Fake Branded Clothes: ರೋಡ್ ಸೈಡ್ನಲ್ಲಿ ಕಡಿಮೆಗೆ ಸಿಗುತ್ತೆ ಅಂತಾ ಬ್ರ್ಯಾಂಡೆಡ್ ಬಟ್ಟೆ ತಗೋತಿರಾ? ರಾಜ್ಯದಲ್ಲಿದೆ ನಕಲಿ ಜಾಲ, ಖರೀದಿಗೂ ಮುನ್ನ ಹುಷಾರ್!
ಮೊದಲೆಲ್ಲ ದೊಡ್ಡ ಅಂಗಡಿಗಳು ಹಾಗೂ ಮಾಲ್ಗಳಿಗೆ ಮಾತ್ರ ಸೀಮಿತವಾಗಿದ್ದ ಬ್ರ್ಯಾಂಡೆಡ್ ಬಟ್ಟೆಗಳು ಇದೀಗ ಬೀದಿ ಬೀದಿಯಲ್ಲಿ ಮಾರಾಟವಾಗುತ್ತಿರುತ್ತದೆ. ಅದೆಷ್ಟೋ ನಕಲಿ ಉತ್ಪನ್ನಗಳು ಗ್ರಾಹಕರ ಕೈ ಸೇರುತ್ತವೆ. ಇದೀಗ ಅಂತಹ ವಸ್ತುಗಳ ಉತ್ಪಾದನೆ ಮಾಡುವವರ ಮೇಲೆ ದಾಳಿ ನಡೆಸಲಾಗಿದೆ.


ಬೆಂಗಳೂರು: ಮೊದಲೆಲ್ಲ ದೊಡ್ಡ ಅಂಗಡಿಗಳು ಹಾಗೂ ಮಾಲ್ಗಳಿಗೆ ಮಾತ್ರ ಸೀಮಿತವಾಗಿದ್ದ ಬ್ರ್ಯಾಂಡೆಡ್ (Fake Branded Clothes) ಬಟ್ಟೆಗಳು ಇದೀಗ ಬೀದಿ ಬೀದಿಯಲ್ಲಿ ಮಾರಾಟವಾಗುತ್ತಿರುತ್ತದೆ. ಅದೆಷ್ಟೋ ನಕಲಿ ಉತ್ಪನ್ನಗಳು ಗ್ರಾಹಕರ ಕೈ ಸೇರುತ್ತವೆ. ಇದೀಗ ಅಂತಹ ವಸ್ತುಗಳ ಉತ್ಪಾದನೆ ಮಡುವವರ ಮೇಲೆ ದಾಳಿ ನಡೆಸಲಾಗಿದೆ. ನಕಲಿ ಬ್ರಾಂಡೆಡ್ ಬಟ್ಟೆ ತಯಾರಿಕಾ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಲಕ್ಷಾಂತರ ಮೌಲ್ಯದ ನಕಲಿ ಬ್ರ್ಯಾಂಡೆಡ್ ಬಟ್ಟೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೂಮಾ, ನೈಕಿ ಸೇರಿದಂತೆ ಅನೇಕ ನಕಲಿ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬೈಲಕೊನೇನಹಳ್ಳಿಯಲ್ಲಿ ಇರುವ ನಕಲಿ ಕಂಪನಿಗಳ ಮೇಲೆ ದಾಳಿ ನಡೆಸಲಾಗಿದೆ. ಈ ಅಡ್ಡೆಗಳಲ್ಲಿ ನಕಲಿ ಬ್ರಾಂಡೆಡ್ ಜೀನ್ಸ್ ತಯಾರಿಸುತ್ತಿದ್ದರು. ದಾಳಿಯ ಸಮಯದಲ್ಲಿ 30 ಲಕ್ಷಕ್ಕೂ ಅಧಿಕ ಮೌಲ್ಯದ ನಕಲಿ ಬ್ರಾಂಡೆಡ್ ಜೀನ್ಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಟ್ಟೆ ತಯಾರಿಕಾ ಕಾರ್ಖಾನೆಯಲ್ಲಿ ಹೆಸರಾಂತ ಬ್ರಾಂಡ್ಗಳ ನಕಲಿ ಜೀನ್ಸ್ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ಇದೀಗ ಅದನ್ನು ವಶಪಡಿಸಿಕೊಳ್ಳಲಾಗಿದೆ. ಲೆವಿಸ್, ಪೋಲೋ, ರಾಲ್ಫ್ ಲಾರೆನ್ ಬ್ರಾಂಡ್ ಜೀನ್ಸ್ ನಕಲು ತಯಾರಿಸಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಎ.ಎ.ಫ್ಯಾಷನ್ಸ್ ಹೆಸರಿನಲ್ಲಿ ಬ್ರಾಂಡೆಡ್ ಜೀನ್ಸ್ ನಕಲಿ ತಯಾರಿಕೆ ಮಾಡಲಾಗುತ್ತಿತ್ತು.
