AUS vs ENG: ಅಪಾಯಕಾರಿ ಟ್ರಾವಿಸ್ ಹೆಡ್‌ರ ಸ್ಟನಿಂಗ್ ಕ್ಯಾಚ್ ಪಡೆದ ಜೋಫ್ರಾ ಆರ್ಚರ್! ವಿಡಿಯೊ
ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಗಮನ ಸೆಳೆದರು. ಜೋಫ್ರಾ ಆರ್ಚರ್ ತಮ್ಮದೇ ಬೌಲಿಂಗ್‌ನಲ್ಲಿ ಟ್ರಾವಿಸ್ ಹೆಡ್ ಅವರ ಅದ್ಭುತ ಕ್ಯಾಚ್ ಪಡೆಯುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಆರ್ಚರ್ ಕ್ಯಾಚ್ ಹಿಡಿದ ಚಾಣಾಕ್ಷತನ ನೋಡಿ ಟ್ರಾವಿಸ್ ಹೆಡ್ ಕೂಡ ಆಶ್ಚರ್ಯಚಕಿತರಾದರು.

ಟ್ರಾವಿಸ್ ಹೆಡ್‌ರ ಸ್ಟನಿಂಗ್ ಕ್ಯಾಚ್ ಪಡೆದು ಸಂಭ್ರಮಿಸಿದ ಜೋಫ್ರಾ ಆರ್ಚರ್.

ಲಾಹೋರ್: ಆಸ್ಟ್ರೇಲಿಯಾ ವಿರುದ್ಧ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಕೂಡ ಬೌಲಿಂಗ್‌ನಲ್ಲಿ ಬಿರುಗಾಳಿಯ ಆರಂಭವನ್ನು ಪಡೆದರು. ಅದ್ಭುತ ಫಾರ್ಮ್‌ನಲ್ಲಿದ್ದ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಅವರನ್ನು ಆರ್ಚರ್ ಕಣ್ಣು ಮಿಟುಕಿಸುವುದರೊಳಗೆ ಔಟ್ ಮಾಡಿದರು. ಅವರು ತಮ್ಮದೇ ಬೌಲಿಂಗ್‌ನಲ್ಲಿ ಸುಂದರವಾದ ಕ್ಯಾಚ್ ಪಡೆದರು. ಆರ್ಚರ್ ಕ್ಯಾಚ್ ಎಷ್ಟು ಬೇಗನೆ ಸಿಕ್ಕಿತೆಂದರೆ, ಟ್ರಾವಿಸ್‌ಗೆ ಏನಾಯಿತು ಎಂದು ಸ್ವಲ್ಪ ಸಮಯದವರೆಗೆ ಅರ್ಥವಾಗಲಿಲ್ಲ. ಆಸ್ಟ್ರೇಲಿಯಾ ಪರ ಇನಿಂಗ್ಸ್ ಆರಂಭಿಸಲು ಟ್ರಾವಿಸ್ ಹೆಡ್ ಬಂದರು ಆದರೆ ದುರದೃಷ್ಟವಶಾತ್, ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು.
ಮ್ಯಾಥ್ಯೂ ಶಾರ್ಟ್ ಜೊತೆ ಆರಂಭಿಕನಾಗಿ ಕಣಕ್ಕೆ ಇಳಿದ ಟ್ರಾವಿಸ್ ಹೆಡ್, 5 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿ ಔಟಾದರು. ಈ ರೀತಿಯಾಗಿ ಆಸ್ಟ್ರೇಲಿಯಾ ತಂಡ, ಟ್ರಾವಿಸ್ ಹೆಡ್ ರೂಪದಲ್ಲಿ ಮೊದಲ ಆಘಾತವನ್ನು ಅನುಭವಿಸಿತು. ಪಂದ್ಯದ ಆರಂಭದಲ್ಲಿ ಟಾಸ್ ಗೆದ್ದ ನಂತರ, ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಇಂಗ್ಲೆಂಡ್‌ಗೆ ಮೊದಲು ಬ್ಯಾಟಿಂಗ್‌ಗೆ ಆಹ್ವಾನ ನೀಡಿದ್ದರು, ಆದರೆ ಅವರ ನಿರ್ಧಾರವು ದುಬಾರಿಯಾಯಿತು.
