Kyasanur Forest Disease: ಮಂಗನ ಕಾಯಿಲೆಗೆ ಮತ್ತೊಂದು ಬಲಿ, ಚಿಕ್ಕಮಗಳೂರಲ್ಲಿ ಮಹಿಳೆ ಸಾವು
ಮೃತ ಕಮಲಾ ಅವರು ಚಿಕ್ಕಮಗಳೂರಿನ ಎನ್‌ಆರ್ ಪುರದ ಮೇಲ್ಪಾಲ್ ಗ್ರಾಮದಲ್ಲಿನ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಅವರನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಕಮಲಾ ಅವರನ್ನು ಮಂಗನಕಾಯಿಲೆ ಪತ್ತೆ ಪರೀಕ್ಷೆಗೆ ಒಳಪಡಿಸಿದಾಗ ಅದು ದೃಢಪಟ್ಟಿತ್ತು.

ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು: ಮಲೆನಾಡಿನಲ್ಲಿ ಕ್ಯಾಸನೂರು ಕಾಡಿನ ಕಾಯಿಲೆ (Kyasanur Forest Disease, KFD) ಅಥವಾ ಮಂಗನ ಕಾಯಿಲೆ (Monkey fever) ಉಲ್ಬಣಗೊಳ್ಳುತ್ತಿದೆ. ಇಂದು ಮಂಗನಕಾಯಿಲೆಯಿಂದ ಮತ್ತೊಬ್ಬ ಮಹಿಳೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರಿನ ಎನ್‌ಆರ್‌ಪುರ ತಾಲ್ಲೂಕಿನ ಕಟ್ಟಿನಮನೆ ಗ್ರಾಮ ನಿವಾಸಿ ಕಮಲಾ (65) ಎಂಬವರೇ ಸಾವನ್ನಪ್ಪಿರುವ ಮಹಿಳೆ.
ಮಂಗನಕಾಯಿಲೆಯಿಂದ ಬಳಲುತ್ತಿದ್ದ ಕಮಲಾ ಅವರನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕಮಲಾ ಸಾವನ್ನಪ್ಪಿದ್ದಾರೆ. ಮೃತ ಕಮಲಾ ಅವರು ಚಿಕ್ಕಮಗಳೂರಿನ ಎನ್‌ಆರ್ ಪುರದ ಮೇಲ್ಪಾಲ್ ಗ್ರಾಮದಲ್ಲಿನ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಅವರನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಕಮಲಾ ಅವರನ್ನು ಮಂಗನಕಾಯಿಲೆ ಪತ್ತೆ ಪರೀಕ್ಷೆಗೆ ಒಳಪಡಿಸಿದಾಗ ಅದು ದೃಢಪಟ್ಟಿತ್ತು. ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಬೃಹತ್ ಖೋಟಾ ನೋಟು ದಂಧೆ ಬಯಲಿಗೆ, ಕಾನ್‌ಸ್ಟೇಬಲ್ ಆರೆಸ್ಟ್
ರಾಯಚೂರು: ರಾಯಚೂರು (Raichuru news) ಜಿಲ್ಲೆಯಲ್ಲಿ ಬೃಹತ್ ಖೋಟಾನೋಟು ದಂಧೆಯನ್ನು (Fake Currency racket) ಪೊಲೀಸರು ಬಯಲಿಗೆಳೆದಿದ್ದಾರೆ. ಖೋಟಾನೋಟು ಉತ್ಪಾದನೆ ಅಡ್ಡೆಯ ಮೇಲೆ ಪೊಲೀಸರು ದಾಳಿ (police raid) ನಡೆಸಿದ್ದು, ಈ ದಾಳಿಯಲ್ಲಿ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೇಬಲ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಯಚೂರು ಸಶಸ್ತ್ರ ಮೀಸಲು ಪಡೆಯ ಕಾನ್ಸ್ ಸ್ಟೇಬಲ್ ಮರಿಲಿಂಗ, ರಮೇಶ್ ಆದಿ, ಶಿವಲಿಂಗ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ರಾಯಚೂರಿನ ಗುಪ್ತ ಸ್ಥಳದಲ್ಲಿ ಖೋಟಾನೋಟು ತಯಾರಿ ನಡೆಸಲಾಗುತ್ತಿದ್ದು, ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ದಾಳಿಯ ವೇಳೆ ಖೋಟಾನೋಟು ತಯಾರಿಸಲು ಬಳಸಲಾಗುವ ಯಂತ್ರಗಳು, ಇಂಕ್, ಮುದ್ರಿಸಿದ ನೋಟುಗಳು ಇತ್ಯಾದಿಗಳನ್ನು ವಶಪಡಿಸಿಕೊಂಡಿದ್ದಾರೆ. 100, 200, 500 ಮುಖಬೆಲೆಯ ನೋಟುಗಳನ್ನು ಇಲ್ಲಿ ಮುದ್ರಿಸಲಾಗುತ್ತಿತ್ತು. ರಾಜ್ಯ ಹಾಗೂ ಹೊರರಜ್ಯಕ್ಕೂ ಈ ಖೋಟಾನೋಟುಗಳು ರವಾನೆಯಾಗುತ್ತಿದ್ದವು ಎಂದು ಗೊತ್ತಾಗಿದೆ. ಸಶಸ್ತ್ರ ಮೀಸಲು ಪಡೆಯ ಕಾನ್ಸ್ ಸ್ಟೇಬಲ್ ಈ ದಂಧೆಯಲ್ಲಿ ಭಾಗಿಯಾಗಿರು ಅಚ್ಚರಿ ವ್ಯಕ್ತವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿತರ ಬಾಯಿ ಬಿಡಿಸಲು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Food Poison: ಹೋಳಿ ಹಬ್ಬದ ಪಾರ್ಟಿಯಲ್ಲಿ ಕಲುಷಿತ ಆಹಾರ ಸೇವನೆ, ವಿದ್ಯಾರ್ಥಿ ಸಾವು, 6 ಮಂದಿ ಮೇಲೆ ಎಫ್‌ಐಆರ್