Nimisha Priya: ಕೇರಳ ನರ್ಸ್ ನಿಮಿಷ ಪ್ರಿಯಾಗೆ ತಾತ್ಕಾಲಿಕ ರಿಲೀಫ್; ಮರಣದಂಡನೆ ಮುಂದೂಡಿಕೆ
ಯೆಮೆನ್ ಪ್ರಜೆಯ ಹತ್ಯೆಗೆ ಸಂಬಂಧಿಸಿದಂತೆ ಜುಲೈ 16, 2025 ರಂದು ನಿಗದಿಯಾಗಿದ್ದ ಕೇರಳದ ನರ್ಸ್ ನಿಮಿಷಾ ಪ್ರಿಯಾಳ (Nimisha Priya) ಮರಣದಂಡನೆಯನ್ನು ಯೆಮೆನ್ ಅಧಿಕಾರಿಗಳು ಮುಂದೂಡಿದ್ದಾರೆ. ಕೇರಳದ ಮುಸ್ಲಿಂ ಮುಖಂಡರು ಯೆಮೆನ್ ಧಾರ್ಮಿಕ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಲಾಗುತ್ತಿದೆ.


ಸನಾ: ಯೆಮೆನ್ ಪ್ರಜೆಯ ಹತ್ಯೆಗೆ ಸಂಬಂಧಿಸಿದಂತೆ ಜುಲೈ 16, 2025 ರಂದು ನಿಗದಿಯಾಗಿದ್ದ ಕೇರಳದ ನರ್ಸ್ ನಿಮಿಷಾ ಪ್ರಿಯಾಳ (Nimisha Priya) ಮರಣದಂಡನೆಯನ್ನು ಯೆಮೆನ್ ಅಧಿಕಾರಿಗಳು ಮುಂದೂಡಿದ್ದಾರೆ. ಕೊಲೆ ಪ್ರಕರಣದಲ್ಲಿ ಮರಣದಂಡನೆ ಎದುರಿಸುತ್ತಿರುವ ಪ್ರಿಯಾಗೆ ಹೊಸ ರಾಜತಾಂತ್ರಿಕ ಮತ್ತು ಧಾರ್ಮಿಕ ಪ್ರಯತ್ನಗಳ ನಂತರ ತಾತ್ಕಾಲಿಕ ಪರಿಹಾರ ನೀಡಲಾಯಿತು.
ಭಾರತದ ಗ್ರ್ಯಾಂಡ್ ಮುಫ್ತಿ ಎಂಬ ಬಿರುದನ್ನು ಹೊಂದಿರುವ ಪ್ರಮುಖ ಸುನ್ನಿ ಮುಸ್ಲಿಂ ನಾಯಕ - ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಮೃತ ತಲಾಲ್ ಅಬ್ದೋ ಮಹ್ದಿ ಅವರ ಕುಟುಂಬದೊಂದಿಗೆ ಚರ್ಚೆಗೆ ಮುಂದಾಗಿದ್ದು, ಕ್ಷಮೆಗೆ ಬದಲಾಗಿ ಹಣವನ್ನು ಸ್ವೀಕರಿಸುವಂತೆ ಮನವೊಲಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಭಾರತೀಯ ಅಧಿಕಾರಿಗಳು ಸ್ಥಳೀಯ ಜೈಲು ಅಧಿಕಾರಿಗಳು ಮತ್ತು ಪ್ರಾಸಿಕ್ಯೂಟರ್ ಕಚೇರಿಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದರು, ಇದೂ ಕೂಡ ಮುಂದೂಡಿಕೆ ಸಾಧ್ಯವಾಯಿತು ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮೊದಲು, ಕೇರಳ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ನಿಮಿಷಪ್ರಿಯಾ ಬಿಡುಗಡೆಗೆ ಮಧ್ಯಪ್ರವೇಶಿಸಿ ವಿದೇಶಾಂಗ ಸಚಿವಾಲಯದೊಂದಿಗೆ ಮಾತನಾಡಿದ್ದರು. ನಿಮಿಷಪ್ರಿಯಾ ಅವರ ಮರಣದಂಡನೆಯನ್ನು ತಡೆಹಿಡಿಯಬೇಕೆಂಬ ಬೇಡಿಕೆಯನ್ನು ರಾಜ್ಯಪಾಲರು ಮುಂದಿಟ್ಟರು. ರಾಜ್ಯಪಾಲರು ವಿದೇಶಾಂಗ ಉದ್ಯಮಿ ಎಂಎ ಯೂಸುಫಾಲಿ ಅವರೊಂದಿಗೆ ಮಾತನಾಡಿದರು. ಎಂಎ ಯೂಸುಫಾಲಿ ಅವರು ದಾನಕ್ಕಾಗಿ ಯಾವುದೇ ಹಣವನ್ನು ನೀಡಬಹುದು ಎಂದು ರಾಜ್ಯಪಾಲರಿಗೆ ತಿಳಿಸಿದ್ದರು.