Human Calculator: 'ಮಾನವ ಕಂಪ್ಯೂಟರ್' ಗೊತ್ತು, ಆದರೆ 'ಮಾನವ ಕ್ಯಾಲ್ಕುಲೇಟರ್' ಗೊತ್ತಾ ನಿಮ್ಗೆ? ಇವರೇ ನೋಡಿ ಅವರು
ಮಹಾರಾಷ್ಟ್ರದ 14 ವರ್ಷದ ಬಾಲಕ ಆರ್ಯನ್ ಶುಕ್ಲಾ, ಈ ಬಾಲಕ ಒಂದೇ ದಿನದಲ್ಲಿ ಆರು ಗಿನ್ನೆಸ್ ವಿಶ್ವ ದಾಖಲೆಗಳನ್ನು ಮುರಿದು ಅಸಾಧಾರಣ ಸಾಧನೆ ಮಾಡಿದ್ದು, 'ಮಾನವ ಕ್ಯಾಲ್ಕುಲೇಟರ್' ಎಂದು ಕರೆಯಲ್ಪಡುವ ಆರ್ಯನ್, ತನ್ನ ವಿಶೇಷ ಮೆಂಟಲ್ ಪವರ್‌ನಿಂದ ಗಣಿತದಲ್ಲಿ ಅದರಲ್ಲೂ ಫಟಾ ಫಟ್ ಅಂತ ಲೆಕ್ಕ ಮಾಡಿ ಈ ಸಾಧನೆ ಮಾಡಿದ್ದಾನೆ.

ಆರ್ಯನ್ ಶುಕ್ಲಾ

ಮುಂಬೈ: ನಾವೆಲ್ಲ ಜಗತ್ತಿನ 'ಮಾನವ ಕಂಪ್ಯೂಟರ್' (Human Computer) ಎಂದೇ ಖ್ಯಾತಿಗಳಿಸಿರುವ ಶಕುಂತಲಾ ದೇವಿ (Shakuntala Devi) ಅವರ ಕುರಿತು ಕೇಳಿದ್ದೇವೆ. ಆದರೆ, 'ಮಾನವ ಕ್ಯಾಲ್ಕುಲೇಟರ್' (Human Calculator) ಬಗ್ಗೆ ಏನಾದ್ರೂ ಗೊತ್ತಾ...? ಇಲ್ಲಾಂದ್ರೆ ನಾವಿಂದು ಒಂದೇ ದಿನ ಆರು ಗಿನ್ನಿಸ್ ದಾಖಲೆ ಬರೆದು ಹ್ಯೂಮನ್ ಕ್ಯಾಲ್ಕುಲೇಟರ್ ಎಂಬ ಮನ್ನಣೆಗೆ ಪಾತ್ರರಾಗಿರುವ ಒಬ್ಬ ವ್ಯಕ್ತಿಯನ್ನು ಪರಿಚಯಿಸುತ್ತಿದ್ದೇವೆ. ಹೌದು, ಅವರೇ ಮಹಾರಾಷ್ಟ್ರದ 14 ವರ್ಷದ ಬಾಲಕ ಆರ್ಯನ್ ಶುಕ್ಲಾ, ಈ ಬಾಲಕ ಒಂದೇ ದಿನದಲ್ಲಿ ಆರು ಗಿನ್ನೆಸ್ ವಿಶ್ವ ದಾಖಲೆಗಳನ್ನು ಮುರಿದು ಅಸಾಧಾರಣ ಸಾಧನೆ ಮಾಡಿದ್ದು, 'ಮಾನವ ಕ್ಯಾಲ್ಕುಲೇಟರ್' ಎಂದು ಕರೆಯಲ್ಪಡುವ ಆರ್ಯನ್, ತನ್ನ ವಿಶೇಷ ಮೆಂಟಲ್ ಪವರ್ ಯಿಂದ ಗಣಿತದಲ್ಲಿ ಅದರಲ್ಲೂ ಫಟಾಪಟ್ ಅಂತ ಲೆಕ್ಕ ಮಾಡಿ ಈ ಸಾಧನೆ ಮಾಡಿದ್ದಾನೆ.
