ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

American Airlines: ವಿಮಾನದಲ್ಲಿಅಗ್ನಿಅವಘಡ ; ರಕ್ಷಣೆಗಾಗಿ ಪ್ಲೇನ್‌ ರೆಕ್ಕೆ ಮೇಲೆ ನಿಂತು ಕೂಗಿದ ಜನ

ಗುರುವಾರ ಡೆನ್ವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಲ್ಲಾಸ್‌ಗೆ ತೆರಳುತ್ತಿದ್ದ ಅಮೇರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರಲ್ಲಿ ಆರು ಸಿಬ್ಬಂದಿ ಸೇರಿದಂತೆ 178 ಜನರು ಇದ್ದರು ಎಂದು ತಿಳಿದು ಬಂದಿದೆ. ಪ್ರಯಾಣಿಕರನ್ನು ರಕ್ಷಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್‌ ಆಗಿದೆ.

ವಿಮಾನದಲ್ಲಿ ಅಗ್ನಿ ಅವಘಡ; ತಪ್ಪಿದ ಭಾರೀ ದುರುಂತ

ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿರುವ ದೃಶ್ಯ

Profile Vishakha Bhat Mar 14, 2025 4:01 PM

ವಾಷಿಂಗ್ಟನ್:‌ ಗುರುವಾರ ಡೆನ್ವರ್ ಅಂತರಾಷ್ಟ್ರೀಯ ವಿಮಾನ (Denver International Airport) ನಿಲ್ದಾಣದಲ್ಲಿ ಡಲ್ಲಾಸ್‌ಗೆ ತೆರಳುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ( American Airlines) ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರಲ್ಲಿ ಆರು ಸಿಬ್ಬಂದಿ ಸೇರಿದಂತೆ 178 ಜನರು ಇದ್ದರು ಎಂದು ತಿಳಿದು ಬಂದಿದೆ. ವಿಮಾನದಲ್ಲಿದ್ದ ಪ್ರಯಾಣಿಕರನ್ನು ಕ್ಷಿಪ್ರವಾಗಿ ತೆರವುಗೊಳಿಸಲಾಯಿತು. ಅಮೇರಿಕನ್ ಏರ್ಲೈನ್ಸ್ ನ ಬೋಯಿಂಗ್ 737-800 ವಿಮಾನ ಸಂಖ್ಯೆ 1006, ಕೊಲೊರಾಡೋ ಸ್ಪ್ರಿಂಗ್ಸ್ ನಿಂದ ಹೊರಟು ಡಲ್ಲಾಸ್ ಫೋರ್ಟ್ ವರ್ತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳು ತಯಾರಿ ನಡೆಸುತ್ತಿತ್ತು.



ಪ್ರಯಾಣಿಕರನ್ನು ರಕ್ಷಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್‌ ಆಗಿದೆ. ವಿಮಾನ ಹೊರಡುವ ವೇಳೆ ವಿಮಾನದ ಒಳಗೆ ದಟ್ಟ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಒಳಗಿದ್ದ ಪ್ರಯಾಣಿಕರು ಜೀವಭಯದಿಂದ ವಿಮಾನದ ರೆಕ್ಕೆಯ ಮೇಲೆ ನಿಂತು ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ವರದಿಗಳ ಪ್ರಕಾರ, ವಿಮಾನವು ಲ್ಯಾಂಡಿಂಗ್ ನಂತರ ಗೇಟ್ ಕಡೆಗೆ ಚಲಿಸುತ್ತಿತ್ತು ಮತ್ತು "ಎಂಜಿನ್ ಸಂಬಂಧಿತ ಸಮಸ್ಯೆ ಇತ್ತು ಎಂದು ಹೇಳಲಾಗಿದೆ. 172 ಗ್ರಾಹಕರು ಮತ್ತು ಆರು ಸಿಬ್ಬಂದಿಗಳನ್ನು ಕೆಳಗಿಳಿಸಿ ಟರ್ಮಿನಲ್‌ಗೆ ಸ್ಥಳಾಂತರಿಸಲಾಗುತ್ತಿದೆ" ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.



ವಿಮಾನದ ಸಿಬ್ಬಂದಿಗಳು ಇಂಜಿನ್ ಕಂಪಿಸುತ್ತಿದೆ ಎಂದು ವರದಿ ಮಾಡಿದ ಹಿನ್ನೆಲೆಯಲ್ಲಿ, ಕೊಲರಾಡೊ ಸ್ಪ್ರಿಂಗ್ಸ್ ವಿಮಾನ ನಿಲ್ದಾಣದಿಂದ ಡಲ್ಲಾಸ್ ಫೋರ್ಟ್ ವರ್ತ್ ನತ್ತ ತೆರಳುತ್ತಿದ್ದ ವಿಮಾನ ಸಂಖ್ಯೆ 1006 ಅನ್ನು ಡೆನ್ವರ್ ಗೆ ಮಾರ್ಗ ಬದಲಿಸಲಾಯಿತು. ನಂತರ, ಸುಮಾರು ಸಂಜೆ 5.15ರ ವೇಳೆಗೆ ವಿಮಾನ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು ಎಂದು ಎಂದು ಫೆಡರಲ್ ಏವಿಯೇಶನ್ ಅಡ್ಮಿನಿಸ್ಟ್ರೇಷನ್ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Plane Crash: ಟೊರೊಂಟೊ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಮಗುಚಿ ಬಿದ್ದ ಡೆಲ್ಟಾ ವಿಮಾನ; ವಿಡಿಯೋ ಇದೆ

ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಆದರೆ 12 ಜನರಿಗೆ ಸಣ್ಣ ಪುಟ್ಟ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡೆನ್ವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ. ಬೆಂಕಿಯನ್ನು ನಂದಿಸಲಾಗಿದ್ದು, ಯಾರಿಗೂ ಯಾವುದೇ ಹಾನಿಯಾಗಿಲ್ಲ. ಬೆಂಕಿ ಅವಘಡಕ್ಕೆ ಕಾರಣವೇನೆಂದು ಇನ್ನೂ ಖಚಿತವಾಗಿ ತಿಳಿದು ಬಂದಿಲ್ಲ.