RCB vs KKR: ಸ್ಟೇಡಿಯಂಗೆ ನುಗ್ಗಿ ಕೊಹ್ಲಿಯನ್ನು ಹಗ್ ಮಾಡುವೆ ಎಂದಿದ್ದ ಕಬ್ಜ ಶರಣ್ ಪೊಲೀಸರ ವಶಕ್ಕೆ
RCB vs KKR: ಇನ್‌ಸ್ಟಾಗ್ರಾಂ ಲೈಕ್ಸ್ ಹಾಗೂ ವೀವ್ಸ್‌ಗಾಗಿ ಹುಚ್ಚಾಟ ಮಾಡಿದ್ದ ಯುವಕನಿಗೆ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ. ಇದರಿಂದ ಸ್ಟೇಡಿಯಂಗೆ ಹೋಗಿ ಮ್ಯಾಚ್ ನೋಡುವ ಭಾಗ್ಯವೂ ಇಲ್ಲವಾಗಿದೆ. ಇದೀಗ ತಪ್ಪಾಯ್ತು ಎಂದು ವಿಡಿಯೋ ಮಾಡಿರುವ ಯುವಕ, ಯಾರೂ ಈ ರೀತಿ ಸವಾಲು ಹಾಕಬಾರದು, ಇದು ಕಾನೂನು ಬಾಹಿರ ಎಂದು ಹೇಳಿದ್ದಾನೆ.


ಬೆಂಗಳೂರು: ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ನಡೆಯುವ ಆರ್‌ಸಿಬಿ-ಕೆಕೆಆರ್ (RCB vs KKR) ಪಂದ್ಯದ ವೇಳೆ ಸ್ಟೇಡಿಯಂ ನುಗ್ಗಿ, ವಿರಾಟ್ ಕೊಹ್ಲಿಯನ್ನು ಹಗ್ ಮಾಡುತ್ತೇನೆ ಎಂದು ಪೋಸ್ಟ್ ಹಾಕಿದ್ದ ಅಭಿಮಾನಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಆರ್‌ಸಿಬಿ-ಕೆಕೆಆರ್ ಪಂದ್ಯದಲ್ಲಿ ಗ್ರೌಂಡ್‌ಗೆ ನುಗ್ತೀನಿ ಎಂದು ಕಬ್ಜ ಶರಣ್ ಎಂಬ ಯುವಕ ವಿಡಿಯೋ ಪೋಸ್ಟ್ ಹಾಕಿದ್ದ. ಅಲ್ಲದೇ ಗ್ರೌಂಡ್ ಒಳಗೆ ಹೋಗಿ ವಿರಾಟ್ ಕೊಹ್ಲಿನ ಹಗ್ ಮಾಡ್ತೀನಿ ಎಂದು ಸವಾಲು ಹಾಕಿದ್ದ. ಈತನ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಬ್ಬನ್ ಪಾರ್ಕ್ ಪೊಲೀಸರು ಠಾಣೆಗೆ ಕರೆಸಿ ವಿಡಿಯೋ ಡಿಲೀಟ್ ಮಾಡಿಸಿದ್ದರು. ಇಂದು ಮ್ಯಾಚ್ (IPL 2025) ಇರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಶರಣ್‌ನನ್ನು ವಶಕ್ಕೆ ಪಡೆದಿದ್ದಾರೆ.
ಇನ್‌ಸ್ಟಾಗ್ರಾಂ ಲೈಕ್ಸ್ ಹಾಗೂ ವೀವ್ಸ್‌ಗಾಗಿ ಹುಚ್ಚಾಟ ಮಾಡಿದ್ದ ಯುವಕನಿಗೆ ಪೊಲೀಸರು ತಕ್ಕ ಪಾಠ ಕಲಿಸಿದ್ದು, ಸ್ಟೇಡಿಯಂಗೆ ನುಗ್ತೀನಿ ಅಂದವನಿಗೆ ಮ್ಯಾಚ್ ನೋಡೋ ಭಾಗ್ಯವೂ ಇಲ್ಲವಾಗಿದೆ. ಇದೀಗ ತಪ್ಪಾಯ್ತು ಎಂದು ವಿಡಿಯೋ ಮಾಡಿರುವ ಶರಣ್, ಮೊನ್ನೆ ನಾನೊಂದು ವಿಡಿಯೋ ಮಾಡಿದ್ದೆ. ಇವತ್ತಿನ ಮ್ಯಾಚ್‌ನಲ್ಲಿ ಗ್ರೌಂಡ್‌ಗೆ ನುಗ್ಗಿ ಕೊಹ್ಲಿ ಅವರನ್ನು ಹಗ್ ಮಾಡುವೆ ಎಂದು ಹೇಳಿದ್ದೆ. ಆದರೆ, ಆ ರೀತಿ ಮಾಡಕ್ಕೆ ಆಗಲ್ಲ. ಯಾಕೆಂದರೆ ಇದು ಕಾನೂನು ಬಾಹಿರ. ಈ ರೀತಿ ಸವಾಲು ಹಾಕಿದ್ದಕ್ಕೆ ದಯವಿಟ್ಟು ಕ್ಷಮೆ ಇರಲಿ, ಯಾರೂ ಹೀಗೆ ಮಾಡಬೇಡಿ ಎಂದು ಹೇಳಿದ್ದಾನೆ.
