Weight Loss Tips: ತೂಕ ಇಳಿಸಬೇಕೇ? ಈ ಆಹಾರಗಳು ರಾಮಬಾಣ!
ತೂಕ ಇಳಿಸುವ ನಮ್ಮದೇ ಆದ ಪ್ರಯತ್ನ ಸಾಕಾಗದು ಎನ್ನುವ ಭಾವನೆ ಹಲವರಲ್ಲಿ ಬರಬಹುದು,ಕೇವಲ ಬಕೆಟ್‌ಗಟ್ಟಲೆ ಬೆವರು ಸುರಿಸಿದ ಮಾತ್ರಕ್ಕೆ, ಏನನ್ನೂ ತಿನ್ನದೇ ಬೇಕಾಬಿಟ್ಟಿ ಉಪವಾಸ ಮಾಡಿದ ಮಾತ್ರಕ್ಕೆ ತೂಕ ಇಳಿಸಿಕೊಳ್ಳಬಹುದು ಎನ್ನುವುದು ತಪ್ಪು. ಇಷ್ಟಾಗಿಯೂ ಆರೋಗ್ಯಕರ ಆಹಾರಕ್ರಮವನ್ನು ಪಾಲಿಸಿದರೆ, ನಮ್ಮ ತೂಕ ಇಳಿಸುವ ದಾರಿ ಸುಗಮವಾಗಿ ಸಾಗೀತು. ಅದಕ್ಕೆ ಎಂಥಾ ಆಹಾರಗಳು ಬೇಕು?


ನವದೆಹಲಿ: ಇಡೀ ಜಗತ್ತೇ ತೂಕ ಇಳಿಸಲೆಂದೇ ಓಡುತ್ತಿದೆ. ಎಲ್ಲಿ ನೋಡಿದರೂ, 20,30,40… ಹೀಗೆ ಅಂಕೆಗೆ ಸಿಗದಷ್ಟು ಕಿ.ಲೋ. ತೂಕಗಳನ್ನು ಇಳಿಸಿಕೊಂಡು, ನಳನಳಿಸುತ್ತಿರುವವರ ಚಿತ್ರಗಳೇ ಕಾಣುತ್ತವೆ. ಪ್ರತಿಯೊಬ್ಬರೂ ತೂಕ ಇಳಿಸುವ(Weight Loss), ಕೊಬ್ಬು ಕರಗಿಸುವ ತಜ್ಞರೇ ಆಗಿದ್ದಾರೋ ಎಂಬ ಭೀತಿ ಕಾಡಿದರೆ ಅಚ್ಚರಿಯಿಲ್ಲ. ಯಾವುದನ್ನು ತಿನ್ನಿ, ಯಾವುದನ್ನು ತಿನ್ನಬೇಡಿ, ಹೇಗೆ, ಎಲ್ಲಿ, ಏನು ಮುಂತಾದ ಏನಕ್ಕೇನೋ ಪ್ರಶ್ನೆಗಳಿಗೆ ಉತ್ತರ ನೀಡುವವರೇ ಕಾಣುತ್ತಿದ್ದಾರೆ. ಹಾಗೆಂದು ಇವರೆಲ್ಲ ವೈದ್ಯರೂ ಅಲ್ಲ, ಪೌಷ್ಟಿಕಾಂಶ ತಜ್ಞರು ಆಗಿರಬೇಕೆಂದೂ ಇಲ್ಲ, ಅಂತೂ ಸಲಹೆಗಳ ಮಹಾಪೂರವೇ ಹರಿದು ಬರುತ್ತಿದೆ. ಇಷ್ಟಾದರೂ, ನಮ್ಮ ತೂಕ ಮಾತ್ರ ಇಳಿಯುತ್ತಿಲ್ಲ, ನಮ್ಮ ಹೊಟ್ಟೆ ಮಾತ್ರ ಕರಗುತ್ತಿಲ್ಲ ಎನಿಸುತ್ತಿದೆಯೇ?
