ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಡೇಟಿಂಗ್‌ ಆಪ್‌ "ಟಿಂಡರ್‌" ಬಳಕೆದಾರರ ಸುರಕ್ಷತೆ ದೃಷ್ಟಿಯಿಂದ "ಟಿಂಡರ್‌ ಡೇಟಿಂಗ್‌ ಸುರಕ್ಷತಾ ಮಾರ್ಗಸೂಚಿ" ಕನ್ನಡದಲ್ಲೂ ಬಿಡುಗಡೆ

ಇಂದಿನ ಇಂಟರ್ನೆಂಟ್‌ ಯುಗದಲ್ಲಿ ಪ್ರತಿಯೊಂದು ಆಪ್‌ ದುರು ಪಯೋಗ ಆಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಸಿಎಸ್‌ಆರ್ ಇಂಡಿಯಾ ಸಹಯೋಗದೊಂದಿಗೆ ಮಹಿಳೆಯರ ಮೇಲಿನ ಹಿಂಸೆ ತಡೆ ಯುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸಲಾಯಿತು. ಈ ಮಾರ್ಗ ಸೂಚಿಗೆ ಸುರಕ್ಷತೆ ಪ್ರಯತ್ನಗಳನ್ನು ರೂಪಿ ಸುವಲ್ಲಿ ಈ ಸಹಭಾಗಿತ್ವವು ಪ್ರಮುಖ ಪಾತ್ರವನ್ನು ವಹಿಸಿದೆ

ಪ್ರಾದೇಶಿಕ ಭಾಷೆಯಲ್ಲೇ ಸುರಕ್ಷತೆಯ ಮಾರ್ಗಸೂಚಿ

Profile Ashok Nayak Feb 14, 2025 11:23 AM

ಬೆಂಗಳೂರು: ಅವಿವಾಹಿತರಿಗಾಗಿ ಇರುವ "ಟಿಂಡರ್‌" ಡೇಟಿಂಗ್‌ ಆಪ್‌, ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಟಿಂಡರ್‌ ಡೇಟಿಂಗ್‌ ಸುರಕ್ಷತಾ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಕನ್ನಡ ಭಾಷೆಯಲ್ಲೂ ಲಭ್ಯವಿದೆ. ಟಿಂಡರ್‌ ತನ್ನ ಸಿಎಸ್‌ಆರ್‌ ಅಡಿಯಲ್ಲಿ ಡೇಟಿಂಗ್‌ ಸುರಕ್ಷತಾ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಯು, ಕನ್ನಡ, ಹಿಂದಿ, ಮರಾಠಿ, ಬೆಂಗಾಲಿ ಭಾಷೆಯಲ್ಲೂ ಲಭ್ಯವಿದ್ದು, ನಿಮ್ಮ ಪ್ರಾದೇಶಿಕ ಭಾಷೆಯಲ್ಲೇ ಸುರಕ್ಷತೆಯ ಮಾರ್ಗಸೂಚಿಯನ್ನು ತಿಳಿದುಕೊಳ್ಳಬಹುದು. ಈ ಕುರಿತು ಮಾತನಾಡಿದ ಟಿಂಡರ್‌ನ ಮಾತೃ ಸಂಸ್ಥೆಯಾದ ಮ್ಯಾಚ್ ಗ್ರೂಪ್‌ನ ಸುರಕ್ಷತೆ ವಿಭಾಗದ ಉಪಾಧ್ಯಕ್ಷ ಯೋವೆಲ್ ರಾತ್, ಇಂದಿನ ಇಂಟರ್ನೆಂಟ್‌ ಯುಗದಲ್ಲಿ ಪ್ರತಿಯೊಂದು ಆಪ್‌ ದುರು ಪಯೋಗ ಆಗುವ ಸಾಧ್ಯತೆಯೇ ಹೆಚ್ಚು.

ಹೀಗಾಗಿ ಸಿಎಸ್‌ಆರ್ ಇಂಡಿಯಾ ಸಹಯೋಗದೊಂದಿಗೆ ಮಹಿಳೆಯರ ಮೇಲಿನ ಹಿಂಸೆ ತಡೆಯುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸಲಾಯಿತು. ಈ ಮಾರ್ಗ ಸೂಚಿಗೆ ಸುರಕ್ಷತೆ ಪ್ರಯತ್ನಗಳನ್ನು ರೂಪಿಸು ವಲ್ಲಿ ಈ ಸಹಭಾಗಿತ್ವವು ಪ್ರಮುಖ ಪಾತ್ರವನ್ನು ವಹಿಸಿದೆ. ಅಲ್ಲದೆ, ಭಾರತದಲ್ಲಿ ಆನ್‌ಲೈನ್ ಡೇಟಿಂಗ್ ಸುರಕ್ಷತೆಯ ಬಗ್ಗೆ ಶಿಕ್ಷಣ ಮತ್ತು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿಯೂ ಹೆಜ್ಜೆ ಇಡಲಾಗಿದೆ.