ಟೆಸ್ಟ್‌ಗೆ ವಿದಾಯಕ್ಕೂ ವಿರಾಟ್ ಕೊಹ್ಲಿ ಹೇಳಿದ್ದ ಮಾತನ್ನು ರಿವೀಲ್ ಮಾಡಿದ ರವಿ ಶಾಸ್ತ್ರಿ!

ನವದೆಹಲಿ: ವಿರಾಟ್ ಕೊಹ್ಲಿ (Virat Kohli) ಟೆಸ್ಟ್ ಕ್ರಿಕೆಟ್ ನಿವೃತ್ತಿ ಹೊಂದಿರುವುದರಿಂದ ಭಾರತ ತಂಡದಲ್ಲಿ (Indian Cricket Team) ಒಂದು ಶೂನ್ಯ ಭಾವನೆ ಉಂಟಾಗಿದೆ. ಕೊಹ್ಲಿ ತಮ್ಮ 14 ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ ಸಾಕಷ್ಟು ಶ್ರೇಷ್ಠ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಆದರೆ ಅವರ ಹಠಾತ್ ನಿವೃತ್ತಿ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ವಿರಾಟ್ ಕೊಹ್ಲಿ ಇನ್ನು ಮುಂದೆ ಭಾರತದ ಪರ ಏಕದಿನ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ (Ravi Shastri), ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿಯ ಬಗ್ಗೆ ದೊಡ್ಡ ಸಂಗತಿಯೊಂದನ್ನು ರಿವೀಲ್ ಮಾಡಿದ್ದಾರೆ. ರವಿ ಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ಕಾಂಬಿನೇಷನ್‌ನಲ್ಲಿ ಭಾರತ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಸಾಧನೆ ಮಾಡಿದೆ.
ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸುವುದಕ್ಕೂ ಮುನ್ನ ತಮ್ಮೊಂದಿಗೆ ಮಾತನಾಡಿದ್ದರು ಎಂದು ರವಿ ಶಾಸ್ತ್ರಿ ಹೇಳಿಕೊಂಡಿದ್ದಾರೆ. ಟೆಸ್ಟ್‌ಗೆ ವಿದಾಯ ಹೇಳುವುದಕ್ಕೂ ಮುನ್ನ ಕೊಹ್ಲಿ ಹೇಳಿದ್ದ ಮಾತುಗಳನ್ನು ರವಿಶಾಸ್ತ್ರಿ ಐಸಿಸಿ ರಿವ್ಯೂವ್‌ನಲ್ಲಿ ಹಂಚಿಕೊಂಡಿದ್ದಾರೆ. ತಂಡಕ್ಕೆ ಎಲ್ಲವನ್ನೂ ನೀಡಿದ್ದೇನೆ ಮತ್ತು ಯಾವುದೇ ವಿಷಾದವಿಲ್ಲ ಎಂದು ಶಾಸ್ತ್ರಿಗೆ ಕೊಹ್ಲಿ ಹೇಳಿದ್ದರು. ವಿರಾಟ್ ಕೊಹ್ಲಿ ನಿವೃತ್ತಿ ಪಡೆಯುವುದಕ್ಕೂ ಒಂದು ವಾರ ಮೊದಲು ರವಿಶಾಸ್ತ್ರಿ ಇದನ್ನು ಹೇಳಿದ್ದರು.
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂದುವರಿಯಲು ಬಯಸಿದ್ದರು, ಆದರೆ…!: ಮೊಹಮ್ಮದ್ ಕೈಫ್
ರವಿ ಶಾಸ್ತ್ರಿಗೆ ಕೊಹ್ಲಿ ಹೇಳಿದ್ದೇನು?
