Health Tips: ಹೃದಯದ ಆರೋಗ್ಯ ಹೆಚ್ಚಿಸಿಕೊಳ್ಳಲು ಈ ಅಭ್ಯಾಸ ರೂಢಿಸಿಕೊಳ್ಳಿ
ಹೃದಯ ಸಂಬಂಧಿತ ಸಮಸ್ಯೆಗಳು ಮಕ್ಕಳಿಂದ ಹಿಡಿದು ವೃದ್ಧರನ್ನೂ ಕಾಡುತ್ತಿದೆ. ಹಾಗಾಗಿ ಹೃದಯದ ಆರೋಗ್ಯ ಬಗ್ಗೆ ಕಾಳಜಿ ವಹಿಸಿ ಕೆಲವೊಂದು ಅಗತ್ಯ ಬದಲಾವಣೆಗಳನ್ನು ನಮ್ಮ ಜೀವನ ಶೈಲಿಯಲ್ಲಿ ಅನುಸರಿಸಿದರೆ ಯಾವ ಸಮಸ್ಯೆಯೂ ಇರಲಾರದು. ಜಾಗಿಂಗ್, ವಾಕಿಂಗ್, ಸೈಕ್ಲಿಂಗ್, ಸ್ವಿಮ್ಮಿಂಗ್‌ನಂತಹ ವ್ಯಾಯಾಮವನ್ನು ನಿತ್ಯ ಮಾಡುವುದನ್ನು ರೂಢಿಸಿಕೊಳ್ಳಬೇಕು.
![ಹೃದಯ ಸಮಸ್ಯೆಗಳ ನಿವಾರಣೆಗೆ ಈ ಜೀವನ ಶೈಲಿ ಪಾಲಿಸಿ](https://cdn-vishwavani-prod.hindverse.com/media/original_images/Healthier_Heart.jpg)
Healthier Heart
![Profile](https://vishwavani.news/static/img/user.png)
ನವದೆಹಲಿ: ಹೃದಯ (Heart) ನಮ್ಮ ದೇಹದ ಅತೀ ಭಾಗ ಎನಿಸಿಕೊಂಡಿದೆ. ಅದರ ಕಾಳಜಿಯನ್ನು ನಾವು ಮಾಡಲೇಬೇಕು. ಒತ್ತಡದ ಕೆಲಸ, ಬಿಡುವಿಲ್ಲದ ಆಧುನಿಕ ಜೀವನ ಶೈಲಿಯ ನಡುವೆಯೂ ನಮ್ಮ ಆರೋಗ್ಯಕ್ಕೆ ಆದ್ಯತೆ ನೀಡುವುದನ್ನು ಮರೆಯಬಾರದು. ನಮ್ಮ ನಿತ್ಯ ಹವ್ಯಾಸಗಳೆ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತವೆ ಎನ್ನುತ್ತಾರೆ ತಜ್ಞರು. ಇದೇ ಪರಿಣಾಮದಿಂದ ಹೃದಯ ಸಂಬಂಧಿತ ಸಮಸ್ಯೆಗಳು ಮಕ್ಕಳಿಂದ ವೃದ್ಧರವರೆಗೂ ಕಾಡುತ್ತಿದೆ. ಹಾಗಾಗಿ ಹೃದಯದ ಆರೋಗ್ಯ ಬಗ್ಗೆ ಕಾಳಜಿ ವಹಿಸಿ ಕೆಲವೊಂದು ಅಗತ್ಯ ಬದಲಾವಣೆಗಳನ್ನು ನಮ್ಮ ಜೀವನ ಶೈಲಿಯಲ್ಲಿ ಅನುಸರಿಸಿದರೆ ಯಾವ ಸಮಸ್ಯೆಯೂ ಇರಲಾರದು (Health Tips). ಹೃದಯದ ಆರೋಗ್ಯಕ್ಕೆ ನಾವು ದೈನಂದಿನ ಜೀವನದಲ್ಲಿ ಅಳವಡಿಸಬೇಕಾದ ಕ್ರಮಗಳ ಮಾಹಿತಿ ಇಲ್ಲಿದೆ.