ಇದನ್ನೂ ಓದಿ: Raju Adakalli Column: ಥ್ಯಾಂಕೋಸ್ ಐಸ್‌ಕ್ರೀಮ್ ಯಶಸ್ಸಿನ ರೂವಾರಿ ಠಾಣೆ

ಇತ್ತೀಚಿನ ಟಿಂಡರ್ ಸಮೀಕ್ಷೆಯಲ್ಲಿ, ಡೇಟಿಂಗ್ ಆಪ್‌ನಲ್ಲಿ ಮೊದಲ ಬಾರಿ ಡೇಟ್‌ಗೆ ಹೋಗುವು ದಕ್ಕೂ ಮುನ್ನ "ಸುರಕ್ಷತೆ ಮತ್ತು ಭದ್ರತೆ"ಗೆ ಮೊದಲ ಆದ್ಯತೆ ಎಂದು ಸಾಕಷ್ಟು ಜನರು ಹೇಳಿದ್ದಾರೆ. ಶೇ.37ರಷ್ಟು ಜನರು ಡೇಟ್‌ಗೆ ಹೋಗುವುದಕ್ಕೂ ಮೊದಲು ಆ ವ್ಯಕ್ತಿಯ ಜೊತೆಗೆ ವೀಡಿಯೋ ಕಾಲ್ ಮಾಡುತ್ತೇವೆ ಎಂದಿದ್ದಾರೆ. ಈ ಎಲ್ಲರ ಆಶಯ ಸುರಕ್ಷತೆ. ಹೀಗಾಗಿ ಸುರಕ್ಷತಾ ಮಾರ್ಗಸೂಚಿಯನ್ನು ಜಾರಿಗೆ ತರಲಾಗಿದೆ. ಈ ಹಿಂದೆ ಇಂಗ್ಲಿಷ್‌ ಭಾಷೆಯಲ್ಲಿ ಮಾತ್ರ ಮಾರ್ಗಸೂಚಿ ಇತ್ತು, ಆಯಾ ಪ್ರಾದೇ ಶಿಕ ಭಾಷೆಯಲ್ಲಿಯೇ ಸುರಕ್ಷತಾ ಮಾರ್ಗಸೂಚಿ ಇದ್ದರೆ, ಅದನ್ನು ಅಥೈಸಿಕೊಳ್ಳುವುದು ಸುಲಭ ಎಂಬ ಕಾರಣಕ್ಕೆ ಅನುವಾದ ಮಾಡಲಾಗಿದ್ದು, ನಮ್ಮ ಗ್ರಾಹಕರ ಸುರಕ್ಷತೆಯೇ ಮೊದಲ ಆದ್ಯತೆ ಎಂದು ಹೇಳಿದರು.

ಇದುವರೆಗೂ 1 ಮಿಲಿಯನ್‌ಗೂ ಹೆಚ್ಚು ಜನರು ಮಾರ್ಗಸೂಚಿ ವೀಕ್ಷಣೆ ಮಾಡಿದ್ದು, 50 ಸಾವಿರ ಡೌನ್‌ಲೋಡ್‌ ಮಾಡಲಾಗಿದೆ. 2025 ಫೆಬ್ರವರಿಯ ವೇಳೆಗೆ ಭಾರತದಲ್ಲಿ ಟಿಂಡರ್ ಅನ್ನು ಬಳಸುವ ಜನರಿಗೆ ಆಪ್ ಕಾರ್ಡ್‌ಗಳು ಕಾಣಿಸುತ್ತವೆ. ಅದರಲ್ಲಿ, ಭಾರತೀಯ ಭಾಷೆಗಳಲ್ಲಿ ಟಿಂಡರ್ ಡೇಟಿಂಗ್ ಸುರಕ್ಷತೆ ಮಾರ್ಗಸೂಚಿಯು ಡೌನ್‌ಲೋಡ್ ಮಾಡಲು ಲಭ್ಯವಿದೆ ಎಂಬುದು ಕಾಣಿಸುತ್ತದೆ ಎಂದರು.