ಇತ್ತೀಚೆಗೆ ದುಬೈನಲ್ಲಿ ಆಯೋಜಿಸಲಾಗಿದ್ದ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಕಾರ್ಯಕ್ರಮಕ್ಕೆ ಆರ್ಯನ್ ಶುಕ್ಲಾಗೆ ಆಹ್ವಾನ ನೀಡಲಾಗಿದ್ದು, ಸ್ಪರ್ಧೆಯ ನಿಯಮನುಸಾರ ಸೀಮಿತ ಅವಧಿಯಲ್ಲಿ ಬಹು ಸಂಖ್ಯೆ ಗುಣಾಕಾರ, ನಿಖರ ಭಾಗಾಕಾರ, ಅನಿಖರ ಭಾಗಾಕಾರ, ಕ್ಯಾಲೆಂಡರ್ ದಿನ ಪತ್ತೆ, ನಿಖರ ವರ್ಗ ಮೂಲ, ಅನಿಖರ ವರ್ಗ ಮೂಲ, ಘನ ಮೂಲ(ನಿಖರ), ಅನಿಖರ ಘನ ಮೂಲ, ಮಿಶ್ರ ಭಿನ್ನ ರಾಶಿಯ ಪ್ರಶ್ನೆಗಳಿಗೆ ಉತ್ತರಿಸುವ ಸವಾಲು ನೀಡಲಾಗಿತ್ತು.
ಇದನ್ನು ಲೀಲಜಾಲವಾಗಿ ಪರಿಹಾರಿಸಿದ ಆರ್ಯನ್ ಶುಕ್ಲಾ, 25.19 ಸೆಕೆಂಡುಗಳಲ್ಲಿ 50 5-ಅಂಕಿಯ ಸಂಖ್ಯೆಗಳನ್ನು ಲೆಕ್ಕ ಮಾಡಿ'ಮಾನವ ಕ್ಯಾಲ್ಕುಲೇಟರ್' ಎಂಬ ಹೆಗ್ಗಲಿಕೆ ಪಾತ್ರವಾಗಿದ್ದಾನೆ. ಈ ಮೂಲಕ ಒಂದೇ ದಿನದಲ್ಲಿ ಆರು ಗಿನ್ನೆಸ್ ವಿಶ್ವ ದಾಖಲೆಗಳನ್ನು ಮುರಿದಿದ್ದು, ಇತನ ಚಾಣಕ್ಷತನಕ್ಕೆ ತಲೆ ಬಾಗಿ ಹ್ಯೂಮನ್ ಕ್ಯಾಲ್ಕುಲೇಟರ್ ಎಂಬ ಬಿರುದ ನೀಡಿ ಪ್ರಶಂಸಿದ್ದಾರೆ.
ಈ ಸುದ್ದಿಯನ್ನು ಓದಿ: National Sports: ಜಾತವಾರ ಹೊಸಹಳ್ಳಿ ಚಿರಂತ್ ಎಂ ಕಶ್ಯಪ್ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ
ನಮ್ಮಲ್ಲಿ ಅದೆಷ್ಟೋ ಜನರಿಗೆ ಕ್ಯಾಲ್ಕುಲೇಟರ್ ಇಲ್ಲದೆ ಲೆಕ್ಕಾಚಾರ ಮಾಡದವರ ಮಧ್ಯೆ ಶುಕ್ಲಾ ಅವರು ಯಾವುದೇ ಸಾಧನದ ಸಹಾಯವಿಲ್ಲದೇ, ಪೆನ್ನು- ಪೇಪರ್ ಬಳಸದೇ ಆಯೋಜಕರು ನೀಡಿದ ಲೆಕ್ಕಾಚಾರವನ್ನು ನೀರು ಕುಡಿದಷ್ಟು ಸುಲಭವಾಗಿ ಮಾಡಿ ಮುಸಿದ್ದು, ಎಲ್ಲಾರನ್ನು ಬೆರಗಾಗುವಂತೆ ಮಾಡಿದೆ. ಸೀಮಿತ ಅವಧಿಯಲ್ಲಿ ಬಹು ಸಂಖ್ಯೆ ಗುಣಾಕಾರ, ನಿಖರ ಭಾಗಾಕಾರ, ಅನಿಖರ ಭಾಗಾಕಾರ, ಕ್ಯಾಲೆಂಡರ್ ದಿನ ಪತ್ತೆ, ನಿಖರ ವರ್ಗ ಮೂಲ, ಅನಿಖರ ವರ್ಗ ಮೂಲ, ಘನ ಮೂಲ(ನಿಖರ), ಅನಿಖರ ಘನ ಮೂಲ, ಮಿಶ್ರ ಭಿನ್ನ ರಾಶಿಯ ಪ್ರಶ್ನೆಗಳಿಗೆ ಉತ್ತರಿಸುವ ಸವಾಲು ನಿಭಾಯಿಸಬೇಕು.
