ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕುಟುಂಬವನ್ನು ಡಿನ್ನರ್‌ಗೆ ಕರೆದೊಯ್ದು ಫ್ಯಾನ್ಸ್‌ಗೆ ಮುಖ್ಯ ಮೆಸೇಜ್‌ ಪಾಸ್‌ ಮಾಡಿದ ವಿಜಯ್ ದೇವರಕೊಂಡ

Vijay Deverakonda: ನಟ ವಿಜಯ್ ದೇವರಕೊಂಡ ತಮ್ಮ ಚಿತ್ರ 'ಕಿಂಗ್‌ಡಮ್'ನ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಕೆಲಸದ ಒತ್ತಡದಿಂದ ಸ್ವಲ್ಪ ವಿರಾಮ ಪಡೆದ ಅವರು, ತಮ್ಮ ಕುಟುಂಬದೊಂದಿಗಿನ ವೈಯಕ್ತಿಕ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.

ಫ್ಯಾಮಿಲಿ ಜತೆ ಟೈಮ್ ಸ್ಪೆಂಡ್ ಮಾಡಿದ ದೇವರಕೊಂಡ

ವಿಜಯ್ ದೇವರಕೊಂಡ ಕುಟುಂಬ

Profile Sushmitha Jain May 17, 2025 9:29 PM

ಹೈದರಾಬಾದ್: ನಟ ವಿಜಯ್ ದೇವರಕೊಂಡ (Vijay Deverakonda ) ತಮ್ಮ ಚಿತ್ರ 'ಕಿಂಗ್‌ಡಮ್'ನ (Kingdom) ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಕೆಲಸದ ಒತ್ತಡದಿಂದ ಸ್ವಲ್ಪ ವಿರಾಮ ಪಡೆದ ಅವರು ತಮ್ಮ ಕುಟುಂಬದೊಂದಿಗಿನ ವೈಯಕ್ತಿಕ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇತ್ತೀಚೆಗಿನ ಕುಟುಂಬದ ಜತೆಗಿನ ಡಿನ್ನರ್ (Family Dinner) ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಅವರು, ತಮ್ಮ ತಾಯಿ, ತಂದೆ ಮತ್ತು ಸಹೋದರನೊಂದಿಗೆ ಆನಂದದಾಯಕ ಸಂಜೆ ಕಳೆದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ತಾಯಿಯ ಆಸೆಯಂತೆ ಎಲ್ಲರು ಒಂದಾಗಿ ಸೇರಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ತಾಯಿಯ ಸಂದೇಶದ ಸ್ಕ್ರೀನ್‌ಶಾಟ್‌ನ್ನು ಶೇರ್‌ ಮಾಡಿರುವ ವಿಜಯ್, ಕುಟುಂಬದೊಂದಿಗೆ ಒಳ್ಳೆಯ ಸಮಯ ಕಳೆಯುವ ಪ್ಲ್ಯಾನ್‌ ಅನ್ನು ತಾಯಿ ಹೇಗೆ ಪ್ರಾರಂಭಿಸಿದರು ಎಂಬುದನ್ನು ತೋರಿಸಿದ್ದಾರೆ. ತಾಯಿಯ ವಾಟ್ಸ್‌ಆ್ಯಪ್‌ ಚಾಟ್‌ನಲ್ಲಿ, "ಈ ವಾರಾಂತ್ಯದಲ್ಲಿ ಸಾಧ್ಯವಾದಾಗ ಎಲ್ಲರೂ ಒಟ್ಟಿಗೆ ರಾತ್ರಿಯ ಊಟಕ್ಕೆ ಹೋಗಬಹುದೇ?" ಎಂದು ಕೇಳಿದ್ದರು. ವಿಜಯ್ ಈ ಪೋಸ್ಟ್‌ಗೆ "ತಾಯಿ ಇದ್ದಕ್ಕಿದ್ದಂತೆ ರಾತ್ರಿಯ ಊಟಕ್ಕೆ ಹೊರಗೆ ಹೋಗಬಹುದೇ ಎಂದು ಕೇಳಿದರು. ನಾವೆಲ್ಲರೂ ಒಟ್ಟಿಗೆ ಹೊರಗೆ ಹೋಗಿ ಬಹಳ ದಿನವಾಗಿತ್ತು," ಎಂದು ಕ್ಯಾಪ್ಷನ್ ಬರೆದಿದ್ದಾರೆ.