ನಿತ್ಯ ವ್ಯಾಯಮ ಮಾಡಿ
ಜಾಗಿಂಗ್, ವಾಕಿಂಗ್, ಸೈಕ್ಲಿಂಗ್, ಸ್ವಿಮ್ಮಿಂಗ್‌ನಂತಹ ವ್ಯಾಯಾಮವನ್ನು ನಿತ್ಯ ಮಾಡುವುದರಿಂದ ದೇಹದ ಆರೋಗ್ಯದಲ್ಲಿ, ಹೃದಯದಲ್ಲಿ ಸಮಸ್ಯೆ ಇರಲಾರದು. ಅಷ್ಟು ಮಾತ್ರವಲ್ಲದೆ ಆಲಸ್ಯ, ಜಡತ್ವದಂತಹ ಮನಸ್ಥಿತಿ ಕಡಿಮೆಯಾಗಿ ಜೀವನದಲ್ಲಿ ಹೊಸ ಉತ್ಸಾಹ, ಲವಲವಿಕೆ ಮೂಡುತ್ತದೆ. ಹೀಗಾಗಿ ಇಂತಹ ವ್ಯಾಯಾಮ ನಿತ್ಯ ಮಾಡಬೇಕು. ನಿತ್ಯ 30 ನಿಮಿಷ ವ್ಯಾಯಾಮ ಮಾಡುವುದರಿಂದ ರಕ್ತದೊತ್ತಡ ಸಮಸ್ಯೆ ನಿವಾರಣೆ ಆಗುವ ಜತೆಗೆ ಹೃದಯ ಸ್ನಾಯುಗಳ ಆರೋಗ್ಯವಾಗಿ ಇರುತ್ತದೆ ಎನ್ನುತ್ತಾರೆ ತಜ್ಞರು.
ನಿದ್ರೆಗೂ ಪ್ರಾಮುಖ್ಯತೆ ನೀಡಿ
ರಾತ್ರಿ ಹೆಚ್ಚು ಮೊಬೈಲ್ ನೋಡುತ್ತಾ ನಿದ್ದೆ ಮಾಡುವ ಸಮಯವನ್ನು ಸ್ಕಿಪ್ ಮಾಡುವ ಬಹುತೇಕರಿದ್ದಾರೆ. ಇನ್ನು ಕೆಲವರು ತಡವಾಗಿ ಮಲಗಿ ಬೆಳಗ್ಗೆ ತುಂಬಾ ತಡವಾಗಿ ಏಳುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಈ ಹವ್ಯಾಸವು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿದ್ರೆ ಕೊರತೆಯಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಉಂಟಾಗುತ್ತದೆ. ಪ್ರತಿ ದಿನ ಕನಿಷ್ಠ 7 ಗಂಟೆಯಾದರೂ ನಿದ್ರೆ ಮಾಡಬೇಕು. ಉತ್ತಮ ನಿದ್ರೆಯ ಹವ್ಯಾಸ ರೂಢಿಸಿಕೊಳ್ಳುವುದರಿಂದ ಚಯಾಪಚಯ ಹಾಗೂ ಒತ್ತಡ ಸಂಬಂಧಿತ ಹಾಮೋರ್ನುಗಳನ್ನು ನಿಯಂತ್ರಣದಲ್ಲಿ ಇರುತ್ತದೆ. ಹೃದಯದ ಆರೋಗ್ಯಕ್ಕೂ ಉತ್ತಮ ನಿದ್ರಾ ಹವ್ಯಾಸ ಬಹಳ ಮುಖ್ಯ.
ಆಹಾರ ಕ್ರಮ ಅನುಸರಿಸಿ
ಬಾಯಿಗೆ ರುಚಿ ಎನಿಸುವ ಅದೆಷ್ಟೊ ಆಹಾರಗಳು ಆರೋಗ್ಯ ದೃಷ್ಟಿಯಿಂದ ಸೇವಿಸುವುದು ಅಪಾಯಕಾರಿ. ಹಾಗಾಗಿ ನೀವು ನಿತ್ಯ ಸೇವಿಸುವ ಆಹಾರಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಜಂಕ್ ಫುಡ್, ಫಾಸ್ಟ್ ಫುಡ್ ಸೇವನೆ ಆದಷ್ಟು ಕಡಿಮೆ ಮಾಡಿ ಹಣ್ಣು, ತರಕಾರಿ, ಪ್ರೋಟೀನ್ ಯುಕ್ತ ಆಹಾರಕ್ಕೆ ಆದ್ಯತೆ ನೀಡಬೇಕು. ಇದರಿಂದ ಹೃದಯದ ಆರೋಗ್ಯಕ್ಕೂ ಸಹ ಅನೇಕ ಪ್ರಯೋಜನ ಸಿಗಲಿದೆ.