AUS vs ENG: ಆಸ್ಟ್ರೇಲಿಯಾ ವಿರುದ್ಧ 165 ರನ್ ಸಿಡಿಸಿ ಇತಿಹಾಸ ಸೃಷ್ಟಿಸಿದ ಬೆನ್ ಡಕೆಟ್!
ಟಾಸ್ ಸೋತ ನಂತರ ಮೊದಲು ಬ್ಯಾಟ್ ಮಾಡುವಂತಾದ ಇಂಗ್ಲೆಂಡ್ ತಂಡವು ಕಳಪೆ ಆರಂಭವನ್ನು ಕಂಡಿತು ಆದರೆ ಆರಂಭಿಕ ಬೆನ್ ಡಕೆಟ್ ಅದ್ಭುತವಾಗಿ ಬ್ಯಾಟ್ ಮಾಡಿ ಇನಿಂಗ್ಸ್ ಅನ್ನು ನಿರ್ವಹಿಸಿದರು. ಬೆನ್ ಡಕೆಟ್ 96 ಎಸೆತಗಳಲ್ಲಿ ಶತಕ ಪೂರೈಸಿ 165 ರನ್ ಗಳಿಸಿದರು. ಈ ಶತಕದೊಂದಿಗೆ, ಬೆನ್ ಡಕೆಟ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಇತಿಹಾಸದಲ್ಲಿಯೇ ಅತಿ ಹೆಚ್ಚು ರನ್‌ಗಳನ್ನು ಕಲೆ ಹಾಕಿದ ಬ್ಯಾಟ್ಸ್‌ಮನ್ ಎಂಬ ನೂತನ ದಾಖಲೆಯನ್ನು ಬರೆದರು.
Travis Head - C & B Jofra Archer...
— ni8hin 💫 (@ni8hin) February 22, 2025
Let's celebrate Indians...😂#AUSvENG #INDvPAK #ChampionsTrophy2025 pic.twitter.com/y72qcafIZL
ಇಷ್ಟೇ ಅಲ್ಲ, ಇಂಗ್ಲೆಂಡ್ ತಂಡವು ನಿಗದಿತ 50 ಓವರ್‌ಗಳಲ್ಲಿ 351 ರನ್‌ಗಳ ಸ್ಕೋರ್ ತಲುಪುವಲ್ಲಿ ಯಶಸ್ವಿಯಾಯಿತು. ಇದು ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಇದುವರೆಗಿನ ಅತ್ಯಧಿಕ ಮೊತ್ತವಾಗಿದೆ. ಇಂಗ್ಲೆಂಡ್‌ನ ಈ ಇನಿಂಗ್ಸ್‌ನಲ್ಲಿ ಬೆನ್ ಡಕೆಟ್ ಜೊತೆಗೆ, ಜೋ ರೂಟ್ ಕೂಡ ತಮ್ಮ ಮ್ಯಾಜಿಕ್ ತೋರಿಸಿದರು. ಜೋ ರೂಟ್ ಅದ್ಭುತ ಬ್ಯಾಟಿಂಗ್ ನಡೆಸಿ 68 ರನ್ ಗಳ ಕೊಡುಗೆ ನೀಡಿದರು.
10 ಎಸೆತಗಳಲ್ಲಿ 21 ರನ್ ಸಿಡಿಸಿದ್ದ ಆರ್ಚರ್
ಇದಕ್ಕೂ ಮುನ್ನ ಬ್ಯಾಟಿಂಗ್‌ನಲ್ಲಿಯೂ ಜೋಫ್ರಾ ಆರ್ಚರ್ ಮಿಂಚಿದ್ದರು. ಇಂಗ್ಲೆಂಡ್ ತಂಡದ ಪ್ರಥಮ ಇನಿಂಗ್ಸ್ ವೇಳೆ ಕೊನೆಯಲ್ಲಿ ಕ್ರೀಸ್‌ಗೆ ಬಂದಿದ್ದ ಆರ್ಚರ್, ಕೇವಲ 10 ಎಸೆತಗಳಲ್ಲಿ ಅಜೇಯ 21 ರನ್‌ಗಳನ್ನು ಸಿಡಿಸಿದ್ದರು. ಇವರ ಸ್ಪೋಟಕ ಆಟದಲ್ಲಿ ಒಂದು ಸಿಕ್ಸರ್ ಹಾಗೂ ಎರಡು ಬೌಂಡರಿಗಳು ಸೇರಿದ್ದವು.