ರಿಕ್ಕಿ ಕೊಲೆ ಯತ್ನದ ಸುತ್ತ ಹಲವು ಅನುಮಾನ
ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ರಿಕ್ಕಿ ರೈ ಪ್ರಮುಖ ವಿಚಾರಗಳನ್ನು ತಿಳಿಸಿದ್ದಾರೆ. ಬಿಡದಿ ಫಾರ್ಮ್ ಹೌಸ್ ಬಳಿ ಮೂವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಎಫ್ ಐಆರ್‌ನಲ್ಲಿ ಉಖಿಸಿರುವ ಆರೋಪಿಗಳಾದ ರಾಕೇಶ್ ಮಲ್ಲಿ, ಅನುರಾಧ, ನಿತೇಶ್ ಶೆಟ್ಟಿ, ವೈದ್ಯ ನಾಥನ್ ಇವರೇ ನನ್ನ ಮೇಲೆ ದಾಳಿ ಮಾಡಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ


ಅಂಗರಕ್ಷಕನಿದ್ದರೂ ಪ್ರತಿದಾಳಿ ಏಕಿಲ್ಲ?
ಮುತ್ತಪ್ಪರೈಗೆ ಗನ್‌ಮ್ಯಾನ್ ಆಗಿದ್ದವರ ಮೇಲೆಯೂ ಅನುಮಾನ
ಬೆಂಗಳೂರು: ಮುತ್ತಪ್ಪ ರೈ ಪುತ್ರ ಮೇಲಿನ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆರಂಭದಲ್ಲಿ ಶಾರ್ಪ್‌ಶೂಟರ್‌ಗಳಿಂದ ದಾಳಿ ನಡೆದಿದೆ ಎಂದುಕೊಂಡಿದ್ದ ಪೊಲೀಸರಿಗೆ ತನಿಖೆಯ ಆಳಕ್ಕೆ ಇಳಿದಾಗ ಹಲವು ಟ್ವಿಸ್ಟ್‌ಗಳು ಸಿಕ್ಕಿವೆ ಎನ್ನಲಾಗುತ್ತಿದೆ. ಮೇಲ್ನೋಟಕ್ಕೆ ಬಿಡದಿಯ ಫಾರ್ಮ್ ಹೌಸ್‌ನಿಂದ ಹೊರಾಟಗ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ರಿಕ್ಕಿ ವಿದೇಶದಿಂದ ವಾಪಸಾಗಿದ್ದು, ಬಿಡದಿ ಮನೆಯಿಂದ ಹೊರಟು ಪುನಃ ವಾಪಸಾಗಿದ್ದು ಶಾರ್ಪ್ ಶೂಟರ್‌ಗಳಿಗೆ ಮಾಹಿತಿ ನೀಡಿದ್ದು ಯಾರು ಎನ್ನುವ ಅನುಮಾನ ಇದೀಗ ಪೊಲೀಸರಲ್ಲಿ ಶುರು ವಾಗಿದೆ. ಇದಿಷ್ಟೇ ಅಲ್ಲದೇ, ರಿಕ್ಕಿ ಮೇಲೆ ಆಗಿರುವ ದಾಳಿಗೆ ಬಳಸಿರುವ ಬಂದೂಕನ್ನು ಸಾಮಾನ್ಯ ವಾಗಿ ಶಾರ್ಪ್ ಶೂಟರ್ ಗಳು ಬಳಸುವುದಿಲ್ಲ.
ಹೀಗಿರುವಾಗ ಗನ್‌ಗಳನ್ನು ಬಳಸಿದ್ದು ಏಕೆ? ಅಥವಾ ಶಾರ್ಪ್‌ಶೂಟರ್‌ಗಳ ಹೆಸರಲ್ಲಿ ಬೇರೆಯವರು ದಾಳಿ ನಡೆಸಿದ್ದಾರೆಯೇ ಎನ್ನುವ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಮೂಲ ಗಳು ತಿಳಿಸಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಕ್ಕಿ ರೈ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು ಆತನೊಂದಿಗೆ ಇದ್ದ ಚಾಲಕ ಹಾಗೂ ಗನ್‌ಮ್ಯಾನ್ ಗಳಿಂದಲೂ ಹೇಳಿಕೆ ದಾಖಲಿಸಿ ಕೊಂಡಿದ್ದಾರೆ.
