ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Janardhana Reddy: ಜನಾರ್ದನ ರೆಡ್ಡಿ ಚಂಚಲಗೂಡ ಜೈಲಿಗೆ ಶಿಫ್ಟ್‌; ಶೀಘ್ರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ

Illegal Mining Scam: ಓಬಳಾಪುರಂ ಮೈನಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರನ್ನು ಆಂಧ್ರ ಪ್ರದೇಶದ ನಾಂಪಲಿ ಸಿಬಿಐ ಕೋರ್ಟ್ ಮಂಗಳವಾರ (ಮೇ 6) ದೋಷಿ ಎಂದು ತೀರ್ಪು ನೀಡಿ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಅವರನ್ನು ನೇರವಾಗಿ ಸಿಬಿಐ ಕೋರ್ಟ್‌ನಿಂದ ಹೈದರಾಬಾದ್‌ ಸಮೀಪದ ಚಂಚಲಗುಡ ಜೈಲಿಗೆ ರವಾನಿಸಲಾಗಿದೆ.

ಜನಾರ್ದನ ರೆಡ್ಡಿ ಚಂಚಲಗೂಡ ಜೈಲಿಗೆ ಶಿಫ್ಟ್‌

ಜನಾರ್ದನ ರೆಡ್ಡಿ.

Profile Ramesh B May 6, 2025 10:26 PM

ಹೈದರಾಬಾದ್‌: ಓಬಳಾಪುರಂ ಮೈನಿಂಗ್ ಹಗರಣ (Illegal Mining Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ (MLA Janardhan Reddy) ಅವರನ್ನು ಆಂಧ್ರ ಪ್ರದೇಶದ ನಾಂಪಲಿ ಸಿಬಿಐ ಕೋರ್ಟ್ (CBI Court) ಮಂಗಳವಾರ (ಮೇ 6) ದೋಷಿ ಎಂದು ತೀರ್ಪು ನೀಡಿ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಅವರನ್ನು ನೇರವಾಗಿ ಸಿಬಿಐ ಕೋರ್ಟ್‌ನಿಂದ ಹೈದರಾಬಾದ್‌ ಸಮೀಪದ ಚಂಚಲಗುಡ ಜೈಲಿಗೆ ರವಾನಿಸಲಾಗಿದೆ. ಆ ಮೂಲಕ ಅವರು ಮತ್ತೆ ಜೈಲಿಗೆ ಸೇರಿದ್ದಾರೆ.

ತೀರ್ಪಿನ ವಿರುದ್ದ ಅವರ ಪರ ವಕೀಲರು ಬುಧವಾರ (ಏ. 7) ಹೈಕೋರ್ಟ್‌ಗೆ ಮೇಲ್ಮಮನವಿ ಸಲ್ಲಿಸುವ ಸಾಧ್ಯತೆ ಇದೆ. ಅದಾಗ್ಯೂ ಹೈಕೋರ್ಟ್ ಮಧ್ಯಂತರ ಆದೇಶ ಬರುವವರೆಗೂ ಅವರು ಜೈಲಿನಲ್ಲಿರಬೇಕಾಗುತ್ತದೆ. ಒಂದು ವೇಳೆ ಹೈಕೋರ್ಟ್‌ನಿಂದ ರೆಡ್ಡಿ ಪರವಾಗಿ ತೀರ್ಪು ಬಂದರೆ ಅವರ ಶಾಸಕ ಸ್ಥಾನ ಉಳಿಯಲಿದೆ. ಒಂದು ವೇಳೆ ರೆಡ್ಡಿ ವಿರುದ್ಧವಾಗಿ ತೀರ್ಪು ಬಂದರೆ ಶಾಸಕ ಸ್ಥಾನ ರದ್ದಾಗಲಿದೆ. ಈ ಬಗ್ಗೆ ಇದೀಗ ಕುತೂಹಲ ಮೂಡಿದೆ. ಕಳೆದ ಬಾರಿ ಜನಾರ್ದನ ರೆಡ್ಡಿ ಮೂರೂವರೆ ವರ್ಷ ಇದೇ ಚಂಚಲಗುಡ ಜೈಲಿದ್ದರು.

ಈ ಸುದ್ದಿಯನ್ನೂ ಓದಿ: Janardhana Reddy: ಅಪರಾಧಿ ಜನಾರ್ದನ ರೆಡ್ಡಿ ಶಾಸಕ ಸ್ಥಾನ ರದ್ದಾಗುತ್ತಾ? ನಿಯಮ ಹೇಳೋದೇನು?

ಏನಿದು ಪ್ರಕರಣ?