ತೂಕ ಇಳಿಸುವ ನಮ್ಮದೇ ಆದ ಪ್ರಯತ್ನ ಸಾಕಾಗದು ಎನ್ನುವ ಭಾವನೆ ಹಲವರಲ್ಲಿ ಬರಬಹುದು. ಕಾರಣ, ಬಲೂನಿನಿಂದ ಗಾಳಿ ತೆಗೆದಂತೆ ನಮ್ಮ ದೇಹ ಇಳಿಯುತ್ತಿಲ್ಲ ಎನ್ನುವುದು ಹೆಚ್ಚಿನವರ ಅಹವಾಲು. ಆದರೆ ತೂಕ ಇಳಿಕೆಯೆಂಬುದು ಮುಟ್ಟಬೇಕಾದ ಗುರಿಯಲ್ಲ, ನಡೆಯಬೇಕಾದ ದಾರಿಯೆಂದು ತಿಳಿದರೆ ಮನಸ್ಸಿಗೆ ಆಗುವ ಕಿರಿ ಕಿರ ಅಷ್ಟಿಷ್ಟಲ್ಲ. ಕೇವಲ ಬಕೆಟ್ ಗಟ್ಟಲೆ ಬೆವರು ಸುರಿಸಿದ ಮಾತ್ರಕ್ಕೆ, ಏನನ್ನೂ ತಿನ್ನದೇ ಬೇಕಾಬಿಟ್ಟಿ ಉಪವಾಸ ಮಾಡಿದ ಮಾತ್ರಕ್ಕೆ ತೂಕ ಇಳಿಸಿಕೊಳ್ಳಬಹುದು ಎನ್ನುವುದು ತಪ್ಪು. ಇಡೀ ಜೀವನಶೈಲಿಯನ್ನು, ಅಂದರೆ ನೀರು, ನಿದ್ದೆ, ಆಹಾರ, ವ್ಯಾಯಾಮ, ಮನಸ್ಸಿನ ಒತ್ತಡಗಳನ್ನು ನಿರ್ವಹಿಸುವುದರಿಂದ ಹಿಡಿದು ಎಲ್ಲವೂ ಸರಿದಾರಿಗೆ ತರುವುದಕ್ಕೆ ಸಾಧ್ಯವಿದೆ. ಆಗಲೇ ದೇಹ ನಾವು ಹೇಳಿದಂತೆ ಕೇಳುವುದು. ಇಷ್ಟಾಗಿಯೂ ಆರೋಗ್ಯಕರ ಆಹಾರಕ್ರಮವನ್ನು ಪಾಲಿಸಿದರೆ, ನಮ್ಮ ತೂಕ ಇಳಿಸುವ ದಾರಿ ಸುಗಮವಾಗಿ ಸಾಗೀತು. ಅದಕ್ಕೆ ಎಂಥಾ ಆಹಾರಗಳು ಬೇಕು?
ಓಟ್‌ಮೀಲ್: ಬಹಳಷ್ಟು ಸತ್ವಗಳಿರುವ ಈ ಧಾನ್ಯದಲ್ಲಿ ಕ್ಯಾಲರಿ ಕಡಿಮೆ. ಇದರಲ್ಲಿರುವ ನಾರು ಮತ್ತು ಪ್ರೊಟೀನ್ ಅಂಶಗಳು ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತವೆ ಹಾಗೂ ದೇಹಕ್ಕೆ ದಣಿ ವಾಗ ದಂತೆ ಶಕ್ತಿಯನ್ನು ಪೂರೈಸುತ್ತವೆ. ಅರ್ಧ ಕಪ್‌ನಷ್ಟು ಬೇಯಿಸಿದ ಓಟ್ಸ್ ನಲ್ಲಿ ಕೇವಲ ೧೫೦ ಗ್ರಾ ಕ್ಯಾಲರಿ ದೊರೆಯುತ್ತದೆ. ೪ ಗ್ರಾಂನಷ್ಟು ನಾರು ಲಭಿ ಸುತ್ತದೆ. ಬೆಳಗಿನ ತಿಂಡಿಗೆ ಇದನ್ನು ಸೇವಿಸುವುದರಿಂದ ಕಾರಣವಿಲ್ಲದೆ ಕಾಡುವ ಹಸಿವನ್ನು ದೂರ ಮಾಡಿ, ಮಧ್ಯಾಹ್ನದವರೆಗೆ ಶಕ್ತಿ ಕುಸಿಯದೆ, ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು.
