ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪಟ್ಟಣಕ್ಕೆ ಹೊಂದಿಕೊಂಡಿದ್ದರೂ ಸಮಸ್ಯೆಗಳ ಸುಳಿಯಲ್ಲಿ ಪಾತಬಾಗೇಪಲ್ಲಿ

ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಇರುವ ಚರಂಡಿಗಳು ಹಲವೆಡೆ ಹೂಳು ತುಂಬಿ ದ್ದು, ಮತ್ತೆ ಹಲವೆಡೆ ಸಂಪೂರ್ಣ ಮುಚ್ಚಿಹೋಗಿವೆ. ಇನ್ನೊಂದೆಡೆ ಕೊಳಚೆ ನೀರಿನಿಂದ ಮಡು ಗಟ್ಟುವ ಪರಿಸ್ಥಿತಿಯಲ್ಲಿದ್ದು, ಸರಾಗವಾಗಿ ಹರಿಯದೇ ಒಂದೆಡೆಯೇ ನಿಂತು ಕೊಳೆಯುತ್ತಿದೆ. ಇದರಿಂದಾಗಿ ಸೊಳ್ಳೆ ಗಳ ಕಾಟ ಹೆಚ್ಚಾಗಿದ್ದು, ದುರ್ವಾಸನೆಗೆ ಹೈರಾಣಾಗಬೇಕಿದೆ.

ಚರಂಡಿ, ರಸ್ತೆ, ಕುಡಿಯುವ ನೀರಿನ ಸಮಸ್ಯೆಗಳಿಂದ ಹೈರಾಣು

ಕೆಟ್ಟು ನಿಂತಿರುವ ಶುದ್ಧನೀರು ಘಟಕ

Profile Ashok Nayak Mar 17, 2025 9:45 PM

ಬಾಗೇಪಲ್ಲಿ: ಪಟ್ಟಣಕ್ಕೆ ಹೊಂದಿಕೊಂಡಿರುವ ಘಂಟಮವಾರಪಲ್ಲಿ ಗ್ರಾಮ ಪಂಚಾಯತಿಯ ಪಾತಬಾಗೇಪಲ್ಲಿಯಲ್ಲಿ ರಸ್ತೆ, ಕುಡಿಯುವ ನೀರು,ಸಮರ್ಪಕ ಚರಂಡಿ ವ್ಯವಸ್ಥೆ ಸೇರಿದಂತೆ ಮೂಲಸೌಲಭ್ಯಗಳಿಲ್ಲದೆ ನಿತ್ಯವೂ ನಾಗರೀಕರು ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಾತಬಾಗೇಪಲ್ಲಿ ಗ್ರಾಮ ಪಟ್ಟಣಕ್ಕೆ ಹೊಂದಿಕೊAಡಿದ್ದರೂ ಕುಡಿಯುವ ನೀರಿಗಾಗಿ ಕಿ.ಮೀ ಗಟ್ಟಲೇ ಹೋಗಬೇಕಿದೆ. ಹಲವು ವರ್ಷಗಳ ಹಿಂದೆ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಆದರೆ ಕಳೆದ ಆರೇಳು  ತಿಂಗಳುಗಳ ಹಿಂದೆ ಅದು ಕೆಟ್ಟು ಹೋಗಿದೆ. ಹಾಗೇಯೆ ಘಟಕದ ಗಾಜುಗಳನ್ನು ಒಡೆಯಲಾಗಿದೆ. ಇದರಿಂದಾಗಿ ಅದನ್ನು ಸರಿಪಡಿಸಲು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ನಾಗರೀಕರು ನೋವು ತೋಡಿಕೊಂಡರು.

ಮಡುಗಟ್ಟಿದ ಚರಂಡಿಗಳು

ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಇರುವ ಚರಂಡಿಗಳು ಹಲವೆಡೆ ಹೂಳು ತುಂಬಿ ದ್ದು, ಮತ್ತೆ ಹಲವೆಡೆ ಸಂಪೂರ್ಣ ಮುಚ್ಚಿಹೋಗಿವೆ. ಇನ್ನೊಂದೆಡೆ ಕೊಳಚೆ ನೀರಿನಿಂದ ಮಡು ಗಟ್ಟುವ ಪರಿಸ್ಥಿತಿಯಲ್ಲಿದ್ದು, ಸರಾಗವಾಗಿ ಹರಿಯದೇ ಒಂದೆಡೆಯೇ ನಿಂತು ಕೊಳೆಯುತ್ತಿದೆ. ಇದರಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ದುರ್ವಾಸನೆಗೆ ಹೈರಾಣಾಗಬೇಕಿದೆ. ಹಾಗೆಯೇ ನಾಯಿಗಳು ಆ ಕೊಳಚೆ ನೀರಲ್ಲಿ ಹೊರಳಾಡಿ ಮತ್ತಷ್ಟು ಗಬ್ಬು ವಾಸನೆ ಉಂಟು ಮಾಡುತ್ತಿವೆ.ಇನ್ನು ಮಳೆಗಾಲದಲ್ಲಿ ಮತ್ತಷ್ಟು ಭೀಕರತೆ ಎದುರಿಸಬೇಕಿದೆ. ಜೊತೆಗೆ ರೋಗರುಜುನಗಳು ಹರಡುವ ಬೀತಿ ಎದುರಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಜೆಲ್ಲಿಕಲ್ಲುಗಳ ರಸ್ತೆ