ಇದು ಸುಮಾರು 13 ವರ್ಷಗಳ ಹಿಂದಿನ ಪ್ರಕರಣ. ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಗಣಿಗಾರಿಕೆ ನಡೆದಿತ್ತು. ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಗಡಿ ಭಾಗವಾದ ಓಬಳಾಪುರಂ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆದ ಪ್ರಕರಣ ಇದಾಗಿದ್ದು, 2009ರಲ್ಲಿ ಅಂದಿನ ಆಂಧ್ರ ಪ್ರದೇಶ ಸರ್ಕಾರದ ಕೋರಿಕೆಯ ಮೇರೆಗೆ ಕೇಂದ್ರ ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ಆರಂಭಿಸಿತ್ತು. ಸಿಬಿಐ 2011ರಲ್ಲಿ ಮೊದಲ ಚಾರ್ಜ್‌ಶೀಟ್‌ ಸಲ್ಲಿಸಿತ್ತು. ಜಾರ್ಚ್‌ಶೀಟ್‌ನಲ್ಲಿ ಜನಾರ್ದನ ರೆಡ್ಡಿ ಜತೆಗೆ ಐಎಎಸ್‌ ಅಧಿಕಾರಿ ಶ್ರೀಲಕ್ಷ್ಮೀ, ಜನಾರ್ದನ್‌ ರೆಡ್ಡಿ ಅವರ ಆಪ್ತ ಸಹಾಯಕ ಮೆಫಾಜ್‌ ಅಲಿ ಖಾನ್‌, ಮಾಜಿ ಸಚಿವೆ ಸಬಿತಾ ಇಂದ್ರಾ ರೆಡ್ಡಿ, ಬಿ.ವಿ.ಶ್ರೀನಿವಾಸ ರೆಡ್ಡಿ, ವಿ.ಡಿ.ರಾಜಗೋಪಾಲ್‌, ಕೃಪಾನಂದಂ ಅವರನ್ನೂ ಹೆಸರಿಸಲಾಗಿತ್ತು.

ಮನವಿ ತಿರಸ್ಕರಿಸಿದ ಕೋರ್ಟ್‌

ಮಂಗಳವಾರ ತೀರ್ಪು ಪ್ರಕಟವಾಗುತ್ತಿದ್ದಂತೆ ಜನಾರ್ದನ ರೆಡ್ಡಿ 7 ವರ್ಷಗಳ ಶಿಕ್ಷೆಯನ್ನು ಕಡಿಮೆ ಮಾಡಿ ಎಂದು ಕೋರ್ಟ್​ಗೆ ಮನವಿ ಮಾಡಿದರು. ʼʼನಾನು ಈಗಾಗಲೇ 3 ವರ್ಷಗಳಿಗೂ ಹೆಚ್ಚು ಕಾಲ ಬಂಧನದಲ್ಲಿ ಕಳೆದಿದ್ದೇನೆ. ನನ್ನ ವಯಸ್ಸು ಮತ್ತು ನಾನು ಮಾಡಿದ ಸಾರ್ವಜನಿಕ ಸೇವೆಯನ್ನು ಪರಿಗಣಿಸಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿʼʼ ಎಂದು ಕೋರ್ಟ್​ಗೆ ಮನವಿ ಸಲ್ಲಿಸಿದರು. ಆದರೆ ಕೋರ್ಟ್ ಈ ಮನವಿಯನ್ನು ನಿರಾಕರಿಸಿದೆ. ʼʼನಿಮಗೆ 10 ವರ್ಷಗಳ ಶಿಕ್ಷೆಯನ್ನು ಏಕೆ ನೀಡಬಾರದು? ನೀವು ಜೀವಾವಧಿ ಶಿಕ್ಷೆಗೆ ಅರ್ಹರುʼʼ ಎಂದು ಕೋರ್ಟ್‌ ಮರು ಪ್ರಶ್ನಿಸಿತು.

29 ಲಕ್ಷ ಟನ್ ಅದಿರು

ಜನಾರ್ದನ ರೆಡ್ಡಿ ಮತ್ತು ತಂಡ ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡ ಹೀರೆಹಾಳ್ ಮತ್ತು ಸಿದ್ದಾಪುರ ಬಳಿಯ ಓಬಳಾಪುರಂ ಬೆಟ್ಟದಲ್ಲಿ ಅದಿರನ್ನು ಅಕ್ರಮವಾಗಿ ಗಣಿಕಾರಿಕೆ ನಡೆಸಿತ್ತು. ಬರೋಬ್ಬರಿ 29 ಲಕ್ಷ ಟನ್ ಅದಿರನ್ನು ಲೂಟಿ ಮಾಡಿ 884 ಕೋಟಿ ರೂ. ಆದಾಯ ಪಡೆದಿತ್ತು ಎನ್ನಲಾಗಿದೆ.