ದುಶ್ಚಟದಿಂದ ದೂರವಿರಿ
ಧೂಮಪಾನ ಆರೋಗ್ಯಕ್ಕೆ ಹಾನಿಹಾರಕ ಎಂದು ತಿಳಿದಿದ್ದರೂ ದಿನಕ್ಕೆ 6-7 ಸಿಗರೇಟ್, ಬೀಡಿ ಸೇದುವವರಿದ್ದಾರೆ. ಧೂಮಪಾನದಿಂದ ಶ್ವಾಸಕೋಶದ ಸಮಸ್ಯೆ, ಉರಿಯೂತ ಸಮಸ್ಯೆ ಎದುರಾಗಿ ಹೃದಯಾಘಾತ, ಪಾರ್ಶ್ವ ವಾಯುವಾಗುವ ಸಾಧ್ಯತೆ ಇದೆ. ಮದ್ಯಪಾನದಿಂದ ಲಿವರ್ ಡ್ಯಾಮೇಜ್ ಆಗುವುದು ಮಾತ್ರವಲ್ಲದೆ ಅತೀಯಾಗಿ ಮದ್ಯಪಾನ ಮಾಡಿದರೆ ರಕ್ತದೊತ್ತಡ ಹೆಚ್ಚಾಗುವ ಜತೆಗೆ ಹೃದಯ ಸ್ನಾಯುಗಳು ದುರ್ಬಲವಾಗಿರುವಂತೆ ಮಾಡುತ್ತದೆ.
ನಿಯಮಿತ ನೀರು ಸೇವಿಸಿ
ನೀರು ಎಷ್ಟು ಕುಡಿದರೂ ಕಡಿಮೆಯೇ ಎಂದು ಹೇಳಬಹುದು. ಕೆಲವರು ಬಾಯಾರಿಕೆ ಆಗುತ್ತಿಲ್ಲವೆಂದು, ಹೆಚ್ಚು ನೀರು ಕುಡಿದರೆ ಪದೇ ಪದೆ ಶೌಚಾಲಯಕ್ಕೆ ಹೋಗಬೇಕಾಗುತ್ತದೆ ಎಂದು ನೀರು ಕುಡಿಯುವುದನ್ನೇ ಬಿಟ್ಟು ಬಿಡುತ್ತಾರೆ. ಪರಿಣಾಮ ತಲೆ ಸುತ್ತು, ಡಿ ಹೈಡ್ರೇಶನ್, ಲೋ ಬಿಪಿ, ಕಿಡ್ನಿಯಲ್ಲಿ ಸ್ಟೋನ್ ಇತ್ಯಾದಿ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಕಡಿಮೆ ನೀರಿನ ಸೇವನೆ ಆರೋಗ್ಯಯುಕ್ತ ಜೀವನ ಶೈಲಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ನೀರನ್ನು ನಿಯಮಿತವಾಗಿ ಸೇವಿಸುವುದನ್ನು ರೂಢಿ ಮಾಡಿಕೊಳ್ಳಿ. ಇದರಿಂದಾಗಿ ಅತಿಯಾದ ರಕ್ತದೊತ್ತಡ, ಹೃದಯದ ಒತ್ತಡ ಸಮಸ್ಯೆ ಕಾಡಲಾರದು.
ಇದನ್ನು ಓದಿ:Health Tips: ದೈನಂದಿನ ಆಹಾರದಲ್ಲಿ ಬೀಟ್ರೂಟ್ ಸೇರಿಸಲು ಇಲ್ಲಿವೆ ರುಚಿಕರ ವಿಧಾನ
ಆಗಾಗ ಆರೋಗ್ಯ ತಪಾಸಣೆ ಮಾಡಿ
ನಮ್ಮ ಆರೋಗ್ಯ ಮೇಲ್ನೋಟಕ್ಕೆ ಚೆನ್ನಾಗಿ ಇದೆ ಎಂದು ಅನಿಸಿದರೂ ಈ ಬಗ್ಗೆ ಆಗಾಗ ತಪಾಸಣೆ ಮಾಡುತ್ತಿದ್ದರೆ ಬಹಳ ಒಳ್ಳೆಯದು. ರಕ್ತದೊತ್ತಡ, ಕೊಲೆಸ್ಟ್ರಾಲ್ ಸಮಸ್ಯೆ, ಮಧುಮೇಹ, ಬಿಪಿ ಸಮಸ್ಯೆ ಇತ್ಯಾದಿ ರೆಗ್ಯೂಲರ್ ಚೆಕಪ್‌ನಿಂದ ಪ್ರಾಥಮಿಕ ಹಂತದಲ್ಲೇ ಗುತಿಸಿಕೊಳ್ಳಬಹುದು. ವೈದ್ಯಕೀಯ ತಪಾಸಣೆಯಿಂದ ಹೃದ್ರೋಗದ ಅಪಾಯ ಮೊದಲೇ ತಡೆಹಿಡಿಯಬಹುದು.