ಇನ್ನು ಈ ಗ್ರಾಮಕ್ಕೆ ಯಾವುದೇ ರೀತಿಯ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ. ಹಾಗಾಗಿ ಇಲ್ಲಿನ ನಾಗರೀಕರು ಖಾಸಗಿ ವಾಹನಗಳ ಮೂಲಕ ಪಟ್ಟಣ ತಲುಪಬೇಕು. ಹೀಗಿರುವಾಗ ಸುಸಜ್ಜಿತ ರಸ್ತೆಯ ಕನಸು,ಕನಸಾಗಿಯೇ ಉಳಿದಿದೆ. ಮಣ್ಣಿನ ರಸ್ತೆಯಾಗಿದ್ದು, ದೊಡ್ಡ ಜೆಲ್ಲಿ ಕಲ್ಲುಗಳ ಮೇಲೆ ಸವಾರಿ ನಡೆಸಬೇಕು. ಅಲ್ಲಲ್ಲಿ ರಸ್ತೆ ಗುಂಡಿಗಳಿದ್ದು, ಬೇಸಿಗೆಯಲ್ಲಿ ಧೂಳಿನ ಕಾಟ, ಮಳೆಗಾಲದಲ್ಲಿ ಕೆಸರಿನ ಕಾಟ. ಹೀಗೆ ಉತ್ತಮ ರಸ್ತೆ ಇಲ್ಲದ ಕಾರಣದಿಂದಾಗಿ ತುರ್ತು ಸಂದರ್ಭದಲ್ಲಿ ಗ್ರಾಮಸ್ಥರು ಅಂಬ್ಯು ಲೆನ್ಸ್ ಬರಲೂ ಹೆದರುವಂತಾಗಿದೆ.ನಿತ್ಯವೂ ವಿದ್ಯಾರ್ಥಿಗಳು, ವಯೋವೃದ್ಧರು,ಕೂಲಿಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ.

*

ಪಾತಬಾಗೇಪಲ್ಲಿಯಲ್ಲಿ ನೀರಿನ ಶುದ್ದೀಕರಣ ಘಟಕದ ಬಗ್ಗೆ ಮಾಹಿತಿ ಬಂದಿದ್ದು, ಕೂಡಲೇ ಸಂಬAಧಪಟ್ಟ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಸರಿಪಡಿಸಲು ನಿರ್ದೇಶಿಸಲಾಗಿದೆ. ತುರ್ತಾಗಿ ಈ ಸಮಸ್ಯೆ ಪರಿಹರಿಸಲಾಗುತ್ತದೆ. ರಸ್ತೆ,ಚರಂಡಿಗಳನ್ನು ನರೇಗಾ ಮತ್ತಿತರರ ಯೋಜನೆಗಳಡಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ.

- ಜಿ.ವಿ ರಮೇಶ್ ,ಇಓ,ತಾಲೂಕು ಪಂಚಾಯತಿ ,ಬಾಗೇಪಲ್ಲಿ

ನಾನು ಗ್ರಾಮ ಪಂಚಾಯತಿ ಸದಸ್ಯನಾಗಿದ್ದಾಗ, ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿತ್ತು. ಆದರೆ ನಾನು ಸೋತ ನಂತರ ಗ್ರಾಮದ ಸಮಸ್ಯೆಗಳನ್ನು ಪರಿಹರಿಸುವ ಗೋಜಿಗೆ ಯಾರೂ ಹೋಗುತ್ತಿಲ್ಲ. ಹಾಗಾಗಿ ನಾನೇ ಈಗ ಖುದ್ದು ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ಗಳನ್ನು ಭೇಟಿ ಮಾಡಿದ್ದು, ಸಮಸ್ಯೆಗಳ ಪರಿಹಾರಕ್ಕೆ ಮನವಿ ಮಾಡಿದ್ದೇನೆ. ಶೀಘ್ರದಲ್ಲೆ ಸಮಸ್ಯೆಗಳ ಪರಿಹಾರದ ಭರವಸೆ ನೀಡಿದ್ದಾರೆ.

- ರಘುರಾಮರೆಡ್ಡಿ, ಮಾಜಿ ಗ್ರಾಮ ಪಂಚಾಯತಿ ಸದಸ್ಯ,