ವಿಜಯ್ ದೇವರಕೊಂಡ ಇನ್‌ಸ್ಟಾಗ್ರಾಮ್‌ ಪೋಸ್ಟ್‌:

ಕೆಲಸ ಮತ್ತು ಗುರಿಗಳ ಹಿಂದೆ ಓಡುವಾಗ ಕುಟುಂಬದೊಂದಿಗೆ ಸಮಯ ಕಳೆಯುವುದನ್ನು ನಾವು ಮರೆಯುತ್ತೇವೆ ಎಂದು ತಿಳಿಸಿದ ಅವರು, "ನಾವೆಲ್ಲರೂ ಯಾವಾಗಲೂ ಕೆಲಸ ಮತ್ತು ಗುರಿಗಳ ಹಿಂದೆ ಓಡುತ್ತಿರುತ್ತೇವೆ. ಕೆಲವೊಮ್ಮೆ ಜೀವನವನ್ನೇ ಮರೆತುಬಿಡುತ್ತೇವೆ" ಎಂದಿದ್ದಾರೆ.
ಈ ಸಂಜೆಯ ಬಗ್ಗೆ ಚಿಂತಿಸಿ ಎಂದ ವಿಜಯ್ "ನಿನ್ನೆ ರಾತ್ರಿ ನಾವು ಹೊರಗೆ ಹೋಗಿ ತುಂಬಾ ಉತ್ತಮ ಸಮಯವನ್ನು ಕಳೆದೆವು. ನಿಮ್ಮ ತಾಯಿ-ತಂದೆಯೊಂದಿಗೆ ಸಮಯ ಕಳೆಯಲು ಮರೆಯಬೇಡಿ, ಅವರನ್ನು ಹೊರಗೆ ಕರೆದುಕೊಂಡು ಹೋಗಿ" ಎಂದು ಸಂದೇಶ ನೀಡಿದ್ದಾರೆ.

ವಿಜಯ್ ದೇವರಕೊಂಡ ತಮ್ಮ ಮುಂಬರುವ ಸ್ಪೈ ಥ್ರಿಲ್ಲರ್ 'ಕಿಂಗ್‌ಡಮ್' ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಗೌತಮ್ ತಿನ್ನನೂರಿ ನಿರ್ದೇಶನದ ಈ ಚಿತ್ರವು ಮೇ 30ರಂದು ತೆರೆಕಾಣಬೇಕಿತ್ತು. ಆದರೆ ಬಿಡುಗಡೆ ದಿನಾಂಕವನ್ನು ಜುಲೈ 4ಕ್ಕೆ ಮುಂದೂಡಲಾಗಿದೆ.

'ಕಿಂಗ್‌ಡಮ್' ಎರಡು ಭಾಗಗಳ ಸರಣಿಯ ಮೊದಲ ಭಾಗವಾಗಿದೆ ಎಂದು ನಿರೀಕ್ಷಿಸಲಾಗಿದೆ. ಈ ಚಿತ್ರದಲ್ಲಿ ಭಾಗ್ಯಶ್ರೀ ಬೋರ್ಸೆ ಮತ್ತು ಸತ್ಯದೇವ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅನಿರುದ್ಧ ರವಿಚಂದರ್ ಸಂಗೀತ ನೀಡಿದ್ದು, ಜೋಮನ್ ಟಿ. ಜಾನ್ ಮತ್ತು ಗಿರೀಶ್ ಗಂಗಾಧರನ್ ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ. ನವೀನ್ ನೂಲಿ ಸಂಕಲನವನ್ನು ನೋಡಿಕೊಂಡಿದ್ದಾರೆ.

ಗೌತಮ್ ತಿನ್ನನೂರಿಯವರ ಸಿನಿಮಾದ ಜತೆಗೆ ವಿಜಯ್ ದೇವರಕೊಂಡ ರಾಹುಲ್ ಸಂಕೃತ್ಯಾನ್ ನಿರ್ದೇಶನದ 'ವಿಡಿ14' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ವಸಾಹತುಶಾಹಿ ಆಡಳಿತದ ಹಿನ್ನೆಲೆಯಲ್ಲಿ ನಡೆಯುತ್ತದೆ. ಇದರ ಜತೆಗೆ, ರವಿ ಕಿರಣ್ ಕೋಲಾ ನಿರ್ದೇಶನದ 'ಎಸ್‌ವಿಸಿ 59' ಚಿತ್ರವೂ ವಿಜಯ್‌ ಕೈಯಲ್ಲಿದೆ.