.
ಟ್ರಾಫಿಕ್ ಜಾಮ್ ತೆರವಿಗೆ ಆಡಳಿತವು ಈ ಮಾರ್ಗದಲ್ಲಿ ಸಂಚಾರವನ್ನು ನಿಲ್ಲಿಸಿತು. ಜಾಮ್‌ನಲ್ಲಿ ಸಿಲುಕಿದ್ದ ಟ್ರಕ್‌ಗಳನ್ನು ಮೊದಲು ಬಿಡುಗಡೆ ಮಾಡಲಾಯಿತು. ಬಳಿಕ ಅಲ್ಲಿ ಸಿಕ್ಕಿಬಿದ್ದ ಜನರನ್ನು ಸ್ಥಳಾಂತರಿಸುವ ಕಾರ್ಯ ನಡೆಯಿತು. ಇದಕ್ಕಾಗಿ ಅಧಿಕಾರಿಗಳು ಹಗಲು ರಾತ್ರಿ ಶ್ರಮಿಸಿದರು. ಹೀಗೆ ವಿಶ್ವದ ಅತಿ ಉದ್ದದ ಟ್ರಾಫಿಕ್ ಜಾಮ್ ಆಗಸ್ಟ್ 26ರಂದು ಕೊನೆಯಾಗಿತ್ತು.