Chikkaballapur News: ದೂರು ದಾಖಲಿಸಿದ್ದ ಕಾಂಗ್ರೆಸ್ ಮತ್ತು ಪ್ರತಿವಾದಿ ನಗರಸಭಾ ಸದಸ್ಯರ ನಡುವೆ ವಾದ ಪ್ರತಿ ವಾದ
ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿ, ಮಾತೃಪಕ್ಷಕ್ಕೆ ಕೈ ಕೊಟ್ಟಿದ್ದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ನ 6 ಸದಸ್ಯರ ಅನರ್ಹತೆಯ ಪ್ರಕರಣವು ಅಂತಿಮ ಘಟ್ಟಕ್ಕೆ ಬಂದಿದ್ದು ಇನ್ನೂ ಕಾಯ್ದಿರಿಸಿದ ಆದೇಶದ ಅಧಿಕೃತ ಘೋಷಣೆ ಯಷ್ಟೇ ಬಾಕಿ ಇದೆ. ಈಗಾಗಲೇ ದೂರು ದಾಖಲಿಸಿದ್ದ ಕಾಂಗ್ರೆಸ್ ಮತ್ತು ಪ್ರತಿವಾದಿ ನಗರಸಭಾ ಸದಸ್ಯರ ನಡುವೆ ಎಲ್ಲ ವಾದ ಪ್ರತಿ ವಾದವು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಮುಗಿದಿದೆ. ಆದೇಶ ಘೋಷಣೆ ಬಾಕಿ ಇದೆ


ಚಿಕ್ಕಬಳ್ಳಾಪುರ: ಇಲ್ಲಿನ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿ, ಮಾತೃಪಕ್ಷಕ್ಕೆ ಕೈ ಕೊಟ್ಟಿದ್ದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ನ 6 ಸದಸ್ಯರ ಅನರ್ಹತೆಯ ಪ್ರಕರಣವು ಅಂತಿಮ ಟ್ಟಕ್ಕೆ ಬಂದಿದ್ದು ಇನ್ನೂ ಕಾಯ್ದಿರಿಸಿದ ಆದೇಶದ ಅಧಿಕೃತ ಘೋಷಣೆ ಯಷ್ಟೇ ಬಾಕಿ ಇದೆ. ಈಗಾಗಲೇ ದೂರು ದಾಖಲಿಸಿದ್ದ ಕಾಂಗ್ರೆಸ್ ಮತ್ತು ಪ್ರತಿವಾದಿ ನಗರಸಭಾ ಸದಸ್ಯರ ನಡುವೆ ಎಲ್ಲ ವಾದ ಪ್ರತಿ ವಾದವು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಮುಗಿದಿದೆ. ಆದೇಶ ಘೋಷಣೆ ಬಾಕಿ ಇದೆ.
ಇದನ್ನೂ ಓದಿ: Chikkaballapur News: ಅಣಕ ನೂರು ವೆಂಕಟೇಶಪ್ಪ, ಉಪಾಧ್ಯಕ್ಷರಾಗಿ ಪೂಜನಹಳ್ಳಿ ಅಶ್ವತ್ಥಮ್ಮ ಅವಿರೋಧ ಆಯ್ಕೆ
ನಗರಸಭಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿ, ಕಾಂಗ್ರೆಸ್ ಸದಸ್ಯ ರಾದ ನೇತ್ರಾವತಿ, ನಿರ್ಮಲಾ ಪ್ರಭು, ಸತೀಶ್, ಸ್ವಾತಿ ಮಂಜುನಾಥ್, ಅಂಬಿಕಾ ಮತ್ತು ರತ್ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಕೈಕೊಟ್ಟಿದ್ದರು. ಇದರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅಂಬರೀಷ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ದೂರು ಸಲ್ಲಿಸಿದ್ದರು. ಪಕ್ಷ ವಿರೋಧಿ ಚಟುವಟಿಕೆ ಯಲ್ಲಿ ತೊಡಗಿರುವ ಹಾಗೂ ವಿಪ್ ಉಲ್ಲಂಘಿಸಿರುವವರನ್ನು ನಿಯಮಾನುಸಾರ ಸದಸ್ಯ ಸ್ಥಾನ ದಿಂದ ಅನರ್ಹಗೊಳಿಸಲು ಒತ್ತಾಯಿಸಿದ್ದರು.
ಕೈಗೆ ಮುಖಭಂಗ
ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಎ.ಗಜೇಂದ್ರ ಹಾಗೂ ಕಾಂಗ್ರೆಸ್ ಬೆಂಬಲಿತ ಅಂಬರೀಷ್, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಜೆ.ನಾಗರಾಜ್ ಹಾಗೂ ಕಾಂಗ್ರೆಸ್ ಬೆಂಬಲಿತ ಮೀನಾ ಮಿಲ್ಟನ್ ವೆಂಕಟೇಶ್ ಸ್ಪರ್ಧಿಸಿದ್ದರು.
ಇನ್ನೂ ಇಲ್ಲಿನ ನಗರಸಭೆಯಲ್ಲಿ ಕಾಂಗ್ರೆಸ್ 16, ಬಿಜೆಪಿ 9, ಜೆಡಿಎಸ್ 2, ಪಕ್ಷೇತರ 4 ಸದಸ್ಯರ ಮತ ವಿದ್ದು ಇರುವ 35 ಮತಗಳ ಪೈಕಿ ಗಜೇಂದ್ರ 19 ಮತ್ತು ಅಂಬರೀಶ್ 16 ಮತಗಳು, ನಾಗರಾಜ್ 19, ಮೀನಾ 15 ಮತಗಳನ್ನು ಪಡೆದಿದ್ದರು. ಇದರ ಮೂಲಕ ಕಾಂಗ್ರೆಸ್ ಗಾದಿಯನ್ನು ಕಳೆದು ಕೊಂಡಿದ್ದು ಪಕ್ಷಕ್ಕೆ ಕೈ ಕೊಟ್ಟ ಸ್ವಪಯ ಸದಸ್ಯರನ್ನು ಅನರ್ಹಗೊಳಿಸುವವರೆಗೂ ಸುಮ್ಮನಿರುವು ದಿಲ್ಲ ಎಂದು ಶಾಸಕ ಪ್ರದಿಪ್ ಈಶ್ವರ್ ಗುಡುಗಿದ್ದರು.