ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಕಾಳು ಮೆಣಸಿನ ಸೇವನೆಯಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳಿವು!

ಪ್ರಾಚೀನ ಕಾಲದಿಂದಲೂ ಆಯುರ್ವೇದ ಔಷಧಗಳಲ್ಲಿ ಕಾಳು ಮೆಣಸಿನ ಬಳಕೆ, ಅದರ ಪ್ರಾತಿನಿಧ್ಯತೆ ಬಹಳಷ್ಟಿದ್ದು ಅದರಲ್ಲಿರುವ ಔಷಧೀಯ ಗುಣಗಳು ಆರೋಗ್ಯ ಸುಧಾರಿಸುವ ನೆಲೆಯಲ್ಲಿ ಬಹಳ ಉಪಯುಕ್ತವಾಗಲಿದೆ. ಹಾಗಾಗಿ ಅದನ್ನು ಹೇಗೆ ಬಳಕೆ ಮಾಡಬೇಕು? ಮಲಗುವ ಮುನ್ನ ಕಾಳು ಮೆಣಸನ್ನು ಸೇವಿಸುವುದರಿಂದ ಯಾವೆಲ್ಲ ಆರೋಗ್ಯ ಪ್ರಯೋಜನ ಸಿಗಲಿದೆ ಎನ್ನುವ ಮಾಹಿತಿ ಇಲ್ಲಿದೆ.

ಹಲವು ಆರೋಗ್ಯ ಸಮಸ್ಯೆಗೆ ಕಾಳುಮೆಣಸು ರಾಮಬಾಣ!

ಕಾಳು ಮೆಣಸು

Profile Pushpa Kumari Feb 13, 2025 5:00 AM

ನವದೆಹಲಿ: ವಿಶ್ವದಾದ್ಯಂತ ಕರಿಮೆಣಸಿಗೆ (Black Pepper) ಬಹಳ ಬೇಡಿಕೆ ಇದೆ. ಇದನ್ನು ಸಾಂಬಾರು ಪದಾರ್ಥಗಳಲ್ಲಿ ಬಳಸುವುದು ಅತೀ ಹೆಚ್ಚು ವಾಡಿಕೆಯಲ್ಲಿದೆ. ಅದರೊಂದಿಗೆ ಇದರಲ್ಲಿರುವ ಕೆಲವೊಂದು ಔಷಧೀಯ ಗುಣಗಳು ದೇಹಕ್ಕೆ ಬಹಳಷ್ಟು ಪ್ರಯೋಜನಕಾರಿ. ಪ್ರಾಚೀನ ಕಾಲದಿಂದಲೂ ಆಯುರ್ವೇದ ಔಷಧಗಳಲ್ಲಿ ಕಾಳು ಮೆಣಸಿನ ಬಳಕೆ,ಅದರ ಪ್ರಾತಿನಿಧ್ಯತೆ ಬಹಳಷ್ಟಿದ್ದು ಅದರಲ್ಲಿರುವ ಔಷಧೀಯ ಗುಣಗಳು ಆರೋಗ್ಯ ಸುಧಾರಿಸುವ ನೆಲೆಯಲ್ಲಿ ಬಹಳ ಉಪಯುಕ್ತವಾಗಲಿದೆ. ಹಾಗಾಗಿ ಅದನ್ನು ಹೇಗೆ ಬಳಕೆ ಮಾಡಬೇಕು? ಮಲಗುವ ಮುನ್ನ ಕಾಳು ಮೆಣಸನ್ನು ಸ್ವೀಕರಿಸುವುದರಿಂದ ಯಾವೆಲ್ಲ ಆರೋಗ್ಯ ಪ್ರಯೋಜನ ಸಿಗಲಿದೆ ಎನ್ನುವ ಮಾಹಿತಿ ಇಲ್ಲಿದೆ.

ಜೀರ್ಣಕ್ರಿಯೆಗೆ ಸಹಕಾರಿ: ಕಾಳು ಮೆಣಸಿನ ಸೇವನೆಯಿಂದ ದೇಹದ ಜೀರ್ಣಕ್ರಿಯೆ ಉತ್ತಮವಾಗಲಿದೆ. ಕರಿಮೆಣಸಿನಲ್ಲಿ ಪೈಪರಿನ್ ಎಂಬ ಅಂಶದಿಂದ ಆಹಾರವನ್ನು ಉತ್ತಮವಾಗಿ ಜೀರ್ಣಕ್ರಿಯೆ ಗೊಳಿಸಲು ಬೇಕಾದ ಅಂಶ ಇರಲಿದ್ದು ಜೀರ್ಣಕ್ರಿಯೆ ಸಮಸ್ಯೆ ಇದ್ದವರು ರಾತ್ರಿ ಮಲಗುವ ಮುನ್ನ ಇದನ್ನು ಸೇವಿಸಬಹುದು.