ಬ್ಲ್ಯಾಕ್ ಬೀನ್: ರಾಜ್ಮಾದಂಥ ಕಂದು/ಕಪ್ಪು ಬಣ್ಣದ ಯಾವುದೇ ಕಾಳು ಗಳನ್ನು ಈ ಸಾಲಿಗೆ ಸೇರಿಸಬಹುದು. ನಾರು ಮತ್ತು ಪ್ರೊಟೀನ್ ಭರಪೂರ ಇರುತ್ತವೆ ಈ ಕಾಳುಗಳಲ್ಲಿ. ಇಂಥ ಒಂದು ಕಪ್ ಕಾಳುಗಳಲ್ಲಿ ಸುಮಾರು ೧೭ ಗ್ರಾಂ ನಾರು ಮತ್ತು ೧೪ ಗ್ರಾಂ ಪ್ರೊಟೀನ್ ದೊರೆಯುತ್ತದೆ. ಇಷ್ಟೊಂದು ಪ್ರಮಾಣದ ಕಾಳುಗಳನ್ನು ಒಬ್ಬ ವ್ಯಕ್ತಿಗೆ ತಿನ್ನಲಾಗದು ಎನ್ನುವುದು ಹೌದಾದರೂ, ಇದರದ್ದೇ ಪಲ್ಯ, ಭಾಜಿಗಳನ್ನು ಮಾಡುವುದು ಕುಟುಂಬದ ಆರೋಗ್ಯಕ್ಕೆ ಸೂಕ್ತ.
ವಾಲ್‌ನಟ್: ಆರೋಗ್ಯಕರ ಕೊಬ್ಬು, ಪ್ರೊಟೀನ್ ಮತ್ತು ನಾರಿನಂಶ ಹೊಂದಿರುವ ಈ ನಟ್‌ಗಳು ಆರೋಗ್ಯಕ್ಕೆ ಬಹಳಷ್ಟು ರೀತಿಯ ಲಾಭ ಗಳನ್ನು ಒದಗಿಸಬಲ್ಲವು. ತನ್ನಲ್ಲಿರುವ ಒಮೇಗಾ ೩ ಕೊಬ್ಬಿನಾಮ್ಲದಿಂದ ದೇಹದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಹೃದಯದ ಆರೋಗ್ಯ ಸುಧಾರಿಸುವುದರಿಂದ ಹಿಡಿದು, ತೂಕ ಇಳಿಸುವವರೆಗೆ ಹಲವಾರು ರೀತಿಯಲ್ಲಿ ಸ್ವಾಸ್ಥ್ಯ ರಕ್ಷಣೆಗೆ ನೆರವಾಗುತ್ತದೆ ಇದು.