ಇನ್ನು ಆರ್ಯನ್ 2024 ರಲ್ಲಿ ಇಟಾಲಿಯನ್ ಟಿವಿಯ ರಿಯಾಲಿಟಿ ಲೋ ಶೋ ಡೀ ರೆಕಾರ್ಡ್‌ನ ಸೆಟ್‌ನಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದ ಆರ್ಯನ್ ಕೇವಲ 25.19 ಸೆಕೆಂಡುಗಳಲ್ಲಿ 50 ಐದು-ಅಂಕಿಯ ಸಂಖ್ಯೆಗಳನ್ನು ತ್ವರಿತವಾಗಿ ಮಾನಸಿಕವಾಗಿ ಲೆಕ್ಕವನ್ನು ಕೂಡಿಸುವ ತಮ್ಮ ಈ ಅಸಾಧರಣ ಪ್ರತಿಭೆಯಿಂದ ಪ್ರೇಕ್ಷಕರ ಮನಗೆದಿದ್ದರು.
ಇದೀಗ ಆರ್ಯನ್ ಶುಕ್ಲಾ 100 ನಾಲ್ಕು-ಅಂಕಿಯ ಸಂಖ್ಯೆಗಳನ್ನು ಮಾನಸಿಕವಾಗಿ ಕೂಡಿಸಲು ತೆಗೆದುಕೊಂಡ ಸಮಯ (30.9 ಸೆಕೆಂಡುಗಳು), ಮಾನಸಿಕವಾಗಿ 200 ನಾಲ್ಕು-ಅಂಕಿಯ ಸಂಖ್ಯೆಗಳನ್ನು ಮಾನಸಿಕವಾಗಿ ಕೂಡಿಸಲು ತೆಗೆದುಕೊಂಡ ಸಮಯ (1 ನಿಮಿಷ, 9.68 ಸೆಕೆಂಡುಗಳು), ಮಾನಸಿಕವಾಗಿ 50 ಐದು-ಅಂಕಿಯ ಸಂಖ್ಯೆಗಳನ್ನು ಮಾನಸಿಕವಾಗಿ ಕೂಡಿಸಲು ತೆಗೆದುಕೊಂಡ ಸಮಯ (18.71 ಸೆಕೆಂಡುಗಳು), 20-ಅಂಕಿಯ ಸಂಖ್ಯೆಯನ್ನು 10 ರ ಹತ್ತು-ಅಂಕಿಯ ಸಂಖ್ಯೆಗಳಿಂದ ಮಾನಸಿಕವಾಗಿ ಭಾಗಿಸಲು ತೆಗೆದುಕೊಂಡ ಸಮಯ (5 ನಿಮಿಷ, 42 ಸೆಕೆಂಡುಗಳು), 10 ರ ಎರಡು ಐದು-ಅಂಕಿಯ ಸಂಖ್ಯೆಗಳನ್ನು ಮಾನಸಿಕವಾಗಿ ಗುಣಿಸಲು ತೆಗೆದುಕೊಂಡ ಸಮಯ (51.69 ಸೆಕೆಂಡುಗಳು) ಮತ್ತು 10 ರ ಎರಡು ಎಂಟು-ಅಂಕಿಯ ಸಂಖ್ಯೆಗಳನ್ನು ಮಾನಸಿಕವಾಗಿ ಗುಣಿಸಲು ತೆಗೆದುಕೊಂಡ ಸಮಯ (2 ನಿಮಿಷ, 35.41 ಸೆಕೆಂಡುಗಳು) ಮೂಲಕ ಒಂದೇ ದಿನ ಆರು ದಾಖಲೆಗಳನ್ನು ಬರೆದಿದ್ದಾನೆ.