ಮಾದನಾಯಕನಹಳ್ಳಿ ಠಾಣೆಯಲ್ಲಿ ಕಾಫಿರೈಟ್ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕಳೆದ ಒಂದು ವಾರದಲ್ಲಿ ಬೆಂಗಳೂರಿನ ಎರಡು ಕಡೆಗಳಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಮೂರು ದಿನಗಳ ಹಿಂದೆ ಸಿದ್ದಾಪುರದಲ್ಲಿಯೂ ದಾಳಿ ನಡೆದಿದ್ದು, ಅಲ್ಲಿಯೂ ನಕಲಿ ಬ್ರಾಂಡೆಡ್ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದರು. ಲೈಸೆನ್ಸ್ ಇಲ್ಲದೇ ಅಕ್ರಮವಾಗಿ ಈ ಬ್ರಾಂಡೆಡ್ ಬಟ್ಟೆಗಳ ನಕಲಿ ಪೀಸ್ ತಯಾರಿಸುತ್ತಿದ್ದ ಅಡ್ಡೆಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಈ ಸುದ್ದಿಯನ್ನೂ ಓದಿ: Fake Doctor: ರಾಮನಗರದಲ್ಲಿ ನಕಲಿ ವೈದ್ಯನ ಚಿಕಿತ್ಸೆಯಿಂದ ಮಗು ಬಲಿ
ಇತ್ತೀಚೆಗೆ ಪ್ರಸಿದ್ಧ ಬ್ರ್ಯಾಂಡ್ಗಳ ನಕಲಿ ಸಿಗರೇಟ್ಗಳನ್ನು ಉತ್ಪಾದಿಸುತ್ತಿದ್ದ ಕಾರ್ಖಾನೆಯನ್ನು ಬಿಹಾರದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದರು. ಕೋಟಿ ಮೌಲ್ಯದ ಉತ್ಪನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಪಾಟ್ನಾದಿಂದ ನೈಋತ್ಯಕ್ಕೆ ಸುಮಾರು 180 ಕಿ.ಮೀ ದೂರದಲ್ಲಿರುವ ರೋಹ್ತಾಸ್ ಜಿಲ್ಲೆಯ ಬಾಲತುವಾನ್ನಲ್ಲಿ ಈ ನಕಲಿ ಸಿಗರೇಟ್ಗಳನ್ನು ತಯಾರಿಸಲಾಗುತ್ತಿತ್ತು. ಕಾರ್ಖಾನೆಯ ಮಾಲೀಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಅಲ್ಲದೇ ಬಿಹಾರ, ಉತ್ತರ ಪ್ರದೇಶ ಮತ್ತು ಜಾರ್ಖಂಡ್ ಮಾರುಕಟ್ಟೆಗೆ ಸಾಗಿಸಲು ಸಿದ್ಧವಾಗಿದ್ದ ಹಲವು ಯಂತ್ರ ಮತ್ತು ಪ್ರಸಿದ್ಧ ಬ್ರ್ಯಾಂಡ್ಗಳ ನಕಲಿ ಸಿಗರೇಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.