ನಿಂಬೆ ನೀರು: ಬೆಳಗಿನ ಹೊತ್ತು ನಿಂಬೆ ನೀರಿನ ಸೇವನೆಯ ಬಗ್ಗೆ ಬಹಳಷ್ಟು ಪರ-ವಿರೋಧದ ಚರ್ಚೆಗಳು ಚಾಲ್ತಿಯಲ್ಲಿವೆ. ಆದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ತೊಡಗಿ, ಉತ್ಕರ್ಷಣ ನಿರೋಧಕಗಳನ್ನು ದೇಹಕ್ಕೆ ಪೂರೈಸುವವರೆಗೆ ಹಲವು ರೀತಿಯಲ್ಲಿ ಇದು ನಮಗೆ ಉಪಕಾರ ಮಾಡಬಲ್ಲದು. ದೇಹದ ಚಯಾಪಚಯ ಹೆಚ್ಚಿಸುವ ಮೂಲಕ ತೂಕ ಇಳಿಕೆ ಗೂ ಇದು ನೆರವಾಗುತ್ತದೆ. ಆದರೆ ಆಸಿಡಿಟಿಯಂಥ ಸಮಸ್ಯೆ ಇರುವವರಿಗೆ ಬೆಳಗಿನ ಖಾಲಿ ಹೊಟ್ಟೆಯಲ್ಲಿ ನಿಂಬೆರಸದ ನೀರು ಕುಡಿಯುವುದು ಸಮಸ್ಯೆಗಳನ್ನು ತರಬಲ್ಲದು.
ಇದನ್ನು ಓದಿ: Health Tips: ಸೌತೆಕಾಯಿಯನ್ನು ಈ ಆಹಾರಗಳ ಜತೆ ತಪ್ಪಿಯೂ ಸೇವಿಸಬೇಡಿ
ಸೊಪ್ಪುಗಳು: ಪಾಲಕ್, ಮೆಂತೆ, ಸಬ್ಬಸಿಗೆ, ನುಗ್ಗೆ, ದಂಟು, ಹೊನಗನ್ನೆ, ಚಕ್ಕೋತ, ಕೀರೆ, ಬಸಳೆ ಮುಂತಾದ ಲೆಕ್ಕವಿಲ್ಲದಷ್ಟು ಸೊಪ್ಪುಗಳು ನಮ್ಮ ನಾಡಿನ ಉದ್ದಗಲಕ್ಕೆ ಲಭ್ಯವಿವೆ. ಸ್ಥಳೀಯವಾಗಿ ಬಳಸುವ ಸೊಪ್ಪುಗಳು ಇನ್ನೂ ಬಹಳಷ್ಟು ಇರಬಹುದು. ಇವೆಲ್ಲವೂ ನಮ್ಮ ಆರೋಗ್ಯಕ್ಕೆ ಪೂರಕ ವಾದಂಥವು. ಕಡಿಮೆ ಕ್ಯಾಲರಿಯಲ್ಲಿ ದಂಡಿಯಾಗಿ ವಿಟಮಿನ್ ಮತ್ತು ಖನಿಜಗಳನ್ನು ಪೂರೈಸಬಲ್ಲವು. ನಾರು ಮತ್ತು ನೀರನ್ನು ನೀಡಬಲ್ಲವು. ಈ ಮೂಲಕ ತೂಕ ಇಳಿಕೆಗೆ ನೆರವಾಗಬಲ್ಲವು.
ಮೊಟ್ಟೆ: ದೇಹದಲ್ಲಿ ಅಧಿಕ ಸ್ನಾಯುಗಳು ಇದ್ದಷ್ಟೂ ಕ್ಯಾಲರಿ ಕರಗುವುದು ಹೆಚ್ಚು. ಸ್ನಾಯುಗಳನ್ನು ಹುರಿಗಟ್ಟಿಸಲು ಮೊಟ್ಟೆಯಂಥ ಆಹಾರಗಳು ನೆರವಾಗುತ್ತವೆ. ಒಮ್ಮೆ ಹೊಟ್ಟೆ ತುಂಬಿದರೆ ದೀರ್ಘ ಕಾಲದವರೆಗೆ ಶಕ್ತಿಯನ್ನು ಒದಗಿಸುತ್ತಾ, ಹಸಿವೆ ಕಾಡದಂತೆ ಕಾಪಾಡುತ್ತವೆ. ಜೊತೆಗೆ ಅಗತ್ಯವಾದ ಕೊಬ್ಬು ಮತ್ತು ಖನಿಜಗಳನ್ನೂ ದೇಹಕ್ಕೆ ಪೂರೈಸುತ್ತವೆ.