ವಿಚಾರಣೆಯ ವೇಳೆ, ಬಿಡದಿಯ ಮನೆಯ ಬಳಿಕ ರಿಕ್ಕಿ ಇದ್ದಾಗಲೇ ಕೆಲವರು ಓಡಾಡಿದ್ದಾರೆ. ಇದಕ್ಕೆನಾಯಿಗಳು ಬೊಗಳಿವೆ. ಕೂಡಲೇ ಗನ್‌ಮ್ಯಾನ್ ಗಳು ಸುತ್ತಪರಿಶೀಲಿಸಿ, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದಾದ ಬಳಿಕ ಮೊದಲ ಬಾರಿಗೆ ಹೊರಟು, ಮತ್ತೆ ವಾಸಾಗಿದ್ದು ಬಳಿಕ ದಾಳಿ ಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: Rickey Rai Case: ನನ್ನ ಮೇಲೆ ದಾಳಿ ಮಾಡಿದ್ದು ಇವರೇ ; ಪೊಲೀಸರಿಗೆ ಮಹತ್ವದ ಮಾಹಿತಿ ನೀಡಿ ರಿಕ್ಕಿ ರೈ
ಹೇಳಿಕೆಯಲ್ಲಿ ಭಿನ್ನ; ಅನುಮಾನ ರಿಕ್ಕಿ ಜತೆಯಲ್ಲಿದ್ದ ಸಿಬ್ಬಂದಿ ಹಾಗೂ ಮನೆಯಲ್ಲಿದ್ದ ಸಿಬ್ಬಂದಿ ಗಳ ವಿಚಾರಣೆಯ ವೇಳೆ ಭಿನ್ನ ಹೇಳಿಕೆ ನೀಡಿರುವುದು ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ. ರಿಕ್ಕ ಚಾಲಕ ಹಾಗೂ ಅಂಗರಕ್ಷಕ ನೀಡುತ್ತಿರುವ ಹೇಳಿಕೆಯೂ, ಘಟನಾ ಸ್ಥಳದ ಸ್ಥಿತಿಗೂ ಭಾರಿ ವ್ಯತ್ಯಾಸವಿದೆ. ಆದ್ದರಿಂದ ಈ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ.
ಸಾಮಾನ್ಯವಾಗಿ ರಿಕ್ಕಿ ಸುತ್ತಮುತ್ತ ಸದಾ ಇಬ್ಬರು ಅಂಗರಕ್ಷಕರಿರುತ್ತಾರೆ. ಆದರೆ ಬೆಂಗಳೂರಿಗೆ ತೆರಳುವಾಗ ಒಬ್ಬ ಗನ್‌ಮ್ಯಾನ್ ಏಕಿದ್ದರು? ಮತ್ತೊಬ್ಬ ಅಂಗರಕ್ಷಕ ಎಲ್ಲಿದ್ದ? ಇನ್ನು ಅಂಗರಕ್ಷಕ ಮುಂದೆ ಕೂರುವ ಬದಲು ರಿಕ್ಕಿ ಜತೆ ಏಕೆ ಕುಳಿತಿದ್ದ? ಕಾರಿನ ಮೇಲೆ ಗುಂಡಿನ ದಾಳಿ ನಡೆದಾಗ ಅಂಗರಕ್ಷಕ ಪ್ರತಿದಾಳಿ ನಡೆಸಿಲ್ಲ ಏಕೆ? ಘಟನಾ ಸ್ಥಳದ ರಸ್ತೆ ಮತ್ತು ಮನೆ ಪ್ರವೇಶ ದ್ವಾರದ ಬಳಿ ಯಾವುದೇ ಬೀದಿದೀಪದ ವ್ಯವಸ್ಥೆ ಇಲ್ಲ. ಆದರೂ ಕಾರಿನ ಮೇಲೆ ಗುಂಡಿನ ದಾಳಿ ನಡೆದಿದೆ.
