Viral News: ಪ್ರೀತಿಸಿದವನಿಗಾಗಿ ರಾಜಮನೆತನವನ್ನು ತಿರಸ್ಕರಿಸಿದ ಅಕಿಶಿನೊ ರಾಜಕುಮಾರಿ ಮಾಕೊಗೆ ಈಗ ತಾಯ್ತನದ ಸಂಭ್ರಮ
ಜಪಾನ್ನ ಕ್ರೌನ್ ಪ್ರಿನ್ಸ್ ಅಕಿಶಿನೊ ಮತ್ತು ಕ್ರೌನ್ ಪ್ರಿನ್ಸೆಸ್ ಕಿಕೊ ಅವರ ಹಿರಿಯ ಮಗಳು ಅಕಿಶಿನೊ ರಾಜಕುಮಾರಿ ಮಾಕೊ 2021ರಲ್ಲಿ ತನ್ನ ಗೆಳೆಯ ಕೀ ಕೊಮುರೊನನ್ನು ಮದುವೆಯಾಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸ್ಟ್ರಾಲರ್ನೊಂದಿಗೆ ಇರುವ ದಂಪತಿಯ ಫೋಟೊ ವೈರಲ್ ಆಗಿದೆ. 2025ರ ಮೇ 22ರಂದು ಮಾಕೊ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ.


ಟೊಕಿಯೊ: ಗೆಳೆಯ ಕೀ ಕೊಮುರೊ ಜತೆ ಮದುವೆಯಾಗಲು ತನ್ನ ರಾಜಮನೆತನದ ಸ್ಥಾನಮಾನವನ್ನು ತ್ಯಜಿಸಿದ ಅಕಿಶಿನೊ ರಾಜಕುಮಾರಿ ಮಾಕೊ (Princess Mako), ಇದೇ ತಿಂಗಳು ತನ್ನ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ. ಇವರು ಜಪಾನ್ನ ಕ್ರೌನ್ ಪ್ರಿನ್ಸ್ ಅಕಿಶಿನೊ ಮತ್ತು ಕ್ರೌನ್ ಪ್ರಿನ್ಸೆಸ್ ಕಿಕೊ ಅವರ ಹಿರಿಯ ಮಗಳು. ಪ್ರೀತಿಸಿದ ಗೆಳೆಯನಿಗಾಗಿ ಇವರು 2021ರಲ್ಲಿ ತಮ್ಮ ಕುಟುಂಬವನ್ನು ತೊರೆದು ಮದುವೆಯಾಗಿ ನ್ಯೂಯಾರ್ಕ್ನಲ್ಲಿ ವಾಸಿಸುತ್ತಿದ್ದಾರೆ. ಇವರಿಬ್ಬರ ಮದುವೆಯಾಗಿ ಸುಮಾರು ನಾಲ್ಕು ವರ್ಷಗಳ ನಂತರ ಮಗುವಾಗಿದೆ ಎಂಬ ಊಹಾಪೋಹಗಳು ಕೇಳಿ ಬರುತ್ತಿವೆ. ಅದೂ ಅಲ್ಲದೇ ಇವರ ಫೋಟೊವೊಂದರಲ್ಲಿ ಮಗುವನ್ನು ಸುತ್ತಾಡಿಸಲು ಬಳಸುವ ಸ್ಟ್ರೋಲರ್ ಇರುವುದು ಕಂಡುಬಂದಿದೆ. ಹಾಗಾಗಿ ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ (Viral News) ಆಗಿದೆ.
ವರದಿ ಪ್ರಕಾರ, ರಾಜಕುಮಾರಿ ಮಾಕೊ ಮತ್ತು ಅವರ ಪತಿಯ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ಅದರಲ್ಲಿ ಸ್ಟ್ರಾಲರ್ ಇರುವುದು ಕಂಡುಬಂದಿದೆ. ರಾಜಕುಮಾರಿ ಮಾಕೊ 2025ರ ಮೇ 22ರಂದು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ.
ಪ್ರಸ್ತುತ, ಮಗುವಿನ ಜನನ ಮತ್ತು ಲಿಂಗದ ಬಗ್ಗೆ ವಿವರಗಳನ್ನು ರಹಸ್ಯವಾಗಿ ಇಡಲಾಗಿದೆ. ಒಂದು ವೇಳೆ ಈ ಸುದ್ದಿ ನಿಜವಾಗಿದ್ದರೆ ಮಗು ಅಧಿಕೃತವಾಗಿ ಕ್ರೌನ್ ಪ್ರಿನ್ಸ್ ಅಕಿಶಿನೋ ಮತ್ತು ಕ್ರೌನ್ ಪ್ರಿನ್ಸೆಸ್ ಕಿಕೊ ಅವರ ಮೊದಲ ಮೊಮ್ಮಗವಾಗಲಿದೆ. ಈ ನಡುವೆ, ಮಾಕೊ 2025ರ ಸೆಪ್ಟೆಂಬರ್ನಲ್ಲಿ ತನ್ನ ಕಿರಿಯ ಸಹೋದರನ ಸಮಾರಂಭವೊಂದಕ್ಕೆ ಜಪಾನ್ಗೆ ಹಿಂತಿರುಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ಮದುವೆ ಮನೆಗೆ ಬಂದ ಈ ಅನಿರೀಕ್ಷಿತ ಅತಿಥಿ ಕಂಡು ಜನ ಫುಲ್ ಶಾಕ್! ವಿಡಿಯೊ ವೈರಲ್
ಮಾಕೊ 2017ರಲ್ಲಿ ತನ್ನ ಬಾಲ್ಯದ ಗೆಳೆಯ ಕೀ ಕೊಮುರೊ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 2021ರಲ್ಲಿ ಈ ಜೋಡಿ ಮದುವೆಯಾಗಿದ್ದರು. ಇದರ ಪರಿಣಾಮವಾಗಿ ಮಾಕೊ ರಾಜಮನೆತನದ ಸ್ಥಾನಮಾನಕ್ಕೆ ಧಕ್ಕೆಯಾದ್ದರಿಂದ ಅಲ್ಲಿಂದ ಹೊರಬಂದರು. ಈ ಸಮಯದಲ್ಲಿ ಮಾಕೊ ಅದ್ದೂರಿ ಮದುವೆ ಆಚರಣೆಯನ್ನು ನಿರಾಕರಿಸಿದ್ದಲ್ಲದೇ ಮನೆಯಿಂದ ಹೊರಬರುವಾಗ ರಾಜಮನೆತನದ ಕುಟುಂಬದ ಮಹಿಳಾ ಸದಸ್ಯರಿಗೆ ನೀಡಲಾಗುವ ಸಾಂಪ್ರದಾಯಿಕ $1.3 ಮಿಲಿಯನ್ ಹಣವನ್ನು ಸಹ ತಿರಸ್ಕರಿಸಿದ್ದರು.