ಸಕ್ಕರೆ ಖಾಯಿಲೆಗೆ ಪರಿಹಾರ: ಇತ್ತೀಚಿನ ದಿನದಲ್ಲಿ ಮಧುಮೇಹ (ಶುಗರ್) ಖಾಯಿಲೆ ಸಾಮಾನ್ಯವಾಗಿ ಬಿಟ್ಟಿದೆ. ಸಿಹಿ ತಿನಿಸನ್ನು ತಿನ್ನಲು ಮನಸ್ಸಿದ್ದರೂ ಬಾಯಿಗೆ ರುಚಿ ರುಚಿ ಯಾದ ಆಹಾರ ಬಯಸುತ್ತಿದ್ದರೂ ಸಕ್ಕರೆ ಖಾಯಿಲೆ ಇವೆಲ್ಲ ಆಸೆಗೂ ಕಡಿವಾಣ ಹಾಕಿದೆ. ಸಕ್ಕರೆ ಖಾಯಿಲೆ ನಿಯಂತ್ರಿಸುವ ನೆಲೆಯಲ್ಲಿ ಕಾಳು ಮೆಣಸಿನ ಸೇವನೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದರೂ ತಪ್ಪಾಗದು.

ರೋಗ ನಿರೋಧಕ ಶಕ್ತಿ ಹೆಚ್ಚಳ: ಕಾಳು ಮೆಣಸನ್ನು ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ಇದರಲ್ಲಿರುವ ವಿಟಮಿನ್ ಡಿ, ಕ್ಯಾಲ್ಸಿಯಂ, ಪೊಟ್ಯಾಸಿಯಮ್‌, ವಿಟಮಿನ್ ಬಿ 2, ಪೊಟ್ಯಾಸಿಯಮ್‌ ಇತರ ಪೋಷಕಾಂಶಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವಂತೆ ಮಾಡಲಿದೆ.

ನಿದ್ರಾ ಹೀನತೆ ಸಮಸ್ಯೆ ನಿವಾರಣೆ: ಇತ್ತೀಚಿಗೆ ಬಹುತೇಕರಿಗೆ ನಿದ್ರಾ ಹೀನತೆ ಸಮಸ್ಯೆ ಬಹಳ ಇದೆ‌. ಇದರ ಪರಿಹಾರಕ್ಕೆ ಕಾಳು ಮೆಣಸನ್ನು ಹಾಲಿನ ಜೊತೆ ಸೇವಿಸಬೇಕು. ಮಲಗುವ ಮುನ್ನ ಇದನ್ನು ಸೇವನೆ ಮಾಡಿದರೆ ಸುಖ ನಿದ್ರೆ ಪ್ರಾಪ್ತ ವಾಗಲಿದೆ ಎಂದು ಕೆಲವು ಅಧ್ಯಯನದಲ್ಲಿ ಈ ಬಗ್ಗೆ ತಿಳಿಸಲಾಗಿದೆ.

ಕ್ಯಾನ್ಸರ್ ‌ ವಿರೋಧಿ ಗುಣ ಹೊಂದಿದೆ: ಕರಿಮೆಣಸಿನಲ್ಲಿ ಇರುವ ಪೈಪರಿನ್ ಎಂಬ ಅಂಶವು ಕ್ಯಾನ್ಸರ್ ಖಾಯಿಲೆ ಬರದಂತೆ ನಮ್ಮ ದೇಹವನ್ನು ರಕ್ಷಣೆ ಮಾಡಲಿದೆ. ಹಾಗಾಗಿ ಖಾಯಿಲೆ ಬರದಂತೆ ಮೊದಲೇ ಎಚ್ಚರ ವಹಿಸುವ ಸಲುವಾಗಿ ಕಾಳು ಮೆಣಸಿನ ಸೇವನೆ ನಿತ್ಯ ಮಾಡಿದರೆ ಬಹಳ ಉತ್ತಮ ಎನ್ನಬಹುದು.

ಸಾಮಾನ್ಯ ರೋಗಕ್ಕೂ ಮನೆ ಮದ್ದು: ಶೀತ , ಜ್ವರ, ಭೇದಿ ಇತ್ಯಾದಿ ಸಮಸ್ಯೆಗಳ ನಿವಾರಣೆಗೆ ಮನೆ ಮದ್ದಿನ ರೀತಿಯಲ್ಲಿ ಕಾಳು ಮೆಣಸನ್ನು ಬಳಕೆ ಮಾಡಬಹುದು. ಹಾಲಿನ ಜೊತೆ ಸ್ವಲ್ಪ ಬೆಲ್ಲ, ಕಾಳು ಮೆಣಸಿನ ಪುಡಿ ಬೆರೆಸಿ ರಾತ್ರಿ ಸೇವನೆ ಮಾಡಿದರೆ ಅನೇಕ ರೋಗ ನಿವಾರಣೆ ಆಗಲಿದೆ. ಗಂಟಲು ನೋವಿದ್ದ ಸಂದರ್ಭದಲ್ಲಿ ಜೇನು ತುಪ್ಪ ಮತ್ತು ಕಾಳು ಮೆಣಸು ಬೆರೆಸಿ ರಾತ್ರಿ ಸೇವನೆ ಮಾಡಬೇಕು ಇದು ಬಹಳ ಬೇಗ ಗಂಟಲಿನ ನೋವು ಕಡಿಮೆ ಮಾಡಲಿದೆ.

