ವಿದ್ಯಾರ್ಥಿನಿಯರು ತಮ್ಮ ಜೀವನಕ್ಕೆ ಅತೀ ಅವಶ್ಯಕವಾದ ಕೌಶಲ್ಯಗಳನ್ನು ಕಾಲೇಜಿನ ದಿನಗಳಲ್ಲೇ ಅಳವಡಿಸಿಕೊಳ್ಳಬೇಕು: ಎನ್.ಎಂ.ಜಗದೀಶ್ ಸಲಹೆ
ಜೀವನ ಮೌಲ್ಯಗಳನ್ನು ಗುರು ಹಿರಿಯರಿಗೆ ಗೌರವ ನೀಡುವ ಮೂಲಕ ಮೈಗೂಡಿಸಿಕೊಳ್ಳಬೇಕು ಹಾಗೂ ಯಶಸ್ವಿ ಜೀವನಕ್ಕಾಗಿ ಸಮಯ ನಿರ್ವಹಣೆ, ಸಮಸ್ಯೆ ಪರಿಹಾರ, ಸಂವಹನ, ತೀರ್ಮಾನ ತೆಗೆದುಕೊಳ್ಳು ವುದು, ತಾಳ್ಮೆ, ಸಹಕಾರ, ಆತ್ಮವಿಶ್ವಾಸ, ಆಲೋ ಚನೆ, ನೈತಿಕತೆ ಮತ್ತು ಶಿಸ್ತಿನಂತಹ ಮೌಲ್ಯಾಧಾರಿತ ಕೌಶಲ್ಯಗಳನ್ನು ಬೆಳೆಸಿ ಕೊಳ್ಳವುದು ಮುಖ್ಯ ಎಂದು ಸಲಹೆ ನೀಡಿದರು.
ಚಿಕ್ಕಬಳ್ಳಾಪುರ: ವಿದ್ಯಾರ್ಥಿನಿಯರು ತಮ್ಮ ಜೀವನಕ್ಕೆ ಅತೀ ಅವಶ್ಯಕವಾದ ಜೀವನ ಕೌಶಲ್ಯ ಗಳನ್ನು ಇಂದಿನಿAದಲೇ ಅಳವಡಿಸಿಕೊಳ್ಳಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಎಂ. ಜಗದೀಶ್ ತಿಳಿಸಿದರು. ಚಿಂತಾಮಣಿ ನಗರದ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಿಕ್ಕಬಳ್ಳಾಪುರ ಹಾಗೂ ಯುವ ಸ್ಪಂದನ ಕೇಂದ್ರ, ಎಪಿಡಿಮಿಯಾಲಜಿ ವಿಭಾಗ, ನಿಮ್ಹಾನ್ಸ್ ಇವರ ಸಹಯೋಗದೊಂದಿಗೆ ಗುರುವಾರ ನಡೆದ ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಎಂ. ಜಗದೀಶ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿನಿಯರು ತಮ್ಮ ಜೀವನಕ್ಕೆ ಅತೀ ಅವಶ್ಯಕವಾದ ಜೀವನ ಕೌಶಲ್ಯಗಳನ್ನು ಇಂದಿ ನಿಂದಲೇ ಅಳವಡಿಸಿಕೊಳ್ಳಬೇಕು. ಜೀವನ ಮೌಲ್ಯಗಳನ್ನು ಗುರು ಹಿರಿಯರಿಗೆ ಗೌರವ ನೀಡುವ ಮೂಲಕ ಮೈಗೂಡಿಸಿಕೊಳ್ಳಬೇಕು ಹಾಗೂ ಯಶಸ್ವಿ ಜೀವನಕ್ಕಾಗಿ ಸಮಯ ನಿರ್ವಹಣೆ, ಸಮಸ್ಯೆ ಪರಿಹಾರ, ಸಂವಹನ, ತೀರ್ಮಾನ ತೆಗೆದುಕೊಳ್ಳುವುದು, ತಾಳ್ಮೆ, ಸಹಕಾರ, ಆತ್ಮವಿಶ್ವಾಸ, ಆಲೋ ಚನೆ, ನೈತಿಕತೆ ಮತ್ತು ಶಿಸ್ತಿನಂತಹ ಮೌಲ್ಯಾಧಾರಿತ ಕೌಶಲ್ಯಗಳನ್ನು ಬೆಳೆಸಿ ಕೊಳ್ಳುವುದು ಮುಖ್ಯ ಎಂದು ಸಲಹೆ ನೀಡಿದರು.
ಪ್ರಾಂಶುಪಾಲರಾದ ರಮೇಶ್ ಮಾತನಾಡಿ ಎಲ್ಲಾ ವಿದ್ಯಾರ್ಥಿನಿಯರು ತಮ್ಮ ಜೀವದಲ್ಲಿ ಶಿಸ್ತು, ಸಮಯಪ್ರಜ್ಞೆ ಮೂಡಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ ಉತ್ತಮ ಹುದ್ದೆಗಳಿಗೆ ನೇಮಕಾತಿ ಹೊಂದಲು ಶುಭ ಕೋರಿದರು.
ಯುವ ಸ್ಪಂದನ ಕೇಂದ್ರದ ಯುವ ಪರಿವರ್ತಕ ನರಸಿಂಹ ಮೂರ್ತಿ ಹಾಗೂ ವಿಜಯ ಕುಮಾರ್. ಡಿ.ಸಿ. ರವರು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸ್ವ-ಅರಿವು, ಭಾವನೆಗಳ ನಿರ್ವಹಣೆ, ಸಹಾನುಭೂತಿ, ಸಂಯಮ ಕಾಪಾಡುವಿಕೆ, ಒತ್ತಡ ನಿರ್ವಹಣೆ, ಪರಿಣಾಮಕಾರಿ ಸಂವಹನ, ಅಂತರ ವ್ಯಕ್ತಿಯ ಕೌಶಲ್ಯಗಳು, ಸೃಜನಾತ್ಮಕ ಚಿಂತನೆ, ವಿಮರ್ಶಾತ್ಮಕ ಚಿಂತನೆ ಹಾಗೂ ನಿರ್ಧಾರ ಕೈಗೊಳ್ಳುವುದರ ಬಗ್ಗೆ ಜೀವನ ಕೌಶಲ್ಯ ತರಬೇತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಎನ್.ಎಸ್.ಎಸ್ ಅಧಿಕಾರಿ ನರಸಿಂಹಸ್ವಾಮಿ ರವರು ಕಾಲೇಜಿನ ಎಲ್ಲಾ ಬೋಧಕ, ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.