ಐಸಿಸಿ ರಿವ್ಯೂನಲ್ಲಿ ಸಂಜನಾ ಗಣೇಶನ್ ಅವರೊಂದಿಗಿನ ಸಂಭಾಷಣೆಯಲ್ಲಿ ರವಿಶಾಸ್ತ್ರಿ, "ಕೊಹ್ಲಿಯ ಮನಸ್ಸು ಸಂಪೂರ್ಣವಾಗಿ ಸ್ಪಷ್ಟವಾಗಿತ್ತು. ನಿವೃತ್ತಿಯ ನಿರ್ಧಾರದ ಬಗ್ಗೆ ನನ್ನ ಮನಸ್ಸಿನಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕೊಹ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಕೊಹ್ಲಿಯ ಮನಸ್ಸು ಈಗ ಸಾಕು ಎಂದು ಹೇಳುತ್ತಿತ್ತು. ಕೊಹ್ಲಿ ನಿರ್ಧಾರದಿಂದ ತಮಗೆ ಆಶ್ಚರ್ಯವಾಯಿತು. ಕೊಹ್ಲಿ ಇನ್ನೂ ಎರಡು-ಮೂರು ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡಬಹುದು ಎಂದು ಅವರು ಭಾವಿಸಿದ್ದರು. ಆದರೆ ನೀವು ಮಾನಸಿಕವಾಗಿ ದಣಿದಾಗ, ನಿಮ್ಮ ದೇಹವೂ ಸಹ ಬಿಟ್ಟುಕೊಡುತ್ತದೆ. ನೀವು ದೈಹಿಕವಾಗಿ ಎಷ್ಟೇ ಸದೃಢರಾಗಿದ್ದರೂ, ಮಾನಸಿಕವಾಗಿ ದಣಿದಿದ್ದರೆ, ಅದು ನಿಮ್ಮ ದೇಹಕ್ಕೆ ಸಾಕು ಎಂಬ ಸಂದೇಶವನ್ನು ರವಾನಿಸುತ್ತದೆ," ಎಂದು ತಿಳಿಸಿದ್ದಾರೆ.
"ತಾತ್ವಿಕವಾಗಿ ಅವರು ಮುಂದುವರಿಯಬೇಕೆಂದು ಎಲ್ಲರೂ ಬಯಸಬಹುದು. ಆದರೆ, ನಂತರ ಅವರು ದೊಡ್ಡ ಚಿತ್ರಣವನ್ನು ನೋಡುತ್ತಾರೆ. ಏಕದಿನ ಕ್ರಿಕೆಟ್‌ಗೆ ದೊಡ್ಡದಾಗಿ ಕೊಡುಗೆ ನೀಡಬಹುದೆಂದು ಅವರು ಭಾವಿಸುತ್ತಿದ್ದಾರೆ. ಅವರ ವೃತ್ತಿ ಜೀವನದಲ್ಲಿ ಇನ್ನೂ ಸಾಕಷ್ಟು ಫ್ರಾಂಚೈಸಿ ಕ್ರಿಕೆಟ್ ಇದೆ," ಎಂದು ರವಿ ಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ಕೊಟ್ಟಷ್ಟು ಕೊಡುಗೆ ಬೇರೆ ಯಾರೂ ನೀಡಿಲ್ಲ: ಮೈಕಲ್ ವಾನ್!
"ಕೊಹ್ಲಿಯ ಜನಪ್ರಿಯತೆಯೂ ಅವರ ಆಯಾಸಕ್ಕೆ ಕಾರಣ. ಅವರಿಗೆ ಪ್ರಪಂಚದಾದ್ಯಂತ ಗೌರವ ಸಿಕ್ಕಿದೆ. ಕಳೆದ ದಶಕದಲ್ಲಿ ಅವರಷ್ಟು ಅಭಿಮಾನಿಗಳು ಬೇರೆ ಯಾರಿಗೂ ಇರಲಿಲ್ಲ. ಅದು ಆಸ್ಟ್ರೇಲಿಯಾ ಆಗಿರಲಿ ಅಥವಾ ದಕ್ಷಿಣ ಆಫ್ರಿಕಾ ಆಗಿರಲಿ, ಜನರು ಅವರನ್ನು ನೋಡಲು ಬರುತ್ತಿದ್ದರು. ಜನರು ಅವನೊಂದಿಗೆ ಪ್ರೀತಿ ಮತ್ತು ದ್ವೇಷದ ಸಂಬಂಧವನ್ನು ಹೊಂದಿದ್ದರು. ಪ್ರೇಕ್ಷಕರನ್ನು ಕೆರಳಿಸುವ ಸಾಮರ್ಥ್ಯ ಅವನಲ್ಲಿತ್ತು ಎಂಬ ಕಾರಣಕ್ಕೆ ಜನರು ಅವನ ಮೇಲೆ ಕೋಪಗೊಂಡರು. ಅವರು ಆಚರಿಸಿದ ರೀತಿಯಲ್ಲಿ ಅವರ ತೀವ್ರತೆ ಎದ್ದು ಕಾಣುತ್ತಿತ್ತು," ಎಂದು ಮಾಜಿ ಹೆಡ್ ಕೋಚ್ ತಿಳಿಸಿದ್ದಾರೆ.