ತೂಕ ಇಳಿಕೆಗೆ ಬಳಸಬಹುದು: ಅತಿಯಾದ ತೂಕದ ಸಮಸ್ಯೆ ಇರುವವರು ಕಾಳು ಮೆಣಸಿನ ಪುಡಿಯನ್ನು ಜೇನು ತುಪ್ಪದ ಜೊತೆ ಬೆರೆಸಿ ಸೇವನೆ ಮಾಡಬೇಕು. ಕರಿಮೆಣಸಿನಲ್ಲಿ ಚಯಾಪಚಯ ಕ್ರಿಯೆ ಉತ್ತಮವಾಗಿ ಇರಿಸುವ ಗುಣವಿದ್ದು ಇದರ ಬಳಕೆಯಿಂದ ತೂಕ ಇಳಿಕೆ ಮಾಡಲು ಬಹಳ ಸಹಕಾರಿ ಆಗುತ್ತದೆ. ಅತಿಯಾದ ಕೊಲೆಸ್ಟ್ರಾಲ್ ಸಮಸ್ಯೆ ನಿವಾರಿಸಿ ಹೃದಯದ ಆರೋಗ್ಯ ಸುಧಾರಿಸಲು ಕೂಡ ರಾಮಬಾಣದಂತೆ ಉಪಯುಕ್ತ ಆಗಲಿದೆ.

ಯಾವ ರೀತಿ ಸೇವನೆ ಮಾಡಬಹುದು? ಹೆಚ್ಚಾಗಿ ಬಿಸಿ ಹಾಲಿನಲ್ಲಿ ಕಾಳು ಮೆಣಸಿನ ಪುಡಿ ಬೆರೆಸಿ ರಾತ್ರಿ ಮತ್ತು ಹಗಲಿನ ಸಂದರ್ಭದಲ್ಲಿ ಸೇವಿಸುತ್ತಾರೆ. ಅದೇ ರೀತಿ ಬಿಸಿ ನೀರಿನಲ್ಲಿ ಕಾಳು ಮೆಣಸಿನ ಪುಡಿ ಸೇರಿಸಿ ಕಷಾಯ ಮಾಡಿಯು ಕಾಳು ಮೆಣಸಿನ ಬಳಕೆ ಮಾಡುತ್ತಾರೆ. ಕಾಳು ಮೆಣಸನ್ನು ತುಪ್ಪದ ಜೊತೆ ಸೇವನೆ ಮಾಡಿದರೆ ಮೂಳೆ ಸಮಸ್ಯೆಗಳು , ಕೀಲು ನೋವಿನ ಸಮಸ್ಯೆ ನಿವಾರಣೆ ಆಗಲಿದೆ.

ಇದನ್ನು ಓದಿ: Health Tips: ಹೃದಯದ ಆರೋಗ್ಯ ಹೆಚ್ಚಿಸಿಕೊಳ್ಳಲು ಈ ಅಭ್ಯಾಸ ರೂಢಿಸಿಕೊಳ್ಳಿ

ಈ ರೀತಿ ಮಾಡಬೇಡಿ: ಕಾಳು ಮೆಣಸಿನ ಔಷಧಿಯ ಗುಣ ಅನೇಕ ಆರೋಗ್ಯ ಪ್ರಯೋಜನ ನೀಡಿದರೂ ಕೂಡ ಅದನ್ನು ಮಿತಿ ಮೀರಿ ಸೇವಿಸಬಾರದು. ಹೆಚ್ಚೆಂದರೆ ಅರ್ಧದಿಂದ 1 ಟೀ ಸ್ಪೂನ್ ಬಳಕೆ ಮಾಡುವುದು ಉತ್ತಮ. ಇಡೀ ಕಾಳು ಮೆಣಸನ್ನು 4-5 ಸೇವನೆ ಮಾಡಬಹುದು. ಒಂದು ವೇಳೆ ಅತಿಯಾಗಿ ಸೇವಿಸಿದರೆ ಹೊಟ್ಟೆ ಹುಣ್ಣು, ಗ್ಯಾಸ್ಟ್ರಿಕ್‌ ಸಮಸ್ಯೆ ಕಾಡಲಿದೆ.