ಹಾಗಿದ್ದರೆ ದಾಳಿ ಮಾಡಿದವರು ಒಬ್ಬರೇ ಅಥವಾ ಅದಕ್ಕೂ ಹೆಚ್ಚು ಮಂದಿ ಇದ್ದರೆ? ಕಣ್ಣಳತೆಯ ದೂರದಲ್ಲಿ ಗುಂಡಿನ ದಾಳಿ ನಡೆದರೂ ಆಗಷ್ಟೇ ಕಾರು ಬಿಡಲು ಪ್ರವೇಶದ್ವಾರ ತೆರೆದ ಭದ್ರತಾ ಸಿಬ್ಬಂದಿಗೆ ದಾಳಿ ವಿಷಯ ಗೊತ್ತಾಗಲಿಲ್ಲವೇ? ಎನ್ನುವ ಪ್ರಶ್ನೆಗಳಿಗೆ ತನಿಖೆಯಿಂದಲೇ ಉತ್ತರ ಸಿಗಬೇಕಿದೆ.
ಮುತ್ತಪ್ಪ ರೈ ಮನೆಯ ಗನ್‌ಗಳ ಪರಿಶೀಲನೆ ಈ ನಡುವೆ ಪೊಲೀಸರು ಮುತ್ತಪ್ಪ ರೈ ಅವರ ಬಿಡದಿ ಮನೆಯಲ್ಲಿರುವ ಗನ್, ಬುಲೆಟ್ ಹಾಗೂ ಗನ್‌ಮ್ಯಾನ್‌ಗಳ ವಿಚಾರಣೆ ನಡೆಸುತ್ತಿದ್ದಾರೆ. ಮುತ್ತಪ್ಪ ರೈ ಆಪ್ತ ಹಾಗೂ ಎರಡನೇ ಪತ್ನಿ ವಿರುದ್ಧವೇ ದೂರು ದಾಖಲಿಸಿರುವುದರಿಂದ, ಮುತ್ತಪ್ಪ ರೈ ಆಪ್ತರು ಈ ಕೃತ್ಯದಲ್ಲಿ ಭಾಗವಹಿಸಿದ್ದಾರೆಯೇ ಎನ್ನುವ ಅನುಮಾನಗಳು ಶುರುವಾಗಿದೆ. ಅದರಲ್ಲಿಯೂ ಈ ಹಿಂದೆ ಅವರೊಂದಿಗೆ ಇದ್ದ ಗನ್‌ಮ್ಯಾನ್‌ಗಳು ಏನಾದರೂ ಈ ಕೃತ್ಯದಲ್ಲಿದ್ದಾರೆಯೇ ಎನ್ನುವ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ರಿಕ್ಕಿ ಹೇಳಿಕೆಯಲ್ಲಿ ಏನಿದೆ?
ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ರಿಕ್ಕಿ ರೈ ಪ್ರಮುಖ ವಿಚಾರಗಳನ್ನು ತಿಳಿಸಿದ್ದಾರೆ. ಬಿಡದಿ ಫಾರ್ಮ್ ಹೌಸ್ ಬಳಿ ಮೂವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಎಫ್ ಐಆರ್‌ನಲ್ಲಿ ಉಖಿಸಿರುವ ಆರೋಪಿಗಳಾದ ರಾಕೇಶ್ ಮಲ್ಲಿ, ಅನುರಾಧ, ನಿತೇಶ್ ಶೆಟ್ಟಿ, ವೈದ್ಯ ನಾಥನ್ ಇವರೇ ನನ್ನ ಮೇಲೆ ದಾಳಿ ಮಾಡಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆಸ್ತಿ ವಿಚಾರವೇ ಗುಂಡಿನ ದಾಳಿಗೆ ಕಾರಣ ಎಂದು ಹೇಳಿದ್ದಾರೆ. ನಾನು ರಷ್ಯಾದಲ್ಲಿದ್ದೆ, ಜಾಮೀನು ವಿವಾದ ಸಂಬಂಧ ಕೋರ್ಟ್‌ನಲ್ಲಿ ಕೇಸ್ ಇತ್ತು. ಹೀಗಾಗಿ, ಬೆಂಗಳೂರಿಗೆ ಬಂದಿದ್ದೆ. ನಾನು ಬೆಂಗಳೂರಿನ ಸದಾಶಿವನಗರ ಹಾಗೂ ಬಿಡದಿ ವಾಸವಿರುತ್ತಿದ್ದೆ. 12 ಗಂಟೆಗೆ ಎರಡು ಕಾಲ್ ಬಂದಿತ್ತು. ಹಾಗಾಗಿ ಹೊರಟಿz. ಸದಾಶಿವನಗರ ಮನೆಗೆ ಹೋಗುವಾಗ ಮನೆಯಿಂದ ಹೊರಗಿನ ರಸ್ತೆಗೆ ಬಂದಾಗ ದಾಳಿ ನಡೆಸಲಾಯಿತು. ನನ್ನ ಕೈ ಹಾಗೂ ಮುಗಿಗೆ ಗುಂಡು ತಗಲಿದೆ. ನನ್ನ ಸ್ನೇಹಿತರು ಹಾಗೂ ಡ್ರೈವರ್ ಆಸ್ಪತ್ರೆಗೆ ಸೇರಿಸಿದರು. ರಾಕೇಶ್ ಮಲ್ಲಿ ಹಾಗೂ ಅನುರಾಧರೇ ಅಟ್ಯಾಕ್ ಮಾಡಿಸಿದ್ದಾರೆ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ.
ವಿದೇಶದಿಂದಲೇ ಜಾಮೀನು ಅರ್ಜಿ
ಪ್ರಕರಣದ ಎ2 ಆರೋಪಿಯಾಗಿರುವ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ ಏಪ್ರಿಲ್ 14 ರಂದೇ ವಿದೇಶಕ್ಕೆ ತೆರಳಿದ್ದಾರೆಂದುತಿಳಿದುಬಂದಿದೆ. ಅನುರಾಧ ಬಳಸುತ್ತಿದ್ದ ಸಿಮ್ ಅಡ್ರೆಸ್ ಹುಡುಕಿ ನೋಟಿಸ್ ನೀಡಲು ಪೊಲೀಸರು ತೆರಳಿದ್ದರು. ಆದರೆ ಸಿಮ್ ವಿಳಾಸದ ಮನೆಯನ್ನು ಅನುರಾಧ ಮಾರಾಟ ಮಾಡಿದ್ದಾರೆ. ಅಮೆರಿಕ ಮೂಲದ ವ್ಯಕ್ತಿಗೆ ಮನೆ ಮಾರಾಟ ಮಾಡಿದ್ದು, ಯಾವ ಕಾರಣಕ್ಕೆ ಮನೆ ಮಾರಾಟ ಮಾಡಲಾಗಿದೆ ಎನ್ನುವ ಅನುಮಾನಗಳಿವೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜರ್ಮನಿಯಲ್ಲಿರುವ ಅನುರಾಧ ತಮ್ಮ ವಕೀಲರ ಮೂಲಕ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ವಕೀಲರ ಮೂಲಕ ಹೈಕೋರ್ಟ್‌ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಪ್ರಕರಣದ ಎ1 ಆರೋಪಿ ರಾಕೇಶ್ ಮಲ್ಲಿ ಮುಂಬೈನಲ್ಲಿರುವ ಶಂಕೆ ವ್ಯಕ್ತವಾಗಿದೆ. ಎ೩ ಆರೋಪಿ ನಿತೀಶ್ ಶೆಟ್ಟಿ, ಎ4 ಆರೋಪಿ ವೈದ್ಯನಾಥನ್ ಮಂಗಳವಾರ ವಕೀಲರ ಮೂಲಕ ವಿಚಾರಣೆಗೆ ಹಾಜರಾಗೋ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.